ಜರ್ಮನ್ ಶಪರ್ಡ್ ನಾಯಿಗಳ ಟ್ರೇನಿಂಗ ಬಗ್ಗೆ ವಿಶೇಷ ಮಾಹಿತಿ

111

ಜರ್ಮನ್ ಶಪರ್ಡ್ ನಾಯಿಯು ಸಾಕಲು ಎಷ್ಟು ಯೋಗ್ಯ. 19 ನೆ ಶತಮಾನದ ಮಧ್ಯ ಭಾಗದಲ್ಲಿ ಜರ್ಮನಿಯ ಮ್ಯಾಕ್ಸ್ವೆನ್ ಎಂಬುವವರು ಮುಂಚಿದ್ದ ಶಪರ್ಡ್ ನಾಯಿಗಳ ಮಧ್ಯದ ಕ್ರಾಸಿಂಗ್ ನಿಂದ ಈ ತಳಿಗಳನ್ನು ರೂಪಿಸಿದರು ಈ ನಾಯಿಗಳ ಮೂಲ ಜರ್ಮನಿ ಮತ್ತು ಪ್ರಾನ್ಸ್ ಗಡಿಯಾದ ಅಲ್ಸೆಸ್ ಆಗಿರುವುದರಿಂದ ಇವುಗಳಿಗೆ ಅಲ್ ಸೆಸಿಯನ್ ಎಂದು ಕರೆಯುವ ರೂಢಿಯಿದೆ. ಇದರ ಗುಣ ಸ್ವಭಾವ ನೋಡುವುದಾದರೆ ಇದು ತೀರ ಕ್ರೂರಿಯು ತೀರ ಸಾಧುವು ಆದ ತಳಿಯಲ್ಲ ಇದಕ್ಕೆ ಹೊಟ್ಟೆ ಕಿಚ್ಚು ಪ್ರವೃತ್ತಿ ಅಧಿಕವಿದೆ ತನ್ನ ಮುಂದೆ ತನ್ನ ಪಾಲಕ ಇತರರನ್ನು ಇತರೆ ನಾಯಿಯನ್ನು ಮುದ್ದಿಸುವುದನ್ನು ಇವು ಸಹಿಸುವುದಿಲ್ಲ ಇತರೇ ತಳಿಗಳಿಗೆ ಹೋಲಿಸಿದರೆ ಗಂಭೀರ್ಯತೆ ಜಾಸ್ತಿ ಇವು ಬಾಲ್ಯದಿಂದಲೂ ಊಟದ ವಿಷಯದಲ್ಲಿ ಕಿರಿಕಿರಿ ಸ್ಥಳ ಬದಲಾವಣೆ ದಣಿವಾದರೆ ಊಟ ಮಾಡಲು ಹಿಂಸಿಸುತ್ತವೆ. ಹೆಚ್ಚು ಮುದ್ದು ಮಾಡಿ ಉಣಿಸಬೇಕು. ಸಾಕಿದವರನ್ನು ತುಂಬಾ ಹಚ್ಚಿಕೊಳ್ಳುತ್ತವೆ ಹೊಡೆದರೆ ಮನಸಿಗೆ ನೋವುಂಟು ಮಾಡಿಕೊಳ್ಳುತ್ತವೆ. ಇವು ದನಕಾಯಲು ರೂಪಿಸಲಾದ ತಳಿಗಳಾಗಿದ್ದು 19 ರಿಂದ 25 ಇಂಚು ಎತ್ತರವಿರುತ್ತವೆ ಹಾಗಾಗಿ ತೀರ ಚಿಕ್ಕ ಸ್ಥಳಗಳಲ್ಲಿ ಸಾಕುವುದು ಒಳಿತಲ್ಲ

ಸ್ನಾಯುಗಳು ಶಕ್ತಿಯುತವಾಗಲು ಮತ್ತು ಎಲ್ಬೊಹಿಪ್ ಡಿಸ್ಪ್ಲೇಸಿಯ ಮತ್ತು ಆರ್ಥರ್ಟಿಸ್ ನಂತಹ ಮೂಳೆ ಸಂಬಂದಿ ಕಾಯಿಲೆಗಳನ್ನು ದೂರವಿಡಲು ಇವುಗಳಿಗೆ ವ್ಯಾಯಾಮದ ಅಗತ್ಯತೆ ಇದೆ. ಕೆಲಸ ನಿರತ ಜರ್ಮನ್ ಶಪರ್ಡಗಳಿಗೆ ಒಂದು ದಿನಕ್ಕೆ 1740 ರಿಂದ 2100 ಕ್ಯಾಲೋರಿ ಶಕ್ತಿ ಅವಶ್ಯಕವಾಗಿದೆ. ಕೆಲಸವಿರದ ಅಥವಾ ಇಳಿವಯಸ್ಸಿನ ನಾಯಿಗಳಿಗೆ 1272 ರಿಂದ 1540 ಕ್ಯಾಲೋರಿ ಶಕ್ತಿಯ ಅವಶ್ಯಕತೆ ಇದೆ ಹಾಗಾಗಿ ಅವುಗಳ ವಯಸ್ಸಿಗೆ ಅನುಗುಣವಾಗಿ ರೂಪಿಸಿದ ಆಹಾರವನ್ನು ನೀಡುವುದು ಉತ್ತಮ. ಇವುಗಳು ಡಬಲ್ ಕೋಟ್ ನಾಯಿಗಳಾಗಿದ್ದು ಚಳಿಯಿಂದ ರಕ್ಷಣೆ ನೀಡಲೆಂದೇ ಉತ್ಪತ್ತಿಯಾದ ಅಂಡರ್ ಕೋಟ್ ಬೇಸಿಗೆ ಕಾಲದಲ್ಲಿ ಉದುರುತ್ತದೆ. ಪ್ರತಿದಿನ ಗೃಮಿಂಗ್ 15 ರಿಂದ 20 ದಿನಕೊಮ್ಮೆ ನಾಯಿಗಳ ಸೋಪು ಶಾಂಪೂ ಬಳಸಿ ಸ್ನಾನ ಮಾಡಿಸಬೇಕು. ಕಿವಿಯ ಸೋಂಕು ತಡೆಯಲು ವಾರಕ್ಕೆ 2 ಬಾರಿ ಕಿವಿಯನ್ನು ಸ್ವಚ್ಛಗೊಳಿಸಬೇಕು ಇವುಗಳಿಗೆ ಸದಾ ಕುಡಿಯುವ ನೀರು ಮತ್ತು ಇವುಗಳು ಬಿಸಿಲಿಗೆ ಒಗ್ಗುವುದಿಲ್ಲ ಹಾಗಾಗಿ ನೆರಳಲ್ಲಿ ಇಡಬೇಕು.

ನಿರಂತರವಾಗಿ ಲಸಿಕೆ ಹಾಕಿಸಬೇಕು ಇವಕ್ಕೆ ಎರಡೂವರೆ ವಯಸ್ಸಿನಿಂದ ಬೇರೆಬೇರೆ ವ್ಯಕ್ತಿ ಪ್ರಾಣಿ ಪರಿಚಯ ಮಾಡಿಸಬೇಕು. ಕೆಲವು ಜರ್ಮನ್ ಶಪರ್ಡಗಳಲ್ಲಿ ಕಿವಿಗಳು ನಿಮಿರುವುದಿಲ್ಲ ಏಕೆಂದರೆ ಕಾರ್ಟಿಲೇಜ್ ಅವುಗಳ ದೊಡ್ಡ ಕಿವಿಗಳ ಭಾರವನ್ನು ಹೊರುವ ಶಕ್ತಿ ಹೊಂದಿರುವುದಿಲ್ಲ ಮರಿಗಳು ಬೆಳೆಯುತ್ತಿದಂತೆ ಮತ್ತು ಉತ್ತಮ ಪೋಷಕಾಂಶ ದೊರೆತಂತೆ ಕಾರ್ಟಿಲೇಜ್ ಬಲಗೊಂಡು ಕಿವಿಗಳು ನಿಮಿರಲು ಆರಂಭಿಸುತ್ತವೆ ಸಾಮಾನ್ಯವಾಗಿ 20 ವಾರಗಳ ನಂತರ ಕಿವಿಗಳು ನಿಮಿರಲು ಆರಂಭಿಸುತ್ತವೆ. 7 ರಿಂದ 10 ತಿಂಗಳೊಳಗೆ 75% ನಷ್ಟು ಇವುಗಳ ಕಿವಿಗಳು ನಿಮಿರುತ್ತವೆ. ಆದರೆ 5 ರಲ್ಲಿ 1 ಮರಿಯ ಕಿವಿಗಳು ನಿಮಿರದೆ ಪ್ಲಾಪಿ ಇಯರ್ ಗಳಾಗಿಯೇ ಇರುತ್ತವೆ. ಇವುಗಳ ಕಿವಿಗಳು 5 ತಿಂಗಳ ನಂತರ ನಿಮಿರಲು ಆರಂಭವಾಗದಿದ್ದರೆ ಅವುಗಳ ಪೋಷಣೆಯಲ್ಲಿ ಕೊರತೆಯಿದೆ ಎಂದು ಉತ್ತಮವಾದ ಪ್ರೊಟೀನ್ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯನ್ನು ಒಳಗೊಂಡ ಆಹಾರವನ್ನು ಒದಗಿಸಬೇಕು.

ಇಲ್ಲವಾದರೆ ವೈದ್ಯರು ಕಿವಿಗೆ ಟೆಪಿಂಗ್ ಮಾಡುತ್ತಾರೆ ಇದರಿಂದ ನಾಯಿಗೆ ಹಾನಿಯಿಲ್ಲ ಕಿರಿಕಿರಿ ಇರುತ್ತದೆ. ಕೆಲವು ತಿಂಗಳು ಟೆಪಿಂಗ್ ಮಾಡಿದರೆ ಕಿವಿಗಳು ನಿಮಿರುತ್ತವೆ ಇಲ್ಲವೇ ಕೆಲ ನಾಯಿಗಳಲ್ಲಿ ನಿಮಿರದೆ ಇರಬಹುದು ಹಾಗಾಗಿ ಜರ್ಮನ್ ಶಪರ್ಡ್ ಕೊಳ್ಳುವಾಗ ತಂದೆತಾಯಿಯ ಬಾಹ್ಯ ಚಹರೆ ಮತ್ತು ಅವುಗಳ ಪೇಪರ್ಗಳನ್ನು ತಿಳಿಯುವುದು ಒಳ್ಳೆಯದು. ಇದು ಉದ್ದ ಕೂದಲು ಹೊದಿದ್ದರಿಂದ ಕೂದಲು ಉದುರುವುದು ಚರ್ಮವ್ಯಾದಿಗಳು ಹೆಚ್ಚು ಹಾಗಾಗಿ ಚರ್ಮದ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು. ಇವಕ್ಕೆ ವಯಸ್ಸಾದಂತೆ ಹಿಂಗಾಲು ಮತ್ತು ಸೊಂಟದ ಸಮಸ್ಯೆ ಬರುತ್ತವೆ ಇವುಗಳಿಗೆ ಉಣ್ಣೆಗಳು ಮೈಯಲ್ಲಿ ಸೇರಿದರೆ ಅದನ್ನು ತಗೆಯುವುದು ತುಂಬಾ ಕಷ್ಟ ಹಾಗಾಗಿ ದನಕರು ಇರುವಲ್ಲಿ ಸಾಕುವುದು ಕಷ್ಟ. ಸ್ವಭಾವತಹ ಜಾಗರುಕ ಮತ್ತು ಆಕ್ರಮಣಕಾರಿ ಉತ್ತಮ ವಾಸನೆ ಗ್ರಹಿಕೆ ಸಾಮರ್ಥ್ಯ ಹೊಂದಿರುವುದರಿಂದ ಜಗತ್ತಿನಲ್ಲಿ ಅಧಿಕವಾಗಿ ಪೊಲೀಸ್ ಮತ್ತು ಮಿಲಿಟರಿಗೆ ಬಳಸಲಾಗುತ್ತದೆ. ರಾಯಲ್ ಡಾಗ್ ಎಂದು ಕರೆಯಲಾಗುವ ಇದು ಹುಲಿಯ ರೂಪವನ್ನು ಹೊಂದಿರುತ್ತದೆ ಜಾಣ್ಮೆಯಲ್ಲಿ 3ನೆ ಸ್ಥಾನ ಹೊಂದಿರುವ ಇವು ಸ್ವಾಮಿನಿಷ್ಠೆಯಲ್ಲಿ 2 ನೆ ಸ್ಥಾನದಲ್ಲಿವೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

LEAVE A REPLY

Please enter your comment!
Please enter your name here