ಈ ಆಹಾರಗಳನ್ನು ಸೇವಿಸುವುದರಿಂದ ನಮ್ಮ ಹೃದಯ ಮತ್ತು ರಕ್ತ ನಾಳಗಳನ್ನು ಶುದ್ಧಿಗೊಳಿಸಬಹುದು. ನಮ್ಮ ದೇಹದಲ್ಲಿ ಇರುವ ಮುಖ್ಯವಾದ ಹೃದಯದ ಭಾಗದಲ್ಲಿ ರಕ್ತನಾಳಗಳು ಸರಿಯಾಗಿ ಚಲನಗೊಳ್ಳಲು ನಾವು ಕೆಲವೊಂದು ಆಹಾರಗಳನ್ನು ಸೇವಿಸಬೇಕು ಇಲ್ಲ ಅಂದ್ರೆ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆಗೋದು ಖಚಿತ ಹಾಗಾದ್ರೆ ಬನ್ನಿ ಇವತ್ತಿನ ಈ ಲೇಖನದಲ್ಲಿ ಅಂತಹ ಆಹಾರಗಳು ಯಾವುವು ಎನ್ನುವುದನ್ನು ತಿಳಿಯೋಣ. ಮೊದಲನೆಯದಾಗಿ ಬೆಣ್ಣೆಯ ಹಣ್ಣು ಇದರಲ್ಲಿ ಪ್ರಮುಖ ಅಂದ್ರೆ ದೇಹದ ಕಲ್ಮಶಗಳನ್ನು ಹಾಗೂ ವಿಶೇಷವಾಗಿ ರಕ್ತ ನಾಳಗಳಲ್ಲಿ ಸಂಗ್ರಹವಾಗಿದ್ದ ಜಿಡ್ಡನ್ನು ನಿವಾರಿಸುವುದು ಇದರಲ್ಲಿರುವ ಒಮೆಗ 3 ಕೊಬ್ಬಿನಾಮ್ಲಗಳು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಎರಡನೆಯದು ಬ್ರೊಕೋಲಿ ನಿತ್ಯದ ಆಹಾರದಲ್ಲಿ ಬ್ರೊಕೋಲಿಯನ್ನು ಸೇವಿಸಿಕೊಳ್ಳುವ ಮೂಲಕ ಹೃದಯವನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು ಬ್ರೊಕೋಲಿಯಲ್ಲಿರುವ ವಿಟಮಿನ್ ಕೆ ರಕ್ತನಾಳಗಳನ್ನು ಶುದ್ಧಿಕರಿಸಲು ಹಾಗೂ ರಕ್ತನಾಳಗಳ ಗೋಡೆಗಳನ್ನು ಇನ್ನಷ್ಟು ಬಲ ಪಡಿಸಲು ನೆರವಾಗುತ್ತದೆ.
ಮೂರನೆಯದು ಟ್ಯೂನಾ ಮೀನು ವಿಶೇಷವಾಗಿ ಟ್ಯೂನಾ ಮಿನಿನಲ್ಲಿ ಇರುವ ಒಮೆಗ 4 ಕೊಬ್ಬಿನಾಮ್ಲಗಳು ದೇಹದಲ್ಲಿ ಇರುವ ಟೈಕ್ರಿಸಲಾಯಿಟ್ ಗಳ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ ತನ್ನ ಮೂಲಕ ಕೊಬ್ಬಿನ ಮಟ್ಟವನ್ನು ಆರೋಗ್ಯಕರ ಮಿತಿಗಳಿಗೆ ಇಳಿಸಲು ಹಾಗೂ ರಕ್ತ ನಾಳಗಳ ಒಳ ಭಾಗದಲ್ಲಿ ಅಂಟಿಕೊಂಡಿದ್ದ ಕೊಬ್ಬನ್ನು ನಿವಾರಿಸಲು ನೆರವಾಗುತ್ತದೆ. ನಾಲ್ಕನೆಯದು ಒಣಹಣ್ಣುಗಳು ಬಾದಾಮಿ ಗೋಡಂಬಿ ಪಿಸ್ತಾ ಮೊದಲಾದವುಗಳನ್ನು ಹಲವು ಅವಶ್ಯಕ ಪೋಷಕಾಂಶಗಳು ಆಂಟಿಆಕ್ಸಿಡೆಂಟ್ ಗಳು ಹಾಗೂ ವಿಟಮಿನ್ ಈ ಇವೆ ಇವು ರಕ್ತ ನಾಳಗಳ ಒಳಗೆ ಅಂಟಿಕೊಂಡಿದ್ದ ಕೊಬ್ಬು ಜಿಡ್ಡುಗಳನ್ನು ಹಾಗೂ ಇತರ ಕಲ್ಮಶಗಳನ್ನು ನಿವಾರಿಸುವ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತವೆ. ಐದನೆಯದು ಆಲಿವ್ ಎಣ್ಣೆ ಈ ಎಣ್ಣೆಯ ಸೇವನೆಯಿಂದ ರಕ್ತ ನಾಳಗಳ ಒಳಗೆ ಅಂಟಿಕೊಂಡಿದ್ದ ಜಿಡ್ಡು ನಿವಾರಣೆಯಾಗುತ್ತದೆ. ಹಾಗೂ ಹೃದಯವನ್ನು ಆರೋಗ್ಯಕರವಾಗಿ ಇಡುತ್ತದೆ ಈ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತದೆ. ಆರನೆಯದು ಕಲ್ಲಂಗಡಿ ಹಣ್ಣು ಇದರಲ್ಲಿ ನೀರಿನ ಪ್ರಮಾಣ ಅತಿ ಹೆಚ್ಚಾಗಿದ್ದು ದೇಹವನ್ನು ತಂಪಾಗಿರಿಸಲು ನೆರವಾಗುವುದರ ಜೊತೆಗೆ ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತದೆ
ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಲು ಕಲ್ಲಂಗಡಿ ಅತ್ಯುತ್ತಮ ಹಣ್ಣು ಅಲ್ಲದೆ ಇದರಲ್ಲಿ ಇರುವ ನೈಟ್ರಿಕ್ ಆಸಿಡ್ ರಕ್ತನಾಳಗಳನ್ನು ಅತ್ಯುತ್ತಮವಾಗಿ ಸ್ವಚ್ಛಗೊಳಿಸುತ್ತದೆ. ಏಳನೆಯದಾಗಿ ಪಾಲಕ್ ಸೊಪ್ಪು ಇದರಲ್ಲಿ ಕಬ್ಬಿಣ ಆಂಟಿಆಕ್ಸಿಡೆಂಟ್ ಹಾಗೂ ಪ್ರೊಟೀನ್ ಸಹಿತ ಇತರ ಪೋಷಕಾಂಶಗಳು ಇವೇ ನಿತ್ಯವೂ ಪಾಲಕ್ ಸೊಪ್ಪನ್ನು ಸೇವಿಸುವ ಮೂಲಕ ರಕ್ತದಲ್ಲಿ ಹೋಮೋಸಿಸ್ಟನ್ ಎಂಬ ಪೋಷಕಾಂಶದ ಮಟ್ಟ ಕಡಿಮೆಗೊಳಿಸಬಹುದು ಹಾಗೂ ರಕ್ತನಾಳಗಳು ಸ್ವಚ್ಛಗೊಳಿಸಬಹುದು. ಎಂಟನೆಯದು ತೆಂಗಿನ ಹಾಲು ತೆಂಗಿನ ಎಣ್ಣೆಯಿಂದಲು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ನಿತ್ಯವೂ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವ ಮೂಲಕ ಜೀವ ರಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಇದರ ಸೇವಮೆಯಿಂದ ರಕ್ತ ನಾಳಗಳ ಒಳಗಿನ ಕಲ್ಮಶ ನಿವಾರಣೆಯಾಗುತ್ತದೆ ಹಾಗೂ ಹೃದಯದ ಕ್ಷಮತೆಯೂ ಹೆಚ್ಚುತ್ತದೆ ಕೊಬ್ಬರಿ ಎಣ್ಣೆಯಲ್ಲಿ ಇರುವ ವಿಟಮಿನ್ ಈ ಇದಕ್ಕೆ ನೆರವಾಗುತ್ತದೆ. ಕೊನೆಯದಾಗಿ ಅರಿಷಿಣ ಇದರಲ್ಲಿ ಇರುವ ವಿಟಮಿನ್ ಬಿ6 ರಕ್ತನಾಳಗಳಲ್ಲಿ ಕಟ್ಟಿಕೊಂಡಿದ್ದ ಜಿಡ್ಡನ್ನು ನಿವಾರಿಸಲು ಸಹಾಯ ಮಾಡುತ್ತದೆ.