ತಲೆ ಹೊಟ್ಟಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ಆಗಲು ಈ ಮನೆ ಮದ್ದು ಮಾಡಿರಿ

74

ಉದ್ದವಾದ ತಲೆಗೂದಲು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಸೊಂಪಾದ ಕೂದಲನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಈಗಿನ ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಕೂದಲು ಉದುರುವುದು ತುಂಬಾ ದೊಡ್ಡ ಸಮಸ್ಯೆಯಾಗಿದೆ. ತಲೆ ಕೂದಲು ಉದುರುವುದಕ್ಕೆ ಮುಖ್ಯ ಕಾರಣವೆಂದರೆ ತಲೆಯಲ್ಲಿ ಇರುವ ಹೊಟ್ಟು. ತಲೆಯಲ್ಲಿ ಹೊಟ್ಟು ತುಂಬಾ ಜಾಸ್ತಿಯಾಗಿ ಬೆಳೆದುಕೊಂಡರೆ ತಲೆಗೂದಲು ತುಂಬಾ ಉದುರುತ್ತವೆ. ಈ ಹೊಟ್ಟನ್ನು ಹೇಗೆ ನಿವಾರಿಸುವುದು ಅದಕ್ಕೆ ಸುಲಭವಾದ ಮನೆಮದ್ದನ್ನು ನೋಡೋಣ ಬನ್ನಿ. ಈ ಬ್ಯೂಟಿ ಟಿಪ್ಸ್ ಅನ್ನು ಪೂರ್ತಿಯಾಗಿ ಓದಲು ಮರಿಯಬೇಡಿ. ತಲೆ ಹೊಟ್ಟು ಹೋಗಲಾಡಿಸಲು ಮನೆಯಲ್ಲಿ ಸಿದ್ದತೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು ಕೊಬ್ಬರಿ ಎಣ್ಣೆ ಮತ್ತು ಬೇವಿನ ಪುಡಿ, ನಿಂಬೆ ಹಣ್ಣಿನ ರಸವನ್ನು ತೆಗೆದುಕೊಳ್ಳಬೇಕು. ನೀಮ್ ಪೌಡರ್ ಸಿಗಲಿಲ್ಲವೆಂದರೆ ಬೇವಿನ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಉಪಯೋಗಿಸ ಬಹುದು. ಈ ಮನೆಮದ್ದನ್ನು ಕೂದಲು ಎಷ್ಟು ಉದ್ದವಾಗಿದೆ

ಎಂಬುದನ್ನು ನೋಡಬಾರದು. ಕೂದಲು ಎಷ್ಟು ದಪ್ಪವಾಗಿದೆ ಮತ್ತು ಕೂದಲಿನ ಬೇರು ಹೇಗಿದೆ ಎಲ್ಲವನ್ನೂ ನೋಡಿಕೊಂಡು ಈ ಪೇಸ್ಟ್ ಅನ್ನು ತಯಾರಿಸಿ ಕೊಳ್ಳಬೇಕು. ಅದು ಹೇಗೆಂದರೆ ಎರಡು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅರ್ಧ ಚಮಚದಷ್ಟು ಬೇವಿನ ಎಲೆಗಳ ಪುಡಿಯನ್ನು ಹಾಕಬೇಕು. ಇದರಲ್ಲಿ ಒಂದು ಪೂರ್ತಿ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಶಾಂಪೂವಿನ ಹದಕ್ಕೆ ಬರುವ ಹಾಗೆ ಚೆನ್ನಾಗಿ ಕಲಿಸಬೇಕು. ಇದರಲ್ಲಿ ಉಪಯೋಗಿಸುವ ಕೊಬ್ಬರಿ ಎಣ್ಣೆ, ಬೇವಿನ ಪೌಡರ್ ಮತ್ತು ನಿಂಬೆ ಹಣ್ಣು. ಇವು ಹೇಗೆ ತಲೆಗೆ ಪ್ರಯೋಜನಕಾರಿ ಅಂದರೆ, ಮೊದಲನೆಯದಾಗಿ ಕೊಬ್ಬರಿ ಎಣ್ಣೆ ಇದು ತಲೆಗೂದಲು ಮೃದುವಾಗಿಡಲು ಸಹಾಯ ಮಾಡುತ್ತದೆ. ಮತ್ತು ಇದರಲ್ಲಿ ಆಂಟಿ ಫಂಗಲ್ ಗುಣ ಜಾಸ್ತಿಯಾಗಿ ಇರುತ್ತದೆ. ಇದು ತಲೆಯಲ್ಲಿ ಬೆಳೆದಿರುವ ಕೆಟ್ಟ ಫಂಗಲ್ ಅನ್ನು ದೂರ ಮಾಡುತ್ತದೆ. ಮತ್ತು ತಲೆಯ ಬುಡ ಒಣಗಲು ಬಿಡಬಾರದು. ತಲೆ ಬುಡ ಒಣಗಿದ್ದರೆ ಹೊಟ್ಟು ಜಾಸ್ತಿಯಾಗಿ ಬೆಳೆಯುತ್ತದೆ. ಆದ್ದರಿಂದ ಕೊಬ್ಬರಿಯನ್ನು ಪ್ರತಿನಿತ್ಯವೂ ಬಳಸಬೇಕು. ಇನ್ನೂ ನಿಂಬೆ ರಸ ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುವುದರಿಂದ

ತಲೆಯಲ್ಲಿ ಹೊಟ್ಟು ನಿವಾರಣೆಯನ್ನು ಮಾಡುತ್ತದೆ. ಮತ್ತು ಬೇವಿನ ಪೌಡರ್ ಇದು ತಲೆಗೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಪ್ರಾಪರ್ಟಿ ಹೆಚ್ಚಾಗಿ ಇರುತ್ತದೆ. ಆದ್ದರಿಂದ ತಲೆಯಲ್ಲಿ ಇರುವ ಧೂಳು, ಸೂಕ್ಷ್ಮ ಕಣಗಳನ್ನು ಹೋಗಲಾಡಿಸುತ್ತದೆ. ಮತ್ತು ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿಗೆ ರಕ್ತ ಸಂಚಾರ ಚೆನ್ನಾಗಿ ಆಗಲು ಸಹಕರಿಸುತ್ತದೆ. ಮುಖ್ಯವಾಗಿ ಈ ಮನೆಮದ್ದು ಕೇವಲ ತಲೆಯ ಬುಡಕ್ಕೆ ಮಾತ್ರ ಉಪಯೋಗಿಸಬೇಕು. ಇದನ್ನು ಹೇಗೆ ಹಚ್ಚಬೇಕು ಎಂದರೆ, ಪ್ರತಿನಿತ್ಯವೂ ಎಣ್ಣೆಯನ್ನು ಹೇಗೆ ತಲೆಯ ಬುಡಕ್ಕೆ ಹಚ್ಚುತ್ತೇವೆ ಹಾಗೆಯೇ ಹಚ್ಚಬೇಕು. ಮತ್ತು ಇದನ್ನು ತಲೆಯ ಬುಡಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಇದನ್ನು ಅರ್ಧ ಗಂಟೆ ಬಿಟ್ಟು ನಂತರ ತಲೆಯನ್ನು ಚೆನ್ನಾಗಿ ಮೈಲ್ಡ್ ಶಾಂಪೂವಿನಿಂದ ತೊಳೆಯಬೇಕು. ತಲೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಇಲ್ಲವಾದರೆ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ತುಂಬಾನೇ ಒಳ್ಳೆಯದು. ಹೀಗೆ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಹೀಗೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಲೆಯಲ್ಲಿರುವ ಹೊಟ್ಟನ್ನು ಹೋಗಲಾಡಿಸ ಬೇಕೆಂದರೆ ಈ ಒಂದು ಸುಲಭವಾದ ಬ್ಯೂಟಿ ಟಿಪ್ಸ್ ಅನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here