ತಿಂಗಳಿಗೆ ಒಮ್ಮೆ ಆದರು ಸಹ ಬಾಳೆಹೂವಿನ ಸೇವನೆ ಮಾಡಿದ್ರೆ ನಿಮ್ಮ ಅರೋಗ್ಯ ಸುಪರ್

61

ಬಾಳೆಗಿಡದಲ್ಲಿ ಬಾಳೆಹಣ್ಣು ಬಾಳೆ ಎಲೆ ಹಾಗೆ. ಬಾಳೆಹೂವಿನ ಲಾಭಗಳು ಸಾಕಷ್ಟು ಇವೆ. ಹಾಗಾದರೆ ಸ್ನೇಹಿತರೆ ಈ ಲೇಖನದಲ್ಲಿ ಬಾಳೆಹೂವಿನ ಆರೋಗ್ಯಕರ ಲಾಭಗಳನ್ನು ತಿಳಿದುಕೊಳ್ಳೋಣ. ಮುಖ್ಯವಾಗಿ ಪಿಸಿಓಡಿ ಸಮಸ್ಯೆ ಇರುವವರಿಗೆ ಈ ಒಂದು ಮಾಹಿತಿ ತುಂಬಾ ಉಪಯುಕ್ತವಾದ ಮಾಹಿತಿಯಾಗಿದೆ. ಆದ್ದರಿಂದ ಇದನ್ನು ಕೊನೆವರೆಗೂ ಓದಿರಿ. ನಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಬಾಳೆಹಣ್ಣು ಒಂದು ಆರೋಗ್ಯಕರವಾದ ಹಣ್ಣುಗಳಲ್ಲಿ ಒಂದಾಗಿದೆ. ಇದು ದೇಹದಲ್ಲಿ ಜೀರ್ಣಕ್ರಿಯೇ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಇದರಿಂದ ಮಾನವನು ಆರೋಗ್ಯವಾಗಿರುತ್ತದೆ. ಆದರೆ ಕೇವಲ ಬಾಳೆಹಣ್ಣಿನಿಂದ ಲಾಭಗಳು ಸಿಗುದಲ್ಲದೆ ಬಾಳೆಹೂವಿನಲ್ಲಿಯೂ ಆರೋಗ್ಯಕರ ಲಾಭಗಳು ಅಡಗಿಕೊಂಡಿವೆ. ಬಾಳೆ ಹೂವಿನಲ್ಲಿ ನ್ಯೂಟ್ರಿಷನ್ ಪ್ರಮಾಣ ಹೆಚ್ಚಾಗಿರುತ್ತದೆ. ಅದರಲ್ಲಿ ಫೈಬರ್ ಪ್ರೊಟೀನ್ ಕ್ಯಾಲ್ಸಿಯಂ ಪೊಟ್ಯಾಷಿಯಂ ಕಾಫರ್ ಫಾಸ್ಪರಸ್ ಐರನ್ ಮ್ಯಾಂಗ್ನೀಷಿಯಂ ಮತ್ತು ವಿಟಮಿನ್ ಇ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಇದನ್ನು ಸೇವಿಸಲೇ ಬೇಕು. ಏಕೆಂದರೆ ಇದು ದೇಹದ ಆರೋಗ್ಯಕ್ಕೆ ಒಳ್ಳೆಯದು. ನಮಗೆ ಎಲ್ಲರಿಗೂ ಬಾಳೆಹಣ್ಣು ಮತ್ತು ಅದರ ಮಹತ್ವ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ತಾಗಿದೆ. ಆದರೆ ಬಾಳೆ ಹೂವಿನ ಬಗ್ಗೆ ಯಾರಿಗೂ ಗೊತ್ತಿಲ್ಲ.

ಮತ್ತು ಇದನ್ನು ಹೆಚ್ಚಿನ ಮಟ್ಟದಲ್ಲಿಯೂ ಕೂಡ ಬಳಕೆಯನ್ನು ಮಾಡುವುದಿಲ್ಲ. ಈ ಬಾಳೆ ಹೂವು ರುಚಿಯಲ್ಲಿ ಕಹಿಯಾಗಿರುತ್ತದೆ. ಆದ್ದರಿಂದ ಜನರು ಈ ಬಾಳೆ ಹೂವನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದರ ಆರೋಗ್ಯಕರ ಲಾಭಗಳು ತುಂಬಾ ಇದೆ. ಆದ್ದರಿಂದ ಪ್ರತಿನಿತ್ಯವೂ ಆಹಾರದಲ್ಲಿ ಈ ಬಾಳೆ ಹೂವುನ್ನೂ ಸೇರಿಸಿ ತಿನ್ನಬೇಕು. ಬಾಳೆ ಹೂವಿನ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸುವು ದೆಂದರೆ ರಕ್ತ ಹೀನತೆಗೆ ಕಾಯಿಲೆಯಿಂದ ಬಳಲುತ್ತಿದ್ದ ವರಿಗೆ ಈ ಬಾಳೆ ಹೂವು ಒಂದು ಉತ್ತಮವಾದ ಔಷಧವೆಂದು ಹೇಳಿದರೆ ತಪ್ಪಗಲಾರದು. ಬಾಳೆ ಹೂವಿನಿಂದ ಯಾವುದೇ ಆಹಾರ ಪದಾರ್ಥಗಳನ್ನೂ ತಯಾರಿಸಿ ತಿನ್ನುವುದರಿಂದ ದೇಹದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಜಾಸ್ತಿ ಆಗುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಮಾಯವಾಗುತ್ತದೆ. ಅಷ್ಟೇ ಅಲ್ಲದೇ ಪಿಸಿಒಡಿ ಸಮಸ್ಯೆ ಇರುವವರಿಗೆ ಮತ್ತು ಋತುಚಕ್ರ ಸಮಸ್ಯೆ ಇರುವವರಿಗೆ ಈ ಬಾಳೆಹೂವು ಒಂದು ಸುಲಭವಾದ ಮನೆಮದ್ದು ಎಂದು ಹೇಳಬಹುದು. ಹಾಗೆಯೇ ಈ ಬಾಳೆ ಹೂವು ಮಧುಮೇಹ ಕಾಯಿಲೆ ಇರುವವರಿಗೆ ಇದು ಒಂದು ಉತ್ತಮವಾದ ಆಹಾರವಾಗಿದೆ. ಮಧುಮೇಹ ರೋಗಿಗಳು ಆಹಾರದಲ್ಲಿ ಈ ಬಾಳೆಹೂವವನ್ನು ಬೆರೆಸಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಮಾಡುತ್ತದೆ. ಮತ್ತು ರಕ್ತದೊತ್ತಡ ಸಮಸ್ಯೆಯಿಂದ

ಬಳಲುತ್ತಿರುವವರಿಗೆ ಬಾಳೆಹೂವು ಸುಲಭವಾದ ಮನೆಮದ್ದು. ಬಾಳೆ ಹೂವಿನಲ್ಲಿ ಇರುವ ಮ್ಯಾಂಗ್ನಿಶಿಯಂ ಅಂಶವು ಆಂಟಿ ಡಿಪ್ರೆಷನ್ ಹಾಗೇ ಕೆಲಸವನ್ನು ಮಾಡುತ್ತದೆ. ಅಂದರೆ ಯಾವ ವ್ಯಕ್ತಿಯೂ ಬೇಜಾರು ಖಿನ್ನತೆ ಮತ್ತು ಮನಸ್ಥಿತಿಯಲ್ಲಿ ಮಗ್ನನಾಗಿ ಇರುತ್ತಾರೆ ಅವರಲ್ಲಿ ಹ್ಯಾಪ್ಪಿ ಹಾರ್ಮೋನ್ ಗಳನ್ನೂ ಉತ್ಪತ್ತಿ ಮಾಡಲು ಈ ಬಾಳೆ ಹೂವಿನ ಆಹಾರವು ತುಂಬಾ ಪ್ರಯೋಜನಕಾರಿ ಕೆಲಸ ಮಾಡುತ್ತದೆ. ಕೆಲವು ಜನರಿಗೆ ಕಾಡುವ ವಿಷಯವೆಂದರೆ ಬೇಜಾರಿಗು ಮತ್ತು ಆಹಾರಕ್ಕೂ ಏನು ಸಂಭಂದವೆಂದು. ಪ್ರತಿನಿತ್ಯವೂ ನಾವು ತಿನ್ನುವ ಆಹಾರ ಚೆನ್ನಾಗಿದ್ದರೆ ನಮ್ಮ ದಿನನಿತ್ಯದ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತವೆ. ಇದರಿಂದ ಬೇಜಾರು, ಸುಸ್ತು, ಆಯಾಸ ಹೋಗಲಾಡಿಸುತ್ತದೆ. ಮತ್ತು ಮೆದುಳಿನ ಚಟುವಟಿಕೆಗಳು ಚೆನ್ನಾಗಿ ನಡೆಯಬೇಕು ಎಂದರೆ ಸೇವಿಸುವ ಆಹಾರ ಆರೋಗ್ಯವಾಗಿ ಇರಬೇಕು. ಬಾಳೆ ಹೂವಿನಲ್ಲಿ ಇರುವ ಮ್ಯಾಂಗ್ನಿಷಿಯಮ್ ಮತ್ತು ಮಿನರಲ್ಸ್ ದೇಹದಲ್ಲಿ ಆಂಟಿ ಡಿಪ್ರೇಶನ್ ರೀತಿಯಲ್ಲಿ ಕೆಲಸವನ್ನು ಮಾಡುತ್ತದೆ. ಹಾಗೆಯೇ ಹೊಟ್ಟೆಗೆ ಸಂಭಂದಿಸಿದ ಕಾಯಿಲೆಗಳನ್ನು ತಡೆಗಟ್ಟುವುದರಲ್ಲಿ ಈ ಬಾಳೆಹೂವು ಸಹಕಾರಿಯಾಗಿದೆ. ಮುಖ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ, ಹೊಟ್ಟೆ ಹುಳು ಮತ್ತು ಹೊಟ್ಟೆ ನೋವಿನ ಎಲ್ಲ ಸಮಸ್ಯೆಗಳಿಗೆ ಈ ಬಾಳೆ ಹೂವಿನ ಆಹಾರ ಒಂದು ಮನೆಮದ್ದು ಆಗಿ ಸಹಾಯ ಮಾಡುತ್ತದೆ. ಹಾಲುಣಿಸುವ ತಾಯಂದಿರುಗಳಿಗೆ ದೇಹದಲ್ಲಿ ಹಾಲಿನ ಪ್ರಮಾಣ ಹೆಚ್ಚಾಗಲು ಮತ್ತು ಮಗುವಿನ ಬೆಳವಣಿಗೆಯನ್ನೂ ಹೆಚ್ಚಿಸಲು ಈ ಬಾಳೆಹೂವು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here