ತಿರುಪತಿ ತಿಮ್ಮಪ್ಪನಿಗೆ ಮುಡಿ ಹರಕೆ ಕೊಡುವ ಹಿಂದಿನ ರೋಚಕ ಕಥೆ ಇಲ್ಲಿದೆ. ಸ್ನೇಹಿತರೆ ತಿರುಪತಿ ತಿಮ್ಮಪ್ಪ ಎಂದ ಕೂಡಲೇ ಎಲ್ಲರೂ ತಲೆ ಬೋಳಿಸಿ ಬರುವುದು ಕಣ್ಣ ಮುಂದೆ ಬರುತ್ತದೆ ಕೆಲವರು ಇದನ್ನು ಹರಕೆ ಎಂದು ಹೇಳಿದರೆ ಇನ್ನು ಕೆಲವರು ಇದನ್ನು ಬ್ಯುಸಿನೆಸ್ ಎಂದು ಹೇಳುತ್ತಾರೆ ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದು ಏಕೆ ಈ ಹರಕೆ ಹಿಂದಿರುವ ಅತಿ ರೋಚಕ ರಹಸ್ಯ ಏನು ಎಲ್ಲವನ್ನೂ ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹಿಂದೂಗಳ ಹಲವು ದೇವಸ್ಥಾನಗಳಲ್ಲಿ ದೇವರಿಗೆ ಮುಡಿ ಕೊಡುವುದು ಪದ್ದತಿ ಇದೆ ಧರ್ಮಸ್ಥಳ ನಂಜನಗೂಡು ಹೀಗೆ ಹಲವಾರು ದೇವಸ್ಥಾನದಲ್ಲಿ ಕೂದಲು ಕೊಡುತ್ತೇವೆ ಅದೇ ರೀತಿ ತಿರುಪತಿಯಲ್ಲಿ ಕೂಡ ದೇವರಿಗೆ ಮುಡಿ ಕೊಡಲಾಗುತ್ತದೆ ಆದರೆ ಇಲ್ಲಿ ವಿಶೇಷವಾದ ಮತ್ತು ರೋಚಕ ಕಥೆ ಇದೆ.
ಮುಡಿ ಹರಕೆಗೂ ತಿಮ್ಮಪ್ಪನಿಗೆ ಇದೆ ನೇರ ಸಂಬಂಧ ಹೌದು ತಿರುಪತಿ ತಿಮ್ಮಪ್ಪನಿಗೆ ಈ ಹರಕೆಗೆ ನೇರ ಸಂಬಂಧ ಇದೆ, ತಿರುಮಲ ಬೆಟ್ಟದ ಕಂಡು ಬೆಟ್ಟದೊಳಗೆ ಶ್ರೀನಿವಾಸ ಬಳಲಿ ಬಾಯರಿ ಕುಳಿತಿರುತ್ತಾರೆ ಆಗ ಒಂದು ಹಸು ಶ್ರೀನಿವಾಸನಿಗೆ ಹಾಲೇರಿಯುತ್ತದೆ ಮುಗ್ದ ಹಸುಗಳ ಒಂದರಲ್ಲಿ ಅದು ಕೂಡ ಒಂದಾಗಿತ್ತು ಅಲ್ಲಿರುವ ಹಸುಗಳನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿತ್ತು ಈ ವ್ಯಕ್ತಿಯನ್ನು ನೋಡಿದಂತೆ ಕಾಮಧೇನು ಎನ್ನುವ ಈ ಹಸು ನಿತ್ಯವೂ ಹಾಲು ಕೊಡುತ್ತಾ ಇರಲಿಲ್ಲ ಇದರಿಂದ ಈ ದನ ಕಾಯುವವನಿಗೆ ಅನುಮಾನ ಶುರು ಆಯಿತು ಅಲ್ಲದೆ ಅದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲ ಶುರು ಆಯಿತು ಹೀಗಾಗಿ ಮಾರನೇ ದಿನ ಕಾಮಧೇನು ಎಂಬ ಹಸುವನ್ನು ಹಿಂಬಾಲಿಸುತ್ತಾರೆ ಆಗ ಹಸು ಶ್ರೀನಿವಾಸನಿಗೆ ಹಾಲು ಕೊಡುತ್ತಾ ಇರುವುದನ್ನು ನೋಡಿ ತನ್ನ ಕೈಯಲ್ಲಿ ಇದ್ದ ಕೊಡಲಿಯಿಂದ ಹಸುವಿಗೆ ಹೊಡೆಯುತ್ತಾನೆ ಆದರೆ ಹಸುವಿಗೆ ಹೊಡೆದ ಏಟು ತಪ್ಪಿ ಶ್ರೀನಿವಾಸನಿಗೆ ಬೀಳುತ್ತದೆ.
ಕೊಡಲಿ ತಗಲಿ ತಲೆ ಭಾಗದಲ್ಲಿ ಇದ್ದ ಕೂದಲು ಹಾರಿ ಹೋಗುತ್ತೆ ಆಗ ಶ್ರೀನಿವಾಸನ ಪರಮ ಭಕ್ತೆ ಆಗಿದ್ದ ನೀಲದೇವಿ ತನ್ನ ಕೂದಲನ್ನು ಕತ್ತರಿಸಿ ಶ್ರೀನಿವಾಸನಿಗೆ ಜೋಡಿಸಿದಳು ನೀಲದೇವಿಯ ಭಕ್ತಿ ಹಾಗೂ ಕೆಲಸಕ್ಕೆ ಮೆಚ್ಚಿ ಶ್ರೀನಿವಾಸನು ನೀಲ ದೇವಿಗೆ ಒಂದು ವರ ಕೊಡುತ್ತಾರೆ ಕಲಿಯುಗದಲ್ಲಿ ಭಕ್ತರು ನನ್ನ ಕ್ಷೇತ್ರಕ್ಕೆ ಬಂದು ಮುಡಿಯನ್ನು ನೀಡುತ್ತಾರೆ ಈ ಮುಡಿಗಳು ನಿನ್ನ ಮೂಲಕವೇ ನನಗೆ ಅರ್ಪಣೆ ಆಗಲಿ ಎಂದು ಹೇಳುತ್ತಾನೆ ಈ ಮೂಲಕ ಈಗಲೂ ತಲೆ ಕೂದಲನ್ನು ಅರ್ಪಿಸುತ್ತಾರೆ ಎಂದು ಹೇಳಲಾಗುತ್ತದೆ. ತಿಮ್ಮಪ್ಪನ ತಲೆಯಲ್ಲಿ ಈಗಲೂ ಗಾಯದ ಗುರುತು ಇದೆ. ನೀಲಾದೇವಿ ಜೋಡಿಸಿದ ಕೂದಲುಗಳು ಈಗಲೂ ಪರಮಾತ್ಮನ ತಲೆಯಲ್ಲಿ ಇದೆ ದೇವಸ್ಥಾನದ ಆರಂಭದ ಮುಂದೆ ಮಹಾದ್ವಾರದ ಬಲಗಡೆ ತಿಮ್ಮಪ್ಪನ ತಲೆಯಲ್ಲಿ ಗಾಯದ ಗುರುತು ಇವೆಯಂತೆ ಹೀಗಾಗಿಯೇ ಶ್ರೀನಿವಾಸನಿಗೆ ಈ ಭಾಗದಲ್ಲಿ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡ ನಡೆದು ಬಂದಿದೆ. ಸ್ನೇಹಿತರೆ ಜನರು ತಮ್ಮ ಇಷ್ಟಾರ್ಥ ಸಿದ್ದಿಸಲಿ ಎಂದು ದೇವರ ದರ್ಶನಕ್ಕಾಗಿ ತೀರ್ಥ ಯಾತ್ರೆ ಕೈಗೊಳ್ಳುವರು ಜೊತೆಗೆ ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸಿ ಹರಕೆ ತೀರಿಸುತ್ತಾರೆ.