ತೆಳ್ಳಗಿರುವವರು ದಪ್ಪಗಾಗಲು ಸುಲಭ ಮನೆಮದ್ದು

88

ನಮ್ಮಲ್ಲಿ ಹಲವಾರು ಜನರು ತುಂಬಾ ತೆಳ್ಳಗೆ ಇರುತ್ತಾರೆ ಅವರು ಬೇರೆಯವರ ತರ ನಾವು ದಪ್ಪ ಆಗಬೇಕು ಎಂದು ತುಂಬಾ ಪ್ರಯತ್ನಗಳನ್ನು ಮಾಡುತ್ತಾರೆ ಅದರಲ್ಲಿ ವ್ಯಾಯಾಮ ಆಗಿರಬಹುದು ಜಿಮ್ ಗೆ ಹೋಗಿ ಅವರು ಕೊಟ್ಟಂತಹ ಆಹಾರವನ್ನು ತಿಂದು ದಪ್ಪ ಆಗಬೇಕು ಅಂತ ತುಂಬಾ ಬೆವರಿಳಿಸುತ್ತಾರೆ ಆದರೆ ನಾವು ಈಗ ಈ ಒಂದು ಲೇಖನದಲ್ಲಿ ನೈಸರ್ಗಿಕವಾಗಿ ಕೆಲವೊಂದು ಆಹಾರಗಳನ್ನು ತಿನ್ನುವ ಮೂಲಕ ದಪ್ಪ ಆಗಬಹುದು ಎಂದು ನಾವು ಈ ಲೇಖನದ ಮೂಲಕ ಸಲಹೆಯನ್ನು ನಿಮಗೆ ತಿಳಿಸುತ್ತೇವೆ ಇದರ ಮೂಲಕ ತೆಳ್ಳಗಿರುವವರು ನಿಮ್ಮ ದೇಹವನ್ನು ದಪ್ಪ ಆಗಿಸಬಹುದು ಆದ್ದರಿಂದ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.

ಇದಕ್ಕೆ ಬೇಕಾಗಿರುವುದು ಮೊಟ್ಟೆ ಈ ಮೊಟ್ಟೆಯಲ್ಲಿ ಹೆಚ್ಚಿನ ಕ್ಯಾಲೊರಿಗಳು ಪ್ರೋಟಿನಗಳು ಕೊಬ್ಬಿನಂಶಗಳು ಇರುತ್ತವೆ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಬಯಸುವವರು ಇದನ್ನು ತಿನ್ನಬೇಕು ಅದರಲ್ಲೂ ಮೊಟ್ಟೆಯ ಬಿಳಿ ಭಾಗವನ್ನು ತಿನ್ನಬಹುದು ದಿನಕ್ಕೆ 4 ಮೊಟ್ಟೆ ತಿನ್ನುವುದರ ಮೂಲಕ ನಿಮ್ಮ ತೂಕವನ್ನು ನೀವು ಆದಷ್ಟು ಬೇಗ ಹೆಚ್ಚಿಸಿಕೊಳ್ಳಬಹುದು. ಇನ್ನೊಂದು ಸಲಹೆಯೆಂದರೆ ಹಾಲು ಮತ್ತು ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ಕಾರ್ಬೋಹೈಡ್ರೇಟ್ ಗಳು ಪೊಟ್ಯಾಷಿಯಂ ಅಂಶಗಳು ಹೇರಳವಾಗಿ ಸಿಗುತ್ತವೆ. ಇದು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುವುದಕ್ಕೆ ಸಹಾಯ ಮಾಡುತ್ತದೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ದಿನ ಬೆಳಿಗ್ಗೆ ಒಂದು ಲೋಟ ಹಾಲು ಮತ್ತು ಒಂದು ಬಾಳೆಹಣ್ಣು ತಿಂದರೆ ಸಾಕು.

ಇನ್ನು ಮೂರನೆಯದು ಮಾವಿನಹಣ್ಣು ದಿನಕ್ಕೆ ಒಂದು ಮಾವಿನಹಣ್ಣಿನಂತೆ ಮೂರು ಹೊತ್ತು ತಿನ್ನಿ ಹೀಗೆ ಮಾಡಿದ ಕೂಡಲೇ ಒಂದು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹದ ತೂಕವನ್ನು ನಾವು ಹೆಚ್ಚಿಸಿಕೊಳ್ಳಬಹುದು. ಇನ್ನು ನಾಲ್ಕನೆಯದು ಆಲೂಗಡ್ಡೆ ಈ ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಗಳು ಹೆಚ್ಚಾಗಿರುತ್ತದೆ ಇದು ದೇಹದ ತೂಕವನ್ನು ಹೆಚ್ಚಾಗಿಸುವುದಕ್ಕೆ ಸಹಾಯ ಮಾಡುತ್ತದೆ ಬೇಕಾದರೆ ಸ್ವಲ್ಪ ಬೆಣ್ಣೆಯನ್ನು ಸೇರಿಸಿ ಆಲೂಗಡ್ಡೆಯನ್ನು ತಿನ್ನಬಹುದು. ಹೀಗೆ ಈ ಆಲೂಗಡ್ಡೆಯನ್ನು ವಾರಕ್ಕೆ 2 ದಿನ ತಿಂದರೆ ಉತ್ತಮ ಒಂದುವೇಳೆ ಚನ್ನಾಗಿದೆ ಅಂತ ಪ್ರತಿದಿನ ತಿಂದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.

ಇನ್ನು ಅಂಜೂರ ಮತ್ತು ಒಣದ್ರಾಕ್ಷಿ 5 ಒಣದ್ರಾಕ್ಷಿ 5 ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಇದನ್ನು ತಿನ್ನಬೇಕು ಹೀಗೆ ಮಾಡುವುದರಿಂದ ನಾವು ಆದಷ್ಟು ಬೇಗ ನಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಇನ್ನು ಬೆಣ್ಣೆ ಒಂದು ಚಮಚ ಬೆಣ್ಣೆಯನ್ನು ಒಂದು ಚಮಚ ಸಕ್ಕರೆ ಜೊತೆ ಮಿಶ್ರಣ ಮಾಡಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುಂಚೆ ತಿಂದರೆ ಒಳ್ಳೆಯದು ಇದು ಕೂಡ ನಮ್ಮ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸ್ನೇಹಿತರೆ ನೀವು ದಪ್ಪ ಆಗಲು ಬೇರೆ ಬೇರೆ ವಿಧಾನಗಳನ್ನು ಬಳಸದೆ ಇಲ್ಲಿ ತಿಳಿಸಿರುವ ವಿಧಾನಗಳನ್ನು ಬಳಸಿ ನಿಮ್ಮ ಬದಲಾವಣೆ ನೀವೇ ನೋಡಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here