ದಯವಿಟ್ಟು ಉಟದ ನಂತರ ಈ ತಪ್ಪು ಮಾಡಬೇಡಿ

51

ಊಟದ ನಂತರ ಮತ್ತು ಮೊದಲು ಖಂಡಿತವಾಗಿಯೂ ಈ ತಪ್ಪುಗಳನ್ನು ಮಾಡಬೇಡಿ. ಮನುಷ್ಯರು ಬದುಕಲು ಆಹಾರ ಸೇವನೆ ಮಾಡಲೇಬೇಕು ಆದರೆ ಈ ಆಹಾರ ಸೇವಿಸುವಾಗ ಯಾರು ಸಹ ಅದರ ಬಗ್ಗೆ ಕಾಳಜಿ ತೆಗೆದು ಕೊಳ್ಳುವುದಿಲ್ಲ ಬದಲಾಗಿ ಆಹಾರ ಸೇವಿಸಿದ ನಂತರವೂ ಸಹ ಯಾವುದೇ ವಿಧವಾದ ಕಾಳಜಿ ತೆಗೆದು ಕೊಳ್ಳುವುದಿಲ್ಲ ಹಾಗಾದರೆ ನಾವು ಕಾಳಜಿ ತೆಗೆದುಕೊಳ್ಳದೆ ಆಹಾರ ಸೇವಿಸುವ ಮೊದಲು ಮತ್ತು ನಂತರ ಮಾಡುವ ಕೆಲವು ತಪ್ಪುಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಈಗ ನೋಡೋಣ ಬನ್ನಿ. ಆಹಾರ ನಮ್ಮ ದೇಹಕ್ಕೆ ತುಂಬಾ ಮುಖ್ಯ ನಾವು ಸರಿಯಾದ ರೀತಿಯಲ್ಲಿ ಆಹಾರ ಸೇವಿಸದೇ ಇದ್ದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ ಈ ಆಹಾರ ಸೇವಿಸುವಾಗ ಮಾಡುವ ಕೆಲವು ತಪ್ಪುಗಳಿಂದ ನಾವು ಅನಾರೋಗ್ಯಕ್ಕೂ ತುತ್ತಾಗುತ್ತೇವೆ ಹೀಗೆ ಆಹಾರ ಸೇವಿಸುವಾಗ ಮಾಡುವ ತಪ್ಪುಗಳಿಂದ ಮುಖದಲ್ಲಿ ಮೊಡವೆ ಅಲರ್ಜಿ ಆಗುತ್ತವೆ ಹಾಗೇನೇ ಅಸಿಡಿಟಿ ತೂಕದಲ್ಲಿ ಹೆಚ್ಚಳ ಥೈರಾಯ್ಡ್ ಕಣ್ಣಿನ ದೃಷ್ಟಿ ಕಡಿಮೆ ಆಗುವುದು

ಕೂದಲು ಕೂದರುವುದು ಅಸ್ತಮಾ ಮೈಗ್ರೇನ್ ರಾತ್ರಿ ಸರಿಯಾಗಿ ನಿದ್ದೆ ಬರದೆ ಇರುವುದು ಹೃದಯ ಸಂಬಂಧಿ ರೋಗಗಳು ಹಾಗೂ ಅನೇಕ ರೋಗಗಳಿಗೆ ಇದು ಕಾರಣವಾಗುತ್ತದೆ ಹಾಗಾದರೆ ಅಂತಹ ತಪ್ಪುಗಳು ಇಲ್ಲಿವೆ ನೋಡಿ . ಆಹಾರ ಸೇವಿಸಿದ ತಕ್ಷಣ ನಿದ್ದೆ ಮಾಡುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ ಆಹಾರ ಜೀರ್ಣವಾಗುವಾಗ ನಾವು ಕುಳಿತಿದ್ದರೆ ಒಳ್ಳೆಯದು ಇನ್ನು ಮಲಗಿದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಜೀರ್ಣಕ್ರಿಯೆ ನಿಧಾನವಾಗುತ್ತದೆ ಆಗ ಹುಳಿತೆಗಿನ ಸಮಸ್ಯೆ ಎದೆಉರಿ ಹೊಟ್ಟೆಯಿಂದ ಸದ್ದು ಬರುವ ಸಮಸ್ಯೆಗಳು ಕೂಡ ಕಂಡುಬರುತ್ತದೆ ಆದ್ದರಿಂದ ಆಹಾರ ಸೇವಿಸಿದ ನಂತರ ಮಲಗುವ ಅಭ್ಯಾಸ ಬಿಡಿ. ಆಹಾರ ಸೇವಿಸಿದ ತಕ್ಷಣ ಕೆಲವರಿಗೆ ಸಿಹಿ ತಿನ್ನುವ ಅಭ್ಯಾಸ ಇರುತ್ತದೆ ಸಕ್ಕರೆಯಿಂದ ಮಾಡಿರುವಂತಹ ಸಿಹಿ ತಿಂಡಿಗಳನ್ನು ಊಟ ಅದ ತಕ್ಷಣ ಸೇವಿಸುವುದರಿಂದ ಸಕ್ಕರೆಕಾಯಿಲೆ ಹಾಗೂ ಮೂತ್ರ ಪಿಂಡಕ್ಕೆ ಸಂಬಂದಿಸಿದ ರೋಗಗಳು ಬರಬಹುದು ಸಿಹಿ ತಿಂಡಿಗಳನ್ನು ತಿನ್ನುವುದರಿಂದ

ಆಹಾರ ಸರಿಯಾಗಿ ಜೀರ್ಣ ಆಗದೆ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಊಟ ಆದ ತಕ್ಷಣ ಸಿಹಿ ತಿಂಡಿ ತಿನ್ನಬೇಡಿ. ಆಹಾರ ಸೇವಿಸಿದ ತಕ್ಷಣ ಕಾಫಿ ಅಥವಾ ಚಹಾ ಸೇವಿಸು ವುದರಿಂದ ಆಹಾರದಲ್ಲಿರುವ ಕಬ್ಬಿಣಾಂಶ ಹಾಗೂ ಪ್ರೊಟೀನ್ ಗಳನ್ನು ದೇಹ ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇದರಿಂದ ಬೊಜ್ಜು ಕೂದಲು ಬೇಗನೆ ಬೆಳ್ಳಗಾಗುವುದು ಇನ್ನು ಅಸಿಡಿಟಿ ಹಾಗೂ ಮೊಡವೆ ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ ಆದ್ದರಿಂದ ಊಟ ಅದ ತಕ್ಷಣ ಕಾಫಿ ಅಥವಾ ಚಹಾ ಕುಡಿಯಬೇಡಿ. ಇನ್ನು ಆಹಾರ ಸೇವಿಸಿದ ತಕ್ಷಣ ಜೀರ್ಣಕ್ರಿಯೆಯ ಸಮಯದಲ್ಲಿ ದೇಹದ ತಾಪಮಾನ ಹೆಚ್ಚಾಗಿರುತ್ತದೆ ಇದೆ ಕಾರಣದಿಂದ ಆಹಾರ ಸೇವಿಸುವ ಸಮಯದಲ್ಲಿ ನಮಗೆ ಕೆಲವೊಮ್ಮೆ ಬೆವರು ಬರುತ್ತದೆ ಆದ್ದರಿಂದ ಆಹಾರ ಸೇವಿಸಿದ ತಕ್ಷಣ ಸ್ನಾನ ಮಾಡುವುದರಿಂದ ಶರೀರದ ತಾಪಮಾನ ಬೇಗನೆ ಕಡಿಮೆ ಆಗುತ್ತದೆ ಇದರಿಂದ ಆಹಾರ ಜೀರ್ಣ ಆಗುವುದು ಕೂಡ ಕಡಿಮೆ ಆಗುತ್ತದ್ದೆ ಕೆಲವರು ಕೆಲಸಕ್ಕೆ ಹೋಗೋ

ಅವಸರದಲ್ಲಿ ಬೆಳಿಗ್ಗೆ ತಿಂಡಿ ತಿಂದ ಮೇಲೆ ಸ್ನಾನ ಮಾಡುತ್ತಾರೆ ಇದರಿಂದ ಬೆಳಿಗ್ಗೆ ತಿಂದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ ಅದರ ಮೇಲೆ ಮತ್ತೆ ಮಧ್ಯಾಹ್ನದ ಆಹಾರ ಸೇವಿಸಿದಾಗ ಹೊಟ್ಟೆ ಕೆಡುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಆಹಾರ ಸೇವಿಸುವ ಮೊದಲು ಸ್ನಾನ ಮಾಡಿ ಆಹಾರ ಸೇವಿಸಿದ ಮೇಲೆ ಸ್ನಾನ ಮಾಡಬೇಡಿ ಹಲ್ಲು ಉಜ್ಜುವುದು ರಾತ್ರಿ ಮಲಗುವ ಮೊದಲು ಹಲ್ಲು ಉಜ್ಜುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ ಈದು ಒಳ್ಳೆಯ ಅಭ್ಯಾಸ ಆದರೆ ಆಹಾರ ಸೇವಿಸಿದ ತಕ್ಷಣ ಹಲ್ಲು ಉಜ್ಜುವ ಅಭ್ಯಾಸ ತಪ್ಪು ಅದರಲ್ಲೂ ಹುಳಿ ಪಧಾರ್ಥಗಳನ್ನು ಸೇವಿಸಿದ ಮೇಲೆ ಹಲ್ಲಿನ ಏನೇಮಲ್ ದುರ್ಬಲ ಆಗಿರುತ್ತದೆ ಆದ್ದರಿಂದ ಆಹಾರ ಸೇವಿಸಿದ ಅರ್ಧ ಗಂಟೆಯ ನಂತರ ಹಲ್ಲು ಉಜ್ಜುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಆದ್ದರಿಂದ ಸ್ನೇಹಿತರೆ ಇಲ್ಲಿ ತಿಳಿಸಿದ ತಪ್ಪುಗಳನ್ನು ನೀವು ಸಹ ಮಾಡುತ್ತಿದ್ದರೆ ಕೂಡಲೇ ಅವುಗಳನ್ನು ಬಿಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ.

LEAVE A REPLY

Please enter your comment!
Please enter your name here