ದಿನಕ್ಕೆ ಈ ಸಮಯದಲ್ಲಿ ಟೀ ಕುಡಿದರೆ ಹತ್ತಾರು ಲಾಭ

73

ದಿನಕ್ಕೆ ಎಷ್ಟು ಲೋಟ ಚಹಾ ಕುಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೆಲವು ಕಡೆ ಇನ್ನು ಮಳೆಯಾಗುತ್ತಿದೆ ಇನ್ನು ಕೆಲವುಕಡೆ ತುಂಬಾ ಚಳಿಯಿದೆ ಬಿಸಿಲು ಆಗಾಗ ಬರುತ್ತದೆ ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ಸಮಯ ತುಂಬಾನೇ ಚಳಿಯಿದೆ ಆಗ ಒಂದು ಲೋಟ ಚಹಾ ಕುಡಿಯಬೇಕು ಎನಿಸುತ್ತದೆ ಏಕೆಂದರೆ ಚಹಾ ಅಷ್ಟೊಂದು ಸ್ವಾದದಿಂದ ಕೂಡಿರುತ್ತದೆ. ಆದರೆ ಈ ಚಹಾ ಕುಡಿಯುವ ಮುನ್ನ ಸ್ವಲ್ಪ ನಾವು ಎಚ್ಚರ ವಹಿಸಬೇಕು ಏಕೆಂದರೆ ಇದು ನಮ್ಮ ದೇಹ ಮತ್ತು ಮನಸ್ಸಿಗೆ ದುಷ್ಪರಿಣಾಮ ಬೀರುತ್ತದೆ ಎಂದು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಚಹಾ ಪುರಾತನ ಒಂದು ವಾಡಿಕೆಯಾಗಿ ಬಂದಿದೆ ಇದರಿಂದ ಆರೋಗ್ಯಕ್ಕೆ ಹಲವು ಅನುಕೂಲಗಳಿವೆ ಕೆಫೆನ್ ಮತ್ತು ಫ್ಲೋರೈಡ್ ಮತ್ತು ಫ್ಲೇವನೈಯ್ಡ್ ಗಳನ್ನು ಒಳಗೊಂಡ ಚಹಾವನ್ನು ದಿನಕ್ಕೆ 3 ಲೋಟ ಕುಡಿದರೆ ಹೃದಯಕ್ಕೆ ತುಂಬಾ ಒಳ್ಳೆಯದು

ಹೃದ್ರೋಗವನ್ನು 11 ಕಡಿಮೆ ಮಾಡುತ್ತದೆ ಎಂದು ಕೆಲವೊಂದು ಸಂಶೋಧನೆಗಳು ಹೇಳುತ್ತಾ ಬಂದಿವೆ ಆದರೆ ಮಿತಿಮೀರಿದ ಚಹಾ ಸೇವನೆ ಕೆಲವೊಂದು ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಬಿಸಿ ಬಿಸಿ ಚಹಾವನ್ನು ಅತಿಯಾಗಿ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಏಕಾಗ್ರತೆ ಕುಂಠಿತವಾಗುತ್ತದೆ ಹಸಿರು ಚಹಾ ಅಥವಾ ಕಂದುಚಹ ಏನೇ ಇರಲಿ ಒಂದು ಲೋಟದಲ್ಲಿ 40 ಎಮ್ ಜಿ ಎಷ್ಟು ಕೆಫೆನ್ ಇರುತ್ತದೆ ಕೆಫೆನ್ ಪ್ರಮಾಣ ನಮ್ಮ ದೇಹದೊಳಗೆ ಹೆಚ್ಚಾದರೆ ಏಕಾಗ್ರತೆಯ ಸಾಮರ್ಥ್ಯವನ್ನು ಇದು ಕುಗ್ಗಿಸುತ್ತದೆ ಅಲ್ಲದೆ ನಿದ್ದೆಗೆ ಅಡ್ಡಿಯಾಗಿ ಆತಂಕಕ್ಕೂ ಕಾರಣವಾಗುತ್ತದೆ ಇಂತಹ ಬದಲಾವಣೆಗಳು ಕ್ರಮೇಣ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಬ್ರೌನ್ ಯೂನಿವರ್ಸಿಟಿಯ ಅಧ್ಯಯನಗಳು ಹೇಳುತ್ತಾ ಬಂದಿವೆ.

ನಮ್ಮ ದೇಹದಲ್ಲಿ ಕಬ್ಬಿಣಾಂಶ ಇರುವ ಸಾಮರ್ಥ್ಯವನ್ನು ಕಡಿಮೆಯಾಗುವಂತೆ ಮಾಡುತ್ತದೆ ಚಹಾದಲ್ಲಿ ಇರುವ ರಾಸಾಯನಿಕ ಪಧಾರ್ಥ ಟ್ಯಾನಿನ್ ಅಗತ್ಯಕ್ಕಿಂತ ಜಾಸ್ತಿ ದೇಹದೊಳಗೆ ಹೋದರೆ ನಮ್ಮಲ್ಲಿರುವ ಕಬ್ಬಿಣಾಂಶ ಹದಗೆಡುವಂತೆ ಮಾಡುತ್ತದೆ. ಯಾವುದೇ ಆಹಾರವನ್ನು ಸೇವಿಸಿದರೂ ಸಹ ನಮಗೆ ಬೇಕಾದಷ್ಟು ಕಬ್ಬಿಣದ ಪ್ರಮಾಣವನ್ನು ಸಿಗದಂತೆ ಮಾಡುತ್ತದೆ ಅತಿಯಾದ ಚಹಾ ಸೇವನೆ ವ್ಯಕ್ತಿಯ ಕಬ್ಬಿಣಾಂಶ ಹೀರಿಕೊಳ್ಳುವ ಶಕ್ತಿಯನ್ನು 60ರಷ್ಟು ಕಡಿಮೆ ಮಾಡುತ್ತದೆ ಎಂದು ಕೊಲೆರಾಡೋ ರಾಜ್ಯ ವಿಶ್ವವಿದ್ಯಾನಿಲಯದ ಕೆಲವೊಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ ಮಾನವನ ಶರೀರದಲ್ಲಿ ಕಬ್ಬಿಣಾಂಶ ಕೊರತೆಯಾದರೆ ಅದು ಹಲವಾರು ರೋಗಗಳಿಗೆ ದಾರಿಮಾಡಿ ಕೊಡುತ್ತದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಆದರೆ ಚಹಾ ಸೇವಿಸುವುದರಿಂದ ಒಳ್ಳೆಯದು ಇದೆ ಹಾಗೇನೇ ಕೆಟ್ಟದು ಆಗುತ್ತದೆ ಆದರೆ ದಿನಕ್ಕೆ ಮುಖ್ಯವಾಗಿ ನಮ್ಮ ದೇಹಕ್ಕೆ 2 ರಿಂದ 3 ಲೋಟ ಮಾತ್ರ ಚಹಾವನ್ನು ನಾವು ಕುಡಿಯಬೇಕು ಅದಕ್ಕಿಂತ ಮೀರಿದರೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಅನಾರೋಗ್ಯಕರ ಬದಲಾವಣೆಗಳು ಕಾಣುತ್ತವೆ ಇದರಿಂದ ಆಸ್ಪತ್ರೆ ಸೇರಬೇಕಾಗುತ್ತದೆ ಆದ್ದರಿಂದ ದಿನಕ್ಕೆ 3 ಲೋಟಕ್ಕಿಂತ ಅಧಿಕವಾಗಿ ಚಹಾ ಕುಡಿದರೆ ಅನಾರೋಗ್ಯ ಆಗುತ್ತದೆ ಎಂದು ಹೇಳುತ್ತೇವೆ ಆದಷ್ಟು ಕಡಿಮೆ ಚಹಾ ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಮರೆಯರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here