ದುಡ್ಡಿನ ರಹಸ್ಯ

65

ದುಡ್ಡಿನ ರಹಸ್ಯ ನಿಮಗೆ ಗೊತ್ತಿದ್ದರೆ ನೀವು ಕೂಡ ಶ್ರೀಮಂತರಾಗುತ್ತಿರ. ದುಡ್ಡಿನ ರಹಸ್ಯವನ್ನುಇರುತ್ತದೆ ಅಂದ್ರೆ ನೀವು ನಂಬುತ್ತೀರಾ ದುಡ್ಡಿನ ಬಗ್ಗೆ ಅಂತಹದ್ದೇನು ಗುಟ್ಟಿದೆ ಎನ್ನುವುದು ಶ್ರೀಮಂತರಿಗೆ ಗೊತ್ತಿದೆ ಆದರೆ ಬಡವರಿಗೆ ಗೊತ್ತಿಲ್ಲ ಕೆಲವು ಜನರ ಜೀವನದಲ್ಲಿ ದುಡ್ಡಿನ ನದಿಗಳು ಹರಿಯುತ್ತವೆ ಆದರೆ ಕೆಲವು ಜನರ ಜೀವನದಲ್ಲಿ ಇದರ ಕೇವಲ ಹನಿಗಳು ಮಾತ್ರ ಕಂಡುಬರುತ್ತವೆ ಒಬ್ಬ ಸಾಮಾನ್ಯ ವ್ಯಕ್ತಿಯ ಮುಂದೆ ದುಡ್ಡಿನ ರಹಸ್ಯದ ಬಗ್ಗೆ ಮಾತನಾಡಿದರೆ ಅವನಿಗೆ ಏನು ತಿಳಿಯುವುದಿಲ್ಲ. ಹಾಗಾದರೆ ದುಡ್ಡಿನ ರಹಸ್ಯ ಏನು ಅನ್ನೋದನ್ನ ಈಗ ತಿಳಿಯೋಣ ಮೊದಲನೇ ರಹಸ್ಯ ದುಡ್ಡಿನ ಬಗ್ಗೆ ನೀವು ಯಾವ ರೀತಿ ಯೋಚನೆ ಮಾಡುತ್ತೀರಾ ಅಂತ ದುಡ್ಡೇ ಎಲ್ಲ ಸಮಸ್ಯೆಗಳ ಮೂಲ ಎಂದರೆ ನೀವು ದುಡ್ಡನ್ನು ನಿಮ್ಮಿಂದ ದೂರ ಮಾಡ್ತಿದ್ದೀರ ಎಂದರ್ಥ. ಆದರೆ ಆ ದುಡ್ಡಿನಿಂದಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಯೋಚಿಸಿದರೆ ಖಂಡಿತವಾಗಿಯೂ ದುಡ್ಡು ನಿಮ್ಮ ಕಡೆ ಬರುತ್ತದೆ.

ದುಡ್ಡನ್ನು ಸಂಪಾದಿಸುವುದು ತುಂಬಾ ಕಷ್ಟದ ಕೆಲಸ ಅಂತ ನೀವು ಯೋಚಿಸಿದರೆ ಅದು ನಿಮಗೆ ಕಷ್ಟದಿಂದಲೇ ಸಿಗುತ್ತದೆ. ದುಡ್ಡನ್ನು ಸುಲಭವಾಗಿ ಗಳಿಸಬಹುದು ಎಂದು ನೀವು ಯೋಚಿಸಿದರೆ ಅದು ನಿಮ್ಮ ಜೀವನದಲ್ಲಿ ಸುಲಭವಾಗಿ ಸಿಗುತ್ತದೆ. ಅಂದರೆ ನೀವು ದುಡ್ಡಿನ ಬಗ್ಗೆ ಯಾವ ರೀತಿ ಯೋಚನೆ ಮಾಡುತ್ತೀರಾ ದುಡ್ಡು ಕೂಡ ನಿಮ್ಮ ಬಗ್ಗೆ ಹಾಗೆ ಯೋಚನೆ ಮಾಡುತ್ತದೆ. ಇನ್ನು ಎರಡನೇ ರಹಸ್ಯ ನೀವು ಬೇರೆಯವರ ಜೊತೆ ಯಾವ ರೀತಿ ಮಾತುಗಳನ್ನು ಮಾತಾಡುತ್ತೀರಿ ಅಂತ ಒಂದುವೇಳೆ ನೀವು ಬೇರೆಯವರ ಜೊತೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತಾಡಿದ್ರೆ ಮತ್ತು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರೆ ನೀವು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನೇ ಆಹ್ವಾನಿಸುತ್ತೀರಿ ಎಂದರ್ಥ. ಆದರೆ ನೀವು ಜನರೊಂದಿಗೆ ಸಮಸ್ಯೆಗಳ ಪರಿಹಾರದೊಂದಿಗೆ ಮಾತನಾಡಿದರೆ ನಿಮ್ಮ ಜೀವನದಲ್ಲಿ ಅನೇಕ ಪರಿಹಾರಗಳು ಬರುತ್ತವೆ ಅದರಿಂದ ನಿಮ್ಮ ಜೀವನ ಸಮೃದ್ಧಿಯಾಗುತ್ತದೆ.

ಅದೇರೀತಿ ನೀವು ಜನರೊಂದಿಗೆ ದುಡ್ಡಿನ ಬಗ್ಗೆ ಮಾತನಾಡಿದರೆ ಅಂದರೆ ಹಣವನ್ನು ಹೇಗೆ ಗಳಿಸಬೇಕು ಇತ್ಯಾದಿಗಳ ಬಗ್ಗೆ ಮಾತನಾಡಿ ತಿಳಿದುಕೊಂಡರೆ ನೀವು ಯೋಚನೆ ಮಾಡಲಾರದಷ್ಟು ದುಡ್ಡು ನಿಮ್ಮ ಜೀವನದಲ್ಲಿ ಬರುತ್ತದೆ. ಮೂರನೇ ರಹಸ್ಯ ನೀವು ದುಡ್ಡನ್ನು ಸಹ ತುಂಬಾ ಪ್ರೀತಿಸಬೇಕು ಯಾರು ದುಡ್ಡನ್ನು ಪ್ರೀತಿಸುತ್ತಾರೋ ದುಡ್ಡು ಕೂಡ ಅವರನ್ನು ಅಷ್ಟೇ ಪ್ರೀತಿಸುತ್ತದೆ. ನಾಲ್ಕನೇ ರಹಸ್ಯ ಇದು ತುಂಬಾ ಮುಖ್ಯವಾದ ರಹಸ್ಯ ನಿಮಗೆ ದುಡ್ಡಿನ ಬಗ್ಗೆ ಜ್ಞಾನವಿರಬೇಕು ದುಡ್ಡು ಹೇಗೆ ಗಳಿಸುವುದು ಅಂತ ನೀವು ತಿಳಿಯಬೇಕು ದುಡ್ಡನ್ನು ಹೇಗೆ ಸುರಕ್ಷಿತವಾಗಿ ಇಡಬೇಕು ಹೇಗೆ ಖರ್ಚು ಮಾಡಬೇಕು ಎಂಬುದು ನಿಮಗೆ ಗೊತ್ತಾಗಬೇಕು ದುಡ್ಡಿನ ಬಗ್ಗೆ ನೀವು ಎಷ್ಟು ತಿಳಿದು ಕೊಳ್ಳುತ್ತಿರ ಅಷ್ಟೇ ವೇಗವಾಗಿ ದುಡ್ಡು ನಿಮ್ಮ ಹತ್ತಿರ ಬರುತ್ತದೆ. ಐದನೆ ರಹಸ್ಯ ದುಡ್ಡನ್ನು ಎಂದಿಗೂ ಒಂದೇ ಸ್ಥಳದಲ್ಲಿ ಇಡಬಾರದು ಅಂದರೆ ದುಡ್ಡನ್ನು ಯಾವಾಗಲೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತ ಇರಬೇಕು ನೀವು ದುಡ್ಡನ್ನು ಒಂದೇ ಸ್ಥಳದಲ್ಲಿ ಇಟ್ಟರೆ ಆ ದುಡ್ಡಿನ ಬೆಲೆ ಕಡಿಮೆಯಾಗುತ್ತದೆ.

ದುಡ್ಡನ್ನು ಒಂದೆ ಸ್ಥಳದಲ್ಲಿ ಇಡಬಾರದು ಅಂದರೆ ಆ ದುಡ್ಡನ್ನು ಖರ್ಚು ಮಾಡಬೇಕಾ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು ನೀವು ದುಡ್ಡನ್ನು ಖರ್ಚು ಮಾಡಬೇಕಾಗಿಲ್ಲ ದುಡ್ಡು ಚಲಾಯಿಸುತ್ತ ಇರಬೇಕು ಅಂದ್ರೆ ಅದು ನಿಮ್ಮಿಂದ ಹೋಗಿ ಅದು ನಿಮಗೆ ಎರಡರಷ್ಟು ಸಿಗಬೇಕು ಒಟ್ಟಾರೆಯಾಗಿ ಹೇಳುವುದೇನೆಂದರೆ ನೀವು ದುಡಿದಿರುವ ದುಡ್ಡನ್ನು ಯಾವತ್ತೂ ನಿಮ್ಮ ಹತ್ತಿರ ಇಟ್ಕೋಬೇಡಿ ಬದಲಿಗೆ ಅದನ್ನು ವ್ಯವಹರಿಸಿ ಅದರಿಂದ ಅದು ವಾಪಸ್ ನಿಮ್ಗೆ ಎರಡರಷ್ಟು ಸಿಗುತ್ತದೆ ಆದರೆ ನೀವು ಈ ದುಡ್ಡಿನ ರಹಷ್ಯವನ್ನು ಇಂದಿನಿಂದಲೇ ಜೀವನದಲ್ಲಿ ಅಳವಡಿಸಿಕೊಳ್ಳಿ ಜೊತೆಗೆ ನೀವು ಸಹ ಶ್ರೀಮಂತರಾಗಿರಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ.

LEAVE A REPLY

Please enter your comment!
Please enter your name here