ಆಗರ್ಭ ಶ್ರೀಮಂತರಿಗೋಸ್ಕರಾನೇ ತಯಾರಾದ ಕಾರು ಇದು. ಒಬ್ಬ ಆಗರ್ಭ ಶ್ರೀಮಂತನ ಬಳಿ ನೂರಾರು ಕೋಟಿ ರೂಪಾಯಿ ಹಣವಿರುತ್ತದೆ ಆತನ ಬಳಿ ಹತ್ತಾರು ತರಹದ ಬೆಲೆ ಬಾಳುವ ಕಾರುಗಳು ಇರುತ್ತವೆ ಆದರೆ ಆತನ ಬಳಿ ರೋಲ್ಸ್ ರೈಲ್ಸ್ ಕಾರು ಮಾತ್ರ ಇರುವುದಿಲ್ಲ ಏಕೆಂದು ನೀವು ಹಲವಾರು ಜನರನ್ನು ಕೇಳಿದಾಗ ಅವರು ಕೊಡುವ ಉತ್ತರ ಆ ಕಾರನ್ನು ಸಿಕ್ಕ ಸಿಕ್ಕವರೆಲ್ಲ ತಗೊಳೋ ಹಾಗಿಲ್ಲ ಆ ಕಾರನ್ನು ಕೊಳ್ಳಬೇಕು ಅಂದರೆ ಅದರದ್ದೇ ಆದ ಕೆಲವೊಂದಿಷ್ಟು ನಿಯಮಗಳಿವೆ ಅವೆಲ್ಲ ಸರಿ ಇದ್ದರೆ ಮಾತ್ರ ಆ ಒಂದು ಕಾರನ್ನು ನೀವು ಖರೀದಿ ಮಾಡಲು ಸಾಧ್ಯ ಎಂದು ಹೇಳುತ್ತಾರೆ ಅಷ್ಟಕ್ಕೂ ಏನಿದು ಕಾರಣ ಏಕೆ ಆ ಕಾರನ್ನು ಎಲ್ಲರೂ ಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವುದನ್ನು ಈ ಲೇಖನದಲ್ಲಿ ಈಗ ನೋಡೋಣ ಬನ್ನಿ. ರೋಲ್ಸ್ ರೈಲ್ಸ್ ಎಂದರೆ ಐಶಾರಾಮಿ ಐಶಾರಾಮಿ ಎಂದರೆ ಇದೆ ರೋಲ್ಸ್ ರೈಲ್ಸ್ ಎನ್ನುವ ಮಾತಿದೆ ಈ ಒಂದು ಕಾರನ್ನು ಖರೀದಿ ಮಾಡಲು ಇರುವ ಸವಾಲುಗಳ ಹಿಂದೆನೆ ಈ ಕಂಪನಿಯ ಪ್ರತಿಷ್ಠೆ ಬಗ್ಗೆನೇ ಹೆಚ್ಚಾಗಿ ಸುದ್ದಿ ಆಗುತ್ತಿದೆ.
ಸಾಮಾನ್ಯವಾಗಿ ನಾವು ಕಾರುಗಳನ್ನು ತೆಗೆದುಕೊಳ್ಳಲು ಹಣ ಮತ್ತು ಅದಕ್ಕೆ ಸಂಬಂಧಪಟ್ಟ ಧಾಖಲೆಗಳನ್ನು ತಯಾರಿಸಿಕೊಂಡು ಶೋರೂಮಗೆ ಭೇಟಿಕೊಟ್ಟರೆ ನಮಗೆ ಇಷ್ಟವಾದ ಕಾರನ್ನು ಖರೀದಿಸಹಬಹುದು ಆದರೆ ರೋಲ್ಸ್ ರೈಲ್ಸ್ ಕಂಪನಿಯ ಕಾರುಗಳನ್ನು ತೆಗೆದುಕೊಳ್ಳುವುದು ತುಂಬಾನೇ ಕಷ್ಟದ ಕೆಲಸ ಒಂದು ರೋಲ್ಸ್ ರೈಲ್ಸ್ ಕಾರನ್ನು ಯಾರಾದ್ರೂ ತಗೋಬೇಕು ಅಂತ ಶೋರುಮಗೆ ಹಣ ತೆಗೆದುಕೊಂಡು ಹೋದರೆ ಅದು ಸಾಧ್ಯವಾಗುವುದಿಲ್ಲ ಈ ಕಂಪನಿಯ ಕಾರುಗಳನ್ನು ತೆಗೆದುಕೊಳ್ಳುವುದಕ್ಕೆ ಇರುವ ನಿಯಮಗಳೆ ಆ ತರ ಇವೆ. ಆ ಸಂಸ್ಥೆ ಮೊದಲು ನೋಡುವುದು ನಿಮ್ಮ ಪೂರ್ತಿ ಪ್ರೊಫೈಲನ್ನು ಅಂದರೆ ನೀವು ಯಾರು ನಿಮ್ಮ ಹಿನ್ನೆಲೆ ಹೇಗಿದೆ ನೀವು ಏನು ಕೆಲಸ ಮಾಡುತ್ತೀರಾ ಮತ್ತು ನೀವು ಯಾವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಿರ ನಿಮ್ಮ ಆದಾಯ ಎಷ್ಟು ಮತ್ತು ನಿಮ್ಮ ಕುಟುಂಬದ ಹಿನ್ನೆಲೆ ಏನು ಅವರಲ್ಲಿ ಯಾರಾದ್ರೂ ಅಪರಾಧಿ ಹಿನ್ನೆಲೆ ಹೊಂದಿದ್ದಾರ ಮತ್ತೆ ನೀವು ಯಾವುದಾದರೂ ಅಪರಾಧಿ ಹಿನ್ನೆಲೆ ಹೊಂದಿದ್ದಿರ ಈ ಎಲ್ಲದನ್ನು ಮೊದಲು ರೋಲ್ಸ್ ರೈಲ್ಸ್ ಗಣನೆಗೆ ತೆಗೆದು ಕೊಳ್ಳುತ್ತದೆ
ಮತ್ತೆ ನಿಮ್ಮ ಮನೆ ಎಲ್ಲಿದೆ ನೀವು ಸಮಾಜಕ್ಕೆ ಎಷ್ಟು ಉಪಯೋಗಕರ ಕೆಲಸವನ್ನು ಮಾಡುತ್ತಿದ್ದಿರ ಮತ್ತೆ ನಿಮಗೆ ಎಷ್ಟು ಜನ ಪ್ರತಿಷ್ಠಿತ ವ್ಯಕ್ತಿಗಳ ಪರಿಚಯವಿದೆ ಮತ್ತೆ ನಿಮ್ಮ ಹಾಗೂ ಅವರ ಒಡನಾಟ ಹೇಗಿದೆ ಈ ಎಲ್ಲ ಮಾಹಿತಿಯನ್ನು ತಿಳಿಯಲಾಗುತ್ತದೆ. ಕೇವಲ ಹಣದ ಆಧಾರದಲ್ಲಿ ಈ ಕಂಪನಿಯ ಕಾರುಗಳನ್ನು ಡೇಜಿಟೈ ಕೂಡ ಮಾಡಲು ಆಗುವುದಿಲ್ಲ ಮತ್ತೆ ಈ ಒಂದು ಕಾರನ್ನು ಖರೀದಿಮಾಡುವವ ಅಷ್ಟೇ ಅಲ್ಲದೆ ನಿಮ್ಮ ಪೂರ್ವಜರ ಬಗ್ಗೆಯೂ ಪೂರ್ತಿಯಾಗಿ ತನಿಖೆ ಮಾಡಲಾಗುತ್ತದೆ. ಅವರು ಏನು ಕೆಲಸ ಮಾಡುತ್ತಿದ್ದರು ಅವರ ಜೀವನ ಶೈಲಿ ಹೇಗಿತ್ತು ಮತ್ತೆ ಅವರಲ್ಲಿ ಏನಾದರೂ ಕೆಟ್ಟ ವ್ಯಕ್ತಿಗಳು ಇದ್ದರಾ ಇವೆಲ್ಲವನ್ನು ಕೂಡ ಪರಿಶೀಲನೆ ಮಾಡಲಾಗುತ್ತದೆ ಇವೆಲ್ಲವೂ ಸರಿಯಾಗಿ ಇದ್ದಲ್ಲಿ ಮಾತ್ರ ರೋಲ್ಸ್ ರೈಲ್ಸ್ ಕಾರನ್ನು ಖರೀದಿ ಮಾಡಲು ಸಾಧ್ಯ. ಇದಿಷ್ಟು ಇಂಟರ್ ನೆಟ್ಗಳಲ್ಲಿ ಸೋಷಿಯಲ್ ಮಿಡಿಯಾಗಳಲ್ಲಿ ಮತ್ತೆ ಜನರ ಬಾಯಲ್ಲಿ ಹರಿದಾಡುವ ಒಂದು ದೊಡ್ಡ ಸುಳ್ಳು ಸುದ್ಧಿ. ಇಲ್ಲಿ ಮೇಲೆ ಹೇಳಿದ ಯಾವ ವಿಷಯವು ಕೂಡ ಈ ಕಂಪನಿಗೆ ಬೇಕಾಗಿಲ್ಲ.
ನಟ ಸಂಜಯ್ ದತ್ ಕೂಡ ಈ ಕಂಪನಿಯ ಕಾರನ್ನು ಖರೀದಿ ಮಾಡಿದ್ದಾರೆ ನಿಮ್ಮೆಲ್ಲರಿಗೂ ಗೋತ್ತಿರುವ ಹಾಗೆ ಅವರ ಮೇಲೆ ಮಾಧಕ ವಸ್ತು ಕೇಸ್ ಇದೆ ಮತ್ತೆ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಇದ್ದರು ಕೂಡ ಅವರು ಈ ಒಂದು ಕಾರನ್ನು ಖರೀದಿ ಮಾಡಿದ್ದಾರೆ. ಈ ಒಂದು ಕಾರನ್ನು ತಯಾರು ಮಾಡುವುದು ಆಗರ್ಭ ಶ್ರೀಮಂತನಿಗೆ ಮಾತ್ರ ಹಾಗಾಗಿ ಈ ಕಾರುಗಳು ಕಡಿಮೆ ಸಂಖ್ಯೆಯಲ್ಲಿ ತಯಾರಾಗುತ್ತವೆ ಹಾಗಾಗಿ ತುಂಬಾ ಜನಕ್ಕೆ ಈ ಕಾರುಗಳು ಸಿಗುವುದಿಲ್ಲ ಮತ್ತೆ ಈರೀತಿಯ ವದಂತಿಗಳು ಹರಡಲು ಕಾರಣವೇನೆಂದರೆ ಜೈಸಿಂಗ್ ಎನ್ನುವ ಒಬ್ಬ ರಾಜ ಆ ಒಂದು ಕಾರನ್ನು ಖರೀದಿ ಮಾಡಲು ಹೋದಾಗ ಆತನಿಗೆ ಆ ಕಂಪನಿ ಕಾರನ್ನು ಕೊಡದೆ ಅವಮಾನ ಮಾಡಿ ಕಳಿಸಿತು ನಂತರ ಆತ ಅದೇ ಕಂಪನಿಯ 6 ಕಾರುಗಳನ್ನು ಖರೀದಿ ಮಾಡಿದ ಆ ಕಾರುಗಳನ್ನು ಕಸವನ್ನು ಸಂಗ್ರಹಣೆ ಮಾಡುವುದಕ್ಕೆ ಬಳಸುತ್ತಿದ್ದ. ನಂತರ ರಾಜಸ್ಥಾನದಲ್ಲಿ ಆ ಒಂದು ಕಂಪೆನಿ ಆತನ ಬಳಿ ಬಂದು ಕ್ಷಮೆ ಕೇಳಿತು. ಇದು ನಿಜವಾಗಿ ನಡೆದ ಘಟನೆ ಆದರೆ ಈ ಒಂದು ಘಟನೆಯನ್ನೇ ಆಧಾರವಾಗಿ
ಇಟ್ಟುಕೊಂಡು ಹಲವಾರು ಸುಳ್ಳು ಕಥೆಗಳು ಹುಟ್ಟಿಕೊಂಡವು ಇವತ್ತು ನಮ್ಮ ಭಾರತ ದೇಶದಲ್ಲೆನೆ ಅವರ ಹಿನ್ನೆಲೆ ಸರಿ ಇಲ್ಲದೆ ಇರುವವರ ಹತ್ತಿರ ಮತ್ತು ಹಲವಾರು ತರಹದ ಕೇಸ್ ಗಳು ಇರುವವರು ಕೂಡ ಈ ಒಂದು ಕಾರನ್ನು ಖರೀದಿ ಮಾಡಿದ್ದಾರೆ ಹಾಗಾಗಿ ಈ ಒಂದು ಕಾರನ್ನು ಕೊಳ್ಳಲಿಕ್ಕೆ ಹಲವಾರು ನಿಯಮಗಳಿವೆ ಎನ್ನುವುದು ದೊಡ್ಡ ಸುಳ್ಳುಸುದ್ಧಿ. ಆಗರ್ಭ ಶ್ರೀಮಂತರಿಗೆ ಅಂತಾನೆ ತಯಾರಾಗುವ ಈ ಕಾರುಗಳು ಅತಿ ಕಡಿಮೆ ಸಂಖ್ಯೆಯಲ್ಲಿ ತಯಾರಾಗುವುದರಿಂದ ಈ ಕಾರುಗಳು ಜಗತ್ತಿನಲ್ಲಿರುವ ಎಲ್ಲ ಶ್ರೀಮಂತರಿಗೂ ಸಿಗುತ್ತಿಲ್ಲ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ