ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆ ಮಾಡಿ ಹೃದಯಾಘಾತ ಆಗದೆ ಇರೋ ತರ ನೋಡಿಕೊಳ್ಳುತ್ತೇ

99

ಪೇರಳೆ ಹಣ್ಣಿನಲ್ಲಿದೆ ನಮ್ಮ ದೇಹಕ್ಕೆ ಬೇಕಾದ ಅದ್ಭುತ ಔಷಧಿ. ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಅಥವಾ ಸಿಬೇಕಾಯಿ ಅಂತಾನೂ ಕರೆಯುತ್ತಾರೆ. ಇದರ ಉಪಯೋಗ ಬಹಳಷ್ಟು ಜನಕ್ಕೆ ಗೊತ್ತಿರುತ್ತದೆ ಇದು ವರ್ಷದ ಬಹುತೇಕ ದಿನಗಳಲ್ಲಿ ನಮಗೆ ಸಿಗುತ್ತದೆ ಆದರೆ ಈ ಗಿಡದ ಎಲೆಗಳ ಬಗ್ಗೆ ಮಾತ್ರ ನಾವು ತಿಳಿದುಕೊಂಡಿರುವುದಿಲ್ಲ ನಾವು ಸಾಮಾನ್ಯವಾಗಿ ಹಣ್ಣುತಿಂದ ನಂತರ ಎಲೆಗಳನ್ನು ಬಿಸಾಕುತ್ತೇವೆ. ನಿಜ ಅಂದರೆ ಆರೋಗ್ಯಕರ ಅಂಶವನ್ನೇ ನಾವು ಎಸೆಯುತ್ತೇವೆ ಆಯುರ್ವೇದದಲ್ಲಿ ಈ ಗಿಡದ ಎಲೆಗಳಲ್ಲಿರುವ ಅದ್ಭುತ ಗುಣಗಳ ಬಗ್ಗೆ ಹೇಳಿದ್ದಾರೆ ಈ ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ ಆಕ್ಸಿಡೆಂಟ್ ಗಳು ಬ್ಯಾಕ್ಟೀರಿಯಾ ನಿವಾರಕಗಳು ಮತ್ತು ಉರಿಯುತವನ್ನು ನಿವಾರಿಸುವ ಪೋಷಕಾಂಶಗಳು ಇವೆಯಂತೆ ಮುಖ್ಯವಾಗಿ ಇದರಲ್ಲಿ ಟ್ಯಾನಿನ್ ಎಂಬ ರಾಸಾಯನಿಕ ಅಧಿಕವಾಗಿದೆ ಇದು ನೈಸರ್ಗಿಕವಾಗಿ ನೋವು ನಿವಾರಕವಾಗಿದೆ. ಅಲ್ಲದೆ ಹಲವು ಪಾಲಿಪಿನೈಲ್ ಕೆರೋಟಿನಲ್ ಪ್ಲೋವೋನೈಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತದೆ.

ಆದರೆ ಈ ಎಲೆಯಲ್ಲಿ ಯಾವ ರೀತಿಯ ಆರೋಗ್ಯಕಾರಿ ಗುಣಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಕೊಬ್ಬನ್ನು ನಿಯಂತ್ರಿಸುತ್ತದೆ ಕೆಲವೊಂದು ಸಂಶೋಧನೆಗಳ ಮೂಲಕ ಈ ಚೆಪೆಕಾಯಿ ಎಲೆಗಳನ್ನು ಕುದಿಸಿ ಚಹಾ ತರ ಮಾಡಿಕೊಂಡು ತಿಂಗಳಿಗೆ 3 ಬಾರಿ ಕುಡಿಯುವುದರಿಂದ ರ ಕ್ತದಲ್ಲಿ ಕೆಟ್ಟ ಕೊಬ್ಬನ್ನು ಮತ್ತು ಟೈಗ್ಲೇಸರಾಯ್ಡ ಎಂಬ ವಿಷಯುಕ್ತ ಅಂಶಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ವಿಶೇಷ ಎಂದರೆ ರಕ್ತದ ಜೊತೆಗೆ ಒಳ್ಳೆಯ ಕೊಬ್ಬು ಸಹ ಇದ್ದು ಇದರ ಪ್ರಮಾಣ ಕಡಿಮೆಯಾಗುವುದಿಲ್ಲ ಅಲ್ಲದೆ ಇದು ಯಕೃತ್ ಅಭಿವೃದ್ಧಿಗು ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸುವುದಕ್ಕೆ ಈ ಚೆಪೆಕಾಯಿ ಎಲೆಗಳ ಮಿಶ್ರಣ ಉತ್ತಮ ಔಷಧಿ ಎನ್ನಲಾಗುತ್ತದೆ. ಇದಕ್ಕಾಗಿ 2 ಲೋಟ ನೀರಿನಲ್ಲಿ 30 ಗ್ರಾಮ್ ಚಪೆ ಎಲೆಗಳನ್ನು ಒಂದು ಮುಷ್ಠಿ ಅಕ್ಕಿಹಿಟ್ಟಿನೊಂದಿಗೆ ಸುಮಾರು 15 ನಿಮಿಷ ಬೇಯಿಸಬೇಕು ಈ ನೀರು ತಣ್ಣಗಾದ ಬಳಿಕ ದಿನಕ್ಕೆ 2 ಬಾರಿ ಕುಡಿಯುವುದರಿಂದ ಅಮಶಂಕೆ ಕಡಿಮೆಯಾಗುತ್ತದೆ.

ಅತಿಸಾರ ಅಥವಾ ರಕ್ತಬೇದಿಗಾಗಿ ಒಂದು ಚಪೆ ಕಾಯಿ ಎಲೆಗಳ ಬೇರನ್ನು ಮತ್ತು ಎಲೆಗಳನ್ನು ಅರೆದು ನೀರಿನಲ್ಲಿ ಸುಮಾರು 20 ನಿಮಿಷ ಬೇಯಿಸಬೇಕು ಇದರ ತಾಪಮಾನ 90 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು ಈ ತಾಪಮಾನ ಮೀರಿದರೆ ಔಷಧಿ ಗುಣಗಳು ಕಡಿಮೆಯಾಗುತ್ತದೆ. ಬಳಿಕ ತಣ್ಣಗಾದ ನಂತರ ಈ ನೀರನ್ನು ಸ್ವಲ್ಪ ಸ್ವಲ್ಪ ಕುಡಿದರೆ ಶೀಘ್ರವೇ ರಕ್ತಬೆದಿ ಕಡಿಮೆಯಾಗುತ್ತದೆ. ಚೆಪೆ ಕಾಯಿ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳು ಇವೆಯಂತೆ ಕೆಲವು ಪ್ರಭಲ ಬ್ಯಾಕ್ಟೀರಿಯಾಗಳನ್ನು ಜಠರ ರಸದಲ್ಲಿ ಜೀರ್ಣವಾಗದೆ ಕರುಳಿಗೆ ಸಾಗಿಸಲ್ಪಡುತ್ತದೆ ಇಂತಹ ಸಮಸ್ಯೆಗೆ ಚೆಪೆ ಎಲೆಗಳೇ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಒಂದು ಲೀಟರ್ ನೀರಿನಲ್ಲಿ 8 ಚೆಪೆ ಎಲೆಗಳನ್ನು ಜಜ್ಜಿ ಬೇಯಿಸಬೇಕು ಸುಮಾರು 5 ನಿಮಿಷ ಬೇಯಿಸಿ ತಣ್ಣಗಾದ ಬಳಿಕ ದಿನಕ್ಕೆ3 ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ಚೆಪೆ ಎಲೆಗಳನ್ನು ಪೇಸ್ಟನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿ ಕೆಲಕಾಲ ಒಣಗಲು ಬಿಡಿ ನಂತರ ಸ್ವಚ್ಛವಾದ ಮೃದುವಾದ ಸೋಪನ್ನು ಬಳಸಿ ಅದನ್ನು ತೆಗೆಯಬೇಕು ಪ್ರತಿದಿನ 2 ರಿಂದ 3 ಬಾರಿ ಹೀಗೆ ತೊಳೆದರೆ ಶೀಘ್ರವೇ ಮೊಡವೆ ಮತ್ತು ಕಪ್ಪು ಚುಕ್ಕೆಗಳು ಕಡಿಮೆಯಾಗುತ್ತದೆ.

ಈ ಚೆಪೆ ಎಲೆಗಳಲ್ಲಿ ಉರ್ಸಲಿಕ್ ಆಮ್ಲ ಎನ್ನುವ ಪೋಷಕಾಂಶ ಇರುತ್ತದೆ ಇದು ಉತ್ತಮವಾದ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಇದು ವಿವಿಧ ರೀತಿಯ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಸಂದಿವಾತವನ್ನು ಕಡಿಮೆಮಾಡುತ್ತದೆ. ಇನ್ನೊಂದು ಪ್ರಮುಖ ಗುಣವೆಂದರೆ ಜೀವಕೋಶದ ಮೇಲೆ ಆಮ್ಲಜನಕದ ವಿಪರೀತ ಪರಿಣಾಮದಿಂದ ವೃದ್ಧಾಪ್ಯದ ಕುರುಹುಗಳು ಬರದಂತೆ ತಡೆಯುವ ಮೂಲಕ ತಾರುಣ್ಯವನ್ನು ಬಹುಕಾಲ ಕಾಪಾಡುತ್ತದೆ. ಗಾಯದಂತಹ ಸಮಸ್ಯೆಗಳಿಗೆ ಇದೊಂದು ರಾಮಬಾಣವಾಗಿದೆ ಸಾಮಾನ್ಯ ಗಾಯ ಮೊದಲಾದವುಗಳ ಮೇಲೆ ಈ ಎಲೆಗಳನ್ನು ಜಜ್ಜಿ ಫೆಸ್ಟಿನಂತೆ ಹಚ್ಚಿದರೆ ಅಥವಾ ಎಲೆಗಳನ್ನು ಕುದಿಸಿ ತಣ್ಣಗಾದ ಮೇಲೆ ನೀರನ್ನು ಕುಡಿಯುವುದರಿಂದ ನಂಜು ಆಗದಂತೆ ನೋಡಿಕೊಳ್ಳುತ್ತದೆ ಬಾಣಂತಿಯರಲ್ಲಿ ಗರ್ಭಕೋಶದ ಊತವನ್ನು ಕಡಿಮೆ ಮಾಡುತ್ತದೆ. ದೇಹದೊಳಗೆ ಆಗುವ ಸ್ರಾವಗಳನ್ನು ಶೀಘ್ರವಾಗಿ ಒಣಗುವಂತೆ ಮಾಡುತ್ತದೆ ಈ ಎಲೆಗಳು. ಅಲರ್ಜಿಯನ್ನು ಕಡಿಮೆಮಾಡುತ್ತದೆ ಕೆಲವರಿಗೆ ಕೆಲವೊಂದು ವಸ್ತುಗಳು ಅಲರ್ಜಿ ತರಿಸುತ್ತದೆ ಇಸ್ಟೇನಿನ್ ಎಂಬ ರಾಸಾಯನಿಕ ರ ಕ್ತದಲ್ಲಿ ಬೆರೆತಾಗ ಅಲರ್ಜಿ ನಮ್ಮನ್ನು ಕಾಡುತ್ತದೆ. ಈ ಚೆಪೆ ಎಲೆಗಳನ್ನು ಕುದಿಸಿ ತಣ್ಣಗಾದ ನಂತರ ನೀರನ್ನು ಕುಡಿಯುವ ಮೂಲಕ ಅಲರ್ಜಿ ಕಡಿಮೆಯಾಗುತ್ತದೆ. ಜ್ವರವನ್ನು ಕಡಿಮೆಮಾಡಿ ಬಾಯಿ ಆರೋಗ್ಯವನ್ನು ಉತ್ತಮ ಗೊಳಿಸುತ್ತದೆ ಈ ಒಂದು ಚೆಪೆ ಎಲೆಗಳು.

2 COMMENTS

LEAVE A REPLY

Please enter your comment!
Please enter your name here