ದೇಹದಲ್ಲಿ ಈ ಲಕ್ಷಣ ಕಂಡ್ರೆ ಕೊಡಲೇ ವೈದ್ಯರ ಸಂಪರ್ಕ ಪಡೆಯಿರಿ

120

ದೇಹದಲ್ಲಿ ಆಗುವ ಈ ಒಂದು ಸಣ್ಣ ಬದಲಾವಣೆ ದೊಡ್ಡ ತೊಂದರೆ ಮಾಡುತ್ತದೆ. ಈ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ಮೇಲೆ ಕೆಲವೊಂದು ಸಣ್ಣ ಪುಟ್ಟ ಕಾಯಿಲೆಗಳು ಬರುವುದು ಸಹಜ ಆದರೆ ನಮಗೆ ಅರಿವಿಲ್ಲದಂತೆ ಕೆಲವೊಂದು ತೀರ ಸೂಕ್ಷ್ಮ ಬದಲಾವಣೆಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಇದರಿಂದ ದೊಡ್ಡ ಪರಿಣಾಮವನ್ನು ಅನುಭವಿಸ ಬೇಕಾಗುತ್ತದೆ. ಹಾಗಾದರೆ ಅದು ಏನು ಅನ್ನೋದನ್ನ ತಿಳಿಯೋಣ ಬನ್ನಿ. ವಯಸ್ಸು ಹೆಚ್ಚಾದಂತೆ ಮನುಷ್ಯರ ದೇಹದಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ ಮಹಿಳೆಯರ ದೇಹದಲ್ಲಿ ಅನೇಕ ತೊಂದರೆಗಳು ಬದಲಾವಣೆಗಳು ಆಗುವುದು ಸಾಮಾನ್ಯ. ಆದರೆ ಹಲವಾರು ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರ ಬಳಿ ತೋರಿಸುವುದು ಒಳ್ಳೆಯದು ಈಗ ನಾವು ಈ ಲೇಖನದಲ್ಲಿ ತೋರಿಸುವಂತಹ ಲಕ್ಷಣಗಳು ನಿಮ್ಮನ್ನು ಕಾಡಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಕ್ರೀಡೆ ಅಥವಾ ಕಠಿಣ ಅಭ್ಯಾಸದ ನಂತರ ತಲೆಸುತ್ತುವುದು ಸಾಮಾನ್ಯ ಆದರೆ ಸಾಮಾನ್ಯ ತಾಪಮಾನದಲ್ಲಿ ಸಣ್ಣ ಪುಟ್ಟ ವ್ಯಾಯಾಮ ಮಾಡಿದರು ತಲೆಸುತ್ತು ಬರುತ್ತದೆ ಆಗ ಎಚ್ಚರ ವಹಿಸಿ ಇದು ಹೃದಯ ಸಮಸ್ಯೆಗೆ ಮುನ್ನಡಿ ಯಾಗಬಹುದು ಹಾಗೆ ಸೈನಸ್ ಹಾಗೂ ಕಿವಿನೋವಿನ ಸಮಸ್ಯೆ ಯಾಗಿರಬಹುದು ಅತಿಯಾಗಿ ತಿಂದರೆ ಅತಿಸಾರ ಸಾಮಾನ್ಯ ಆದರೆ ಸಾಮಾನ್ಯ ಆಹಾರ ಸೇವಿಸಿದ ನಂತರವೂ ಮಧ್ಯ ರಾತ್ರಿ ಮಲವಿಸರ್ಜನೆ ಸಮಸ್ಯೆ ನಿರಂತರ ಕಾಣಿಸಿಕೊಂಡರೆ ಇದು ಸೋಂಕು ಅಥವಾ ಕರುಳಿನ ಉರಿಯುತದಿಂದ ಆಗಿರಬಹುದು. ಮುಟ್ಟಿನ ವೇಳೆ ಹೆಚ್ಚು ರ ಕ್ತ ಸ್ರಾವವಾದರೆ ಎಚ್ಚರ ಇದು ಪೈಬ್ರೈಡ್ ಅಥವಾ ಗರ್ಭಾಶಯದ ಗಡ್ಡೆಯಿಂದ ಆಗಬಹುದು ಗರ್ಭಾಶಯದ ಗಡ್ಡೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಯಾವುದೇ ವ್ಯಾಯಾಮ ಇಲ್ಲದೆ ನಿರಂತರವಾಗಿ ನಿಮ್ಮ ದೇಹದ ತೂಕ ಇಳಿಯುತ್ತಿದ್ದರೆ ನೀವು ತುಂಬಾ ಎಚ್ಚರವಹಿಸಿ ಮೇದೋ ಜೀರಕ ಗ್ರಂಥಿ ಹೊಟ್ಟೆ ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್ ಗೆ ಇದು ಕಾರಣವಾಗಬಹುದು

ಇದ್ದಕ್ಕಿದ್ದಂತೆ ಕಣ್ಣುಗಳ ಶಕ್ತಿಯು ಕಡಿಮೆ ಆಗಿ ಮಬ್ಬು ಕಾಣುತ್ತಾ ಇದ್ದಾರೆ ಈ ಲಕ್ಷಣ ಪ್ರಾರಂಭಿಸಿದರೆ ಅದು ಪಾರ್ಶ್ವವಾಯು ಲಕ್ಷಣವಾಗಿರಬಹುದು ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಸ್ನೇಹಿತರೆ ನಮ್ಮ ದೇಹದಲ್ಲಿ ಏನೇ ಒಂದು ಸಣ್ಣ ತೊಂದರೆ ಅಥವಾ ಬದಲಾವಣೆ ಕಂಡುಬಂದರೂ ಸಹ ನಾವು ಅದನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರ ಬಳಿ ಹೋಗಿ ತೋರಿಸುವುದು ತುಂಬಾ ಒಳ್ಳೆಯದು ಏಕೆಂದರೆ ನಮ್ಮ ದೇಹ ತುಂಬಾನೇ ಸೂಕ್ಷ್ಮವಾಗಿದೆ ಏನೇ ಒಂದು ಬದಲಾವಣೆಯಾದರು ಮುಂದೆ ಅದರಿಂದ ದೊಡ್ಡ ಸಮಸ್ಯೆಯನ್ನು ನಾವು ಎದುರಿಸಬೆಕಾಗುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here