ದೇಹದಲ್ಲಿ ಈ ವಿಟಮಿನ್ ಕಡಿಮೆ ಆದ್ರೆ ನಿಮಗೆ ಹನ್ನೊಂದು ರೀತಿಯ ಖಾಯಿಲೆ ಶುರು ಆಗಲಿದೆ

60

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ವಿಟಮಿನ್ ಎ ಯಾಕೆ ನಮ್ಮ ದೇಹಕ್ಕೆ ಅವಶ್ಯಕ. ಹಾಗೂ ವಿಟಮಿನ್ ಎ ಯಾವ ಆಹಾರದಲ್ಲಿ ಸಿಗುತ್ತದೆ ಎಂದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ವಿಟಮಿನ್ ಗಳು ದೇಹದಲ್ಲಿ ಅತಿ ಮಹತ್ವವಾದ ಕೆಲಸವನ್ನು ಮಾಡುತ್ತವೆ. ಇಂದಿನ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕ. ಅದರಲ್ಲೂ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ತುಂಬಾ ಅವಶ್ಯಕ. ವಿಟಮಿನ್ ಎ ಸರಿಯಾಗಿದ್ದರೆ ಕಣ್ಣಿನಿಂದ ಯಾವುದೇ ಕಾಯಿಲೆಗಳನ್ನು ಬರದಂತೆ ತಡೆಗಟ್ಟುತ್ತದೆ. ಹಾಗೂ ಕಣ್ಣುಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು ನಿಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯಲು ಬಿಡುವುದಿಲ್ಲ. ಮತ್ತು ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ಬಳಗೊಳಿಸುವಲ್ಲಿ ವಿಟಮಿನ್ ಎ ಸಹಾಯ ಮಾಡುತ್ತದೆ. ವಿಟಮಿನ್ ಎ ನಿಮ್ಮ ದೇಹಕ್ಕೆ ಅಗತ್ಯವಾಗಿ ಸಿಗದೇ ಇದ್ದರೆ ಹಲವಾರು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಕಣ್ಣಿನ ಸಮಸ್ಯೆ ಬರುತ್ತದೆ.

ಹಾಗೂ ರಾತ್ರಿ ಕುರುಡುತನ ಅಂದರೆ ಕಡಿಮೆ ಬೆಳಕಿನಲ್ಲಿ ಕಣ್ಣು ಕಾಣುವುದಿಲ್ಲ. ಕಣ್ಣು ಒಣಗುವುದು. ಕಣ್ಣಿಗೆ ಸಂಭಂದಿಸಿದ ಲ್ಯಾಕ್ರಿಮೆಲ್ ಗ್ಲಾಂಡ್ ನಿಂದ ಕಣ್ಣೀರು ಬರುವುದಿಲ್ಲ. ಹಾಗೆಯೇ ರಾತ್ರಿ ಕುರುಡುತನ ವಿಟಮಿನ್ ಎ ಯಿಂದ ಕಂಡು ಬರುತ್ತದೆ. ಇನ್ನೂ ತಾಯಿ ಗರ್ಭಾವಸ್ಥೆಯಲ್ಲಿ ತನ್ನ ಮಗು ಆರೋಗ್ಯವಾಗಿ ದಷ್ಟ ಪುಷ್ಟವಾಗಿ ಬೆಳೆಯಬೇಕೆಂದು ಪ್ರತಿ ತಾಯಿ ಕನಸನ್ನು ಕಾಣುತ್ತಾಳೆ. ಆದರೆ ಇದಕ್ಕೆ ಕನಸು ಕಂಡರೆ ಸಾಲದು. ತಾಯಿಯು ಸರಿಯಾದ ಸಮಯಕ್ಕೆ ವಿಟಮಿನ್ ಇರುವ ಎಲ್ಲಾ ಆಹಾರವನ್ನು ಸೇವಿಸಬೇಕು. ಏಕೆಂದರೆ ಹುಟ್ಟುವ ಮಗುವಿನ ದೃಷ್ಟಿ ತುಂಬಾ ಚೆನ್ನಾಗಿ ಇರುತ್ತದೆ. ಸಾವಿರಾರು ಮಕ್ಕಳು ಹುಟ್ಟಿನಿಂದಲೇ ಕಣ್ಣಿನ ಸಮಸ್ಯೆಯಿಂದ ಹುಟ್ಟುತ್ತಾರೆ. ಇದಕ್ಕೆ ಕಾರಣ ವಿಟಮಿನ್ ಎ ಕೊರತೆ. ಗರ್ಭಾವಸ್ಥೆಯಲ್ಲಿ ವೈದ್ಯರು ತಿಳಿಸಿರುವ ಎಲ್ಲ ಆಹಾರಗಳನ್ನು ಸೇವಿಸಬೇಕು. ಇನ್ನೂ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಮಾತ್ರವಲ್ಲದೆ ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಹಾಗಾದ್ರೆ ವಿಟಮಿನ್ ಎ ಯಾವ ಆಹಾರದಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಈ ವಿಟಮಿನ್ ಎ ಮುಖ್ಯವಾಗಿ ಸಸ್ಯಾಹಾರ ಮತ್ತು ಮಾಂಸಾಹಾರಿಯಲ್ಲಿ ಸಿಗುತ್ತದೆ.

ಮೊದಲನೇಯದಾಗಿ ವಿಟಮಿನ್ ಎ ಯಾವ ಸಸ್ಯಾಹಾರದಲ್ಲಿ ಸಿಗುತ್ತದೆ ಎಂದರೆ ಕ್ಯಾರೆಟ್ ನಲ್ಲಿ ವಿಟಮಿನ್ ಎ ಹೇರಳವಾಗಿ ಇದೆ. ಇದು ಕಣ್ಣಿನ ದೃಷ್ಟಿ ಗೆ ತುಂಬಾ ಒಳ್ಳೆಯದು. ಇನ್ನೂ ಸಿಹಿ ಆಲೂಗಡ್ಡೆ. ಇದರಲ್ಲಿ ಬೀಟಾ ಕೆರೋಟಿನ್ ಎಂಬ ಅಂಶವಿದೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತಿಸಿಸುತ್ತದೆ. ಹಾಗೂ ಕಣ್ಣಿನ ಮತ್ತು ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಜೀವಕೋಶಗಳಿಗೆ ಹಾಗೂ ಅಂಗಗಳ ಬೆಳವಣಿಗೆಗೆ ಅವಶ್ಯಕವಾಗಿದೆ. ಕೆಂಪು ದೊಣ್ಣೆ ಮೆಣಸಿನಕಾಯಿ ಗೆಣಸು ಬೆಣ್ಣೆಯಲ್ಲಿ ವಿಟಮಿನ್ ಎ ಇದೆ. ಇನ್ನೂ ಯಾವೆಲ್ಲ ಸೊಪ್ಪಿನಲ್ಲಿ ವಿಟಮಿನ್ ಎ ಇದೆ ಎಂದು ನೋಡುವುದಾದರೆ ಎಲ್ಲ ಹಸಿರು ತರಕಾರಿಯಲ್ಲಿ ವಿಟಮಿನ್ ಎ ಇದೆ. ಮುಖ್ಯವಾಗಿ ಪಾಲಕ್ ಹಾಗೂ ಮೆಂತ್ಯೆ ಸೊಪ್ಪಿನಲ್ಲಿ ಇದೆ. ಸೊಪ್ಪಿನಲ್ಲಿ ವಿಟಮಿನ್ಸ್ ಮಾತ್ರವಲ್ಲದೇ ಇತರೆ ಖನಿಜಾಂಶಗಳು ಇರುತ್ತವೆ. ಇನ್ನೂ ಯಾವೆಲ್ಲ ಹಣ್ಣಿನಲ್ಲಿ ವಿಟಮಿನ್ ಗಳಿವೆ ಎಂದು ನೋಡುವುದಾದರೆ ಬೆಣ್ಣೆ ಹಣ್ಣು ಮಾವಿನ ಹಣ್ಣು ಖರ್ಬೂಜ ಹಣ್ಣು ಕುಂಬಳಕಾಯಿ ಸೀಬೆ ಕಾಯಿ ಟೊಮ್ಯಾಟೋ ಗೋಡಂಬಿ ಬಾಳೆಹಣ್ಣು ಹಲಸಿನ ಹಣ್ಣು ಕೇಸರಿ ಮತ್ತು ಹಳದಿ ಬಣ್ಣದಲ್ಲಿ ಕಾಣುವ ಹಣ್ಣುಗಳಲ್ಲಿ ವಿಟಮಿನ್ ಎ ಇರುತ್ತದೆ. ಇನ್ನೂ ಯಾವೆಲ್ಲ ಮಾಂಸಾಹಾರಿಯಲ್ಲಿ ವಿಟಮಿನ್ ಎ ಅಡುಗಿದೆ ಎಂದರೆ ಮೊಟ್ಟೆಯ ಹಳದಿ ಭಾಗದಲ್ಲಿ ಚಿಕನ್ ಮಟನ್ ಹಾಗೂ ಮೀನಿನಲ್ಲಿ ಒಮೆಗಾ ತ್ರೀ ಪ್ಯಾಟಿ ಆಸಿಡ್ ಇದೆ.

LEAVE A REPLY

Please enter your comment!
Please enter your name here