ದೇಹದಲ್ಲಿ ಪೊಟ್ಯಾಶಿಯಂ ಕೊರತೆ ಇದ್ದರೆ ಈ ನಾಲ್ಕು ಸಮಸ್ಯೆಗಳು ಸೂಚನೆ ನೀಡುತ್ತೆ

55

ದೇಹದಲ್ಲಿ ಪೊಟ್ಯಾಶಿಯಂ ಕೊರತೆ ಇದ್ದರೆ ಈ ಮನೆ ಮದ್ದಿನಿಂದ ಹೆಚ್ಚಿಸಿಕೊಳ್ಳಿ. ನಮಸ್ತೆ ಗೆಳೆಯರೇ ನಮ್ಮ ದೇಹದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ನಡೆಸುವುದರಲ್ಲಿ ಪೋಷಕಾಂಶಗಳು ತುಂಬಾನೇ ಪ್ರಮುಖ ಪಾತ್ರವನ್ನು ವಹಿಸುತ್ತದೆ ಈ ಪೋಷಕಾಂಶಗಳಲ್ಲಿ ಪೊಟ್ಯಾಶಿಯಂ ಕೂಡ ತುಂಬಾನೇ ಪ್ರಮುಖವಾದದ್ದು ಪೊಟ್ಯಾಶಿಯಂ ನಮ್ಮ ದೇಹದಲ್ಲಿ ಅನೇಕ ಕೆಲಸಗಳನ್ನು ಸಕ್ರಿಯವಾಗಿ ಮಾಡುವುದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ ಖಂಡಗಳು ಬಲವಾಗಿ ಇರುವುದಕ್ಕೆ ನರಗಳು ಆರೋಗ್ಯಕ್ಕೆ ರೋಗಗಳನ್ನು ನಿಯಂತ್ರಿಸುವುದಕ್ಕೆ ಪೊಟ್ಯಾಶಿಯಂ ತುಂಬಾನೇ ಸಹಾಯಮಾಡುತ್ತದೆ. ಆದರೆ ಈಗಿನ ಒತ್ತಡ ಜೀವನದಲ್ಲಿ ಪೋಷಕಾಂಶವಿರುವ ಆಹಾರವನ್ನು ಸೇವಿಸದೇ ಇರುವುದರಿಂದ ನಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾಗುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಅದನ್ನು ಹೇಗೆ ನೈಸರ್ಗಿಕ ಪದಾರ್ಥಗಳಿಂದ ಕಡಿಮೆ ಮಾಡಿಕೊಳ್ಳಬಹುದು ಹಾಗೆ ಪೊಟ್ಯಾಶಿಯಂ ಸರಿಯಾದ ಪ್ರಮಾಣದಲ್ಲಿ ಇದ್ದರೆ ನಮಗೆ ಯಾವ ರೀತಿ ಆರೋಗ್ಯಕ್ಕೆ ಅನುಕೂಲ ಇದೆ ಅನ್ನೋದನ್ನ ಈ ಲೇಖನದಲ್ಲಿ ತಳಿಯೋಣ.

ಪೊಟ್ಯಾಶಿಯಂ ಕಡಿಮೆಯಾದರೆ ಯಾವಾಗಲೂ ಸುಸ್ತಾಗುತ್ತೆ ರಕ್ತದಲ್ಲಿ ಪೊಟ್ಯಾಶಿಯಂ ಕಡಿಮೆಯಾದರೆ ಖಂಡಗಳು ಬಲಹೀನವಾಗಿ ಆಯಾಸ ಆಗುತ್ತದೆ ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಪೊಟ್ಯಾಶಿಯಂ ಕಡಿಮೆಯಾಗುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗದೆ ಗ್ಯಾಸ್ ಅಸಿಡಿಟಿ ಮಲಬದ್ಧತೆ ತೊಂದರೆ ಬರುತ್ತದೆ ಮತ್ತೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬರುತ್ತದೆ ಹಾಗೆ ಪೊಟ್ಯಾಶಿಯಂ ಕಡಿಮೆಯಾಗುವುದರಿಂದ ದೇಹದಲ್ಲಿ ಮೊಣಕಾಲು ಮತ್ತು ಮೊಣಕೈ ಸೂಜಿ ಚುಚ್ಚಿದರೂ ಗೊತ್ತಾಗದೆ ರೀತಿ ಆಗುತ್ತದೆ ಅದರಿಂದ ಸ್ಪರ್ಶ ಕೂಡ ಸರಿಯಾಗಿ ತಿಳಿಯುವುದಿಲ್ಲ. ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾಗದಂತೆ ನೋಡಿಕೊಂಡರೆ ನರಗಳ ವ್ಯವಸ್ಥೆ ತುಂಬಾ ಚೆನ್ನಾಗಿರುತ್ತದೆ ಹಾಗೆ ದೇಹದಲ್ಲಿ ಕಂಡಗಳು ಬಲವಾಗಿ ಇರಲು ಪೊಟ್ಯಾಶಿಯಂ ತುಂಬಾನೇ ಸಹಾಯಮಾಡುತ್ತದೆ ಪೊಟ್ಯಾಶಿಯಂ ಹೆಚ್ಚಾಗಿರುವ ಸೋಡಿಯಂ ಅನ್ನು ಕಡಿಮೆ ಮಾಡಿ ಸಮ ಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. ಪೊಟ್ಯಾಶಿಯಂ ನಮ್ಮ ದೇಹದಲ್ಲಿ ಚೆನ್ನಾಗಿದ್ದರೆ ಕಿಡ್ನಿಯಲ್ಲಿ ಕಲ್ಲುಗಳ ಆಗದಂತೆ ಕಾಪಾಡುತ್ತದೆ ಹಾಗೂ ಜೀರ್ಣಕ್ರಿಯೆ ಸುಲಭವಾಗಿ ಆಗುವಂತೆ ಮಾಡುತ್ತದೆ. ಪೊಟ್ಯಾಶಿಯಂ ಕೊರತೆಯನ್ನು ನೈಸರ್ಗಿಕ

ಪದಾರ್ಥಗಳಿಂದ ಹೀಗೆ ಕಡಿಮೆ ಮಾಡಿಕೊಳ್ಳಬೇಕು ಅಂದರೆ ಒಂದು ಬಾಳೆಹಣ್ಣನ್ನು ಪ್ರತಿದಿನ ನಾವು ತಪ್ಪದೆ ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೊಟ್ಯಾಶಿಯಂ ಸಮೃದ್ಧಿಯಾಗಿ ದೊರೆಯುತ್ತದೆ. ಆದ್ರೆ ಬಾಳೆ ಹಣ್ಣು ತಿಂದ ಮೇಲೆ ಯಾವುದೇ ಕಾರಣಕ್ಕೂ ಸಹ ನೀರು ಕುಡಿಯಬಾರದು. ಇನ್ನು ಖರ್ಜೂರವನ್ನು ಆಲೂಗಡ್ಡೆ ಅಣಬೆ ಪಾಲಕ್ ಸೊಪ್ಪು ಬಟಾಣಿ ಇವುಗಳನ್ನು ಪ್ರತಿದಿನ ಆಹಾರದಲ್ಲಿ ಇರುವಂತೆ ತಪ್ಪದೆ ನೋಡಿಕೊಳ್ಳಬೇಕು ಇದನ್ನು ಸೇವಿಸುವುದರಿಂದ ಪೊಟ್ಯಾಷಿಯಂ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ. ಇನ್ನೊಂದು ಮುಖ್ಯವಾದ ವಿಷಯ ಏನಂದರೆ ಕಿಡ್ನಿಯಲ್ಲಿ ಕಲ್ಲು ಇರುವಂಥವರು ಬಾಳೆಹಣ್ಣು ಹಾಗೂ ಖರ್ಜೂರವನ್ನು ಸೇವಿಸದೆ ದೂರ ಇರುವುದು ಒಳ್ಳೆಯದು. ಇನ್ನು ಬೇರೆಯವರು ಇದನ್ನು ಧಾರಾಳವಾಗಿ ಪ್ರತಿದಿನ ತಿನ್ನಬಹುದು ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಮನೆಯನ್ನು ಆಸ್ಪತ್ರೆಯಾಗಿ ಮಾಡಿಕೊಂಡು ಪ್ರತಿಯೊಬ್ಬ ಗೃಹಿಣಿಯರು ವೈದ್ಯರಾಗಿ ಬದಲಾಗಿ ಪ್ರತಿಯೊಂದು ಅಡುಗೆ ಮನೆಯನ್ನು ಆರೋಗ್ಯ ಆಲಯವಾಗಿ ಬದಲಾಯಿಸಿ ಕೊಳ್ಳಬೇಕು ಈ ರೀತಿಯಾಗಿ ಮಾಡುವುದರಿಂದ ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಹೆಚ್ಚಿಸಿಕೊಳ್ಳಬಹುದು ಹಾಗೂ ಕಡಿಮೆಯಾಗದಂತೆ ನೋಡಿ ಕೊಳ್ಳಬಹುದು.

LEAVE A REPLY

Please enter your comment!
Please enter your name here