ದೇಹದ ತೂಕ ಇಳಿಸಲು ಸೋರೆಕಾಯಿ ತುಂಬಾ ಉಪಯುಕ್ತವಾಗಿದೆ

61

ದೇಹದ ತೂಕ ಇಳಿಸಲು ಸೋರೆಕಾಯಿ ತುಂಬಾ ಉಪಯುಕ್ತವಾಗಿದೆ. ಸೋರೆಕಾಯಿ ಯಾರಿಗೆ ತಾನೆ ಗೋತ್ತಿರಲ್ಲ ಹೇಳಿ ಎಲ್ಲರೂ ಸಾಂಬಾರ್ ಮತ್ತು ಪಲ್ಯಮಾಡಿ ತಿನ್ನುತ್ತಾರೆ. ಅಕ್ಕಿ ರೊಟ್ಟಿಯ ಜೊತೆ ಸೋರೆಕಾಯಿ ಪಲ್ಯ ಇದ್ರೆ ಅದರ ರುಚಿನೇ ಬೇರೆ ತುಂಬಾ ಜನರು ಅಡಿಗೆಗೆ ಮಾತ್ರ ಬಳಸುತ್ತಾರೆ ಅಂದರೆ ಅದು ದೊಡ್ಡ ತಪ್ಪು ಆದರೆ ಸೋರೆ ಕಾಯಿಯಲ್ಲಿರುವ ಆರೋಗ್ಯಕರ ಅಂಶ ಗೊತ್ತಾದರೆ ಖಂಡಿತ ನೀವು ಆಶ್ಚರ್ಯ ಪಡುತ್ತಿರ ಈ ಲೇಖನದಲ್ಲಿ ಸೋರೆ ಕಾಯಿಯಿಂದ ನಮ್ಮ ದೇಹಕ್ಕೆ ಸಿಗುವ ಆರೋಗ್ಯಕರ ಅಂಶದ ಬಗ್ಗೆ ನಾವು ತಿಳಿದುಕೊಳ್ಳೋಣ. ದೇಹದ ತೂಕ ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಈ ಒಂದು ಸೋರೆಕಾಯಿ ಪ್ರತಿದಿನ ಒಂದು ಲೋಟ ಸೋರೆಕಾಯಿ ರಸ ಕುಡಿಯುವುದರಿಂದ ಅದರ ಜೊತೆ ಮಿತವಾದ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದ ತೂಕವನ್ನು ಬೇಗನೆ ಕಡಿಮೆಮಾಡಿಕೊಳ್ಳಬಹುದು ಬಿಸಿಲು ಹೆಚ್ಚಾದಾಗ ದೇಹವನ್ನು ತಂಪಾಗಿ ಇಡಲು ಎಲ್ಲರೂ ಹೊರಗಡೆ ಸಿಗುವ ತಂಪುಪಾನಿಯಗಳನ್ನು ಕುಡಿಯುವುದು ಸಾಮಾನ್ಯವಾಗಿದೆ ಇದರಿಂದ ಸ್ವಲ್ಪ ಮಟ್ಟಿಗೆ ನಮ್ಮ ದೇಹ ತಣ್ಣಗಾಗಬಹುದು ಆದರೆ ಬಹುಬೇಗ ಮತ್ತೆ ಬಾಯಾರಿಕೆ ಆಗುತ್ತದೆ ಮತ್ತು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಆದರೆ ಸೋರೆಕಾಯಿ ರಸವನ್ನು ಕುಡಿಯುವುದರಿಂದ ನಮ್ಮ ದೇಹ ತಣ್ಣಗಾಗುವುದಲ್ಲದೆ ಆರೋಗ್ಯವು ಕೂಡ ಚನ್ನಾಗಿ ಇರುತ್ತದೆ. ಒಂದು ಲೋಟ ಸೋರೆಕಾಯಿರಸಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಮೂತ್ರದ ಉರಿ ಕಡಿಮೆಯಾಗುತ್ತದೆ. ಸಕ್ಕರೆಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಪ್ರತಿನಿತ್ಯ ಸೋರೆಕಾಯಿ ರಸವನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.

ಈ ಸೋರೆಕಾಯಿಯಲ್ಲಿ ನಾರಿನಂಶ ಮತ್ತು ಪ್ರೋಟಿನಗಳು ಹೆಚ್ಚಾಗಿ ಇರುತ್ತವೆ ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಸೋರೆಕಾಯಿಯಲ್ಲಿ ಫೈಬರ್ ಅಂಶ ಮತ್ತು ನೀರಿನಂಶ ಕಡಿಮೆ ಇರುವುದರಿಂದ ಇದನ್ನು ಪ್ರತಿನಿತ್ಯ ರಸವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹೆಚ್ಚು ಫೈಬರ್ ಅಂಶ ದೊರೆಯುತ್ತದೆ ಇದರಿಂದ ನಮ್ಮ ದೇಹದ ಕೊಬ್ಬು ಕಡಿಮೆಯಾಗುತ್ತದೆ. ವಾಂತಿ ಮತ್ತು ಭೇದಿಯಾದಾಗ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ ಇದರಿಂದ ಬಹಳ ಬೇಗ ಸುಸ್ತಾಗುತ್ತದೆ ಆಗ ಸೋರೆಕಾಯಿಯ ರಸವನ್ನು ಕುಡಿಯುವುದರಿಂದ ವಾಂತಿ ಮತ್ತು ಭೇದಿ ಕಡಿಮೆಯಾಗುತ್ತದೆ. ರಾತ್ರಿವೇಳೆ ನಿದ್ರೆ ಸರಿಯಾಗಿ ಬರುತ್ತಿಲ್ಲ ಎಂದರೆ ಸೋರೆಕಾಯಿ ರಸಕ್ಕೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಚನ್ನಾಗಿ ನಿದ್ರೆ ಬರುತ್ತದೆ.

ಪ್ರತಿದಿನ ಸೋರೆಕಾಯಿ ರಸವನ್ನು ಕುಡಿಯುವುದರಿಂದ ತುಂಬಾ ಬೇಜರಾಗುತ್ತದೆ ಹಾಗಾಗಿ ಅದನ್ನು ಬೇರೆ ಬೇರೆ ರೂಪದಲ್ಲಿ ಕೂಡ ನಾವು ತಿನ್ನಬಹುದು ಇದರಿಂದ ನಮ್ಮ ದೇಹಕ್ಕೆ ತುಂಬಾನೇ ಆರೋಗ್ಯಕರ ಅಂಶಗಳು ಸಿಗುತ್ತವೆ. ಸೋರೆಕಾಯಿಯಲ್ಲಿ ಸಾಂಬಾರ ಹುಳಿ ಮಜ್ಜಿಗೆ ಹುಳಿಯಲ್ಲಿ ಕೂಡ ಬಳಸಲಾಗುತ್ತದೆ ಇತ್ತಿಚೆಗೆ ಸೋರೆಕಾಯಿಯಲ್ಲಿ ಹಲ್ವಾ ಸಹ ಮಾಡಲಾಗುತ್ತದೆ ಇದರಿಂದ ಸೋರೆಕಾಯಿಯ ರಸವನ್ನು ಕುಡಿಯೋದಕ್ಕೆ ಇಸ್ಟ ಆಗಲಿಲ್ಲ ಎಂದರೆ ಈ ಸೋರೆಕಾಯಿಯನ್ನು ಬೇರೆ ಬೇರೆ ರೀತಿಯ ಹಲವು ಖಾದ್ಯಗಳನ್ನು ತಯಾರಿಸಿಕೊಂಡು ರುಚಿರುಚಿಯಾಗಿ ನಾವು ತಿನ್ನಬಹುದು ಅಸ್ಟೆ ಅಲ್ಲದೆ ಇದು ನಮ್ಮ ಆರೋಗ್ಯಕ್ಕೂ ಕೂಡ ಉತ್ತಮ ಎಂದು ಹೇಳಬಹುದು.

LEAVE A REPLY

Please enter your comment!
Please enter your name here