ದ್ರೌಪತಿಯ ತನ್ನ ಜೀವನದ ಅತಿ ದೊಡ್ಡ ರಹಸ್ಯವನ್ನು ಬಿಚ್ಚಿದಾಗ ಪಾಂಡವರಿಗೆ ಶಾಕ್ ಆಗಿದ್ದೇಕೆ. ದ್ರೌಪತಿ ಮತ್ತು ಕರ್ಣನಿಗೆ ಇರುವ ಸಂಬಂಧವೇನು. ಇದೆಲ್ಲವನ್ನು ಇಂದಿನ ಸಂಚಿಕೆಯಲ್ಲಿ ತಿಳಿಸುತ್ತಿದ್ದೇವೆ. ದ್ರೌಪದಿಗೆ 5 ಜನ ಗಂಡಂದಿರು. ಯುಧಿಷ್ಠಿರ ಭೀಮಾ ಅರ್ಜುನ ಮತ್ತು ನಕುಲ ಸಹದೇವರು. ಆದರೆ ಇವೆಲ್ಲವನ್ನು ಹೊರತುಪಡಿಸಿ ದ್ರೌಪತಿ 6ನೇ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಹೌದು ಪಾಂಡವರು ಜೂಜಾಟದಲ್ಲಿ ಎಲ್ಲವನ್ನೂ ಕಳೆದುಕೊಂಡು ಹನ್ನೆರಡು ವರ್ಷದ ವನವಾಸವನ್ನು ಅನುಭವಿಸುತ್ತಿದ್ದರು. ಆಗ ಒಮ್ಮೆ ದ್ರೌಪದಿ ಕಾಡಿನಲ್ಲಿದ್ದ ನೇರಳೆ ಮರದಲ್ಲಿ ಹಣ್ಣನ್ನು ಕಿತ್ತುಕೊಳ್ಳುತ್ತಾಳೆ. ಆಗ ಅಲ್ಲಿಗೆ ಬರುವ ಕೃಷ್ಣ ದ್ರೌಪತಿಗೆ ನೀನು ಈ ಹಣ್ಣನ್ನು ಕೇಳಬಾರದಿತ್ತು. ಏಕೆಂದರೆ ಈ ಹಣ್ಣಿನಿಂದ ಓರ್ವ ಸನ್ಯಾಸಿ ತನ್ನ ಹನ್ನೆರಡು ವರ್ಷದ ಉಪವಾಸವನ್ನು ಅಂತ್ಯಗೊಳಿಸಬೇಕಾಗಿತ್ತು ಎಂದು ಹೇಳುತ್ತಾನೆ. ಹಾಗೂ ಆ ಋುಷಿ ಮುನಿಯೂ ನಿಮಗೆ ಶಾಪವನ್ನು ನೀಡಬಹುದೆಂದು ಹೇಳುತ್ತಾನೆ. ಇದರಿಂದ ಚಿಂತಾಕ್ರಾಂತರಾದ ಪಾಂಡವರು ಮತ್ತು ದ್ರೌಪತಿ ಈ ಸಮಸ್ಯೆಯಿಂದ ನಮ್ಮನ್ನು ನೀನೇ ಪಾರು ಮಾಡಬೇಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾರೆ.
ಉಪಾಯ ಹೇಳಿದ ಕೃಷ್ಣ: ಕೃಷ್ಣ ಪಾಂಡವರಿಗೆ ಈ ಸಮಸ್ಯೆಯಿಂದ ಪಾರಾಗಲು ಒಂದು ಉಪಾಯವನ್ನು ಹೇಳುತ್ತಾನೆ. ಅದರಂತೆ ದ್ರೌಪತಿಯನ್ನು ಸೇರಿದಂತೆ ಪಂಚಪಾಂಡವರು ಆ ನೇರಳೆ ಮರದ ಬುಡದಲ್ಲಿ ಕುಳಿತುಕೊಳ್ಳಬೇಕು. ಹಾಗೂ ಅದೇ ಮರದ ಬುಡದಲ್ಲಿ ಆ ನೇರಳೆ ಹಣ್ಣನ್ನು ಇಡಬೇಕು. ನಂತರ ಎಲ್ಲರೂ ತಾವು ಮುಚ್ಚಿಟ್ಟಿರುವ ಯಾರಿಗೂ ಹೇಳಿರದ ಸತ್ಯವನ್ನು ಹೇಳಬೇಕು. ಈ ರೀತಿಯಾಗಿ ಒಬ್ಬೊಬ್ಬರು ಒಂದೊಂದು ಸತ್ಯವನ್ನು ಅಥವಾ ರಹಸ್ಯವನ್ನು ಹೇಳಿದಾಗ ಆ ಹಣ್ಣು ಭೂಮಿಯಿಂದ ಸ್ವಲ್ಪ ಸ್ವಲ್ಪವೇ ಮೇಲಕ್ಕೆ ಹೋಗಿ ಆ ಮರದಲ್ಲಿ ತಾನು ಮೊದಲಿದ್ದ ಜಾಗದಲ್ಲಿಯೇ ಸೇರುತ್ತದೆ. ಹಾಗೂ ಯಾರಾದರೂ ಸುಳ್ಳು ಹೇಳಿದರೆ ಆ ಹಣ್ಣು ಸುಟ್ಟು ಭಸ್ಮವಾಗುತ್ತದೆ ಎಂದು ಹೇಳುತ್ತಾನೆ. ಅದರಂತೆ ಕೃಷ್ಣ ಮೊದಲು ಧರ್ಮರಾಯನನ್ನು ಕರೆಯುತ್ತಾನೆ. ಧರ್ಮರಾಯನು ಭೂಮಿಯ ಮೇಲೆ ಸತ್ಯ ಪ್ರಾಮಾಣಿಕತೆ ನೆಲೆಸಬೇಕು. ಮೋಸ ಕೆಟ್ಟತನ ಸಂಹಾರ ಆಗಬೇಕು. ಅಲ್ಲದೆ ಪಾಂಡವರ ಈ ದುಃಸ್ಥಿತಿಗೆ ದ್ರೌಪತಿಗೆ ಕಾರಣವೆಂದು ಹೇಳುತ್ತಾನೆ. ಆಗ ಹಣ್ಣು ಭೂಮಿಯಿಂದ ಸ್ವಲ್ಪ ಮೇಲೆ ಹೋಗುತ್ತದೆ.
ನಂತರ ಭೀಮನ ಸರದಿ. ಭೀಮನು ತಿನ್ನೋದು ಜಗಳವಾಡುವುದು ನಿದ್ದೆ ಮಾಡುವುದು ಮತ್ತು ಹೆಣ್ಣಿನೊಂದಿಗೆ ಸೇರುವುದು ಇಷ್ಟ ಎಂದು ಹೇಳುತ್ತಾನೆ. ಹಾಗೂ ದೃತರಾಷ್ಟ್ರನ ಎಲ್ಲಾ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ಆಗ ಹಣ್ಣು ಮತ್ತೆ ಸ್ವಲ್ಪ ಮೇಲೆ ಹೋಗುತ್ತದೆ. ಅನಂತರ ಅರ್ಜುನನ ಸರದಿ. ಅರ್ಜುನ ನನಗೆ ಪ್ರತಿಷ್ಠೆ ಮತ್ತು ಗೌರವ ಎರಡು ಮುಖ್ಯ ಅದಕ್ಕಾಗಿ ಪ್ರಾಣವನ್ನು ಬಿಡಲು ಸಿದ್ಧ ಹಾಗೂ ಕರ್ಣನನ್ನು ಕೊಲ್ಲುವುದು ನನ್ನ ಜೀವನದ ಉದ್ದೇಶ. ಅದಕ್ಕಾಗಿ ಅಧರ್ಮದ ದಾರಿಯನ್ನು ಅನುಸರಿಸಲು ನಾನು ಸಿದ್ಧ ಎಂದು ಹೇಳುತ್ತಾನೆ. ಆಗಲೂ ಹಣ್ಣು ಮತ್ತೆ ಮೇಲೆ ಹೋಗುತ್ತದೆ. ನಂತರ ನಕುಲ ಸಹದೇವರು ತಮ್ಮ-ತಮ್ಮ ರಹಸ್ಯ ಮತ್ತು ಸತ್ಯವನ್ನು ಹೇಳುತ್ತಾರೆ.
ದ್ರೌಪತಿ ಬಿಚ್ಚಿಟ್ಟಳು ಮಹಾ ರಹಸ್ಯ: ಕೊನೆಯದಾಗಿ ದ್ರೌಪತಿಯ ಸರದಿ. ಈಗಾಗಲೇ ಹಣ್ಣು ಮರದ ಸಮೀಪ ತಲುಪಿರುತ್ತದೆ. ದ್ರೌಪತಿಯ ಸತ್ಯದೊಂದಿಗೆ ಹಣ್ಣು ಸಂಪೂರ್ಣವಾಗಿ ಮರದಲ್ಲಿ ತನ್ನ ಮೂಲ ಸ್ಥಳವನ್ನು ಸೇರುವುದಾಗಿರುತ್ತದೆ. ದ್ರೌಪತಿ ನನ್ನ 5 ಜನ ಪತಿಯರು ನನ್ನ ಪಂಚೇಂದ್ರಿಯಗಳು. ಆದರೆ ಅವರ ದೌರ್ಭಾಗ್ಯಕ್ಕೆ ನಾನೇ ಕಾರಣ ಎಂದು ಹೇಳಿ ಪಾಂಡವರ ಕಡೆ ತಿರುಗಿ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ಆದರೆ ನಿಮ್ಮೆಲ್ಲರನ್ನು ಹೊರತುಪಡಿಸಿ ಆರನೇ ವ್ಯಕ್ತಿಯನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಪಾಂಡವರಿಗೆ ಇದು ದೊಡ್ಡ ಶಾಕ್ ಆಗುತ್ತದೆ. ನಂತರ ತನ್ನ ಮಾತನ್ನು ಮುಂದುವರಿಸುವಂತಹ ದ್ರೌಪತಿ ಹೌದು ನಾನು ಕರ್ಣನನ್ನು ಪ್ರೀತಿಸುತ್ತಿದ್ದೆ. ಆದರೆ ಜಾತಿ ಕಾರಣದಿಂದ ಕರ್ಣನನ್ನು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಕರ್ಣನನ್ನು ಮದುವೆಯಾಗಿದ್ದರೆ ನನಗೆ ಈ ರೀತಿಯ ಕಷ್ಟ ದುಃಖ ಮತ್ತು ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳುತ್ತಾಳೆ. ಇದರಿಂದ ಪಾಂಡವರು ದಂಗಾಗಿ ಬಿಡುತ್ತಾರೆ. ಆದರೆ ಯಾರೂ ಏನನ್ನೂ ಹೇಳುವುದಿಲ್ಲ. ದ್ರೌಪತಿ ಸತ್ಯ ಹೇಳಿದ ಕೂಡಲೇ ನೇರಳೆ ಹಣ್ಣು ತನ್ನ ಮೂಲ ಸ್ಥಳವನ್ನು ಸೇರಿಕೊಳ್ಳುತ್ತದೆ. ಈ ರೀತಿಯಾಗಿ ದ್ರೌಪತಿ ತನ್ನ ಜೀವನದಲ್ಲಿ ಯಾರಿಗೂ ಹೇಳಿರದ ಸತ್ಯವನ್ನು ಈ ನೇರಳೆ-ಹಣ್ಣಿನ ಸಂಕಷ್ಟದಿಂದ ಎಲ್ಲರಿಗೂ ಹೇಳುವಂತಾಗುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾಗಿದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ