ನಮ್ಮ ರಾಜ್ಯ ಸಾರಿಗೆ ಬಗ್ಗೆ ನಿಮಗೆ ತಿಳಿಯದ ಮಾಹಿತಿ

54

ಕೆ ಎಸ್ ಆರ್ ಟಿ ಸಿ ಹೇಗೆ ಜನ್ಮ ತಾಳಿತು. ಕೆ ಎಸ್ ಆರ್ ಟಿ ಸಿ ಅಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇವತ್ತು ಕರ್ನಾಟಕದ ಕೋಟ್ಯಂತರ ಜನ ಒಂದು ಊರಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡುವುದಕ್ಕೆ ಬಳಸುವಂತಹ ಒಂದು ಸಾರಿಗೆ. ನಾವೆಲ್ಲ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದೇವೆ ಆದರೆ ಹಲವಾರು ಜನಕ್ಕೆ ಇದರ ಉದಯ ಹೇಗಾಯಿತು ಎಂದು ಗೊತ್ತಿಲ್ಲ ಇಷ್ಟಕ್ಕೂ ಈ ಕೆ ಎಸ್ ಆರ್ ಟಿ ಸಿ ಹುಟ್ಟಿದ್ದೆಗೆ ಎನ್ನುವುದನ್ನ ಈ ಲೇಖನದಲ್ಲಿ ತಿಳಿಯೋಣ. ಅಂದಿನ ಮೈಸೂರು ರಾಜ್ಯ ಸರ್ಕಾರ ರಾಜ್ಯದ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯಗಳನ್ನ ಒದಗಿಸಲು ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ ಎಮ್ ಜಿ ಆರ್ ಟಿ ಡಿ ಎನ್ನು 12 9 1948 ರಂದು ಸುಮಾರು 120 ವಾಹನಗಳೊಂದಿಗೆ ಪ್ರಾರಂಭಿಸಿತು ಅಂದರೆ ರಾಜ್ಯ ರಸ್ತೆ ಸಾರಿಗೆ ಅಂದಿನ ಮೈಸೂರು ಸರ್ಕಾರದ ಒಂದು ಇಲಾಖೆಯಾಗಿ ಕಾರ್ಯವನ್ನು ನಿರ್ವಹಿಸುತ್ತಿತ್ತು ಇನ್ನು 1961 ರ ವರೆಗೆ ಈ ಎಮ್ ಜಿ ಆರ್ ಟಿ ಡಿ ಮೈಸೂರು ಸಾರಿಗೆ ಇಲಾಖೆಯ ಆಡಳಿತದಲ್ಲಿ ಇತ್ತು

ಆದರೆ 1961 ಆಗಸ್ಟ್ 1 ರಿಂದ ರಸ್ತೆ ಸಾರಿಗೆ ಕಾಯಿದೆ ಅಡಿಯಲ್ಲಿ ಅದು ಸ್ವತಂತ್ರ ಕಾರ್ಪೊರೇಷನ್ ಆಗಿ ಮಾರ್ಪಟ್ಟಿತು ನಂತರ ಎಮ್ ಜಿ ಆರ್ ಟಿ ಡಿ ಇಂದ ಅದು ಎಮ್ ಎಸ್ ಆರ್ ಟಿ ಸಿ ಗೆ ಬದಲಾಯಿತು ನಂತರ ಬಿ ಟಿ ಎಸ್ ಅಂಗ ಸಂಸ್ಥೆಯ ಆಸ್ತಿ ಮತ್ತೆ ಋಣಭಾರಗಳನ್ನು 1 10 1961 ರಂದು ಎಮ್ ಎಸ್ ಆರ್ ಟಿ ಸಿ ಗೆ ವರ್ಗಾಯಿಸಲಾಯಿತು ಆದ್ದರಿಂದ ಇಡೀ ರಾಜ್ಯಕ್ಕೆ ಒಂದೇ ಸಂಸ್ಥೆಯನ್ನು ಸ್ಥಾಪಿಸಲಾಯಿತು. ನವಂಬರ್ 1 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಅಂತ ಮರುನಾಮಕರಣ ಮಾಡಲಾಯಿತು ಅಂದಿನಿಂದ ಎಮ್ ಎಸ್ ಆರ್ ಟಿ ಸಿ ಎನ್ನು ಕೆ ಎಸ್ ಆರ್ ಟಿ ಸಿ ಅಂತ ಮರುಣಾಮಕರಣ ಮಾಡಲಾಯಿತು ಆಗಸ್ಟ್ 1997 ರಲ್ಲಿ ಕೆ ಎಸ್ ಆರ್ ಟಿ ಸಿ ಯನ್ನು ಬಿ ಎಮ್ ಟಿ ಸಿ ಏನೆಂದರೆ ಬೆಂಗಳೂರು ಮೆಟ್ರೋ ಪಾಲಿಟನ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ಆಗಿ ವಿಂಗಡಿಸಿ ರೂಪಿಸಲಾಯಿತು. ಇನ್ನು 1997 ರಲ್ಲಿ ಕರ್ನಾಟಕದ ವಾಯುವ್ಯ ಭಾಗಗಳಲ್ಲಿ ಆ ಪ್ರದೇಶದ ಜನರ ಸಾರಿಗೆ ವ್ಯವಸ್ಥೆಗಳನ್ನು ಪೂರೈಸುವುದಕ್ಕೆ ಉತ್ತರ ಕರ್ನಾಟಕ ಪಶ್ಚಿಮ ಸಾರಿಗೆ ನಿಗಮ ಅಂತ ಎನ್ ಡಬ್ಯು ಕೆ ಆರ್ ಟಿ ಸಿ ಅಂತ ಹೊಸ ಸಾರಿಗೆ ನಿಗಮವನ್ನು ರೂಪಿಸಲಾಯಿತು ನಂತರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಎನ್ ಈ ಕೆ ಆರ್ ಟಿ ಸಿ ನಿಗಮವನ್ನು ಗುಲ್ಬರ್ಗದಲ್ಲಿ ತನ್ನ ಮುಖ್ಯ ಕಛೇರಿಯೊಂದಿಗೆ ಸ್ಥಾಪಿಸಲಾಯಿತು.

ಇನ್ನು ಈ ಕೆ ಎಸ್ ಆರ್ ಟಿ ಸಿ ಯ ಮುಖ್ಯ್ ಕಛೇರಿ ಬೆಂಗಳೂರಿನ ಶಾಂತಿ ನಗರದಲ್ಲಿದೆ ಇನ್ನು ಈ ಕೆ ಎಸ್ ಆರ್ ಟಿ ಸಿ ಕರ್ನಾಟಕದ 17 ಜಿಲ್ಲೆಗಳಲ್ಲಿ ತನ್ನ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿದೆ. ಮತ್ತು 16 ಕಾರ್ಯ ನಿರ್ವಹಣಾ ವಿಭಾಗಗಳನ್ನು ಹೊಂದಿದೆ ಇನ್ನು ಈ ಕೆ ಎಸ್ ಆರ್ ಟಿ ಸಿ ಯ ಪ್ರಮುಖ ಬಸ ನಿಲ್ದಾಣ ಮೆಜೆಸ್ಟಿಕ್ ಅಂದರೆ ಬೆಂಗಳೂರಿನಲ್ಲಿದೆ. ಮತ್ತು 79 ಡಿಪೋಗಳು ಮತ್ತು 4 ರಿಜನಲ್ ವರ್ಕ್ ಶಾಪ್ ಮತ್ತು 1 ಕೇಂದ್ರ ತರಬೇತಿ ಸಂಸ್ಥೆ ಮತ್ತು 2 ರಿಜನಲ್ ತರಬೇತಿ ಸಂಸ್ಥೆ 1 ಪ್ರಿಂಟಿಂಗ್ ಪ್ರೆಸ್ ಮತ್ತು 1 ಆಸ್ಪತ್ರೆಯನ್ನು ಒಳಗೊಂಡಿದೆ ಇನ್ನು ಕೆ ಎಸ್ ಆರ್ ಟಿ ಸಿಯಲ್ಲಿ ಸುಮಾರು 37000 ಹೆಚ್ಚು ಉದ್ಯೋಗಿಗಳು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಮತ್ತೆ ಪ್ರತಿನಿತ್ಯ ಸುಮಾರು 74 ಲಕ್ಷ ಪ್ರಯಾಣಿಕರನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ಹೊತ್ತೊಯುತ್ತದೆ ನೆರೆ ರಾಜ್ಯಗಳಾದ ಆಂಧ್ರ ಕೇರಳ ಮಹಾರಾಷ್ಟ್ರ ತಮಿಳುನಾಡು ತೆಲಂಗಾಣ ಗೋವಾ ಕ್ಕೂ ಸಹ ಕಾರ್ಯವನ್ನು ನಿರ್ವಹಿಸುತ್ತದೆ. 2005 ರಲ್ಲಿ ಕೆ ಎಸ್ ಆರ್ ಟಿ ಸಿ ಓಲ್ವೋ ಬಸ್ಸುಗಳನ್ನು ಕೂಡ ತೆಗೆದುಕೊಳ್ಳುತ್ತದೆ

ಇನ್ನು ಓಲ್ವೋ ಬಸ್ಸುಗಳನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಿದ್ದು ಬಳಸಿದ್ದು ಬೆಂಗಳೂರಿನಲ್ಲಿ ಪ್ರಸ್ತುತ ಕೆ ಎಸ್ ಆರ್ ಟಿ ಟಾಟಾ ಅಶೋಕ ಲೇಲ್ಯಾಂಡ್ ಒಲ್ವೋ ಮರ್ಶಡಸ್ ಬೆಂಜ್ ಮತ್ತೆ ಐರಾವತ ಬಸ್ಸ ಗಳ ಸೇವೆಯನ್ನು ಹೊಂದಿದೆ ಇನ್ನು ಕೆ ಎಸ್ ಆರ್ ಟಿ ಸಿ 8000 ಹೆಚ್ಚು ಅಧಿಕ ಬಸ್ಸುಗಳನ್ನು ಹೊಂದಿದೆ ಎನ್ ಡಬ್ಯು ಕೆ ಆರ್ ಟಿ ಸಿ 4700 ಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದೆ ಇನ್ನು ಬಿ ಎಮ್ ಟಿ ಸಿ 6400 ಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದೆ ಇರೀತಿ 1948 ರಲ್ಲಿ ಶುರುವಾದ ಈ ಸಾರಿಗೆ ಇವತ್ತಿಗೂ ಹಲವಾರು ಭಾಗಗಳಲ್ಲಿ ಕೋಟ್ಯಂತರ ಜನರಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಅಷ್ಟು ಜನ ಉದ್ಯೋಗಿಗಳು ರಾತ್ರಿ ಹಗಲು ಎನ್ನದೆ ಕೋಟ್ಯಂತರ ಪ್ರಯಾಣಿಕರನ್ನು ಅವರ ಊರಿಗೆ ತಲುಪಿಸುತ್ತಾರೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here