ನಿಂಬೇಹಣ್ಣಿನಲ್ಲಿ ಹಲವಾರು ಔಷಧಿ ಗುಣಗಳಿವೆ ಹಾಗೇನೇ ಏತೇಚ್ಛವಾಗಿ ಸೌಂದರ್ಯವರ್ಧಕ ಗುಣಗಳಿವೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ವಿಟಮಿನ್ ಸಿ ಮೆಗ್ನಿಶಿಯಮ್ ಹಾಗೂ ಕ್ಯಾಲ್ಸಿಯಂ ಅಂಶ ಇದೆ ಇಂತಹ ನಿಂಬೆಹಣ್ಣಿನಿಂದ ನಿಮ್ಮ ಕೂದಲಿಗೆ ಸಾಕಷ್ಟು ಉಪಯೋಗಗಳು ಇವೆ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಇಡುತ್ತದೆ ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ ಜೊತೆಗೆ ಕೂದಲು ಉದುರುವಿಕೆಯನ್ನು ಇದು ಕಮ್ಮಿ ಮಾಡುತ್ತದೆ ಹಾಗಾದರೆ ಸುಲಭವಾಗಿ ಸಿಗುವ ನಿಂಬೆಹಣ್ಣಿನಿಂದ ನಮ್ಮ ಕೂದಲು ಆರೈಕೆ ಹೇಗೆ ಮಾಡಿಸಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ತೆಂಗಿನ ಎಣ್ಣೆ ಜೊತೆಗೆ ನಿಂಬೆರಸವನ್ನು ಕೂದಲಿಗೆ ಹಚ್ಚಿ ರಾತ್ರಿ ಪೂರ್ತಿ ಬಿಟ್ಟು ಬೆಳಿಗ್ಗೆ ತಲೆಸ್ನಾನ ಮಾಡಿದರೆ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ ಹೀಗೆ ವಾರಕ್ಕೆ ಒಂದೆರಡು ಬಾರಿ ಮಾಡಿದರೆ ಕೂದಲು ಉದುರುವಿಕೆ ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.
ತಲೆ ಹೊಟ್ಟು ನಿವಾರಿಸುತ್ತದೆ ಕೂದಲು ಮತ್ತು ನೆತ್ತಿಗೆ ನಿಂಬೆರಸ ಹಾಕಿ ಮಸಾಜ್ ಮಾಡಬೇಕು ನಂತರ 10 ರಿಂದ 15 ನಿಮಿಷ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ಕ್ರಮೇಣ ಕಡಿಮೆ ಆಗುತ್ತದೆ ವಾರಕ್ಕೆ ಎರಡು ಸಾರಿ ಹೀಗೆ ಮಾಡಿದರೆ ಶೀಘ್ರ ಫಲಿತಾಂಶ ನಿಮ್ಮದಾಗುತ್ತದೆ. ಹಾಗೇನೇ ನಿಂಬೆಹಣ್ಣು ಕೂದಲನ್ನು ದಪ್ಪವಾಗಿಸುತ್ತದೆ ನಿಮ್ಮ ಕೂದಲನ್ನು ದಪ್ಪವಾಗಿಸಲು ತೆಂಗಿನ ಕಾಯಿ ನೀರಿಗೆ ಸ್ವಲ್ಪ ನಿಂಬೆರಸವನ್ನು ಮಿಶ್ರಣ ಮಾಡಿ ಅದರಲ್ಲಿ ಕೂದಲನ್ನು ತೊಳೆಯುವುದರಿಂದ ಕೂದಲು ದಪ್ಪವಾಗುತ್ತದೆ. ತಲೆ ತುರಿಕೆ ಕಡಿಮೆ ಮಾಡುತ್ತದೆ ನಿಮ್ಮ ತಲೆಯಲ್ಲಿ ತುರಿಕೆ ಬಂದರೆ ಆ ಜಾಗಕ್ಕೆ ನಿಂಬೆರಸವನ್ನು ಹಚ್ಚಿ ಇದರಿಂದ ಸೋಂಕು ದೂರವಾಗುತ್ತದೆ. ಕೂದಲು ಹೊಳೆಯಲು ನಿಮ್ಮದು ಒಣಗಿದ ಕೂದಲು ಆಗಿದ್ದರೆ ಮೊಸರು ಅಥವಾ ನಿಂಬೆಹಣ್ಣಿನ ರಸವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ ನಂತರ ಕೂದಲನ್ನು ತೊಳೆಯಿರಿ ಹೀಗೆ ಮಾಡುವುದರಿಂದ ನಿಮ್ಮ ಕೂದಲು ಹೊಳೆಯುತ್ತದೆ ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ಕೂದಲಿಗೆ ಹೊಳಪು ಬರುತ್ತದೆ ಕೂದಲಿನ ಬೆಳವಣಿಗೆಗೆ
ನಿಂಬೆಹಣ್ಣಿನ ರಸವನ್ನು ಆಲಿವ್ ಎಣ್ಣೆಯೊಂದಿಗೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ ಆ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಾಗೂ ನೆತ್ತಿಗೆ ಹಾಕಿ ಮಸಾಜ್ ಮಾಡಿ 30 ನಿಮಿಷಗಳ ನಂತರ ಶಾಂಪುವಿನಿಂದ ತಲೆ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಒಡೆದ ಕೂದಲಿನ ನಿವಾರಣೆಗೆ ನಿಮ್ಮನ್ನು ಒಡೆದ ಕೂದಲಿನ ಸಮಸ್ಯೆ ಕಾಡುತ್ತಿದ್ದರೆ ನಿಂಬೆಹಣ್ಣಿನ ರಸ ಹಾಗೂ ಆಲಿವ್ ಎಣ್ಣೆಯನ್ನು ಹಚ್ಚಿ ಇದರಿಂದ ಒಡೆದ ಕೂದಲಿನ ಕಿರಿಕಿರಿ ಇರುವುದಿಲ್ಲ ಕೂದಲನ್ನು ಬಲವಾಗಿಸುತ್ತದೆ ನಿಂಬೇಹಣ್ಣಿನಲ್ಲಿ ಇರುವ ವಿಟಮಿನ್ ಸಿ ಬಿ ಹಾಗೂ ಕ್ಯಾಲ್ಸಿಯಂ ಅಂಶ ನಿಮ್ಮ ಕೂದಲನ್ನು ಬಲವಾಗಿಸುತ್ತದೆ ಅಲ್ಲದೆ ನಿಮ್ಮ ಕೂದಲಿನಲ್ಲಿ ಎಣ್ಣೆ ಅಂಶ ಹೆಚ್ಚಾಗಿದ್ದರೆ ಪ್ರತಿದಿನ ನಿಂಬೆರಸ ಹಚ್ಚುವುದರಿಂದ ಅದು ನಿವಾರಣೆ ಆಗುತ್ತದೆ ಆದ್ದರಿಂದ ಸ್ನೇಹಿತರೆ ನಿಂಬೆಹಣ್ಣಿನಿಂದ ನಮ್ಮ ಕೂದಲನ್ನು ನಾವು ಆರೈಕೆ ಮಾಡುವ ವಿಧಾನಗಳು ನೀವು ಬಳಸಿ ನೋಡಿ.ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ.