ನಿದ್ರೆಯಿಂದ ಎದ್ದಾಗ 4 ನಿಮಿಷ ವಿಶ್ರಾಂತಿ ಪಡೆಯಿರಿ. ನಾವು ದಿನಬೆಳಗಾದರೆ ದಿನಪತ್ರಿಕೆಯಲ್ಲಿ ಮತ್ತು ವಾರ್ತೆಗಳಲ್ಲಿ ಎಷ್ಟೋ ಸಲ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ದಿಂದ ಮೃತ ಪಟ್ಟವರ ಅದೆಷ್ಟೋ ಘಟನೆಗಳನ್ನು ನೋಡಿರುತ್ತೇವೆ ಹೇಗೆ ನಮ್ಮ ಸುತ್ತ ಮುತ್ತ ಈ ತರಹದ ಸಮಸ್ಯೆಗಳು ಸಂಭವಿಸುತ್ತಿವೆ ಇದಕ್ಕೆ ಕಾರಣ ಏನು ಗೊತ್ತಾ ಕೆಲವರಂತೂ ತಪ್ಪದೆ ಜಿಮ್ಗೆ ಹೋಗುತ್ತಾರೆ ಅವರಿಗೂ ಕೂಡ ಹೃದಯಾಘಾತ ಆಗಿದ್ದನ್ನು ನೀವು ಕೇಳಿರಬಹುದು ಹಾಗಾದರೆ ಇದಕ್ಕೆ ಪರಿಹಾರ ಏನಿದೆ ಅಂತೀರಾ ಇದಕ್ಕೆ ಖಂಡಿತವಾಗಿಯೂ ಪರಿಹಾರ ಇದೆ ಅದೇನೆಂದು ಈ ಒಂದು ಲೇಖನದಲ್ಲಿ ಈಗ ನಾವು ತಿಳಿಯೋಣ ಬನ್ನಿ. ಈ ಸಮಸ್ಯೆಯಿಂದ ಉಳಿಯಲು ಬರಿ 3 ರಿಂದ 4 ನಿಮಿಷ ಅಷ್ಟೇ ಸಾಕು ವೈದ್ಯರ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರ ವಿಸರ್ಜನೆಗೆ ಹೋಗುತ್ತಾರೋ ಅಂತವರಿಗೆ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತದೆ
ಅಂತವರು ಹೇಗೆ ಜಾಗ್ರತೆ ವಹಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರವಿಸರ್ಜನೆ ಅಥವಾ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೆಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗ್ರತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆ ಕಡಿಮೆ ಆಗುತ್ತದೆ. ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿದ್ದಾನೆ ಇದಕ್ಕೆಲ್ಲ ಮುಖ್ಯ ಕಾರಣ ಇಲ್ಲಿದೆ ನೋಡಿ. ರಾತ್ರಿ ನಿದ್ರೆಯಿಂದ ಮೂತ್ರ ವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವುದು ಘಾಡ ನಿದ್ರೆಯಿಂದ ಒಮ್ಮೆಲೇ ಏಳುವುದರಿಂದ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ ಈ ಸಮಯದಲ್ಲಿ 4 ನಿಮಿಷ ಬಹಳ ಪ್ರಾಮುಖ್ಯವಾದುದು ಘಾಡ ನಿದ್ರೆಯಿಂದ ತ್ವರಿತವಾಗಿ ಹಾಸಿಗೆಯಿಂದ ಏಳುವುದರಿಂದ ಶರೀರದ ಇ ಸಿ ಜಿಯ ಆಕಾರ ಒಮ್ಮೆಲೇ ಬದಲಾಗುತ್ತದೆ ಇದರಿಂದ ಮೆದುಳಿಗೆ ರ ಕ್ತ ಸಂಚಾರ ಒಮ್ಮೆಲೇ ಹರಿಯುವುದಿಲ್ಲ ಇದರಿಂದ ಹೃದಯಕ್ಕೆ ಆಘಾತವಾಗುವುದು ಇದರಿಂದ ಬಚಾವಾಗಲು 4 ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿಯನ್ನು ಅನುಸರಿಸಿದರೆ ತುಂಬಾ ಒಳ್ಳೆಯದು
ಅದೇನೆಂದು ಈಗ ನೋಡೋಣ ನಿದ್ರೆಯಿಂದ ಎಚ್ಚರವಾದಾಗ ಹಾಗೆ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿಯೇ ಕುಳಿತುಕೊಳ್ಳಿ ಅನಂತರ ಮುಂದಿನ ಎರಡು ನಿಮಿಷ ಪಲ್ಲಂಗದ ಮೇಲಿನಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿ ಈ ಮೂರು ಸೂತ್ರಗಳನ್ನು ದಿನವೂ ರೂಢಿಸಿಕೊಂಡರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆ ಕಡಿಮೆ ಆಗಬಹುದು. ಹೀಗೆ ನೀವು ನಿದ್ದೆಯಿಂದ ಎದ್ದ ಕೂಡಲೇ ದೇಹಕ್ಕೂ ಕೂಡ ಸ್ವಲ್ಪ ವಿಶ್ರಾಂತಿ ನೀಡುವುದು ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ಗಡಿಬಿಡಿಯಲ್ಲಿ ನಾವು ಅಪಾಯಕ್ಕೆ ಸಿಲುಕುವ ತೊಂದರೆಯು ಸಹ ಇರುವುದಿಲ್ಲ ಆರಾಮವಾಗಿ ಎದ್ದು ಕುಳಿತು ನಿದ್ರೆಯಿಂದ ಸುಧಾರಿಸಿಕೊಂಡ ಮೇಲೆ ನೀವು ಎದ್ದು ಹೋಗುವುದು ತುಂಬಾ ಒಳ್ಳೆಯದು ಇದರಿಂದ ಆಗುವ ಅಪಾಯವನ್ನು ಸಹ ನಾವು ತಪ್ಪಿಸಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಿ.