ನಿಮಗೆ ಅರ್ದ ತಲೆ ನೋವಿನ ಸಮಸ್ಯೆ ಇದ್ರೆ ಯಾವತ್ತು ಈ ನಾಲ್ಕು ಆಹಾರ ತಿನ್ನಬೇಡಿ

77

ತಲೆನೋವು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಕೆಲವರಿಗೆ ಪೂರ್ತಿಯಾಗಿ ತಲೆ ನೋವು ಬಂದರೆ ಇನ್ನೂ ಕೆಲವರಿಗೆ ಅರ್ಧ ತಲೆನೋವು ಮಾತ್ರ ಬರುತ್ತದೆ. ಇದಕ್ಕೆ ಮೈಗ್ರೇನ್ ಅಂತ ಕೂಡ ಕರೆಯಲಾಗುತ್ತದೆ. ಅರ್ಧ ತಲೆನೋವು ಬಂದಾಗ ನಾವು ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ನಾನು ತಿಳಿಸುತ್ತೇನೆ. ಹಾಗಾದರೆ ಆ ಆಹಾರಗಳು ಯಾವುದು ಎಂದು ನೋಡೋಣ. ಸ್ನೇಹಿತರೆ ಈ ಒಂದು ಉತ್ತಮವಾದ ಆರೋಗ್ಯ ಮಾಹಿತಿಯನ್ನು ತಪ್ಪದೆ ಓದಿರಿ. ತಲೆ ನೋವು ಎಂದರೆ ಮನುಷ್ಯನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡು ಕಾರಣಗಳಿಂದ ಬರಬಹುದು. ಆದ್ದರಿಂದ ತಲೆನೋವು ಬರಬಾರದು ಎಂದರೆ ನಾವು ಪ್ರತಿನಿತ್ಯ ಮಾಡುವ ಕೆಲಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ತಲೆ ನೋವು ಮನುಷ್ಯನಿಗೆ ಸಾಮಾನ್ಯವಾಗಿ ಬರುವುದು ಆತನು ಮಾನಸಿಕವಾಗಿ ಸಾವಿರಾರು ಯೋಚನೆಗಳನ್ನು ಮಾಡಲು ಕುಳಿತಾಗ ತಲೆನೋವು ತುಂಬಾ ಹೆಚ್ಚಿನ ಮಟ್ಟದಲ್ಲಿ ಬರಲು ಸಾಧ್ಯವಾಗುತ್ತದೆ. ಸುಲಭವಾಗಿ ಹೇಳಬೇಕು ಎಂದರೆ ತಲೆಯ ಮೇಲೆ ಒತ್ತಡ ಬಿದ್ದಾಗ ಈ ತಲೆನೋವು ಎಂಬ ಕಾಯಿಲೆ ಬರುತ್ತದೆ. ಇದು ಕೆಲವರಿಗೆ ಬೇಗ ಕಡಿಮೆಯಾಗುತ್ತದೆ. ಇನ್ನೂ ಕೆಲವರಿಗೆ ಸಮಯವನ್ನು

ತೆಗೆದುಕೊಳ್ಳುತ್ತದೆ. ಮತ್ತು ಮಾನಸಿಕ ಒತ್ತಡದ ಜೊತೆಗೆ ದೈಹಿಕವಾಗಿ ಅಂದರೆ ನೆಗಡಿ ಶೀತ ಕೆಮ್ಮು ಬಂದಾಗ ಈ ಕಾಯಿಲೆಗಳ ಜೊತೆಗೆ ತಲೆನೋವು ಕೂಡ ಕೆಲವು ಜನರು ಅನುಭವಿಸುತ್ತಾರೆ. ನಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಅರ್ಧ ತಲೆನೋವಿಗೆ ಮೈಗ್ರೇನ್ ಎಂದು ಹೇಳುತ್ತಾರೆ. ಈ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಬಾರದು. ಒಂದು ವೇಳೆ ಸೇವನೆ ಮಾಡಿದರೆ ತಲೆ ನೋವು ಹಾಗೆ ಉಳಿದು ಕೊಳ್ಳುತ್ತದೆ. ಆಲೂಗಡ್ಡೆ ಚಿಪ್ಸ್ ಫ್ರೆಂಚ್ ಫ್ರೈಸ್ ಚೀಸ್ ಮಾಯೋನಿಸ್ ಉಪ್ಪಿನಕಾಯಿ ಚೀಸ್ ಬರ್ಗರ್ ಕೂಲ್ಡ್ರಿಂಕ್ಸ್ ಐಸ್ ಕ್ರೀಂ ಕಾಫೀ ಆಲ್ಕೋಹಾಲ್ ಮುಂತಾದ ಪದಾರ್ಥಗಳಿಂದ ದೂರ ಇರಬೇಕು. ಹಾಗೆ ಪ್ಯಾಕೆಟ್ ಫುಡ್ ಇರುವ ಆಹಾರಗಳಿಂದ ದೂರವಿರಿ. ಇವೆಲ್ಲ ಆಹಾರಗಳು ನಾಲಿಗೆಗೆ ಮಾತ್ರ ರುಚಿಯಾಗಿ ಇರುತ್ತದೆ. ಆದರೆ ಇವು ನಮ್ಮ ದೇಹಕ್ಕೆ ಯಾವುದೇ ರೀತಿಯ ಆರೋಗ್ಯ ಪ್ರಯೋಜನಗಳನ್ನೂ ಕೊಡುವುದಿಲ್ಲ. ಮತ್ತು ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರದಿಂದ ದೂರವಿರಬೇಕು. ಹಾಗೆ ಜಂಕ್ ಫುಡ್ ಆಹಾರವನ್ನು

ಸೇವಿಸಬಾರದು. ಇದರಲ್ಲಿ ಯಾವುದೇ ರೀತಿಯ ವಿಟಮಿನ್ಸ್ ಮಿನರಲ್ಸ್ ಪೋಷಕಾಂಶ ಪ್ರೊಟೀನ್ ಎಂಬ ಅಂಶ ಅಡಗಿರುವುದು. ಇವು ದೇಹಕ್ಕೆಯಾವುದೇ ರೀತಿಯ ಲಾಭಗಳನ್ನು ದೊರಕಿಸಿ ಕೊಡುವುದಿಲ್ಲ. ಮತ್ತು ಜೀರ್ಣಕ್ರಿಯೆ ಕೂಡ ಚೆನ್ನಾಗಿ ನಡೆಯುವ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದ ಹೊಟ್ಟೆನೋವು ಸಹ ಕಾಣಿಸಿ ಕೊಳ್ಳುತ್ತದೆ. ಮತ್ತು ಜೊತೆಗೆ ತಲೆನೋವು ಕೂಡ ಬರುತ್ತದೆ. ಇವೆಲ್ಲವೂ ಜಂಕ್ ಫುಡ್ ಗಳಿಂದ ಆಗುವ ಸಮಸ್ಯೆಗಳು ಅಂತ ಹೇಳಿದರೆ ತಪ್ಪಾಗಲಾರದು. ಹಾಗೆ ಕಾರ್ಬೊನೇಟೆಡ್ ಡ್ರಿಂಕ್ಸ್ ಆಗಿರುವ ತಂಪು ಪಾನೀಯಗಳನ್ನೂ ಕುಡಿಯಬಾರದು. ಇದರಿಂದ ತಲೆ ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಎಲ್ಲ ಆಹಾರವನ್ನು ಡಯೆಟ್ ನಿಂದಾ ದೂರ ಮಾಡಿ ಪ್ರತಿನಿತ್ಯವೂ ಪೋಷಕಾಂಶ ಮತ್ತು ಪ್ರೊಟೀನ್ ಇರುವ ಆಹಾರವನ್ನು ಸೇವಿಸಲು ಪ್ರಾರಂಭಿಸಬೇಕು. ಇದರಿಂದ ಮೈಗ್ರೇನ್ ಪ್ರಾಬ್ಲಮ್ ಶುರು ಆಗುತ್ತದೆ. ತಲೆನೋವು ಬರಬಾರದು ಎಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಬಲವಾಗಿರಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಮತ್ತು ಒಳ್ಳೆಯ ಆಹಾರವನ್ನು ಸೇವಿಸಬೇಕು.

LEAVE A REPLY

Please enter your comment!
Please enter your name here