ನಿಮಗೆ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗಬೇಕು ಅಂದ್ರೆ ಇದನ್ನು ಪಾಲಿಸಿ

63

ಉದ್ಯೋಗ ಒಂದರ ಸಂದರ್ಶನಕ್ಕೆ ತಯಾರಿ ನಡೆಸುವಾಗ ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ಉದ್ಯೋಗದಾತ ಕಂಪನಿಯ ಬಗ್ಗೆ ಹಲವು ವಿಷಯಗಳನ್ನು ತಿಳಿದು ಕೊಳ್ಳುವುದು ಬಹಳ ಮುಖ್ಯ. ಕಂಪನಿಯ ಅಥವಾ ಸಂಸ್ಥೆಯ ಹಿನ್ನೆಲೆ ಮತ್ತು ಮಾಹಿತಿ ನೀವು ಅಪೇಕ್ಷಿಸುವ ಉದ್ಯೋಗದ ಬಗ್ಗೆ ನೀವು ತಿಳಿದುಕೊಂಡು ಇದ್ದರೆ ನಿಮಗೆ ಸಂದರ್ಶನ ತುಂಬಾ ಸುಂದರವಾಗಿ ಇರುತ್ತದೆ. ಹಾಗಾದರೆ ಸಂದರ್ಶನ ಹೇಗೆ ಎದುರಿಸಬೇಕು ಎನ್ನುವುದರ ಬಗ್ಗೆ ಕೆಲವು ಟಿಪ್ಸ್ ನಾವು ನಿಮಗೆ ಕೊಡುತ್ತೇವೆ ನೋಡಿ. ಮೊದಲನೆಯದು ಕೆಲಸದ ಕುರಿತು ಅರಿವು ಇರಲಿ. ಸಂಸ್ಥೆ ನೀಡಿದ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇರಬೇಕು. ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ಅರ್ಹತೆ ವಿದ್ಯಾರ್ಹತೆ ಅನುಭವ ಬೇಕಿರಬೇಕು ಎಂದು ಹಲವರು ಉಲ್ಲೇಖಿಸುತ್ತಾರೆ.

ಅವುಗಳನ್ನು ಮೂಲವಾಗಿ ಇಟ್ಟುಕೊಂಡೇ ಸಂದರ್ಶನದಲ್ಲಿ ಪ್ರಶ್ನೆ ಕೇಳುತ್ತಾರೆ ಕಂಪನಿಯ ಸೇವೆ ಮತ್ತು ಉತ್ಪನ್ನಗಳ ಬಗ್ಗೆ ನೀವು ಬಯಸುತ್ತಿರುವ ಉದ್ಯೋಗದ ಸಂಬಂಧಪಟ್ಟ ವಿಷಯಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಎರಡನೆಯದು ಧ್ವನಿ ಮತ್ತು ದೇಹದ ಭಾಷೆ ಸಂದರ್ಷಕರಲ್ಲಿ ನಿಮ್ಮ ಬಗ್ಗೆ ಸಕಾರಾತ್ಮಕ ಯೋಚನೆ ಮತ್ತು ನಿಮ್ಮ ಬಗ್ಗೆ ನಂಬಿಕೆಯನ್ನು ನಿಮ್ಮ ಉತ್ತರದ ಮೂಲಕ ತುಂಬಬೇಕು ಅದಕ್ಕಾಗಿ ಧೈರ್ಯದಿಂದ ಮತ್ತು ವಿಶ್ವಾಸದಿಂದ ಮಾತನಾಡಬೇಕು. ನಿಮ್ಮ ಧ್ವನಿ ಸ್ವಾಭಾವಿಕ ನಗು ದೇಹ ಭಾಷೆಯನ್ನು ಉತ್ತಮವಾಗಿ ಅಭ್ಯಾಸ ಮಾಡಿಕೊಳ್ಳಬೇಕು. ತುಂಬಾ ಚುರುಕಿನಿಂದ ಇದ್ದು ಉಲ್ಲಾಸದಿಂದ ಉತ್ತರಿಸುತ್ತಾ ಸಂದರ್ಶನವನ್ನು ಎದುರಿಸಲು ಪ್ರಯತ್ನಿಸಿ.

ಮೂರನೆಯದು ಹಿಂದಿನ ಸಂದರ್ಶನದ ಪಾಠ. ಸಾರ್ವಜನಿಕವಾಗಿ ಮಾತನಾಡುವಂತೆ ಸಂದರ್ಶನಗಳನ್ನು ಅಭ್ಯಾಸ ಮಾಡುವುದು ಉತ್ತಮ ಇದರಿಂದ ನಿಮ್ಮ ವಿಶ್ವಾಸವನ್ನು ಹೆಚ್ಚಿಸಿ ಕೊಳ್ಳಬಹುದು ನಮ್ಮಲ್ಲಿ ಸ್ಟೇಜ್ ಫಿಯರ್ ಎಂಬ ಮಾತಿನಂತೆ ಬಹುತೇಕರಿಗೆ ಸಂದರ್ಶನವನ್ನು ಎದುರಿಸಲು ಭಯ ಆಗುತ್ತದೆ ಇದನ್ನು ಅಭ್ಯಾಸಗಳ ಮೂಲಕ ಬಗೆ ಹರಿಸಿ ಕೊಳ್ಳಬಹುದು. ಈ ಹಿಂದೆ ಎದುರಿಸಿದ ಸಂದರ್ಶನವನ್ನು ಮತ್ತೆ ನೆನಪಿಸಿ ಕೊಂಡು ಅದರಲ್ಲಿ ನೀವು ಮಾಡಿದ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳಿ. ನಾಲ್ಕನೆಯದು ರೆಸುಮೆ ಅಪ್ಡೇಟ್ ಆಗಿರಲಿ. ರೆಸ್ಯುಮ್ ನಲ್ಲಿ ನೀಡಲಾದ ನಿಮ್ಮ ವಿದ್ಯಾರ್ಹತೆ ಕೌಶಲಗಳು ನಿಮ್ಮ ಸಾಮರ್ಥ್ಯ ಏನು ಎಂಬ ಪ್ರತಿಯೊಂದು ಮಾಹಿತಿ ನಿಮಗೆ ನೆನಪಿರಲಿ ಕೆಲವೊಮ್ಮೆ ರೆಸ್ಯುಂ ನಲ್ಲಿ ಇರುವ ವಿಷಯಗಳ ಬಗ್ಗೆ ಸಂದರ್ಶಕರು ಪ್ರಶ್ನೆ ಕೇಳುತ್ತಾರೆ ಈ ಸಂಧರ್ಭದಲ್ಲಿ ನೀವು ತೊದಲುವ ಹಾಗೆ ಇಲ್ಲ.

ಆನ್ಲೈನ್ ಮೂಲಕ ಅಪ್ಲಿಕೇಷನ್ ಹಾಕಿದರು ಸಂದರ್ಶನಕ್ಕೆ ಖಂಡಿತ ಎರಡರಿಂದ ನಾಲ್ಕು ಪ್ರಿಂಟ್ ಹಾಕಿಸಿ ಕೊಂಡು ಹೋಗುವುದು ಒಳಿತು. ಸಂದರ್ಶಕರು ನಿಮ್ಮ ಸಾಫ್ಟ್ ಕಾಪಿ ರೇಸ್ಯುಂ ಸ್ವೀಕರಿಸಿದರು ಹಾರ್ಡ್ ಕಾಪಿ ಕೇಳುವ ಸಾಧ್ಯತೆ ಇರುತ್ತದೆ. ಐದನೆಯ ಟಿಪ್ಸ್ ಸರಳ ಉಡುಗೆ. ನಿಮ್ಮ ರೆಸುಮ್ ಅಷ್ಟೆ ಮೌಲ್ಯಯುತ ದಿಂದ ನಿಮ್ಮನ್ನು ನೀವು ಸಂದರ್ಶಕರಿಗೆ ವ್ಯಕ್ತ ಪಡಿಸಿ ಕೊಳ್ಳುವುದು ತೀರಾ ಅವಶ್ಯಕ ನಮ್ಮ ಬಟ್ಟೆಗಳು ಹೆಚ್ಚು ಸರಳವಾಗಿ ಇರಬೇಕು ಆದಷ್ಟು ಪ್ರೊಫೆಷನಲ್ ಆಗಿರುವ ಬಟ್ಟೆಗಳನ್ನು ಸಂದರ್ಶನದಲ್ಲಿ ಧರಿಸಬೇಕು ನಮ್ಮ ರೆಸೂಮ್ ಎಷ್ಟೇ ತೂಕ ಹೊಂದಿದ್ದರೂ ನಿಮ್ಮ ವ್ಯಕ್ತಿತ್ವ ತೋರ್ಪಡಿಸದೇ ಇದ್ದರೆ ಶಿಸ್ತು ನಮ್ಮ ಮುಖದಲ್ಲಿ ಪರಿಚಯ ಆಗುವಂತೆ ಉಣಬಡಿಸಿ.

LEAVE A REPLY

Please enter your comment!
Please enter your name here