ನಿಮ್ಮ ಆರೋಗ್ಯ ಸುಪರ್ ಆಗಿ ಇರಲು

54

ಕಾಳುಗಳನ್ನು ಹೀಗೆ ಮೊಳಕೆ ಮಾಡಿ ಉಪಯೋಗಿಸಿ. ನಮ್ಮ ಜೀವನದಲ್ಲಿ ಅತೀ ಮುಖ್ಯವಾದದ್ದು ಅಂದ್ರೆ ಅದು ಆರೋಗ್ಯ ಮಾತ್ರ. ನಮ್ಮ ಜೀವನ ಶೈಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಂಡರೆ ನಮ್ಮ ಅರೋಗ್ಯ ಸುಪರ್ ಆಗಿರುತ್ತೆ. ಮೊಳಕೆ ಕಾಳು ಖಂಡಿತ ತುಂಬಾ ಒಳ್ಳೆಯದು ಏಕೆಂದರೆ ಬೆಳೆಗಿಂತ ಕಾಳು ಉತ್ತಮ ಕಾಳಿಗಿಂತ ಮೊಳಕೆ ಕಾಳು ತುಂಬಾ ಉತ್ತಮ ಈ ಮೊಳಕೆ ಕಾಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಇರುತ್ತದೆ ಬರಿ ಪ್ರೊಟೀನ್ ಒಂದೇ ಅಲ್ಲದೆ ಹೆಚ್ಚಾಗಿ ಐರನ್ ಕ್ಯಾಲ್ಸಿಯಂ ಪಾರ್ಸರಸ್ ಬಯೋಟಿನ್ ವಿಟಮಿನ್ ಎ ಮಿನರಲ್ಸ್ ಎಲ್ಲ ಇರುತ್ತದೆ ಕೂದಲು ಚೆನ್ನಾಗಿ ಬೆಳೆಯಲು ಮತ್ತು ನಮ್ಮ ಚರ್ಮ ಹೊಳೆಯುವುದಕ್ಕೆ ಆರೋಗ್ಯವಾಗಿರಲು ಹಾಗೇನೇ ಮೂಳೆಗಳ ಬೆಳವಣಿಗೆಗೆಯೂ ಕೂಡ ಪ್ರೊಟೀನ್ ಬೇಕು ಕೊಬ್ಬು ಕರಗಲು ಸಹ ಪ್ರೊಟೀನ್ ಅಗತ್ಯ ಇದೆ ಈ ಮೊಳಕೆ ಕಾಳುಗಳಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿಗಳು ಇರುತ್ತವೆ

ಆದ್ದರಿಂದ ಮೊಳಕೆ ಕಾಳು ತಿನ್ನುವುದರಿಂದ ನೀವು ದಪ್ಪ ಆಗುವುದಿಲ್ಲ ಇದರಲ್ಲಿ ನಾರಿನಂಶ ಹೆಚ್ಚಾಗಿದ್ದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಮೊಳಕೆ ಕಾಳು ಮಾಡುವುದು ಹೇಗೆ ನೋಡೋಣ ಬನ್ನಿ ಯಾವುದಾದರೂ ಸರಿ ಮೂರು ಕಾಳುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು 12 ಗಂಟೆ ನೆನಸಿಡಬೇಕು ನಂತರ ಚೆನ್ನಾಗಿ ತೊಳೆಯಬೇಕು ನಂತರ ನೀರು ಸೋಸಿ ಬಟ್ಟೆಮೇಲೆ ಕಾಳುಗಳನ್ನು ಪ್ಯಾನ್ ಕೆಳಗೆ ಒಣಗಿಸಿ ಒಂದು ಗಂಟೆ ನಂತರ ಅದೇ ಬಟ್ಟೆಯಲ್ಲಿ ಕಟ್ಟಿ ಇಡಬೇಕು ಒಂದೂವರೆ ದಿನ ಹಾಗೆ ಬಿಡಬೇಕು ಅಂದರೆ ಇವತ್ತು ರಾತ್ರಿ ಮೂಟೆ ಕಟ್ಟಿದರೆ ನಾಡಿದ್ ಬೆಳಿಗ್ಗೆ ಬಿಚ್ಚಬೇಕು ಅಂದರೆ 36 ಗಂಟೆ ನಂತರ ಮೂಟೆ ಬಿಚ್ಚಬೇಕು ಆಗ ಒಂದು ಇಂಚು ಮೊಳಕೆ ಬಂದಿರುತ್ತದೆ. ಆಗ ಮೊಳಕೆ ಆಗಿದೆ ಅಂತ ಅರ್ಥ. ನಂತರ ಈ ಕಾಳುಗಳನ್ನು ಬಿಸಿ ಮಾಡಬಾರದು ಬಿಸಿ ಮಾಡಿದರೆ ಅದರಲ್ಲಿರುವ ಪೋಷಕಾಂಶಗಳು ಹಾಳಾಗುತ್ತವೆ.

ಹಸಿಮೊಳಕೆ ಕಾಳುಗಳನ್ನು ಮಾತ್ರ ತಿನ್ನಬೇಕು ತುಂಬಾ ಒಳ್ಳೇದು ಅಂತ ಹೊಟ್ಟೆ ತುಂಬ ತಿನ್ನಬಾರದು ಹೀಗೆ ತಿಂದರೆ ಜೀರ್ಣಕ್ರಿಯೆ ತೊಂದರೆ ಆಗುತ್ತದೆ. ಒಂದು ದಿನಕ್ಕೆ ಒಬ್ಬರು ಒಂದು ಹಿಡಿಯಷ್ಟು ಮಾತ್ರ ತಿನ್ನಬೇಕು ಅದು ಬೆಳಿಗ್ಗೆ ಅಥವಾ ಸಂಜೆ ಖಾಲಿಹೊಟ್ಟೆಯಲ್ಲಿ ತಿನ್ನಬೇಕು ಹೀಗೆ ಮೊಳಕೆ ಕಾಳುಗಳನ್ನು ತಿನ್ನುತ್ತಾ ಬಂದರೆ ಖಂಡಿತ ಸಣ್ಣ ಆಗುತ್ತಿರ. ಹಾಗೆ ತಿನ್ನಲು ಆಗದೆ ಇದ್ದವರು ಸಲಾಡ್ ತರ ಮಾಡಿಕೊಂಡು ತಿನ್ನಿ ಒಂದು ಹಿಡಿ ಮೊಳಕೆ ಕಾಳಿಗೆ ಒಂದು ಸಣ್ಣ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಜೊತೆಗೆ ಒಂದು ಟೊಮೊಟೊ ಹೆಚ್ಚಿ ರುಚಿಗೆ ತಕ್ಕಷ್ಟು ಉಪ್ಪು ಒಂದು ಚಿಟಿಕೆ ಕಾಳು ಮೆಣಸಿನ ಪುಡಿ ಸಾಂಬಾರ್ ಸೊಪ್ಪು ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿ ಒಂದು ಚಮಚ ಎಣ್ಣೆ ಹಾಗೇನೇ ಅರ್ಧ ಇಂಚು ಹಸಿ ಶುಂಠಿಯನ್ನು ಚೆನ್ನಾಗಿ ತುರಿದು ಹಾಕಿಕೊಳ್ಳಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ತಿನ್ನಿ ಒಳ್ಳೆ ಸಲಾಡ್ ತರ ಇರುತ್ತದೆ ಹಾಗೆನೆ ತಿನ್ನುವುದಕ್ಕೂ ಚೆನ್ನಾಗಿರುತ್ತದೆ. ಮೊಳಕೆ ಕಾಳುಗಳನ್ನು ಎರಡು ದಿನದ ಒಳಗೆ ತಿನ್ನಬೇಕು ಇವತ್ತು ಮೊಳಕೆ ಬಂದಿದ್ದರೆ ಇವತ್ತು ಮತ್ತು ನಾಳೆ ತಿನ್ನಬೇಕು ಫ್ರಿಜ್ ನಲ್ಲಿ ಇಟ್ಟರು ಸಹ ಎರಡೇ ದಿನ ತಿನ್ನಬೇಕು.

LEAVE A REPLY

Please enter your comment!
Please enter your name here