ನಿಮ್ಮ ಜೀವನದ ಶಿಲ್ಪಿ ನೀವೇ ಆಗಿರಿ

104

ನಿಮ್ಮ ಜೀವನದ ಶಿಲ್ಪಿ ನೀವಾಗಿ ಇಲ್ಲಿದೆ ಒಂದು ಉದಾಹರಣೆ. ಒಂದು ಊರು ಆ ಊರಿನಲ್ಲಿ ಒಬ್ಬ ಶಿಲ್ಪಿ ಇದ್ದರು. ಅವರು ಅತ್ಯಂತ ಸುಂದರವಾದ ಮೂರ್ತಿಗಳನ್ನು ಕೆತ್ತನೆ ಮಾಡುತ್ತಿದ್ದರು
ಆ ಕೆಲಸದಿಂದ ಅವನಿಗೆ ಒಳ್ಳೆಯ ಆದಾಯ ಬರುತ್ತಿತ್ತು. ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಅವನಿಗೆ ಒಂದು ಗಂಡು ಮಗುವಾಯಿತು. ನಂತರ ಮಗುವಿನ ಲಾಲನೆ ಪಾಲನೆ ಜೊತೆಗೆ ಮಗುವನ್ನು ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮಗು ತಂದೆಯನ್ನು ನೋಡಿ ಬೆಳೆಯುತ್ತಾ ಚಿಕ್ಕ ವಯಸ್ಸಿನಿಂದಲೇ ಮೂರ್ತಿಗಳನ್ನು ಕೆತ್ತಲು ಪ್ರಯತ್ನ ಪಡುತ್ತಿತ್ತು. ಆ ಮಗು ಕಲಿತಾ ಬೆಳಿತಾ ಚೆನ್ನಾಗಿ ಮೂರ್ತಿಗಳನ್ನು ಕೆತ್ತನೆ ಮಾಡುತ್ತಿತ್ತು. ತಂದೆಗೆ ಒಂದು ರೀತಿಯ ಸಂತೋಷ ಜೊತೆಗೆ ಹೆಮ್ಮೆ ನನ್ನ ಮಗ ಎಷ್ಟು ಚೆನ್ನಾಗಿ ಕೆಲಸ ಕಲಿಯುತ್ತಿದ್ದಾನೆ ಎಂದು ಆದರೆ ಪ್ರತಿ ಬಾರಿ ಮೂರ್ತಿಗಳಲ್ಲಿ ಏನಾದರೂ ದೋಷಗಳನ್ನು ತೆಗೆದು ಇದು ಸರಿಯಿಲ್ಲ ಅದು ಸರಿಯಿಲ್ಲ ಎಂದು ಹೇಳುತ್ತಿದ್ದರು ಹಾಗೂ ಅವರು ಮಗು ತುಂಬಾ ಚೆನ್ನಾಗಿ ಕೆತ್ತನೆ ಮಾಡಿದ್ದೀಯಾ ಆದರೆ ಮುಂದಿನ ಬಾರಿ ಈ ದೋಷಗಳಿಲ್ಲದೆ ಇನ್ನೂ ಚೆನ್ನಾಗಿ ಕೆತ್ತನೆ ಮಾಡಲು ಪ್ರಯತ್ನ ಪಡು ಎಂದು.

ಆ ಮಗು ಕೂಡ ಏನೂ ಹೇಳದೆ ಅವರ ತಂದೆಯ ಸಲಹೆ ಯನ್ನು ಕೇಳಿ ಅವನ ಮೂರ್ತಿಗಳನ್ನು ಇನ್ನೂ ಚೆನ್ನಾಗಿ ಮಾಡಲು ಪ್ರಯತ್ನ ಪಡುತ್ತಿದ್ದ ದಿನಗಳು ಕಳೆದವು ತಂದೆ ಸಲಹೆ ಕೊಡುತ್ತಿದ್ದರು ಮಗು ಅದನ್ನು ಸ್ವೀಕರಿಸಿ ದಿನದಿಂದ ದಿನಕ್ಕೆ ಸುಧಾರಣೆ ಮಾಡುತ್ತ ಹೋದ. ಮುಂದೆ ಮಗನ ಮೂರ್ತಿಗಳು ತಂದೆಗಿಂತ ಚೆನ್ನಾಗಿ ಬರಲು ಪ್ರಾರಂಭಿಸಿದವು. ಆ ಸಮಯನೂ ಬಂತು ಜನರು ಮಗನ ಮೂರ್ತಿಗಳನ್ನು ಹೆಚ್ಚು ಹಣನೀಡಿಕೊಳ್ಳಲು ಪ್ರಾರಂಭಿಸಿದರು. ಆದರೆ ತಂದೆಯ ಮೂರ್ತಿಗಳು ಅವರ ಹಳೇಯ ಬೆಲೆಯಲ್ಲೇ ಮಾರಾಟ ವಾಗುತ್ತಿದ್ದವು. ಈಗಲೂ ತಂದೆ ಮಗನ ಮೂರ್ತಿಯಲ್ಲಿ ದೋಷಗಳನ್ನು ಹುಡುಕುತ್ತಿದ್ದರು. ಆದರೆ ಅದು ಈಗ ಆ ಮಗನಿಗೆ ಇಷ್ಟವಾಗುತ್ತಿರಲಿಲ್ಲ. ಆದರೂ ಒಲ್ಲದ ಮನಸ್ಸಿನಿಂದ ಅದನ್ನು ಕೇಳುತ್ತಿದ್ದ. ಆ ಮೂರ್ತಿಗಳಲ್ಲಿ ಸುಧಾರಣೆ ಮಾಡಿಕೊಳ್ಳುತ್ತಿದ್ದ ಆ ದಿನಾನೂ ಬಂತು ಮಗನ ಅಂತರಂಗ ಉತ್ತರ ಕೊಟ್ಟಿತು. ಅಪ್ಪ ಮಗನ ಮೂರ್ತಿಗಳಲ್ಲಿ ದೋಷಗಳನ್ನು ಹೇಳುತ್ತಿದ್ದರು. ಆದರೆ ಮಗ ಹೇಳಿದ ಅಪ್ಪಾ ನೀವೇನೂ ಹೇಳಬೇಡಿ ನೀವು ಅಷ್ಟು ದೊಡ್ಡ ಶಿಲ್ಪಿ ಅಂದು ಕೊಂಡಿದ್ದೀರಾ ನೀವು ಅಷ್ಟು ದೊಡ್ಡ ಜ್ಞಾನಿಯಾಗಿದ್ದರೆ ನಿಮ್ಮಮೂರ್ತಿಗಳು ನನ್ನ ಮೂರ್ತಿಗಳಿಗಿಂತ ಕಡಿಮೆ ಬೆಲೆಗೆ ಯಾಕೆ ಹೋಗುತ್ತಿದ್ದವು.

ಈಗ ನಿಮ್ಮ ಸಲಹೆಯ ಅನಿವಾರ್ಯ ನನಗಿಲ್ಲ ಎನಿಸುತ್ತದೆ ಅಪ್ಪಾ ನನ್ನ ಮೂರ್ತಿಗಳು ಚೆನ್ನಾಗಿವೆ ಎಂದು ಹೇಳಿಬಿಟ್ಟ. ಮಗನ ಮಾತುಗಳನ್ನು ಕೇಳಿ ಅಪ್ಪಾ ಶಾಂತನಾಗಿಬಿಟ್ಟ. ಮುಂದೆ ಮಗನ ಮೂರ್ತಿಯಲ್ಲಿನ ದೋಷಗಳನ್ನು ಹೇಳುವುದನ್ನು ನಿಲ್ಲಿಸುತ್ತಾರೆ. ಹಾಗೆಯೇ ದಿನಗಳು ಕಳೆದು ಕೆಲವುದಿನಗಳು ಮಗನಿಗೆ ನೆಮ್ಮದಿ ಎನಿಸುತ್ತದೆ ಯಾರು ಏನೂ ಹೇಳುತ್ತಿಲ್ಲವೆಂದು
ಆದರೆ ಹೀಗೀಗ ಅವನು ಮಾಡುತ್ತಿರುವ ಮೂರ್ತಿಗಳನ್ನು ಯಾರು ಹೊಗಳುತ್ತಿಲ್ಲ ಪ್ರಾರಂಭದಲ್ಲಿ ಇದ್ದಷ್ಟು ಹೊಗಳಿಕೆ ಭರವಸೆ ಈಗ ಇಲ್ಲ ನಿಧಾನವಾಗಿ ಅವನ ಮೂರ್ತಿಗಳಿಗೆ ಹೆಚ್ಚಳವಾಗುತ್ತಿದ್ದ ಬೆಲೆ ಕೂಡ ನಿಂತು ಹೋಯಿತು. ಮಗ ಈಗ ಅಪ್ಪನ ಬಳಿ ಹೋಗಿ ತನ್ನ ಸಮಸ್ಯೆ ಬಗ್ಗೆ ಕೇಳುತ್ತಾನೆ. ಅಪ್ಪ ನಿಧಾನವಾಗಿ ಎಲ್ಲವನ್ನೂ ಕೇಳುತ್ತಾರೆ. ಅವರಿಗೆ ಗೊತ್ತಿತ್ತೇನೋ ಎನ್ನುವ ರೀತಿಯಲ್ಲಿ ಕೇಳುತ್ತಾರೆ. ಇದನ್ನು ನೋಡಿದ ಮಗ ಅಪ್ಪಾ ನಿಮಗೆ ಮೊದಲೇ ಗೊತ್ತಿತ್ತಾ ಹೀಗೆ ನಡೆಯುತ್ತದೆ ಎಂದಾಗ ಅಪ್ಪಾ ಹೇಳುತ್ತಾರೆ ಹೌದು ಮಗು ಬಹಳ ವರ್ಷಗಳ ಹಿಂದೆ ನಾನೂ ಸಹ ಈ ಸಮಸ್ಯೆಗೆ ಸಂದರ್ಭಕ್ಕೆ ಸಿಲುಕಿದ್ದೆ ಎಂದು ಆಗ ಮಗ ತಂದೆಗೆ ಪ್ರಶ್ನೆ ಮಾಡುತ್ತಾರೆ.ಆಗಿದ್ದರೆ ನೀವೇಕೆ ಮೊದಲೇ ನನಗೆ ಹೇಳಲಿಲ್ಲ ಎಂದು ತನ್ನ ಅಪ್ಪನ ಉತ್ತರ ಕೇಳಿ.ಆಗ ಅಪ್ಪಾ ಹೇಳುತ್ತಾರೆ ಯಾಕೆಂದರೆ ನೀನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ನನಗೆ ಗೊತ್ತು. ನಿನ್ನಷ್ಟು ಚೆನ್ನಾಗಿ ನಾನು ಮೂರ್ತಿಗಳನ್ನು ಮಾಡುವುದಿಲ್ಲ.

ಕೆಲವೊಮ್ಮೆ ಮೂರ್ತಿಗಳ ವಿಚಾರದಲ್ಲಿ ನನ್ನ ಅಭಿಪ್ರಾಯ ತಪ್ಪಾಗಬಹುದು ಅಥವಾ ನನ್ನ ಸಲಹೆಯಿಂದಲೇ ನಿನ್ನ ಮೂರ್ತಿಗಳು ಚೆನ್ನಾಗಿ ಆಗಿರಬಹುದು ಆದರೆ ನಾನು ನಿನ್ನ ಮೂರ್ತಿಗಳಲ್ಲಿ ದೊಷಹೇಳಿದಾಗ ನೀನು ನಿನ್ನ ಮೂರ್ತಿಗಳಿಂದ ಪೂರ್ಣವಾಗಿ ತೃಪ್ತಿಯಾಗುತ್ತಿದ್ದಿಲ್ಲ ನೀನು ಮತ್ತಷ್ಟು ಕಲಿಯೋದಕ್ಕೆ ಪ್ರಯತ್ನ ಪಡುತ್ತಿದ್ದೆ ಆ ಪ್ರಯತ್ನಗಳೇ ಯಶಸ್ಸಿಗೆ ಕಾರಣವಾಗಿದ್ದವು ಆದರೆ ಯಾವಾಗ ನೀನು ನಿನ್ನ ಕೆಲಸದಲ್ಲಿ ಮಗ್ನನಾಗಿ ಸಂತೃಪ್ತಿ ಯಾಗುವ ಪ್ರಮೇಯವೇ ಇಲ್ಲ ಎಂದು ಕೊಂಡೆಯೋ ಆಗ ನಿನ್ನ ಬೆಳವಣಿಗೆ ಕೂಡ ನಿಂತುಹೋಯಿತು. ಜನರು ಯಾವಾಗಲೂ ನಿನ್ನಿಂದ ಉತ್ತಮ ವಾದದ್ದನ್ನೇ ನಿರೀಕ್ಷೆ ಮಾಡುತ್ತಾರೆ. ಅದೇ ಕಾರಣದಿಂದ ಈಗ ಯಾರು ನಿನ್ನನ್ನು ಹೊಗಳುತ್ತಿಲ್ಲ. ನಿನ್ನ ಮೂರ್ತಿಗಳು ಜಾಸ್ತಿ ಬೆಲೆಗೆ ಮಾರಾಟವಾಗುತ್ತಿಲ್ಲ ಮಗ ಸ್ವಲ್ಪ ಸಮಯ ಸುಮ್ಮನಿದ್ದ ಆಮೇಲೆ ಪ್ರಶ್ನೆ ಮಾಡಿದ ಅಪ್ಪಾ ಹಾಗಾದರೆ ನಾನು ಏನು ಮಾಡಲಿ ಎಂದು ಆಗ ಅಪ್ಪಾ ಒಂದೇ ವಾಕ್ಯದಲ್ಲಿ ಉತ್ತರ ನೀಡಿದರು ಅತೃಪ್ತಿ ಯಾಗುವುದನ್ನು ಕಲಿತುಕೋ. ಕೆಲಸ ನಿನಗೆ ಇಷ್ಟೇ ಅಂತಾ ಅನ್ನಿಸಬಾರದು ಅದನ್ನು ಇನ್ನೂ ಚೆನ್ನಾಗಿ ಮಾಡಬಹುದು ಅನ್ನೋ ಭಾವನೆ ಹುಟ್ಟಲಿ.ಈ ಭಾವನೆ ನಿನಗೆ ಎಲ್ಲರಿಗಿಂತ ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತದೆ ಆ ಹಸಿವು ನಿಮಗೆ ಎಲ್ಲವನ್ನೂ ಶ್ರೇಷ್ಠವಾಗಿ ಮಾಡಲು ಪ್ರಚೋದಿಸುತ್ತದೆ ಮಾಡುವ ಕೆಲಸದಲ್ಲಿ ಶ್ರದ್ದೆ ಹೆಚ್ಚಿಸುತ್ತದೆ ಎಲ್ಲವನ್ನೂ ಕಲಿಕೆಯಾಗಿ ನೋಡಿ ಕಲಿಕೆಗೆ ಕೊನೆಯಿಲ್ಲ ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಅಲ್ಲವೇ. ಅದರಂತೆ ನಾವು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂಬುದನ್ನು ಮರೆಯಬಾರದು

LEAVE A REPLY

Please enter your comment!
Please enter your name here