ನಿಮ್ಮ ಮನೆಯಲ್ಲಿ ಸಣ್ಣ ಮಗು ಇದ್ರೆ ತಪ್ಪದೆ ಇದನ್ನು ಪಾಲಿಸಿರಿ

63

ಚಿಕ್ಕ ಮಕ್ಕಳಿಗೆ ಸಾಬೂನಗಳನ್ನು ಯಾವಾಗ ಬಳಸಬೇಕು ಮತ್ತು ಸೋಪಿನ ಬದಲು ಬೇರೆ ಯಾವ ವಸ್ತು ಮಕ್ಕಳಿಗೆ ಉಪಯೋಗಿಸಿದರೆ ಉತ್ತಮ. ಚಿಕ್ಕ ಮಕ್ಕಳ ಚರ್ಮದ ಗುಣಮಟ್ಟವು ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಾವು ಚಿಕ್ಕ ಮಕ್ಕಳಿಗೆ ಬಳಸುವ ಸಾಬೂನು ಸುರಕ್ಷತೆ ಕೊಡುತ್ತದೆ ಅಥವಾ ಇಲ್ಲ ಎಂಬ ಅನುಮಾನದಲ್ಲಿ ಸೋಪುಗಳನ್ನು ಉಪಯೋಗಿಸುತ್ತೇವೆ. ಇಂತಹ ಸಮಯದಲ್ಲಿ ಗೊಂದಲಕ್ಕೆ ಒಳಗಾಗದೆ ಮನೆಯಲ್ಲಿ ಸಿಗುವಂತಹ ಅಥವಾ ನೈಸರ್ಗಿಕವಾಗಿ ಮನೆಯಲ್ಲಿ ತಯಾರು ಮಾಡಿಕೊಳ್ಳುವಂತಹ ಒಂದೇ ಒಂದು ವಸ್ತು ಎಂದರೆ ಕಡಲೆ ಹಿಟ್ಟು. ಇದರಿಂದ ಯಾವುದೇ ರೀತಿಯ ಬಾಹ್ಯವಾಗಿ ಸಮಸ್ಯೆ ಉಂಟು ಮಾಡುವುದಿಲ್ಲ. ಮತ್ತು ಚಿಕ್ಕ ಮಕ್ಕಳ ಚರ್ಮದ ಹೊಳಪನ್ನು ಹೆಚ್ಚಿಸಲು ಈ ಕಡಲೆ ಹಿಟ್ಟು ಸಹಾಯ ಮಾಡುತ್ತದೆ. ಸೌಂದರ್ಯದ ವಿಷಯ ಬಂದಾಗ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿ ಆಗಿದೆ. ತಮ್ಮ ತ್ವಚೆಯ ಬಗ್ಗೆ ಕಾಳಜಿ ಹೊಂದಿರುವವರು ಸೋಪು ಮುಖಲೇಪನ ರಾಸಾಯನಿಕ ಆಧಾರಿತ ಪ್ರಸಾಧನಗಳ ಬದಲು ಸುರಕ್ಷಿತವಾದ ಮನೆಮದ್ದುಗಳನ್ನೇ ಹೆಚ್ಚಾಗಿ ಇಷ್ಟ ಪಡುತ್ತಾರೆ. ಇದರಲ್ಲಿ ಕಡಲೆ ಹಿಟ್ಟು ಪ್ರಮುಖವಾಗಿದೆ. ರಾಸಾಯನಿಕ ಸೋಪುಗಳ ಬಳಕೆಗಳ ಪ್ರಭಾವದಿಂದ ಮುಖ ಮತ್ತು ದೇಹದ ಸ್ವಚ್ಛವಾದಂತೆ ಅನ್ನಿಸಿದರೂ ಇದು

ಪರಿಪೂರ್ಣ ಸುರಕ್ಷಿತ ಎನ್ನಿಸುವುದಿಲ್ಲ. ಏಕೆಂದರೆ ಚರ್ಮಕ್ಕೆ ಚಿಕ್ಕ ಪ್ರಮಾಣದಲ್ಲಿ ಆದರೂ ಒಂದಾದರೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ರಾಸಾಯನಿಕ ವಸ್ತುಗಳ ಬದಲಾಗಿ ಸಂಪೂರ್ಣವಾಗಿ ಸುರಕ್ಷಿತವಾಗಿ ಮತ್ತು ಸುಲಭವಾಗಿ ಲಭ್ಯವಿರುವ ಕಡಲೆ ಹಿಟ್ಟನ್ನು ಮುಖದ ಚರ್ಮದ ಆರೈಕೆಗೆ ಮತ್ತು ದೇಹದ ಆರೈಕೆಗೆ ಬಳಸಿದರೆ ರಾಸಾಯನಿಕಗಳಿಗಿಂತ ಉತ್ತಮ ಪರಿಣಾಮವನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿ ಸಾವಿರಾರು ಸಿಗುವ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡದೇ ಹೆಚ್ಚಿನ ಹಣವನ್ನು ಖರ್ಚು ಮಾಡದೇ ಮನೆಯಲ್ಲಿ ಸುಲಭವಾಗಿ, ನೈಸರ್ಗಿಕವಾಗಿ ಅಗ್ಗವಾಗಿ ಸಿಗುವ ಕಡಲೆ ಹಿಟ್ಟನ್ನು ಮನೆಮದ್ದು ಆಗಿ ಬಳಸಬೇಕು. ಇದರಿಂದ ಚರ್ಮದ ಅಂದವನ್ನು ಹೆಚ್ಚಿಸುವುದರ ಜೊತೆಗೆ ಚರ್ಮದಲ್ಲಿ ಉಂಟಾಗುವ ಅಲರ್ಜಿ ತುರಿಕೆ ಮತ್ತು ಉರಿಗಳಿಂದ ತಪ್ಪಿಸಿಕೊಳ್ಳಬಹುದು. ನಮಗೆ ಗೊತ್ತಿರುವ ಹಾಗೆ ಹಿಂದಿನ ಕಾಲದ ಜನರು ಸೋಪನ್ನು ಉಪಯೋಗಿಸುತ್ತಿರಲಿಲ್ಲ. ಸೋಪನ್ನು ಕಂಡು ಹಿಡಿದು ನೂರು ವರ್ಷಗಳಾಯಿತು. ಆದ್ದರಿಂದ ಹಿಂದಿನ ಕಾಲದಲ್ಲಿ ಜನರು ಚಿಕ್ಕ ಮಕ್ಕಳಿಗೆ ಕಡಲೆ ಹಿಟ್ಟನ್ನು ಮನೆಯಲ್ಲಿ

ತಯಾರಿಸಿ ಕುಟ್ಟಿ ಪುಡಿ ಮಾಡಿ ಬಳಸುತ್ತಿದ್ದರು. ಈ ಲೇಖನದಲ್ಲಿ ಹೇಳುವುದೆಂದರೆ ಸೋಪನ್ನು ಕೂಡ ಬಳಸಬಹುದು. ಆದರೆ ನೈಸರ್ಗಿಕವಾಗಿ ಕಡಲೆ ಹಿಟ್ಟನ್ನು ಬಳಸುವುದು ಚಿಕ್ಕ ಮಕ್ಕಳಿಗೆ ತುಂಬಾ ಒಳ್ಳೆಯದು. ಮತ್ತು ದೊಡ್ಡವರು ಕೂಡ ಕಡಲೆ ಹಿಟ್ಟನ್ನು ಲೇಪನವಾಗಿ ಬಳಸಬಹುದು.ಈ ಕಡಲೆ ಹಿಟ್ಟನ್ನು ಯಾವ ಸಮಯದಲ್ಲೂ ಯಾವ ಕಾಲದಲ್ಲಿಯೂ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕಡಲೆ ಹಿಟ್ಟನ್ನು ಬಳಸುವುದರಿಂದ ಚರ್ಮಕ್ಕೆ ವಿವಿಧ ರೀತಿಯ ಲಾಭಗಳು ದೊರೆಯುತ್ತವೆ. ಅವುಗಳೆಂದರೆ ಹೆಚ್ಚು ಬಿಸಿಲು ಮುಖದ ಮೇಲೆ ಬಿದ್ದು ಮುಖವೂ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಡಲೆ ಹಿಟ್ಟಿನ ಲೇಪನವನ್ನು ಮುಖಕ್ಕೆ ಹಚ್ಚುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮತ್ತು ಕಡಲೆ ಹಿಟ್ಟು ಸತ್ತ ಜೀವಕೋಶಗಳನ್ನು ಮುಖದ ಮೇಲಿಂದ ಕಳಚಿ ಬೀಳುವಂತೆ ಮಾಡುತ್ತದೆ. ಕಡಲೆ ಹಿಟ್ಟನ್ನು ಬಳಸುವುದರಿಂದ ಮುಖದ ಮೇಲೆ ಉಂಟಾಗುವ ಕಲೆ ಗಾಳನ್ನು ಮೊಡವೆಗಳನ್ನು ನಿವಾರಿಸುತ್ತದೆ. ಮತ್ತು ಮುಖದ ಬಣ್ಣ ಮೊದಲಿನ ಸಹಜವರ್ಣಕ್ಕೆ ಬರಲು ಕಡಲೆ ಹಿಟ್ಟಿನ ಲೇಪನ ಸಹಾಯ ಮಾಡುತ್ತದೆ. ಈ ಕಡಲೆ ಹಿಟ್ಟಿನ ಮಹತ್ವ ಮತ್ತು ಲಾಭಗಳು ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here