ನೀವು ಕೆಂಪು ಅಕ್ಕಿ ತಿಂದರೆ ಹತ್ತಾರು ಲಾಭ ಪಡೆಯುತ್ತೀರಿ

123

ಕೆಂಪ್ಪಕ್ಕಿ ಆರೋಗ್ಯಕರ ಲಾಭಗಳು. ಮತ್ತು ಬಿಳಿ ಅನ್ನಕಿಂತ ಕೆಂಪಕ್ಕಿ ಅನ್ನ ರುಚಿಗೆ ಕಾರಣವೇನು. ನಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಅಕ್ಕಿ ಸಿಗುತ್ತದೆ. ಅದರಲ್ಲಿ ಬಿಳಿಅಕ್ಕಿ ಕೆಂಪುಅಕ್ಕಿ ಮತ್ತು ಕಪ್ಪುಅಕ್ಕಿ ಕೂಡ ದೊರೆಯುತ್ತದೆ. ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿ ದೇಹಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ಹೆಚ್ಚಾಗಿ ಪ್ರೊಟೀನ್ ಥೈಯಮಿನ್ ಕ್ಯಾಲ್ಸಿಯಂ ಪೊಟ್ಯಾಷಿಯಂ ಮ್ಯಾಂಗ್ನಿಷಿಯಂ ಫೈಬರ್ ಐರನ್ ವಿಟಮಿನ್ಬ್ ಎಲ್ಲ ರೀತಿಯ ಪೌಷ್ಟಿಕಾಂಶಗಳು ಇರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಯಾಕೆ ತುಂಬಾ ರುಚಿಯಾಗಿರುತ್ತದೆ ಎಂದರೆ ಇದರಲ್ಲಿ ಯಾವುದೇ ರೀತಿಯ ನ್ಯೂಟ್ರಿಷನ್ ಬದಲಾವಣೆ ಆಗುವುದಿಲ್ಲ. ಬದಲಾಗಿ ಇದರಲ್ಲಿ ಅಡಗಿರುವ ಎಲ್ಲ ನ್ಯೂಟ್ರಿಷನ್ ಸಿಗುತ್ತವೆ. ಆದರೆ ಬಿಳಿಅಕ್ಕಿ ಹಾಗೆ ಇರುವುದಿಲ್ಲ. ಏಕೆಂದರೆ ಬಿಳಿ ಅಕ್ಕಿಯಲ್ಲಿ ಇರುವ ಎಲ್ಲ ಪೌಷ್ಟಿಕಾಂಶಗಳು ನಷ್ಟವಾಗುತ್ತದೆ. ಏಕೆಂದರೆ ಈ ಬಿಳಿ ಅಕ್ಕಿಯನ್ನು ಪಾಲಿಷಿಂಗ್ ಮಾಡಿರುತ್ತದೆ. ಮುಂತಾದ ಕ್ರಿಯೆಗಳಿಗೆ ಒಳಪಡಿಸಿರುತ್ತಾರೆ. ಆದ್ದರಿಂದ ಇದರಲ್ಲಿ ಇರುವ ಎಲ್ಲ ಪೌಷ್ಟಿಕಾಂಶಗಳು ನಷ್ಟವಾಗಿ ಹೋಗಿರುತ್ತದೆ. ಬಿಳಿ ಅಕ್ಕಿಗೆ ಹೋಲಿಸಿದಾಗ ಈ ಕೆಂಪು ಅಕ್ಕಿಯಲ್ಲಿ

ಫೈಬರ್ ಐರನ್ ವಿಟಮಿನ್ಸ್ ಇರುತ್ತದೆ. ಆದರೆ ಬಿಳಿ ಅಕ್ಕಿಯಲ್ಲಿ ಯಾವುದೇ ನ್ಯೂಟ್ರಿಷನ್ ಇರುವುದಿಲ್ಲ. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಹೆಚ್ಚಿಸುತ್ತದೆ. ಮತ್ತು ಇನ್ನಿತರ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ ಈ ಬಿಳಿ ಅಕ್ಕಿ. ಆದರೆ ಕೆಂಪಕ್ಕಿ ಹಾಗೇ ಇರುವುದಿಲ್ಲ. ಹಾಗಾದರೆ ಇದರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ಸಿಲೇನಿಯಮ್ ಎಂಬುದು ಒಂದು ಪೌಷ್ಟಿಕಾಂಶ. ಇದು ಹೃದಯ ಸಂಭಂದಿಸಿದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಒಂದು ಆಂಟಿ ಏಜಿಂಗ್ ರೀತಿಯಲ್ಲಿ ಕಾರ್ಯವನ್ನು ಮಾಡುತ್ತದೆ. ಇದು ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ನೋಡಿಕೊಳ್ಳುತ್ತದೆ. ಮತ್ತು ಮಧುಮೇಹ ರೋಗಿಗಳಿಗೆ ಇದು ಒಂದು ಒಳ್ಳೆಯ ಆಹಾರವಾಗಿದೆ. ಆದ್ದರಿಂದ ಬಿಳಿ ಅನ್ನವನ್ನು ಸೇವಿಸುವುದಕಿಂತ ಹೆಚ್ಚಾಗಿ ಬ್ರೌನ್ ರೈಸ್ ಸೇವನೆ ಮಾಡಬೇಕು. ಬ್ರೌನ್ ರೈಸ್ ಇದು ದೇಹದಲ್ಲಿ ಸಕ್ಕರೆ ಅಂಶವನ್ನು ನಿಧಾನವಾಗಿ ಸೇರಿಸುತ್ತದೆ. ಆದ್ದರಿಂದ ಇದನ್ನು ಲೋ ಗ್ಲಾಸಮಿಕ್ ಲೋಡೆಡ್ ಫುಡ್ ಎಂದು ಕರೆಯುತ್ತಾರೆ. ಮತ್ತು ರಕ್ತದೊತ್ತಡ ಇರುವವರು ತಮ್ಮ ಆಹಾರದಲ್ಲಿ ಈ ಬ್ರೌನ್ ರೈಸ್ ಸೇರಿಸಿ ಕೊಳ್ಳಬೇಕು. ಮತ್ತು ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬ್ರೌನ್ ರೈಸ್ ನಲ್ಲಿ ಆಂಟಿ

ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ಫ್ರೀ ರಾಡಿಕಲ್ಸ್ ಕಡಿಮೆ ಮಾಡುತ್ತದೆ. ಚರ್ಮದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇನ್ನು ಓಬಿಸಿಟಿ ಸಮಸ್ಯೆ ಇರುವವರು ಮತ್ತು ಹೆಚ್ಚಾಗಿ ದೇಹದ ತೂಕವನ್ನು ಹೊಂದಿರುವವರು ಈ ಬ್ರೌನ್ ರೈಸ್ ತಿನ್ನುವುದರಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. ಮತ್ತೆ ಜೊತೆಗೆ ವ್ಯಾಯಾಮವನ್ನು ಮಾಡಬೇಕು. ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಕೆಂಪಕ್ಕಿಲಿರುವ ಮ್ಯಾಂಗನೀಸ್ ಮತ್ತು ಮ್ಯಾಂಗ್ನೀಶಿಯಮ್ ಅಂಶವು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ನರಕೋಶ ಮತ್ತು ನರಮಂಡಲವನ್ನು ಆರೋಗ್ಯವಾಗಿರಲು ಕೆಂಪಕ್ಕಿ ಸಹಾಯ ಮಾಡುತ್ತದೆ. ನಮ್ಮ ದೇಹಕ್ಕೆ ಮ್ಯಾಂಗನೀಸ್ ಮತ್ತು ಮ್ಯಾಂಗ್ನಿಷಿಯಂ ಅಂಶ ಅವಶ್ಯಕವಾಗಿರುತ್ತದೆ. ಆದ್ದರಿಂದ ಇದು ಆಂಟಿ ಡಿಫ್ರೇಶನ್ ರೀತಿಯಲ್ಲಿ ಸಹಾಯ ಮಾಡುತ್ತದೆ. ಮತ್ತು ಮೆದುಳಿನ ಚಟುವಟಿಕೆಗಳನ್ನು ಚೆನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ. ಈ ಕೆಂಪಕ್ಕಿಯನ್ನು ಎಲ್ಲರೂ ಉಪಯೋಗಿಸಬಹುದು. ಅಂದರೆ ಕಫ, ವಾತ, ಪಿತ್ತ ಎಲ್ಲ ಪ್ರವೃತ್ತಿ ಉಳ್ಳವರು ಇದನ್ನು ಸೇವಿಸಬಹುದು. ಕೆಂಪಕ್ಕಿ ಬೇಗ ಬೇಯುವುದಿಲ್ಲ ಎಂದು ಕೆಲವರು ನಿರ್ಲಕ್ಷ ಮಾಡುತ್ತಾರೆ. ಆದರೆ ಇದನ್ನು ಮಾಡುವ ಮುನ್ನ ನಾಲ್ಕೈದು ಗಂಟೆಗಳ ಕಾಲ ನೆನೆಸಿಟ್ಟು ನಂತರ ಉಪಯೋಗಿಸಬೇಕು. ಈ ಕೆಂಪಕ್ಕಿ ಲಾಭಗಳು ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here