ನೀವು ಪ್ರತಿ ದಿನ ಕಾಫೀ ಟೀ ಕುಡಿಯುವ ಅಭ್ಯಾಸ ಇದ್ರೆ ಇದನ್ನು ಪಾಲಿಸಿ

64

ಕಾಫೀ ಟೀ ಎಂದ ತಕ್ಷಣ ಕೆಲವರಿಗೆ ಬೆಳಗಾಗುವುದೇ ಕಾಫೀ ಯಿಂದ. ಕಾಫೀ ಟೀಯನ್ನು ಕುಡಿದರೆ ಏನೆಲ್ಲಾ ಒಳ್ಳೆಯದು ಮತ್ತು ಕೆಟ್ಟದು ಆಗುತ್ತೆ ಎಂದು ತಿಳಿಯೋಣ. ಕಾಫೀ ಟೀ ಎಂದರೆ ಸಾಕು ಸ್ನೇಹಿತರೆ ಮಲಗಿರುವವರು ಎದ್ದು ನಿಂತು ಒಂದೇ ಕಾಲಿನಲ್ಲಿ ಕುಡಿಯುವವರು ಇದ್ದಾರೆ. ಯಾಕೆ ಈ ಕಾಫೀ ಟೀ ಅಂದರೆ ಕೆಲವರಿಗೆ ತುಂಬಾ ಇಷ್ಟವಾಗುತ್ತದೆ ಎಂದು ತಿಳಿಯೋಣ. ಹಾಗಾದರೆ ನೀವು ಕಾಫೀ ಟೀ ಪ್ರಿಯರಾಗಿದ್ದರೆ ಈ ಮಾಹಿತಿಯನ್ನು ತಪ್ಪದೆ ಓದಲು ಮರೆಯಬೇಡಿ. ಕಾಫೀ ಟೀ ಕುಡಿಯುವುದರಿಂದ ನಿದ್ರೆ ಹೋಗುತ್ತದೆ. ಇದು ಹಗಲಿನ ವೇಳೆಯಲ್ಲಿ ಕೆಲಸವನ್ನು ಮಾಡಲು ಪ್ರೇರೇಪಿಸುತ್ತದೆ. ಇನ್ನು ಕಾಫೀ ಟೀ ಕುಡಿಯುವುದರಿಂದ ಕೆಲವರು ತುಂಬಾ ಫ್ರೆಶ್ ಫೀಲ್ ಮಾಡುತ್ತಾರೆ. ಮತ್ತು ತಲೆಯು ಕೆಲಸದ ವಿಷಯದಲ್ಲಿ ತುಂಬಾ ಚುರುಕಾಗಿ ಕೆಲಸವನ್ನು ಮಾಡುವಂತೆ ಸಹಾಯ ಮಾಡುತ್ತದೆ. ಕೆಲವು ಜನರಿಗೆ ಕಾಫೀ ಟೀ ಕುಡಿಯುವುದರಿಂದ ಉತ್ತಮವಾದ ಲಾಭಗಳು ದೊರೆಯುತ್ತವೆ. ಆದರೆ ಇನ್ನೂ ಕೆಲವರಿಗೆ ಕಾಫೀ ಟೀ ಕುಡಿಯುವುದರಿಂದ ದೇಹದಲ್ಲಿ ಉಷ್ಣ ಮತ್ತು ಪಿತ್ತ ಹೆಚ್ಚಾಗುತ್ತದೆ. ಹೀಗೆ ಕೂಡ ಕೆಲವು ಜನರು ಹೇಳುತ್ತಾರೆ. ಹಾಗಾದರೆ ಈ ಕಾಫೀ ಟೀಯನ್ನು ಕುಡಿಯುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಆಗುತ್ತದೆ. ಎಂದು

ತಿಳಿಯೋಣ. ಕಾಫೀ ಟೀ ಕುಡಿಯುವುದರಿಂದ ನಮ್ಮ ಮೆದುಳನ್ನು ಚುರುಕು ಮಾಡುತ್ತದೆ. ಮತ್ತು ನಮ್ಮ ಸಮಯ ಪ್ರತಿಕ್ರಿಯೆ ಸ್ಮರಣೆ ಮುಂಜಾಗ್ರತೆ ಮತ್ತು ಅರಿವಿನ ಕೆಲಸವನ್ನು ಮಾಡುತ್ತದೆ. ಇನ್ನು ಕೆಲವರಿಗೆ ಕಾಫೀ ಟೀ ತಲೆನೋವಿಗೆ ಮನೆಮದ್ದು ಇದ್ದ ಹಾಗೆ. ಕಾಫೀ ಟೀ ಕುಡಿಯುವುದರಿಂದ ಕೆಲವರಿಗೆ ತಕ್ಷಣವೇ ತಲೆನೋವು ಮಾಯವಾಗುತ್ತದೆ. ಕಾಫೀ ನಲ್ಲಿ ಇರುವ ಕಾಫಿನ್ ಎಂಬ ಅಂಶ ದೇಹದಲ್ಲಿ ಇರುವ ಕೊಬ್ಬನ್ನು ಕಡಿಮೆಗೊಳಿಸುತ್ತದೆ. ಮತ್ತು ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕಾಫೀ ಟೀ ಊಟ ಮಾಡಿದ ನಂತರ ಕುಡಿಯಬಾರದು. ಕಾಫೀ ಟೀ ಇಂದ ತುಂಬಾ ಲಾಭಗಳಿವೆ. ಹಾಗೆ ಇವುಗಳನ್ನು ಕುಡಿಯುವದರಿಂದ ಅಷ್ಟೇ ದೇಹಕ್ಕೆ ನಷ್ಟವಿದೆ. ಅದು ಯಾವುದೆಂದು ತಿಳಿಯೋಣ ಬನ್ನಿ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವವರಿಗೆ ಇದು ತಿಳಿದಿರಲಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫೀ ಕುಡಿಯುವ ಅಭ್ಯಾಸ ಕೆಲವು ಜನರಿಗೆ ಇರುತ್ತದೆ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ

ಬೀರುತ್ತದೆ. ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ರಾಸಾಯನಿಕ ಅಮ್ಲಗಳಲ್ಲಿ ಏರುಪೇರು ಉಂಟಾಗುತ್ತದೆ. ನಿರಂತರವಾಗಿ ಹೀಗೆ ಮಾಡುವುದರಿಂದ ಅಸಿಡಿಟಿ ಆಗುವ ಸಾಧ್ಯತೆ ಇರುತ್ತದೆ. ಮುಂಜಾನೆ ಎದ್ದು ಚಹಾ ಕುಡಿಯುವುದರಿಂದ ಮಲಬದ್ಧತೆ ಉಂಟಾಗುವ ಲಕ್ಷಣಗಳು ಕಂಡು ಬರುತ್ತವೆ. ಟೀ ನಲ್ಲಿ ಇರುವ ಟಿಯೋಫೀಲಿನ್ ಎಂಬ ಅಂಶ ಇದು ಮಲವನ್ನು ಗಟ್ಟಿ ಮಾಡುತ್ತದೆ. ಬೆಳಿಗ್ಗೆ ಎಂದು ಟೀ ಕುಡಿಯುವುದರಿಂದ ದೇಹವು ಇತರೆ ಪೋಷಕಾಂಶಗಳನ್ನು ಹೀರಿಕೊಳ್ಳಲುವುದನ್ನು ತಡೆಯುತ್ತದೆ. ಟೀ ಅಲ್ಲಿ ನಿಕೋಟಿನ್ ಎಂಬ ಮಾದರಿಯ ಅಂಶಗಳು ಹೆಚ್ಚಾಗಿ ಇರುತ್ತದೆ. ಇದು ಅಡಿಕ್ಷನ್ ಗೆ ಕಾರಣವಾಗಬಹುದು. ಪ್ರತಿಯೊಂದು ಆಹಾರ ಪದಾರ್ಥಗಳು ಪಾನೀಯಗಳು ತಮ್ಮದೇ ಆದ ಪ್ರಯೋಜನಗಳು ಮತ್ತು ಹಾನಿಯನ್ನು ಹೊಂದಿರುತ್ತವೆ. ಇದನ್ನು ಮನುಷ್ಯ ಅರಿತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದ ಟೀ ಮತ್ತು ಕಾಫೀ ಬೆಳಿಗ್ಗೆ ಕುಡಿಯುವುದನ್ನು ನಿಲ್ಲಿಸಿ ಊಟ ಮಾಡುವ ಮುನ್ನವೆ ಕಾಫೀ, ಟೀ ಕುಡಿದು ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

LEAVE A REPLY

Please enter your comment!
Please enter your name here