ನೂರು ರೋಗ ತಡೆಯುವ ಸೂಪರ್ ಮೊರಿಂಗ ತಿನ್ನಿ

33

ನಿಮ್ಮ ಆರೋಗ್ಯಕ್ಕೆ ಬೇಕೆ ಬೇಕು ಈ ಸೂಪರ್ ಆಹಾರಗಳು. ನಿಮಗೆ ಸೂಪರ್ ಆಹಾರಗಳ ಬಗ್ಗೆ ಗೊತ್ತಾ ಪ್ರಕೃತಿ ಕೊಟ್ಟಿರುವ ಈ ಅದ್ಭುತ ಆಹಾರಗಳು ಮನುಷ್ಯನಿಗೆ ಬೇಕಿರುವ ಎಲ್ಲಾ ಲವಣ ವಿಟಮಿನ್ ಅಂಶಗಳನ್ನು ಕೊಡುತ್ತವೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು ಈ ಸೂಪರ್ ಆಹಾರಗಳು ಹೇಗೆ ಎಂದರೆ ನೀವು ಒಂದು ಕೆಜಿ ತರಕಾರಿ ತಿನ್ನವುದು ಒಂದೇ ಈ ಸೂಪರ್ ಆಹಾರ ಸ್ವಲ್ಪ ತಿನ್ನುವುದು ಒಂದೇ ಅನ್ನುವ ಹಾಗಾಗಿದೆ ಹೀಗಿದ್ದ ಮೇಲೆ ಈ ಸೂಪರ್ ಆಹಾರಗಳ ಬಗ್ಗೆ ತಿಳಿಯಲೇ ಬೇಕು ದಿನ ನಿತ್ಯ ನಿಮ್ಮ ಕಣ್ಣೆದುರಿಗೆ ಇದ್ದರೂ ಅದನ್ನು ಎಷ್ಟೋ ಜನ ಉದಾಸೀನ ಮಾಡಿದ್ದೀರಿ ಆದರೆ ಈ ಆಹಾರ ಇವತ್ತು ಜಗತ್ತಿನಾದ್ಯಂತ ಮಾತ್ರೆಗಳ ರೂಪದಲ್ಲಿ ಮಾರಾಟ ಆಗುತ್ತಿದೆ ಎಂದರೆ ಆಶ್ಚರ್ಯ ಆಗುತ್ತೆ ಇಂತಹ ಸೂಪರ್ ಆಹಾರದ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಜಗತ್ತು ಫಾಸ್ಟ್ ಫುಡ್ ಕಾಲ ಮುಗಿಸಿಕೊಂಡು ಸೂಪರ್ ಆಹಾರ ಕಾಲಕ್ಕೆ ಬಂದು ನಿಂತಿದೆ ಇವತ್ತು ಜಗತ್ತಿನಾದ್ಯಂತ ಮಾತ್ರೆಗಳ ರೂಪದಲ್ಲಿ ಮನುಷ್ಯ ಆಹಾರ ತೆಗೆದುಕೊಳ್ಳಲು ಶುರು ಮಾಡಿದ್ದಾನೆ ಏನಪ್ಪಾ ಮತ್ತೆ ತಿಂದರೆ ಹೊಟ್ಟೆ ತುಂಬುತ್ತಾ ಎಂದು ಕೊಳ್ಳಬೇಡಿ ಮಾತ್ರೆ ಹೊಟ್ಟೆ ತುಂಬಿಸದೇ ಇದ್ದರೂ ಎಲ್ಲಾ ಲವಣ ಅಂಶಗಳನ್ನು ಪೋಷಕಾಂಶ ಕೊಡುತ್ತದೆ ಅಂತಹ ಸೂಪರ್ ಆಹಾರಗಳಲ್ಲಿ ಒಂದು ಮೋರಿಂಗ ಓಲಿಫೆರ ಇದ್ಯವುದಾಪ್ಪ ವಿದೇಶಿ ಆಹಾರ ಅದೆಲ್ಲಿ ಸಿಗುತ್ತೆ ಎನ್ನುತ್ತೀರಾ ಇದು ನಮ್ಮದೇ ನೆಲದಲ್ಲಿ ಹುಟ್ಟಿರುವ ಅತ್ಯದ್ಬುತ ಆಹಾರ ಇದು ನಾವು ಬಳಸುವ ನುಗ್ಗೆ ಸೊಪ್ಪು. ಭಾರತದಲ್ಲಿ ಈ ಗಿಡ ಹೆಚ್ಚು ಬೆಳೆಯಲಾಗುತ್ತದೆ ಈ ಗಿಡಕ್ಕೆ ಮೊರಿಂಗ ಅಂತ ಹೆಸರು ಬಂದಿರುವುದಕ್ಕೆ ತಮಿಳು ಭಾಷೆ ಕಾರಣ ಎಂದು ಹೇಳುತ್ತಾರೆ ಏಕೆಂದರೆ ತಮಿಳಿನಲ್ಲಿ ಇದನ್ನು ಮೂರಂಗಕ್ಕ ಎಂದು ಹೇಳುತ್ತಾರೆ.

ಈ ಸೊಪ್ಪು ಸೋಂಕು ನಿವಾರಕ ಆಗಿಯೂ ಕಾರ್ಯ ನಿರ್ವಹಿಸುತ್ತದೆ ನುಗ್ಗೆ ಸೊಪ್ಪು ಇವತ್ತು ಜಗತ್ತಿನಲ್ಲಿ ಇರುವ ಸೂಪರ್ ಫುಡ್ ಗಳಲ್ಲಿ ಒಡ್ನು ಈ ನುಗ್ಗೆ ಸೊಪ್ಪಿನಲ್ಲಿ ಅಡಗಿರುವ ಲವನಾಂಶಗಳು ಹಾಗೂ ವಿಟಮಿನ್ ಗಳು ಅದೆಷ್ಟೋ ನಿಜ ಹೇಳಬೇಕು ಅಂದರೆ 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿ 300 ಮಿಲಿ ಗ್ರಾಂ ಅಷ್ಟು ಪೊಟ್ಯಾಷಿಯಂ 147 ಮಿಲಿ ಗ್ರಾಂ ಅಷ್ಟು ಮೆಗ್ನೀಷಿಯಂ 185 ಮಿಲಿ ಗ್ರಾಂ ಅಷ್ಟು ಕ್ಯಾಲ್ಸಿಯಂ 110 ಮಿಲಿ ಗ್ರಾಂ ಅಷ್ಟು ಫಾಸ್ಪರಸ್ ಹಾಗೂ ವಿಟಮಿನ್ ಎ ಬಿ ಬಿ2 ಬಿ6 ಹಾಗೆಯೇ ವಿಟಮಿನ್ ಸಿ ಅತೀ ಹೆಚ್ಚಾಗಿ ಇರುತ್ತೆ ಹಾಗಾಗಿ ಈ ಸೊಪ್ಪನ್ನು ಸೂಪರ್ ಆಹಾರ ಎಂದು ಕರೆಯುವುದು. ಇನ್ನೂ ಸರಳವಾಗಿ ಹೇಳಬೇಕು ಅಂದರೆ ಇದರಲ್ಲಿ ಕಿತ್ತಳೆ ಗಿಂತ 6 ಪಟ್ಟು ಹೆಚ್ಚು ವಿಟಮಿನ್ ಸಿ ಇದ್ದರೆ ಹಾಲಿನಲ್ಲಿ ಇರುವುದಕ್ಕಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದೆ ಕ್ಯಾರೆಟ್ ನಲ್ಲಿ ಇರುವುದಕ್ಕಿಂತ 4 ಪಟ್ಟು ಹೆಚ್ಚಿನ ವಿಟಮಿನ್ ಎ ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ 3 ಪಟ್ಟು ಪೊಟ್ಯಾಷಿಯಂ ಇದೆ ಮೊಸರಿನಲ್ಲಿ ಇರುವುದಕ್ಕಿಂತ ಪ್ರೊಟೀನ್ ಗಿಂತಲೂ 8 ಪಟ್ಟು ಹೆಚ್ಚಿನ ಪ್ರೋಟಿನ್ ಈ ನುಗ್ಗೆ ಸೊಪ್ಪು ಹೊಂದಿದೆ ಹಾಗಿಗಿ ಈ ಸೊಪ್ಪನ್ನು ಸೂಪರ್ ಆಹಾರ ವಿಭಾಗಕ್ಕೆ ಸೇರಿಸಿರುವುದು.

LEAVE A REPLY

Please enter your comment!
Please enter your name here