ನೊಣಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಮನೆಯಲ್ಲಿ ಇದನ್ನು ಮಾಡಿರಿ

68

ನೊಣಗಳಿಂದ ಬೇಸರವೇ ಹಾಗಿದ್ದರೆ ಈ ಸಲಹೆಗಳನ್ನು ಉಪಯೋಗಿಸಿ ನೋಡಿ. ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ನೊಣಗಳ ಕಾಟ ಮಳೆಗಾಲದಲ್ಲಿ ಜಾಸ್ತಿಯೇ ಆಗಿರುತ್ತದೆ. ಎಲ್ಲಿ ನೋಡಿದರೂ ನೊಣಗಳು ಕಾಣಿಸಿಕೊಳ್ಳುತ್ತವೆ. ತಿನ್ನುವ ಆಹಾರದ ಮೇಲೆ ಬಂದು ಕುಳಿತು ಕೊಂಡಾಗ ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ. ಇಂದಿನ ಲೇಖನದಲ್ಲಿ ಈ ನೊಣಗಳನ್ನು ಹೋಗಲಾಡಿಸಲು ಕೆಲವೊಂದು ಸಲಹೆಗಳನ್ನು ತಿಳಿಸಿ ಕೊಡುತ್ತೇವೆ. ನೊಣಗಳು ಅಡುಗೆ ಮನೆಯಲ್ಲಿ ಹಾರಿ ಬಂದಾಗ ನಾವು ಮಾಡಿರುವ ಅಡುಗೆ ಮೇಲೆ ಕುಳಿತು ಕೊಳ್ಳುತ್ತವೆ. ಅದನ್ನು ತಡೆಯುವುದಕ್ಕೆ ಒಂದು ಚಿಕ್ಕ ಪಾತ್ರೆಯಲ್ಲಿ ಅರಿಶಿಣ ಪುಡಿಯನ್ನು ಹಾಕಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನೊಣಗಳು ಎಲ್ಲಿ ಕಾಣಿಸುತ್ತವೆ ಅಲ್ಲಿ ಇದನ್ನು ಸ್ಪ್ರಿಕಲ್ ಆಗಿ ಸಿಂಪಡಿಸುವುದರಿಂದ ಇದರ ವಾಸನೆಗೆ ನೊಣಗಳು ಓಡಿ ಹೋಗುತ್ತವೆ. ಜೊತೆಗೆ ಹತ್ತಿರ ಕೂಡ ಬರುವುದಿಲ್ಲ. ಇನ್ನೂ ಎರಡನೆಯದಾಗಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಪ್ರೆಶ್ ಆಗಿರುವ ಕಿತ್ತಳೆ ಹಣ್ಣಿನ ಸಿಪ್ಪೆ ತುಂಬಾ ಒಳ್ಳೆಯದು.

ಇದು ಹೆಚ್ಚು ವಾಸನೆಯುಕ್ತವಾಗಿರುತ್ತದೆ. ಈ ಸಿಪ್ಪೆಯ ವಾಸನೆಗೆ ನೊಣಗಳು ಓಡಿ ಹೋಗುತ್ತವೆ. ಈ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ನಿಮ್ಮ ಅಡುಗೆ ಮನೆಯಲ್ಲಿ ನೇತಾಕುವುದರಿಂದ ಇದರಿಂದ ನೊಣಗಳು ಓಡಿ ಹೋಗುತ್ತವೆ. ಒಂದು ನೀರಿನ ಲೋಟವನ್ನು ತೆಗೆದುಕೊಳ್ಳಿ ಅದಕ್ಕೆ ಕಾಲು ಟೇಬಲ್ ಸ್ಪೂನ್ ನಷ್ಟು ಶುಂಠಿ ಪೇಸ್ಟ್ ಅನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ ಒಂದು ಸ್ಪ್ರೇ ಬಾಟಲ್ ನಲ್ಲಿ ತುಂಬಿ ನೊಣಗಳು ಬರುವ ಜಾಗದಲ್ಲಿ ಸಿಂಪಡಣೆ ಮಾಡುವುದರಿಂದ ನೊಣಗಳು ಓಡಿ ಹೋಗುತ್ತವೆ. ಈ ಶುಂಠಿಯ ವಾಸನೆ ಕೀಟಗಳಿಗೆ ಮತ್ತು ನೊಣಗಳಿಗೆ ಆಗುವುದಿಲ್ಲ. ಆದ್ದರಿಂದ ಇದು ತುಂಬಾ ಪರಿಣಾಮಕಾರಿ. ಮೂರನೆಯದಾಗಿ ಒಂದು ಕಾಲು ಕಪ್ ನಷ್ಟೂ ವಿನೆಗರ್ ಅನ್ನು ತೆಗೆದುಕೊಳ್ಳಿ ಇದಕ್ಕೆ ಒಂದು ಚಮಚದಷ್ಟು ಲಿಕ್ವಿಡ್ ಸೋಪ್ ಅನ್ನು ಹಾಕಿಕೊಳ್ಳಿ. ಫ್ರಿಲ್ ಅಥವಾ ವಿಮ್ ಜೆಲ್ ಅನ್ನು ಬಳಕೆ ಮಾಡಬಹುದು. ಇದನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ತುಂಬಿಕೊಂಡು ನೊಣಗಳು ಬರುವ ಜಾಗದಲ್ಲಿ ಅಥವಾ ಅವುಗಳು ಬರುವ ಜಾಗದಲ್ಲಿ ಸ್ಪ್ರೇ

ಮಾಡುವುದರಿಂದ ನೊಣಗಳು ಓಡಿ ಹೋಗುತ್ತವೆ. ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ತೆಗೆದುಕೊಳ್ಳಿ. ಇದರಲ್ಲಿ ಎಸೆನ್ಷಿಯಲ್ಸ್ ಎಣ್ಣೆಯನ್ನು ಬಳಕೆ ಮಾಡಬಹುದು. ನೀವು ಲೆಮನ್ ಅನ್ನು ಬಳಸಿ. ಇದಕ್ಕೆ ಅಧಿಕ ವಾಸನೆ ಇರುವುದರಿಂದ ನೊಣಗಳು ತಕ್ಷಣವೇ ಓಡಿ ಹೋಗುತ್ತವೆ. ಈ ನೀರಿನಲ್ಲಿ ಹತ್ತು ಹನ್ನೆರಡು ಎಸೆನ್ಷಿಯಲ್ಸ್ ಎಣ್ಣೆಯನ್ನು ಹಾಕಿಕೊಳ್ಳಿ ಇದನ್ನು ಕಿಟಕಿಗಳ ಹತ್ತಿರ ನೊಣಗಳ ಜಾಗದಲ್ಲಿ ಇಡುವುದರಿಂದ ನೊಣಗಳು ಓಡಿ ಹೋಗುತ್ತವೆ. ಅರ್ಧ ಲೋಟ ನೀರಿಗೆ ಎರಡ್ಮೂರು ಒಣ ಮೆಣಸನ್ನು ಹಾಕಿಕೊಳ್ಳಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಬೇಕು. ಅಥವಾ ಬಾಟಲ್ ನಲ್ಲಿ ಹಾಕಿ ನಾಲ್ಕೈದು ದಿನಗಳ ವರೆಗೆ ಬಿಸಿಲಿಗೆ ಒಣಗಿಸಬೇಕು. ನಂತರ ಇದರ ಬಣ್ಣ ಬದಲಾಗುತ್ತದೆ. ಮೆಣಸಿನಲ್ಲಿ ಇರುವ ಗುಣಗಳು ಇದಕ್ಕೆ ಬರುತ್ತದೆ. ನೊಣಗಳು ಬಂದಿರುವ ಜಾಗಕ್ಕೆ ಸ್ಪ್ರೇ ಮಾಡುವುದರಿಂದ ನೊಣಗಳು ಓಡಿ ಹೋಗುತ್ತವೆ. ಇಲ್ಲವಾದರೆ ಮೆಣಸಿನ ಗಿಡಗಳನ್ನು ಬೆಳೆಸಬಹುದು. ಹೀಗೆ ಕೂಡ ಮಾಡುವುದರಿಂದ ನೊಣಗಳಿಂದ ಮುಕ್ತಿ ದೊರೆಯುತ್ತದೆ.

LEAVE A REPLY

Please enter your comment!
Please enter your name here