ಪಚನ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ

71

ಮಕ್ಕಳಿಗೆ ಅಥವಾ ದೊಡ್ಡವರಿಗೆ ಯಾರಿಗೆ ಆದರೂ ಬೆಳಿಗ್ಗೆ ತಿಂದಿರುವಂತಹ ಆಹಾರ ಸಂಜೆ ಆದರೂ ಕೆಲವೊಂದು ಸಲ ಜೀರ್ಣ ಆಗಿರುವುದಿಲ್ಲ ಇದಕ್ಕೆ ಕಾರಣ ಏನೆಂದರೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ ನಾವು ತಿಂದಿರುವ ಆಹಾರ ಹೊಟ್ಟೆಯಲ್ಲಿ ಜಠರಾಗ್ನಿ ಇರುತ್ತದೆ ಈ ಜಠರಾಗ್ನಿ ಮಾಂದ್ಯ ಆಗಿದ್ದೆ ಆದಲ್ಲಿ ನಾವು ತಿಂದಿರುವ ಆಹಾರ ಮೂರು ತಾಸಿನ ವರೆಗೆ ಜೀರ್ಣ ಆಗಬೇಕು ಇಲ್ಲ ಎಂದರೆ 6 ತಾಸು 12 ತಾಸು ಆದರೂ ಜೀರ್ಣ ಆಗುವುದಿಲ್ಲ ಇದಕ್ಕೆ ಕಾರಣ ಅಗ್ನಿಮಾಂದ್ಯ. ಈ ಅಗ್ನಿ ಮಾಂದ್ಯವನ್ನು ಸರಿ ಪಡಿಸಿದಾಗ ಖಂಡಿತವಾಗಿಯೂ ನಾವು ತಿಂದ ಆಹಾರ ಮೂರು ತಾಸಿನ ಒಳಗಡೆ ಜೀರ್ಣ ಆಗುತ್ತದೆ ಹಾಗಾದರೆ ನಾವು ತಿಂದ ಆಹಾರ ಮೂರು ತಾಸಿನ ಒಳಗೆ ಜೀರ್ಣ ಆಗಲು ಮನೆ ಮದ್ದು ಇದೆಯಾ ಖಂಡಿತವಾಗಿಯೂ ಇದೆ ಆ ಮನೆಮದ್ದು ಜೀರಿಗೆ ಕಷಾಯ ಈ ಜೀರಿಗೆ ಕಷಾಯವನ್ನು ಮಾಡುವುದು ಹೇಗೆ ತಿಳಿಯೋಣ ಬನ್ನಿ

ಒಂದು ಚಮಚ ಜೀರಿಗೆಯನ್ನು ಸಣ್ಣಗೆ ಜಜ್ಜಿ ಪುಡಿಮಾಡಿಕೊಂಡು ಇದನ್ನು ಎರಡು ಲೋಟ ನೀರಿಗೆ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು ಹಾಕಿ ಇದನ್ನು ಸಹ ಚೆನ್ನಾಗಿ ಕುದಿಸಿ ಅದನ್ನು ದಿನದಲ್ಲಿ ಅಂದರೆ ಬೆಳಿಗ್ಗೆ ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಕುಡಿಯುತ್ತ ಬಂದರೆ ಖಂಡಿತವಾಗಿಯೂ ಜೀರ್ಣ ಪ್ರಕ್ರಿಯೆ ಅಗ್ನಿ ವೃದ್ಧಿಯಾಗುತ್ತದೆ. ಜೀರ್ಣಕ್ರಿಯೆ ಸರಿಯಾಗುತ್ತದೆ. ಇದಕ್ಕೆ ಇನ್ನೊಂದು ಮನೆಮದ್ದು ಕೂಡ ಇದೆ ಶುಂಠಿ ಯನ್ನು ಸಂಸ್ಕ್ರುತದಲ್ಲಿ ವಿಶ್ವ ಬೆಷಜ ಎನ್ನುತ್ತಾರೆ ಬೆಷಜ ಅಂದರೆ ಔಷಧಿ ಅಂದರೆ ಅದಕ್ಕೆ ಪ್ರಾಮುಖ್ಯತೆ ವಿಶ್ವದಲ್ಲೇ ಅತ್ಯುತ್ತಮವಾದ ಶ್ರೇಷ್ಠವಾದ ಔಷಧಿ ಎಂದು ಹೇಳಬಹುದು ಶುಂಠಿಯ ಕಷಾಯವನ್ನು ಸಹ ಮಾಡಬಹುದು ಒಣ ಶುಂಠಿ ಹಸಿ ಶುಂಠಿಗೆ ಆರ್ದ್ರಕ ಎನ್ನುತ್ತಾರೆ ಒಣಶುಂಠಿಯ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ ಆ ಎರಡು ಲೋಟ ನೀರು ಒಂದು ಲೋಟ ಆಗುವವರೆಗೂ ಕುದಿಸಿ

ಆ ಕಷಾಯವನ್ನು ಬೆಳಿಗ್ಗೆ ಮಧ್ಯಾಹ್ನ ಮತ್ತು ಸಂಜೆ ಮಕ್ಕಳಾಗಲಿ ದೊಡ್ಡವರಗಲಿ ಕುಡಿದಿದ್ದೆ ಆದಲ್ಲಿ ಖಂಡಿತವಾಗಿಯೂ ಜೀರ್ಣಶಕ್ತಿ ಹೆಚ್ಚುತ್ತದೆ ಇದರಿಂದ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ ಹಾಗೇನೇ ಮಕ್ಕಳಿಗೆ ಊಟ ಮಾಡಿಸಲು ತಾಯಂದಿರು ತೊಂದರೆ ಪಡುವುದು ಸಹ ತಪ್ಪುತ್ತದೆ ಹಾಗಾಗಿ ಈ ಮನೆಮದ್ದುಗಳನ್ನು ಮಾಡಿಕೊಂಡು ಬಳಸಿನೋಡಿ ಒಂದುವೇಳೆ ಇದರಿಂದ ಏನು ಪ್ರಯೋಜನ ಆಗಲಿಲ್ಲ ಎಂದರೆ ನಿಮ್ಮ ಸಮೀಪದ ಆಯುರ್ವೇದ ಆಸ್ಪತ್ರೆಗೆ ಹೋಗಿ ಅವರು ನೋಡಿ ಅದಕ್ಕೆ ಸೂಕ್ತ ಪರಿಹಾರವನ್ನು ಕೊಡುತ್ತಾರೆ ಕೆಲವೊಮ್ಮೆ ಹೊಟ್ಟೆಯಲ್ಲಿ ಜಂತುಹುಳು ಆದರೂ ಸಹ ಜೀರ್ಣ ಆಗುವುದಿಲ್ಲ ಆಗ ಅದಕ್ಕೆ ಔಷಧಿ ಕೊಡಿಸಿರಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here