ಬೆಂಗಳೂರಿನ ಈ ಆಂಜನೇಯ ಸ್ವಾಮಿ ದೇವಾಲಯ ಮಹಿಮೆ ಅಪಾರ. ಬೆಂಗಳೂರಿನಲ್ಲಿ ಆಂಜನೇಯ ದೇವಾಲಯ ಇವೆ. ಜಯನಗರ 9 ನೆಯ ಬ್ಲಾಕ್ ನಲ್ಲಿ ರಾಗಿ ಗುಡ್ಡ ಪ್ರಸನ್ನ ಆಂಜನೇಯನ ಸುಂದರವಾದ ದೇವಾಲಯ ಇದೆ. ರಾಗಿ ಗುಡ್ಡ ಎಂದು ಏಕೆ ಹೆಸರು ಬಂತು ಎಂದು ನಿಮಗೆ ಕುತೂಹಲ ಇರಬೇಕಾಲ್ವ ಅದು ಏಕೆಂದರೆ ಐದೂವರೆ ಎಕರೆ ವಿಶಾಲ ಭೂ ಪ್ರದೇಶ ಇರುವ 58 ಅಡಿಗಳ ಎತ್ತರ ಇರುವ ಹೆಬ್ಬಂಡೆ ರಾಗಿ ಗುಡ್ಡ. ಇದಕ್ಕೆ ಈ ಹೆಸರು ಬರಲು ಕಾರಣ ಏನು ಅಂದರೆ ಹಿಂದೆ ಈ ಪ್ರದೇಶ ಪಾಳೇಗಾರ ಆಡಳಿತಕ್ಕೆ ಒಳಪಟ್ಟಿತ್ತು. ಆಗಿನ ಕಾಲದಲ್ಲಿ ರಾಘವ ರಾಗಿ ಎತ್ತೆಚ್ಚವಾಗಿ ಬೆಳೆದು ಬೆಟ್ಟದಷ್ಟು ಎತ್ತರಕ್ಕೆ ಸಂಗ್ರಹ ಆಗಿತ್ತು.
ಸಂಪ್ರದಾಯದಂತೆ ಪಾಳೇಗಾರ ನ ಸೊಸೆ ಸಮೃದ್ಧವಾಗಿ ಬೆಳೆದು ರಾಗಿಯನ್ನು ಊರ ಜನರಿಗೆ ದಾನ ಮಾಡುತ್ತಿದ್ದಳು ಆಗ ಮೂವರು ದಾಸರು ಪ್ರತ್ಯಕ್ಷ ಆಗಿ ತಮಗೂ ರಾಗಿಯನ್ನು ಭಿಕ್ಷೆ ನೀಡುವಂತೆ ಬೇಡಿಕೊಂಡರು ಸೊಸೆಯು ಮೂರು ಮರದ ತುಂಬಾ ರಾಗಿ ದಾನ ಮಾಡಲು ಮುಂದಾದಳು ಇದನ್ನು ಕಂಡು ಕೋಪಿತ ಆದ ಆಕೆಯ ಅತ್ತೆ ದಾಸರಿಗೆ ರಾಗಿ ದಾನ ಮಾಡಲು ಅಡ್ಡಿ ಮಾಡಿದಳು ಇದರಿಂದ ಬೇಸತ್ತ ಸೊಸೆ ದಾನಕ್ಕೆ ದೊರಕದ ರಾಗಿ ಇದ್ದರೆಷ್ಟು ಹೋದರೆ ಎಷ್ಟು ಎಂದು ಗುಡ್ಡ ದಷ್ಟು ಇರುವ ಈ ರಾಗಿ ಕಲ್ಲಾಗಿ ಹೋಗಲಿ ಎಂದು ಶಾಪ ಇಟ್ಟಳು ಕೂಡಲೇ ಅದು ರಾಗಿ ಗುಡ್ಡ ಆಯಿತು ದಾನ ಬೇಡಲು ಬಂದ ತ್ರಿಮೂರ್ತಿಗಳು ಕೂಡ ಹೊಂಬಣ್ಣ ರೂಪದಲ್ಲಿ ಶಿಲೆ ಆಗಿ ಹೋದರಂತೆ.
ಇಂದು ರಾಗಿ ಗುಡ್ಡದ ಕೆಳಗೆ ಬಿಡಿ ಬಿಡಿಯಾದ ದಾಸೆಯನ ಬಂಡೆ ಎಂದು ಕರೆಯಲ್ಪಡುವ ಮೂರು ಮಾನವ ಆಕೃತಿಯ ಶಿಲೆಗಳು ಕಾಣುತ್ತವೆ. ಈಗ ಈ ಶಿಲೆಗಳನ್ನು ತ್ರಿಮೂರ್ತಿಗಳ ಮೂರ್ತಿಯಾಗಿ ಪರಿವರ್ತಿಸಲಾಗಿದೆ. ಇನ್ನೂ ಇಲ್ಲಿ 1968 ರಲ್ಲಿ ಈ ಗುಡ್ಡದ ಮೇಲೆ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದರು. ದೊಡ್ಡ ದೇವಾಲಯದ ನಿರ್ಮಾಣವು ಆಗಿತ್ತು. ಆಂಜನೇಯ ದೇಗುಲದಲ್ಲಿ ದಕ್ಷಿನೇಶ್ವರ ಸ್ವಾಮಿ ಪ್ರಸನ್ನ ಸೀತಾರಾಮ ಸನ್ನಿದಿಯು ಇದೆ. ಸುಂದರ ಪರಿಸರದಲ್ಲಿ ಪುಣ್ಯ ಕುಟೀರ ಸಾಂಸ್ಕೃತಿಕ ಮಂದಿರ ಬಯಲು ರಂಗ ಮಂಟಪ ಇದ್ದು ರಾಮೋತ್ಸವ ಹಾಗೂ ಹನುಮ ಜಯಂತಿ ಸಂಧರ್ಭದಲ್ಲಿ ಇಲ್ಲಿ ಸಂಗೀತ ಆರಾಧನೆ ನಡೆಯುತ್ತದೆ. ಗುಡ್ಡದ ತಪ್ಪಲಿನಲ್ಲಿ ಶ್ರೀ ಮಹಾ ಗಣಪತಿ ಶ್ರೀ ರಾಜರಾಜೇಶ್ವರಿ ಹಾಗೂ ನವ ಗ್ರಹಗಳ ಸುಂದರ ದೇವಾಲಯ ಸಹಾ ಇದೆ.
ಪುಷ್ಕರಿಣಿ ಎಂದೇ ಕರೆಯಲಾಗುವ ಕಲ್ಯಾಣಿ ಗೋಶಾಲೆ ಕೂಡ ಇಲ್ಲಿದೆ. ಗುಡ್ಡವನ್ನು ಏರಲು ಅಮೃತ ಶಿಲೆಯ 108 ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ನೀವು ಸಹ ಒಮ್ಮೆಯಾದರೂ ನೋಡಲೇಬೇಕಾದ ಅಪರೂಪದ ವಿಶಿಷ್ಟ ದೇವಾಲಯ ಇದಾಗಿದ್ದು ನೀವು ಸಹ ಖಂಡಿತ ಭೇಟಿ ನೀಡಿ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದಕ್ಕೆ ಭಾಜನ ಆಗುವುದನ್ನು ಮರೆಯದಿರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಹತ್ತಾರು ಸಮಸ್ಯೆಗಳಿಗೆ ಶೀರ್ಘ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರ ಆಗಲಿದೆ.