ಇಡೀ ವಿಶ್ವಾಸವೇ ಚೀನಾ ಸೋಂಕಿನಿಂದ ಲಕ್ ಡೌನ್ ಆಗಿ ಕುಳಿತಿದೆ ಜನರು ಮನೆಯಲ್ಲಿಯೇ ಇದ್ದಾರೆ ಎಲ್ಲ ಪ್ರಸಿದ್ದ ನಗರಗಳು ಬಿಕೋ ಎನ್ನುತ್ತಾ ಇದೆ. ಯಾವ ರಸ್ತೆ ನೋಡಿದರು ಸಹ ಖಾಲಿ ಖಾಲಿ ನಮ್ಮ ಬೆಂಗಳೂರು ನಗರ ಅಂದ್ರೆ ಅದು ಟ್ರಾಫಿಕ್ ಗೆ ಸುಪ್ರಸಿದ್ದ ರಾತ್ರಿ ೧೨ ತಾಸಿಗೆ ಹೋದರು ಸಹ ಟ್ರಾಫಿಕ್ ಇದ್ದಂತಹ ರಸ್ತೆಗಳು ಸಹ ಖಾಲಿ ಖಾಲಿ ಆಗಿದೆ. ಎಲ್ಲ ಕಂಪನಿಗಳು ತಮ್ಮ ನೌಕರಿ ಮಾಡುತ್ತಾ ಇರೋ ಜನಕ್ಕೆ ರಜೆ ನೀಡಿದೆ ಮತ್ತಷ್ಟು ಕಂಪನಿಗಳು ವರ್ಕ್ ಫ್ರಮ್ ಹೋಂ ನೀಡಿದೆ. ಇಡೀ ದೇಶವೇ ಲಾಕ್ ಡೌನ್ ಆದರು ಸಹ ಕೆಲವು ವಲಯಗಳಿಗೆ ರಜೆ ಘೋಷಣೆ ಮಾಡಿಲ್ಲ ಸರ್ಕಾರ ಏಕೆಂದರೆ ಅವರು ಕೆಲಸ ಮಾಡಿಲ್ಲ ಅಂದ್ರೆ ನಾವು ಉಳಿಯಲು ಸಾಧ್ಯವೇ ಇಲ್ಲ. ಉದಾಹರಣೆಗೆ ಪೋಲಿಸ್, ಆಸ್ಪತ್ರೆ ಸಿಬ್ಬಂಧಿ ವೈದ್ಯರು ಮತ್ತು ಪೌರ ಕಾರ್ಮಿಕರು ಸದ್ಯಕ್ಕೆ ಈ ಇಷ್ಟು ಜನ ಹಗಲು ರಾತ್ರಿ ಎನ್ನುತ್ತಾ ಕೆಲಸ ಮಾಡುತ್ತಾ ತಮ್ಮ ಜೀವನವನ್ನೇ ನಮಗಾಗಿ ಶ್ರಮಿಸುತ್ತಾ ಇದ್ದಾರೆ.
ಇತ್ತೇಚೆಗೆ ಮಾನ್ಯ ಪ್ರಧಾನಿಗಳು ಈ ಮೂರೂ ವಲಯದಲ್ಲಿ ಕೆಲಸ ಮಾಡುತ್ತಾ ಇರೋ ಜನಕ್ಕೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನೀಡಿದ್ದು ನಿಮಗೆ ತಿಳಿದ ವಿಚಾರ ಹಾಗೆಯೇ ಮಾನ್ಯ ಪ್ರಧಾನಿಗಳು ಪೌರ ಕಾರ್ಮಿಕರ ಕಾಲು ತೊಳೆದು ಇಡೀ ದೇಶಕ್ಕೆ ಮಾದರಿ ಆಗಿದ್ದರು. ಪೌರ ಕಾರ್ಮಿಕರ ಸೇವನೆ ಕೊಂಡಾಡಿದ್ದರು. ಅದು ಅಕ್ಷರಸಹ ಸತ್ಯ ಏಕೆಂದರೆ ಪೌರ ಕಾರ್ಮಿಕರು ಇಲ್ಲದೆ ಇದಿದ್ರೆ ಖಂಡಿತ ನಮ್ಮ ನಗರ ಸ್ವಚವಾಗಿ ಇರಲು ಸಾಧ್ಯವೇ ಆಗುತ್ತಾ ಇರಲಿಲ್ಲ. ಅನೇಕ ರೋಗಗಳು ಈಗಾಗಲೇ ನಮ್ಮನ ಕಾಡುತ್ತಾ ಇದೆ. ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಿಲ್ಲ ಅಂದ್ರೆ ಮತ್ತಷ್ಟು ಅನಾರೋಗ್ಯ ಬಾಧೆಗಳು ನಮ್ಮನು ಕಾಡುತ್ತಾ ಇತ್ತು. ಇತ್ತೇಚೆಗೆ ಪಟಿಯಾಲದಲ್ಲಿ ಪೌರ ಕಾರ್ಮಿಕರಿಗೆ ತಾವು ಮಾಡುತ್ತಾ ಇರೋ ಕಷ್ಟದ ಕೆಲ್ಸಕ್ಕೆ ಅಲ್ಲಿನ ಜನ ಕೃತಜ್ಞತೆ ನೀಡಿ ಗೌರವ ಸಲ್ಲಿಸಿದರು.
ಹಾಗೆಯೇ ಪೌರ ಕಾರ್ಮಿಕರು ಬೆಳ್ಳಗೆ ಸಮಯ ತಮ್ಮ ಕೆಲ್ಸಕ್ಕೆ ಬರುವ ವೇಳೆಗೆ ಅಪಾರ್ಟ್ ಮೆಂಟ್ ಮೇಲಿನಿಂದಲೇ ಅವರ ಮೇಲೆ ಹೂವು ಹಾಕಿ ಸ್ವಾಗತ ಮಾಡಿದ್ದರು. ಇದು ಇಷ್ಟೇ ಅಲ್ಲದೆ ಅಲ್ಲಿಯೇ ಇದ್ದ ಮತ್ತೊಬ್ಬ ವ್ಯಕ್ತಿ ಒಬ್ಬ ಪೌರ ಕಾರ್ಮಿಕನಿಗೆ ನೋಟಿನ ಹಾರ ಹಾಕಿ ಗೌರವ ನೀಡಿದರು ನಿಜಕ್ಕೂ ಅಲ್ಲಿನ ಜನ ಪೌರ ಕಾರ್ಮಿಕರನ್ನ ಎಷ್ಟರ ಮಟ್ಟಿಗೆ ಗೌರವ ನೀಡುತ್ತಾರೆ ಎಂಬುದು ಒಂದು ಉದಾಹರಣೆ ಆಗಿತ್ತು. ಅಲ್ಲಿನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿತ್ತು. ನಾವು ನಮ್ಮ ಅಕ್ಕ ಪಕ್ಕ ಸುಚಿತ್ವ ಇಟ್ಟುಕೊಳ್ಳುವುದು ನಮ್ಮ ಆಧ್ಯತೆ ಇರುತ್ತದೆ. ಇನ್ನಾದರೂ ನಮಗಾಗಿ ಕಷ್ಟ ಪಡುತ್ತಾ ಇರೋ ಎಲ್ಲ ಪೌರ ಕಾರ್ಮಿಕರನ್ನ ನಾವು ಗೌರವ ನೀಡೋಣ. ಈ ಒಂದು ಮಾಹಿತಿ ಮರೆಯದೆ ಶೇರ್ ಮಾಡಿರಿ ಮತ್ತು ಲೈಕ್ ಮಾಡೀರಿ. ಮತ್ತಷ್ಟು ಇದೇ ರೀತಿಯ ಮಾಹಿತಿಗಳು ಪಡೆಯಲು ನಮ್ಮೆ ಫೇಸ್ಬುಕ್ ಪೇಜ್ ಲೈಕ್ ಮಾಡುವುದು ಮರೆಯಬೇಡಿ.