ಪ್ರತಿ ದಿನ ಮೂರೂ ಮೊಟ್ಟೆ ಹೀಗೆ ಒಂದು ವಾರ ತಿಂದರೆ

61

ಮೊಟ್ಟೆ ಆರೋಗ್ಯಕ್ಕೆ ಎಷ್ಟು ಉತ್ತಮ. ಜನರು ಸಾವಿರಾರು ವರ್ಷಗಳಿಂದ ಮೊಟ್ಟೆಯನ್ನು ತಿನ್ನುತ್ತಾರೆ. ಮೊಟ್ಟೆಯಲ್ಲಿ ಹಲವು ವಿಧಗಳಿವೆ ಆದರೆ ಸಾಮಾನ್ಯವಾಗಿ ಜನರ ಆಯ್ಕೆ ಕೋಳಿ ಮೊಟ್ಟೆ ಆಗಿರುತ್ತದೆ. ಮೊಟ್ಟೆಗಳು ಆರೋಗ್ಯಕರ ಆಹಾರದ ಭಾಗಗಲಾಗಿರುವ ಹಲವಾರು ಜೀವಸತ್ವಗಳು ಮತ್ತು ಖನಿಜವನ್ನು ಹೊಂದಿರುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಮೊಟ್ಟೆಗಳು ಸುಲಭವಾಗಿ ಲಭ್ಯವಿರುವ ಅಗ್ಗದ ಆಹಾರವಾಗಿದೆ. ಮೊಟ್ಟೆ ಇದು ಮನುಷ್ಯನ ಒಳ್ಳೆಯ ಆಹಾರವಾಗಿದೆ. ಕೆಲವರು ಮೊಟ್ಟೆಯನ್ನು ಇಷ್ಟ ಪಟ್ಟು ಸೇವಿಸಿದರೆ ಇನ್ನೂ ಕೆಲವರು ತಿನ್ನಲು ನಿರಾಕರಿಸುತ್ತಾರೆ. ಆದರೆ ಮೊಟ್ಟೆ ದೇಹಕ್ಕೆ ಎಷ್ಟು ಉತ್ತಮ ಮತ್ತು ಇದು ದೇಹಕ್ಕೆ ಎಷ್ಟೆಲ್ಲ ಆರೋಗ್ಯಕರ ಲಾಭಗಳನ್ನು ಕೊಡುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ. ಹಾಗಾದರೆ ಸ್ನೇಹಿತರೆ ಈ ಲೇಖನದಲ್ಲಿ ಮೊಟ್ಟೆಯು ಹೇಗೆ ದೇಹಕ್ಕೆ ಲಾಭಗಳನ್ನು ಕೊಡುತ್ತದೆ ಮತ್ತು ಅದರ ಪರ್ಯಾಯ ಎನೆಂದು ನೋಡೋಣ. ಹಾಗಾದರೆ ಈ ಮಾಹಿತಿಯನ್ನು ತಪ್ಪದೆ ಕೊನೆವರೆಗೂ ಓದಿರಿ. ಮೊಟ್ಟೆಯನ್ನು ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತುಗಳು ಮೂಡಿ ಬರುತ್ತಿದ್ದವು. ಆದರೆ ಅದು ಕಡು ಸುಳ್ಳು ಮಾತಾಗಿದೆ. ಪ್ರತಿನಿತ್ಯವೂ

ಮೂರು ಮೊಟ್ಟೆಗಳನ್ನು ಒಂದು ವಾರ ಸೇವಿಸಿದರೆ ಶರೀರದಲ್ಲಿ ಆಗುವ ಕೆಟ್ಟ ಮಾರ್ಪಾಡುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ನಮ್ಮ ಶರೀರಕ್ಕೆ ಅಗತ್ಯವಿರುವ ವಿಟಮಿನ್ ಐ, ವಿಟಮಿನ್ ಏ, ವಿಟಮಿನ್ ಬಿ6, ಬಿ12, ಐರನ್, ಥೈಮನ್, ಮ್ಯಾಂಗ್ನಿಷಿಯಂ, ಫಾಸ್ಫರಸ್, ಪೋಲೆಟ್ ಮತ್ತು ಇತರ ನ್ಯೂಟ್ರಿಷನ್ ಸಮೃದ್ಧಿಯಾಗಿ ಇರುತ್ತದೆ. ಮತ್ತು ಮೊಟ್ಟೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ. ಇದು ಶರೀರಕ್ಕೆ ಮತ್ತು ಮೆದುಳಿಗೆ ಹೆಚ್ಚು ಅವಶ್ಯಕತೆ ನೀಡುತ್ತದೆ. ಮೊಟ್ಟೆಯಲ್ಲಿ ಕೊಲೆನ್ ಸಮೃದ್ಧಿಯಾಗಿ ಇರುವುದರಿಂದ ಮೆದುಳಿನ ಅಭಿವೃದ್ಧಿ ಚೆನ್ನಾಗಿ ಆಗುತ್ತದೆ. ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಮೊಟ್ಟೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮೊಟ್ಟೆಯಲ್ಲಿ ಲೋಟಿನ್ ಹಾಗೂ ಜಿಯೋಸ್ಕಿಥಿನ್ ವಿಟಮಿನ್ ಹೆಚ್ಚಾಗಿ ಇರುವುದರಿಂದ ಕಣ್ಣಿನ ದೃಷ್ಟಿ ಆರೋಗ್ಯವಾಗಿ ಇಡಲು ನೆರವಾಗುತ್ತದೆ. ಮತ್ತು ವಯಸ್ಸಾದ ನಂತರ ಕಣ್ಣಿನ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ. ಮೊಟ್ಟೆಗಳಲ್ಲಿನ ಪ್ರೊಟೀನ್ ಸ್ನಾಯು ಸೇರಿದಂತೆ ದೇಹದ ಅಂಗಾಂಶಗಳನ್ನು ಬಲಪಡಿಸಲು ಮತ್ತು ದೃಢವಾದ ಸ್ನಾಯುಗಳನ್ನು ಕಟ್ಟಲು ಮೊಟ್ಟೆ ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ದೇಹದಲ್ಲಿ

ಎಲುಬುಗಳನ್ನು ಶಕ್ತಿಯುತವಾಗಿ ಮಾಡುತ್ತದೆ. ಬೆನ್ನು ಮೂಳೆಗಳನ್ನು ಬಲಪಡಿಸುತ್ತದೆ. ಮೊಟ್ಟೆಗಳಲ್ಲಿ ಹೆಚ್ಚಾಗಿ ವಿಟಮಿನ್ಸ್ ಮತ್ತು ಖನಿಜಾಂಶ ಇರುವುದರಿಂದ ನರಮಂಡಲ ಮತ್ತು ಮೆದುಳಿನ ಚಟುವಟಿಕೆಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುವ ಪೋಷಕಾಂಶಗಳು ಮೊಟ್ಟೆಯಲ್ಲಿ ಅಡಗಿವೆ. ಮೊಟ್ಟೆಯಲ್ಲಿ ಪೋಲಿಕ ಆಮ್ಲ ಇರುವುದರಿಂದ ಜನ್ಮಜಾತ ವಿಕಲಾಂಗತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮೊಟ್ಟೆ ತೂಕವನ್ನು ನಷ್ಟ ಮಾಡಲು ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಮೊಟ್ಟೆಯನ್ನು ಸಾಮಾನ್ಯವಾಗಿ ಬೆಳಗಿನ ಜಾವ ಸೇವಿಸಬೇಕು. ಇದರಿಂದ ಹೊಟ್ಟೆ ತುಂಬಿದ ಹಾಗೆ ಭಾಸವಾಗುತ್ತದೆ. ಮೊಟ್ಟೆಯನ್ನು ತಿನ್ನುವುದರಿಂದ ದೇಹಕ್ಕೆ ಎಲ್ಲ ರೀತಿಯ ಶಕ್ತಿ ಸಿಗುತ್ತದೆ. ಮತ್ತು ಇನ್ನಿತರ ತರಕಾರಿಗಳ ಅವಶ್ಯಕತೆ ದೇಹಕ್ಕೆ ಬೇಕಾಗುವುದಿಲ್ಲ. ಮತ್ತು ದೇಹದ ತೂಕವನ್ನು ಕಡಿಮೆ ಮಾಡುವುದರಲ್ಲಿ ಮೊಟ್ಟೆ ತುಂಬಾ ಸಹಾಯ ಮಾಡುತ್ತದೆ. ಪ್ರತಿನಿತ್ಯವೂ ಮೂರು ಮೊಟ್ಟೆಯನ್ನು ತಿನ್ನುವುದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ. ಹೀಗೆ ಮೊಟ್ಟೆಯ ಸೇವನೆಯನ್ನು ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಯನ್ನೂ ಕಾಣಬಹುದು.

LEAVE A REPLY

Please enter your comment!
Please enter your name here