ಬುದ್ದಿಶಕ್ತಿ ಜಾಸ್ತಿ ಮಾಡುವ ಹಣ್ಣು

81

ಈ ಒಂದು ಹಣ್ಣಿನ ಸೇವನೆಯಿಂದ ಹತ್ತಾರು ಕಾಯಿಲೆಗಳಿಂದ ದೂರವಿರಬಹುದು. ಹಿತ್ತಲು ಗಿಡ ಮದ್ದಲ್ಲ ಎನ್ನುವ ಗಾದೆ ಮಾತಿನಂತೆ ನಮ್ಮ ಸುತ್ತಮುತ್ತಲು ಎಷ್ಟೋ ಔಷಧಿ ಗಿಡ ಮರಗಳು ಹಣ್ಣುಗಳು ಇದ್ದರು ಕೂಡ ನಮಗೆ ತಿಳಿಯದೆ ಇರುವುದೇ ಒಂದು ವಿಪರ್ಯಾಸ ಎಂದರೆ ತಪ್ಪಾಗಲಾರದು ಏಕೆಂದರೆ ಇಲ್ಲಿ ಹೇಳುತ್ತಿರುವುದು ಒಂದು ಬೇಲಿಯಲ್ಲಿ ಬೆಳೆಯುವಂತಹ ಒಂದು ಹಣ್ಣು ಇದೊಂದು ಬೇಲಿಯ ಹಣ್ಣು ಇದನ್ನು ಕನ್ನಡದಲ್ಲಿ ಬುತ್ತಲೇ ಹಣ್ಣು ಎಂದು ಕರೆಯುತ್ತಾರೆ ಇನ್ನು ಕೆಲ ಕಡೆಗಳಲ್ಲಿ ಜಾನಿ ಮರ ಎಂದು ಸಹ ಕರೆಯುತ್ತಾರೆ ಪ್ರದೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ಹೆಸರುಗಳಿಂದಲು ಈ ಹಣ್ಣನ್ನು ಕರೆಯುತ್ತಾರೆ ಸಂಸ್ಕೃತದಲ್ಲಿ ಧನ್ವಂಗ ಧನುವೃಕ್ಷ ಅಂತಾನೂ ತೆಲುಗಿನಲ್ಲಿ ತಾಡಾ ಅಂತಲೂ ಮಲೆಯಾಳಂನಲ್ಲಿ ಚಡಿಚ ಅಂತಲು ಕರೆಸಿಕೊಳ್ಳುವ ಈ ಹಣ್ಣು ಆಕ್ಟೊಬರ್ ತಿಂಗಳಿನಲ್ಲಿ ಎಥೇಚ್ಛವಾಗಿ ಸಿಗುತ್ತದೆ

ಈ ಹಣ್ಣಿನ ಮರ ದಪ್ಪ ಹಾಗೂ ಒರಟಾದ ಎಲೆಗಳನ್ನು ಹೊಂದಿದ್ದು ಇದರ ಕಾಯಿಗಳು ತಿಳಿ ಹಸಿರು ಬಣ್ಣವನ್ನು ಹೊಂದಿರುತ್ತವೆ ಹಾಗೇನೇ ಇದು ಹಣ್ಣಾದ ಮೇಲೆ ಸೇಬುಹಣ್ಣಿನ ಕೆಂಪು ಬಣ್ಣವನ್ನು ಪಡೆಯುತ್ತದೆ. ಈ ಹಣ್ಣುಗಳು ಚಿಕ್ಕ ಗಾತ್ರವನ್ನು ಹೊಂದಿದ್ದು ಒಂದೊಂದೇ ಬೀಜವನ್ನು ಹೊಂದಿರುತ್ತವೆ ಈ ಹಣ್ಣುಗಳು ಸಿಹಿಯಾದ ರುಚಿಯನ್ನು ಸಹ ಹೊಂದಿರುತ್ತವೆ. ಈ ಹಣ್ಣುಗಳನ್ನು ಗ್ರಾಮೀಣ ಭಾರತದಲ್ಲಿ ಎಥೇಚ್ಛವಾಗಿ ಬಳಸುವ ಅಭ್ಯಾಸವಿತ್ತು ಆದರೆ ಇತ್ತೀಚೆಗೆ ಅದನ್ನು ಬಳಸುವುದು ತುಂಬಾನೇ ಕಡಿಮೆಯಾಗಿದೆ. ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ ಅಪಾರ ಪ್ರಮಾಣದ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ ರಕ್ತದ ವೃದ್ಧಿಗೆ ಇದು ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ ಹಾಗೇನೇ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ ನರಮಂಡಲಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಹಣ್ಣು ತುಂಬಾನೇ ಉಪಯೋಗಕ್ಕೆ ಬರುತ್ತದೆ ಎಂದು ಆಯುರ್ವೇದ ಶಾಸ್ತ್ರಗಳು ಹೇಳುತ್ತವೆ ಇನ್ನು ಈ ಧನ್ವಂಗ ಹಣ್ಣು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತಮ ಫಲಿತಾಂಶವನ್ನು ಕೊಡುತ್ತದೆ ಇದರ ಸೇವನೆಯಿಂದ ಮಂಡಿ ನೋವು ಕೀಲು ನೋವುಗಳು ಕಡಿಮೆ ಆಗುತ್ತವೆ ರ ಕ್ತದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚು ಮಾಡುವುದು ಅಷ್ಟೇ ಅಲ್ಲದೆ ಮಂಡಿ ಸವೆತ ಉಂಟಾಗದಂತೆ ಕೂಡ ಈ ಹಣ್ಣು ಕಾಪಾಡುತ್ತದೆ ಇನ್ನು ನೀವು ಉಷ್ಣ ಸಂಬಂದಿ ಸಮಸ್ಯೆಯಿಂದ ಬಳಲುತ್ತಿದ್ದರೆ ಯಾವುದೇ ಕಾರಣಕ್ಕೂ ಇದನ್ನು ಮರೆಯದೆ ತಿನ್ನಿ ಇದು ನಿಮ್ಮ ದೇಹವನ್ನು ತಾಂಪಾಗಿಸುತ್ತದೆ ಹಾಗೇನೇ ಈ ಹಣ್ಣಿನ ರಸವನ್ನು ಗಾಯಗಳಿಗೆ ಹಚ್ಚುತ್ತಾರೆ

ಚರ್ಮದ ಮೇಲೆ ತೀವ್ರ ತುರಿಕೆ ಅಥವಾ ಉರಿ ಕಾಣಿಸಿದರೆ ಈ ಹಣ್ಣಿನ ರಸವನ್ನು ಹಚ್ಚುವ ಮೂಲಕ ಮುಕ್ತಿ ಪಡೆಯುತ್ತಿದ್ದರು ಈ ಹಣ್ಣು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ವಾತ ಪಿತ್ತ ಕಫ ದೋಷಗಳನ್ನು ನಿವಾರಣೆ ಮಾಡುವ ಈ ಹಣ್ಣನ್ನು ವರ್ಷಕ್ಕೆ ಒಂದೇ ಬಾರಿ ಸೇವಿಸಿದರೂ ಸಾಕು ನೀವು ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಪಡೆಯಬಹುದು. ನಮ್ಮ ಪರಿಸರದಲ್ಲಿ ಸಿಗುವ ಇಂತಹ ಹಣ್ಣುಗಳನ್ನು ತಿಂದು ಆರೋಗ್ಯವನ್ನು ವೃದ್ದಿಸಿಕೊಳ್ಳಲು ಪ್ರಯತ್ನಿಸಿ ಜೊತೆಗೆ ಈ ಪ್ರಾದೇಶಿಕ ಹಣ್ಣಿನ ಗಿಡಗಳನ್ನು ಕಾಪಾಡೋಣ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ.

LEAVE A REPLY

Please enter your comment!
Please enter your name here