ಒಂದು ಬೆಳ್ಳುಳ್ಳಿ ನಿಮಗೆ ಹತ್ತಾರು ಲಾಭ ಕೊಡುತ್ತೆ

71

ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಆಗುವ ಉತ್ತಮ ಅಂಶಗಳು. ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗಂತ ತುಂಬಾ ತಿನ್ನುವುದು ಒಳ್ಳೆಯದಲ್ಲ ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಆರೋಗ್ಯಕರ ಅಂಶಗಳು ಸಿಗುತ್ತವೆ. ಆದ್ರೆ ಯಾವ ಸಮಯದಲ್ಲಿ ಎಷ್ಟು ತಿನ್ನಬೇಕು ಮತ್ತು ಹೇಗೆ ತಿನ್ನಬೇಕು ಎಂಬುದು ಮುಖ್ಯ ಆಗಿರುತ್ತದೆ. ಪ್ರತಿನಿತ್ಯ ನಮ್ಮ ಆಹಾರಗಳಲ್ಲಿ ಈ ಬೆಳ್ಳುಳ್ಳಿ ಒಂದಾಗಿದೆ ಈ ಬೆಳ್ಳುಳ್ಳಿಯಿಂದ ನಮ್ಮ ದೇಹಕ್ಕೆ ಸಿಗುವ ಆರೋಗ್ಯಕರ ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು ಶೀತವಾದರೆ ತ್ವಚೆಯಲ್ಲಿ ಹುಳುಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿ ಹೋಗಲಾಡಿಸುತ್ತಿದ್ದರು ಹೀಗೆ ಬೆಳ್ಳುಳ್ಳಿ ಬಳಸಿ ಹತ್ತಾರು ಮನೆಮದ್ದುಗಳನ್ನು ಮಾಡುತ್ತಿದ್ದರು.

ಬೆಳಿಗ್ಗೆ ಬೆಳ್ಳುಳ್ಳಿಯನ್ನು ಸೇವಿಸಿದರೆ ಬೊಜ್ಜನ್ನು ಕರಗಿಸಬಹುದು ಹಾಗೇನೇ ಬೆಳ್ಳುಳ್ಳಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೇನೇ ಇದನ್ನು ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಪ್ರತಿದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಸೇವಿಸುವುದರಿಂದ ಪಚನಕ್ರಿಯೆ ಸರಾಗವಾಗಿ ಆಗುತ್ತದೆ ಜೀರ್ಣಕ್ರಿಯೆ ಉತ್ತಮವಾಗಿ ಹಸಿವು ಹೆಚ್ಚಾಗುತ್ತದೆ ಹಸಿವು ಕಡಿಮೆ ಆಗುವವರು ಅಜೀರ್ಣದ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿಂದರೆ ಸಮಸ್ಯೆ ಪರಿಹಾರವಾಗುತ್ತದೆ. ರಕ್ತ ಸಂಚಾರ ಸರಾಗವಾಗಿ ನಡೆದು ಹೃದಯದ ಆರೋಗ್ಯ ಹೆಚ್ಚಾಗುತ್ತದೆ ಬೆಳ್ಳುಳ್ಳಿ ತಿನ್ನುವುದರಿಂದ ಇದರಲ್ಲಿರುವ ಪೋಷಕಾಂಶ ಕೂದಲನ್ನು ಆಂತರಿಕವಾಗಿ ಪೋಷಿಸುತ್ತದೆ ಬೆಳ್ಳುಳ್ಳಿಯಲ್ಲಿರುವ ಫ್ಲೋಯನೈಡ್ಸ್ ಅಂಶ ಡಿಎನ್ ಎ ಗೆ ಹಾನಿ ಆಗದಂತೆ ಕಾಪಾಡುತ್ತದೆ ಇದರಿಂದ ಕ್ಯಾನ್ಸರ್ ಕಣಗಳು ಉಂಟಾಗದಂತೆ ತಡೆಯುತ್ತದೆ.

ಮಾನಸಿಕ ಒತ್ತಡದಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ ಎಂಬ ಅಂಶ ಹೆಚ್ಚಾಗಿ ಇರುವುದರಿಂದ ಇದು ನಮ್ಮ ದೇಹದಲ್ಲಿರುವ ಬೇಡವಾದ ರಾಸಾಯನಿಕಗಳನ್ನು ಹೊರಹಾಕುವ ಪ್ರಯತ್ನ ಮಾಡುತ್ತದೆ ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಕೊಬ್ಬಿನ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಗಳಲ್ಲಿ ಬೆಳ್ಳುಳ್ಳಿ ಬಳಸುವುದು ತುಂಬಾ ಉತ್ತಮ ಇನ್ನು ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಸಕಾರಾತ್ಮಕ ಜ್ವರ ಉಸಿರಾಟದ ತೊಂದರೆ ದೂರವಾಗುತ್ತದೆ ಬೆಳ್ಳುಳ್ಳಿಯಲ್ಲಿ ಇರುವ ಅಲೈಸಿನ್ ಪೋಷಕಾಂಶ ರಕ್ತದಲ್ಲಿ ಟ್ರೈಗ್ಲಿಸಡೈ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೇನೇ ರ ಕ್ತ ಶುದ್ಧಿಯಾಗುತ್ತದೆ. ಇನ್ನು ಬೆಳ್ಳುಳ್ಳಿಯಲ್ಲಿರುವ ಅಸೈನ ಎಂಬ ರಾಸಾಯನಿಕ ದೇಹದೊಳಗೆ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ

ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ರಕ್ತಹೀನತೆ ಉಂಟಾದಾಗ ಇದರಿಂದ ನಿಶಕ್ತಿ ಆಗುತ್ತದೆ ರಕ್ತಹೀನತೆ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಬೇಕಾಗುತ್ತದೆ ಇದರ ಜೊತೆಗೆ ಒಂದು ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ರ ಕ್ತಹೀನತೆ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯನ್ನು ಹೇಗೆ ತಿನ್ನಬೇಕು ಎಂದು ತುಂಬಾ ಜನ ಯೋಚಿಸುತ್ತಾರೆ ಆದರೆ ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದೇ ಆರೋಗ್ಯಕರ ಬೆಳ್ಳುಳ್ಳಿಯನ್ನು ಬೇಯಿಸುವುದರಿಂದ ಅದರಲ್ಲಿರುವ ಹಲಿಸಿನ್ ಪ್ರಬಲ ಕಡಿಮೆಯಾಗುತ್ತದೆ. ಹಸಿ ಬೆಳ್ಳುಳ್ಳಿಯನ್ನು ಹಾಗೆ ತಿನ್ನಲು ಆಗದಿದ್ದರೆ ಸಲಾಡ್ ಮತ್ತು ಚಟ್ನಿಯಲ್ಲಿ ಬಳಸಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಶೇರ್ ಮಾಡಿ

LEAVE A REPLY

Please enter your comment!
Please enter your name here