ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ ಈ ಸಮಸ್ಯೆಗಳನ್ನು ನಾವು ಎದುರಿಸ ಬೇಕಾಗುತ್ತದೆ

39

ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ ಈ ಸಮಸ್ಯೆಗಳನ್ನು ನಾವು ಎದುರಿಸ ಬೇಕಾಗುತ್ತದೆ. ನಮ್ಮ ದೇಹಕ್ಕೆ ನೀರು ತುಂಬಾ ಮುಖ್ಯ ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಚಳಿಗಾಲದಲ್ಲಿ ಅಷ್ಟೇನು ಬಾಯಾರಿಕೆ ಆಗುವುದಿಲ್ಲ ಆದರೆ ಬೇಸಿಗೆಯಲ್ಲಿ ನಾವು ಊಟಕ್ಕಿಂತ ಹೆಚ್ಚಾಗಿ ನೀರನ್ನು ಕುಡಿಯುತ್ತೇವೆ ಆದರೆ ಒಂದುವೇಳೆ ಬೇಸಿಗೆಯಲ್ಲಿ ನಾವು ಕಡಿಮೆ ನೀರನ್ನು ಕುಡಿದರೆ ಏನಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಸುಸ್ತು ಮತ್ತು ನಿಶಕ್ತಿ ಉಂಟಾಗುತ್ತದೆ ನಮ್ಮ ದೇಹದ ಪ್ರತಿ ಜೀವಕೋಶದ ಕೆಲಸಕ್ಕೆ ನೀರು ತುಂಬಾನೇ ಮುಖ್ಯ ನೀರಿನ ಕೊರತೆಯಿಂದ ಜೋವಕೋಶಕ್ಕೆ ಲಭ್ಯವಾಗುವ ನೀರು ಕಡಿಮೆ ಆಗುತ್ತದೆ ಇದರಿಂದ ಜೀವಕೋಶಗಳ ಕಾರ್ಯ ಕ್ಷಮತೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಪರಿಣಾಮವಾಗಿ ಸುಸ್ತು ಉಂಟಾಗುತ್ತದೆ. ಅವಧಿಗೂ ಮುನ್ನ ವಯಸ್ಸಾದಂತೆ ಕಾಣುತ್ತೇವೆ ನಾವು ಬೆಳೆಯುತ್ತ 20 ರಷ್ಟು ನೀರನ್ನು ಕಡಿಮೆ ಕುಡಿಯುತ್ತೇವೆ ಹೀಗೆ ಮಾಡುವುದರಿಂದ ನಾವೇ ನಮ್ಮ ಕೈಯಾರೆ ನಮ್ಮ ಯೌವನವನ್ನು ಹಾಳು ಮಾಡಿಕೊಳ್ಳುತ್ತೇವೆ. ನೀರು ಕುಡಿಯದೆ ಇರುವುದರಿಂದ ನಮ್ಮ ದೇಹದಲ್ಲಿ ಹಸಿವು ಉಂಟಾಗುತ್ತದೆ ಆಗ ನಮಗೆ ಆಹಾರ ತಿನ್ನುವ ಅವಶ್ಯಕತೆ

ಇದ್ದೆ ಇರುತ್ತದೆ ನೀರಿನ ಬದಲು ಹೆಚ್ಜಿನ ಕೊಬ್ಬು ಮತ್ತು ಸಕ್ಕರೆ ಇರುವ ಆಹಾರಗಳನ್ನು ಸೇವಿಸುವುದರಿಂದ ಕೊಬ್ಬು ತುಂಬಿಕೊಂಡು ದೇಹ ಸ್ತುಲ ಕಾಯಕ್ಕೆ ಹೋಗುತ್ತದೆ. ರಕ್ತದಲ್ಲಿ ಇರುವ ಪ್ಲಾಸ್ಮಾ ಮತ್ತು ದ್ರವ ಪಧಾರ್ಥ ನೀರಿನಿಂದ ಕೂಡಿರುತ್ತದೆ ನೀರಿನ ಕೊರತೆಯಿಂದ ದೇಹ ಸೊರಗಲು ರಕ್ತದಲ್ಲಿನ ನೀರಿನ ಪ್ರಮಾಣ ಕಡಿಮೆ ಆಗುವುದು ಪ್ರಮುಖ ಕಾರಣವಾಗಿದೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ. ಮಲಬದ್ಧತೆ ತೊಂದರೆ ಎದುರಾಗಬಹುದು ನಮ್ಮ ಜೀರ್ಣಕ್ರಿಯೆಗೆ ನೀರು ತುಂಬಾ ಮುಖ್ಯ ಆಹಾರ ಪಚನವಾಗಿ ಕಟ್ಟ ಕಡೆಯ ಅಂಗವಾದ ದೊಡ್ಡ ಕರುಳಿನಲ್ಲಿ ಬರುವವರೆಗೂ ನೀರು ಸುಮಾರು ಅರ್ಧ ಭಾಗದಷ್ಟು ಇರಬೇಕು ನೀರನ್ನು ಹಿರಿ ದೊಡ್ಡ ಕರುಳು ತ್ಯಾಜ್ಯವನ್ನು ವಿಸರ್ಜಿಸುತ್ತದೆ ಒಂದು ವೇಳೆ ನೀರಿನ ಕೊರತೆ ಉಂಟಾದರೆ ದೊಡ್ಡ ಕರುಳು ನೀರನ್ನು ಉಳಿಸದೇ ಹಿರಿಕೊಳ್ಳುವುದರಿಂದ ತ್ಯಾಜ್ಯ ನೀರಿಲ್ಲದೆ ಗಟ್ಟಿಯಾಗಿ ವಿಸರ್ಜನೆಗೆ ಕಷ್ಟವಾಗುತ್ತದೆ. ಇದರಿಂದ ಮೂಲವ್ಯಾಧಿ ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ವಾಯುಪ್ರಕೋಪ ಹೊಟ್ಟೆಯಲ್ಲಿ ಸಮಸ್ಯೆ ಬರಬಹುದು ನಮ್ಮ ಜಠರದಲ್ಲಿ ಉತ್ಪತ್ತಿ ಆಗುವ ಜಠರ ರಸ ಅತಿ ಆಮ್ಲಿಯವಾಗಿರುತ್ತದೆ ನೀರಿನೊಂದಿಗೆ ಮಿಶ್ರಣವಾದ ಬಳಿಕ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವಷ್ಟು ಮೃದುವಾಗಿರುತ್ತದೆ ನೀರಿನ ಕೊರತೆ ಇದ್ದರೆ ಆಹಾರ ಸರಿಯಾಗಿ ಜೀರ್ಣವಾಗದೆ ಹಲವಾರು ಅನಿಲಗಳು ಉತ್ಪತ್ತಿಯಾಗುತ್ತವೆ. ಹೀಗೆ ನೀರು ಹೆಚ್ಚಾಗಿ ಕುಡಿಯದೆ ಇದ್ದರೆ ಹಲವಾರು ತೊಂದರೆಗಳು ನಮ್ಮನ್ನು ಕಾಡುತ್ತವೆ. ಚರ್ಮದಲ್ಲಿ ತುರಿಕೆ ಚರ್ಮ ಸಂಬಂದಿ ರೋಗಗಳು ಎದುರಾಗಬಹುದು ನಮ್ಮ ದೇಹ ಪ್ರತಿದಿನ ಸುಮಾರು 600 ರಿಂದ 700 ಮಿಲಿ ಲೀಟರ್ ನೀರನ್ನು ಬೆವರಿನ ಮೂಲಕ ಹೊರಹಾಕುತ್ತದೆ ವಾಸ್ತವವಾಗಿ ನಮ್ಮ ಚರ್ಮ ಲಕ್ಷಾಂತರ ಸೂಕ್ಷ್ಮ ರಂಧ್ರಗಳನ್ನು ಹೊಂದಿರುತ್ತದೆ ಈ ರಂಧ್ರಗಳ ಮೂಲಕ ನೀರಿನ ಪಸೆ ಹೊರ ಹೋಗುತ್ತ ಇರುತ್ತದೆ ಒಂದುವೇಳೆ ನೀರಿನ ಕೊರತೆ ಆದರೆ ಈ ರಂಧ್ರಗಳು ಒಣಗಿ ಗಾಳಿಯಲ್ಲಿ ಇರುವ ಸೂಕ್ಷ್ಮ ಹಾಗೂ ಹಾನಿ ಎಸಗುವ ಕ್ರಿಮಿಗಳು ಚರ್ಮ ಪ್ರವೇಶಿಸಿ ರೋಗವನ್ನು ಉಂಟು ಮಾಡುತ್ತದೆ ಇದರಿಂದ ತುರಿಕೆ ದದ್ದು ಹುಳಕಡ್ಡಿ ಮುಂತಾದ ಚರ್ಮ ರೋಗಗಳು ಬರುವಂತಹ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ದಿನಕ್ಕೆ ಹೆಚ್ಚಾಗಿ ನೀರನ್ನು ಕುಡಿಯಿರಿ.

LEAVE A REPLY

Please enter your comment!
Please enter your name here