ಮಕ್ಕಳನ್ನು ಪರೀಕ್ಷೆಗೆ ಸಿಧ್ದ ಗೊಳಿಸಲು 5 ಸುಲಭ ಸೂತ್ರಗಳು

79

ಹಿಂದಿನ ಕಾಲದಲ್ಲಿ ಮಕ್ಕಳು ಗುರುಕುಲಗಳಲ್ಲಿ ಗುರುಗಳು ಹೇಳಿದ ಹಾಗೆ ಓದಿ ತಮ್ಮ ಬುದ್ಧಿವಂತಿಕೆಯಿಂದ ಓದಿ ಜ್ಞಾನವನ್ನು ಪಡೆಯುತ್ತಿದ್ದರು ಆದರೆ ಈಗ ಕಾಲ ಬದಲಾದಂತೆ ಗುರುಕುಲದಲ್ಲಿ ಇದ್ದು ಓದುವ ಪದ್ದತಿ ಕಡಿಮೆಯಾಗಿದೆ ಈಗ ಏನಿದ್ದರೂ ದೊಡ್ಡ ದೊಡ್ಡ ಶಾಲೆಗಳು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳು ಹೀಗೆ ಶಾಲೆಗಳಲ್ಲಿ ಮಕ್ಕಳು ಕಲಿತು ಇದರ ಜೊತೆಗೆ ಶಾಲೆ ಮುಗಿಸಿ ಹೊರಗಡೆ ಬೇರೆ ತರಬೇತಿಯನ್ನು ಸಹ ಪಡೆಯುತ್ತಾರೆ ಮಕ್ಕಳು ಹೀಗಾಗಿ ಮಕ್ಕಳ ಮನಸ್ಸಿನ ಮೇಲೆ ತುಂಬಾ ಒತ್ತಡ ಆಗುತ್ತಿದೆ ಹೀಗಾಗಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಕ್ಕಳ ಜೊತೆ ತಂದೆ ತಾಯಿಯರು ಸಹ ಕುಳಿತು ಪರೀಕ್ಷೆಗೆ ಓದುವ ಪರಿಸ್ಥಿತಿ ಬಂದಿದೆ ಇಂದಿನ ಯುಗದಲ್ಲಿ ಮಕ್ಕಳಿಗಿಂತ ತಂದೆ ತಾಯಿಯೇ ಹೆಚ್ಚು ಓದಿನ ಕಡೆ ಗಮನ ನೀಡುತ್ತಾರೆ ಮಕ್ಕಳ ಮೇಲೆ ಒತ್ತಡ ಹೇರಿ ಓದು ಓದು ಎಂದು ಪಿಡಿಸುತ್ತಾರೆ ಆದರೆ ಅದರಿಂದ ಮಕ್ಕಳ ಮನಸ್ಸಿನ ಮೇಲೆ ಘಾಡ ಪರಿಣಾಮ ಬೀರುತ್ತದೆ

ಹಾಗಾದರೆ ಒತ್ತಡವಿಲ್ಲದೆ ಮಕ್ಕಳನ್ನು ಪಾಲಕರು ಹೇಗೆ ಪರೀಕ್ಷೆಗೆ ಸಿದ್ಧಗೊಳಿಸಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಪರೀಕ್ಷೆ ಹತ್ತಿರ ಬರುತ್ತಿದ್ದ ಹಾಗೆ ಈಗ ಮಕ್ಕಳಿಗಿಂತ ಹೆಚ್ಚು ಅಪ್ಪ ಅಮ್ಮಂದಿರೆ ಆತಂಕಕ್ಕೆ ಒಳಗಾಗುವುದೆ ಹೆಚ್ಚು. ಅಂತಹ ಪಾಲಕರಿಗಾಗಿಯೇ ನಾವಿಲ್ಲಿ 5 ಸುಲಭ ಸಲಹೆಗಳನ್ನು ನೀಡುತ್ತೇವೆ ಅವುಗಳನ್ನು ಅನುಸರಿಸಿ ನೀವು ನಿಮ್ಮ ಮಕ್ಕಳನ್ನು ಪರೀಕ್ಷೆಗೆ ಸರಿಯಾಗಿ ತಯಾರು ಮಾಡಿ. ಹಾಗಾದರೆ ನೀವು ನಿಮ್ಮ ಮಕ್ಕಳನ್ನು ಪರೀಕ್ಷೆಗೆ ಹೇಗೆ ತಯಾರು ಮಾಡಬೇಕು ಎಂಬುದನ್ನು ನೋಡೋಣ. ಮೊದಲನೆಯದು ಮಕ್ಕಳಿಗೆ ಒತ್ತಡ ನೀಡಬೇಡಿ ಇದು ಪಾಲಕರಾಗಿ ಪ್ರತಿಯೊಬ್ಬರು ಮಾಡುವಂತಹ ದೊಡ್ಡ ತಪ್ಪು ಇದು ಪಾಲಕರಾದ ನಾವುಗಳು ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಚನ್ನಾಗಿ ಓದಿ ಓದಿ ಎಂದು ಮಕ್ಕಳ ಮೇಲೆ ಒತ್ತಡ ಹಾಕುತ್ತೇವೆ ಒತ್ತಡ ಹಾಕುವುದರಿಂದ ಮಕ್ಕಳು ಓದಿನ ಕಡೆ ಗಮನ ಹರಿಸುವುದಿಲ್ಲ

ಹಾಗಾಗಿ ಮೊದಲು ಇದನ್ನು ನಾವು ನಿಲ್ಲಿಸಬೇಕು. ಇನ್ನು ಎರಡನೆಯದಾಗಿ ಮಕ್ಕಳಿಗೆ ಪರೀಕ್ಷೆಯ ಅರಿವು ಮೂಡಿಸಿ ಅಂದರೆ ಪರೀಕ್ಷೆ ಎನ್ನುವುದು ಒಂದು ಕಠಿಣವಾದುದು ಎಂದು ಅವರಿಗೆ ಅನಿಸಬಾರದು ಪರೀಕ್ಷೆಯನ್ನು ಖುಷಿಯಾಗಿ ಎದುರಿಸುವ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ತುಂಬಬೇಕು ಹಾಗೇನೇ ಮಕ್ಕಳಿಗೆ ಪರೀಕ್ಷೆ ಬರೆಯುವುದು ಏಕೆಂದು ಅದರ ಅವಶ್ಯಕತೆ ಏನಿದೆ ಎಂಬುದನ್ನು ತಿಳಿಸಿ ಒಳ್ಳೆಯ ಮಾತಿನಿಂದ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ. ಮೂರನೆಯದು ಜ್ಞಾನ ಮಾಡಿಸಿ ಈ ಜ್ಞಾನ ಮಾಡುವುದರಿಂದ ಮಕ್ಕಳ ಏಕಾಗ್ರತ ಶಕ್ತಿ ಹೆಚ್ಚಾಗುವುದು ಇದನ್ನು ತಪ್ಪದೆ ಮಾಡಿ ಏಕಾಗ್ರತೆಯಿಂದ ಅರ್ಧ ಗಂಟೆ ಓದುವುದು ಒಂದೇ ಮತ್ತು ಏಕಾಗ್ರತೆ ಇಲ್ಲದೆ ಎಷ್ಟು ಹೊತ್ತು ಓದಿದರು ಪ್ರಯೋಜನವಿಲ್ಲ. ಜ್ಞಾನ ಮಾಡುವುದರಿಂದ ಮಕ್ಕಳ ಮನಸ್ಸು ಸಹ ಶಾಂತಚಿತ್ತವಾಗಿರುತ್ತದೆ ಆಗ ಓದಿದ ವಿಷಯ ಚೆನ್ನಾಗಿ ಅರ್ಥ ಆಗುತ್ತದೆ.

ನಾಲ್ಕನೆಯದು ಓದಿ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ತಿಳಿಸಿ ಓದಿನ ಬಗ್ಗೆ ತಿಳಿಸಿ ಹೇಳಿ ಓದುವುದರ ಕಡೆ ಹೆಚ್ಚು ಗಮನ ನೀಡಿ ಕಷ್ಟಪಟ್ಟು ಓದಿ ಜೀವನದಲ್ಲಿ ಸಾಧನೆ ಮಾಡಿದ ಹಲವಾರು ವ್ಯಕ್ತಿಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕು ಅವರ ಸಾಧನೆಗೆ ಅವರ ಪರಿಶ್ರಮ ಓದು ಕಾರಣ ಎನ್ನುವುದನ್ನು ಅರ್ಥ ಮಾಡಿಸಬೇಕು ನೀವು ಸಹ ಅವರ ಹಾಗೆ ಓದಿ ಮಹಾನ್ ಸಾಧನೆ ಮಾಡಿ ದೊಡ್ಡ ವ್ಯಕ್ತಿಗಳಾಗಬೇಕು ಎಂದು ಮಕ್ಕಳೀಗೆ ಹೇಳಬೇಕು ಆಗ ಅವರು ಓದುವುದರಲ್ಲಿ ಆಸಕ್ತಿ ತೋರಿಸಲು ಸಹಕಾರಿಯಾಗುತ್ತದೆ ಮಕ್ಕಳಿಗೆ ತಮಗೆ ತಾನೇ ಓದಲು ಆಸಕ್ತಿ ಬರಬೇಕಾದರೆ ಚೆನ್ನಾಗಿ ಓದಿ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಆಗಾಗ್ಗೆ ಹೇಳುತ್ತಾ ಇರಬೇಕು. ಇನ್ನು ಕೋನೆಯದು ಮತ್ತು ಐದನೆಯದು ಆರೋಗ್ಯಕರ ಆಹಾರವನ್ನು ಕೊಡಿ ಪರೀಕ್ಷಾ ಸಮಯದಲ್ಲಿ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ನೀಡಬೇಡಿ ಈ ಸಮಯದಲ್ಲಿ ಆರೋಗ್ಯ ಕೆಡದಂತೆ ನೋಡಿಕೊಳ್ಳಿ ಏಕೆಂದರೆ ಇಂದಿನ ಮಕ್ಕಳು ಹೆಚ್ಚಾಗಿ ಎಣ್ಣೆ ಪಧಾರ್ಥಗಳನನ್ನು ಇಷ್ಟ ಪಡುತ್ತಾರೆ ಬದಲಾಗಿ ಆರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ

ಬಾಯಿಗೆ ರುಚಿ ಕೊಡುವ ಆಹಾರವನ್ನು ತಿಂಡಿತಿ ನಿಸುಗಳನ್ನು ತಿನ್ನುತ್ತಾರೆ ಹಾಗಾಗಿ ಪರೀಕ್ಷೆ ಸಮಯದಲ್ಲಿ ಎಷ್ಟೋ ಮಕ್ಕಳಿಗೆ ಆರೋಗ್ಯ ಹಾಳಾಗುವ ರೂಢಿಯು ಸಹ ಇರುತ್ತದೆ ಆದ್ದರಿಂದ ತಂದೆ ತಾಯಿಯಾದವರು ಪರೀಕ್ಷೆ ಹತ್ತಿರ ಬರುತ್ತಿದ್ದ ಹಾಗೆ ಅಥವಾ ದಿನನಿತ್ಯದ ಆಹಾರಗಳಲ್ಲಿ ಎಣ್ಣೆ ಬಳಕೆಯನ್ನು ಸ್ವಲ್ಪ ಮಟ್ಟಿಗೆಯಾದರು ಕಡಿಮೆ ಮಾಡುವುದು ತುಂಬಾನೆ ಒಳ್ಳೆಯದು ಇಷ್ಟು ಮಾಡಿ ಪ್ರತಿಫಲ ನೀವೇ ನೋಡಿ. ನಿಮ್ಮ ಮಕ್ಕಳೇ ಓದಿನ ಕಡೆ ಹೆಚ್ಚು ಗಮನ ನೀಡಿ ಚೆನ್ನಾಗಿ ಒದಲು ಪ್ರಾರಂಭಿಸುತ್ತಾರೆ ಮೊದಲು ಮಕ್ಕಳ್ಳಲ್ಲಿ ಓದುವುದು ಏಕೆ ಮತ್ತು ಹೇಗೆ ಓದಬೇಕು ಹಾಗೇನೇ ಓದಿದ್ದನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ಅರಿವು ಮೂಡಿಸಬೇಕು ಆಗ ಓದು ಅವರಿಗೆ ಹೊರೆಯಾಗುವುದಿಲ್ಲ ಖುಷಿಯಾಗಿ ಓದಲು ಶುರು ಮಾಡುತ್ತಾರೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ.

LEAVE A REPLY

Please enter your comment!
Please enter your name here