ಮಕ್ಕಳಿಗೆ ಒಣ ಕೆಮ್ಮು ಬರದ ಹಾಗೇ ತಡೆಯಲು ಮನೆ ಮದ್ದು

53

ಈ ಮನೆಮದ್ದು ಬಳಸಿ ಮಕ್ಕಳ ಒಣಕೆಮ್ಮು ನಿವಾರಿಸಿ. ಮಳೆಗಾಲ ಮತ್ತು ಚಳಿಗಾಲ ಪ್ರಾರಂಭವಾಯಿತು ಎಂದರೆ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಲ್ಲಿ ಜ್ವರ ಶೀತ ಕೆಮ್ಮು ಕಫ ಹೀಗೆ ಹಲವಾರು ಸಣ್ಣ ಪುಟ್ಟ ಕಾಯಿಲೆಗಳು ಶುರುವಾಗುತ್ತವೆ ಅದರಲ್ಲೂ ಮಕ್ಕಳಲ್ಲಿ ಇಂತಹ ಸಂದರ್ಭದಲ್ಲಿ ಒಣಕೆಮ್ಮು ತುಂಬಾನೇ ಕಾಡುತ್ತದೆ ಈ ಒಣಕೆಮ್ಮನ್ನು ನಿವಾರಿಸಲು ನಾವು ಹಲವಾರು ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆಯುತ್ತೇವೆ ಆದರೆ ಪ್ರತಿಯೊಂದು ಸಣ್ಣ ಪುಟ್ಟ ಕಾಯಿಲೆಗಳಿಗೂ ಸಹ ವೈದ್ಯರನ್ನು ಭೇಟಿಯಾಗುವುದು ಆ ಮಾತ್ರೆಗಳನ್ನು ಮಕ್ಕಳು ತಿನ್ನುವುದಿಲ್ಲ ಆದ ಕಾರಣ ಮಕ್ಕಳಲ್ಲಿ ಕಾಣುವ ಒಣಕೆಮ್ಮನ್ನು ನಿಯಂತ್ರಣಕ್ಕೆ ತರಲು ನಾವು ಕೆಲವೊಂದು ಮನೆಮದ್ದುಗಳನ್ನು ಅನುಸರಿಸಬೇಕು ಮಕ್ಕಳಲ್ಲಿ ಕಂಡುಬರುವ ಒಣಕೆಮ್ಮನ್ನು ಗುಣಪಡಿಸಲು ನಾಲ್ಕು ಮನೆಮದ್ದನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.

ಮಕ್ಕಳು ಕೆಮ್ಮಿದರೆ ಕಫ ಬರುವುದಿಲ್ಲ ಬರಿ ಕೆಮ್ಮುತ್ತಾರೆ ಇದಕ್ಕೆ ಕಾರಣ ಬ್ಯಾಕ್ಟೀರಿಯಾ ಸೂಕ್ಷ್ಮಾನು ಜೀವಿಗಳು ಇರುವುದರಿಂದ ಒಣಕೆಮ್ಮು ಬೇಗನೆ ಗುಣ ಆಗುವುದಿಲ್ಲ ಆದ್ದರಿಂದ ಮಕ್ಕಳಲ್ಲಿ ಕಂಡುಬರುವ ಒಣಕೆಮ್ಮನ್ನು ಗುಣಪಡಿಸಲು ಮನೆಮದ್ದುಗಳು ಹೀಗೇವೆ ನೋಡಿ. ಮೊದಲನೆ ಮದ್ದು ಜೇಷ್ಠ ಮದ್ದು ಇದು ಕಟ್ಟಿಗೆ ತುಂಡಿನ ತರ ಇದು ಇರುತ್ತದೆ ಇದನ್ನು ಸ್ವಲ್ಪ ಕುಟ್ಟಿ ಸಣ್ಣದಾಗಿ ಮಾಡಿಕೊಳ್ಳಬೇಕು ಇದರ ಪುಡಿಯು ಸಹ ಸಿಗುತ್ತದೆ ಇದನ್ನು ಬಳಸಬಹುದು. ಆಯುರ್ವೇದಿಕ ಅಂಗಡಿಗಳಲ್ಲಿ ಸಿಗುತ್ತದೆ. ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಬಿಸಿಮಾಡಿ ಇದರಲ್ಲಿ ಸಣ್ಣ ಎರಡು ಜೇಷ್ಠ ತುಂಡನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಬೇಕು.

ಈ ಕಷಾಯವನ್ನು 8 ರಿಂದ 10 ನಿಮಿಷ ಕುದಿಸಿ ಶೋಧಿಸಿ ಇದು ಬೆಚ್ಚಗೆ ಇರುವಾಗ ಮಕ್ಕಳಿಗೆ ದಿನಕ್ಕೆ 2 ಬಾರಿ ಕಾಲು ಲೋಟದಷ್ಟು ಕುಡಿಸಬೇಕು ಇದರಿಂದ ಒಣಕೆಮ್ಮು ನಿವಾರಣೆ ಆಗುತ್ತದೆ. ಎರಡನೆಯದು ಒಂದು ಚಿಕ್ಕ ಪಾತ್ರೆಯಲ್ಲಿ ನಿಂಬೆಹಣ್ಣಿನ ರಸ ತೆಗೆದುಕೊಂಡು ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಕೊಡುವುದರಿಂದ ಮಕ್ಕಳಲ್ಲಿ ಇರುವ ಒಣಕೆಮ್ಮು ನಿವಾರಣೆ ಆಗುತ್ತದೆ. ಅದೇರೀತಿ ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಂತಹ ಗುಣವಿದೆ. ಮೂರನೆಯ ಮನೆಮದ್ದು ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿನೀರು ತೆಗೆದುಕೊಂಡು ಇದಕ್ಕೆ ಎರಡು ಮೂರು ಹನಿಯಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ಈ ಹಬೆಯನ್ನು ಮೂಗಿನಲ್ಲಿ ಉಸಿರು ತೆಗೆದುಕೊಂಡು ಬಾಯಲ್ಲಿ ಉಸಿರು ಬಿಡುವುದರಿಂದ ಒಣಕೆಮ್ಮು ಬೇಗನೆ ಹತೋಟಿಗೆ ಬರುತ್ತದೆ.

ಬೆಳಿಗ್ಗೆ ಮತ್ತು ಸಂಜೆ ಹಬೆಯನ್ನು ಮಕ್ಕಳಿಗೆ ನೀಡಬೇಕು. ಇನ್ನು ನಾಲ್ಕನೆಯ ಮನೆಮದ್ದು ಜೇನುತುಪ್ಪ ಇದರಲ್ಲಿ ಬ್ಯಾಕ್ಟೀರಿಯಾ ಕೊಲ್ಲುವ ಗುಣ ಇರುವುದರಿಂದ ಜೇನುತುಪ್ಪವನ್ನು ರಾತ್ರಿ ಮಲಗುವ ಮುಂಚೆ ಒಂದೊಂದು ಚಮಚ ಮಕ್ಕಳಿಗೆ ಕುಡಿಸುವುದರಿಂದ ಒಣಕೆಮ್ಮು ಗುಣವಾಗುತ್ತದೆ. ಈ ನಾಲ್ಕು ಮನೆಮದ್ದುಗಳು ತುಂಬಾ ಉಪಯುಕ್ತವಾಗಿವೆ ಇವುಗಳನ್ನು ಬಳಸಿ ನಿಮ್ಮ ಮಕ್ಕಳಲ್ಲಿ ಇರುವ ಒಣಕೆಮ್ಮನ್ನು ದೂರವಿರಿಸಿರಿ. ಈ ಒಂದು ಉತ್ತಮ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಹಾಗೇನೇ ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here