ಮಧುಮೇಹದಿಂದ ದೂರ ಉಳಿಯಬೇಕು ಎಂದರೆ ಈ ತರಕಾರಿ ತಿನ್ನಿ ಸಾಕು

64

ಸ್ನೇಹಿತರೆ ತರಕಾರಿಗಳ ಸೇವನೆಯಿಂದ ಆರೋಗ್ಯದಲ್ಲಿ ಸಾಕಷ್ಟು ಲಾಭಗಳನ್ನು ಪಡೆಯಬಹುದು ಆದರೆ ಇದರ ಬಗ್ಗೆ ಸರಿಯಾದ ಲಾಭವನ್ನು ತಿಳಿಯದೇ ಕೆಲವರು ಇದರ ಸೇವನೆಯನ್ನು ದ್ವೇಷಿಸುತ್ತಾರೆ ಆದರೆ ಮೂಲಂಗಿ ಯಲ್ಲಿ ಇರುವ ಹಲವಾರು ರೀತಿಯ ಪೋಷಕಾಂಶಗಳು ಕೂದಲು ಹಾಗೂ ಚರ್ಮಕ್ಕೆ ತುಂಬಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ ಮೂಲಂಗಿಯನ್ನು ಚರ್ಮಕ್ಕೆ ಹಾಗೂ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಅದು ಸೌಂದರ್ಯ ವೃದ್ಧಿಸುವುದು ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧ ವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ ಇದರಲ್ಲಿ ಕ್ಯಾಲ್ಸಿಯಂ ಪೊಟ್ಯಾಷಿಯಂ ಫಾಸ್ಫರಸ್ ಪ್ರೋಟಿನ್ ಮತ್ತು ನಾರಿನ ಅಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಅದ್ಭುತವನ್ನು ಉಂಟು ಮಾಡಲಿದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಮೂಲಂಗಿ ಹಲವಾರು ಪೋಷಕಾಂಶ ಗಳೊಂದಿಗೆ ಹಲವಾರು ಆರೋಗ್ಯಕರ ತರಕಾರಿ ಆಗಿದೆ ಶತಮಾನ ಗಳಿಂದಲೂ ಅದು ಉರಿಯೂತ ಗಂಟಲಿನ

ಕಿರಿಕಿರಿ ಜ್ವರ ಮತ್ತು ಪಿತ್ತ ದೋಷಗಂತಹ ಹಲವಾರು ಸಮಸ್ಯೆಗಳ ಚಿಕಿತ್ಸೆಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿ ಪದ್ಧತಿಯಲ್ಲಿ ಬಳಕೆ ಆಗುತ್ತಿದೆ ಅಷ್ಟೆ ಅಲ್ಲದೆ ಮೂಲಂಗಿ ರಸದಲ್ಲಿ ಇರುವ ಐಸೋ ತೈನೋಸೈಡ್ ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎನ್ನುವುದು ಅಧ್ಯಯನ ಗಳಿಂದ ಬೆಳಕಿಗೆ ಬಂದಿದೆ ಹಾಗಾದರೆ ಮೂಲಂಗಿ ಇನ್ನೂ ಹಲವು ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಮೊದಲನೆಯದು ಮಲಬದ್ಧತೆ ತಡೆಯುತ್ತದೆ ಮೂಲಂಗಿ ಯಲ್ಲಿ ಸಮೃದ್ಧಿ ಆಗಿರುವ ನಾರು ಸಂಪೂರ್ಣ ಊಟದ ಅನುಭವ ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ನಿವಾರಿಸಲು ನೆರವಾಗುತ್ತದೆ ಇದರಿಂದಾಗಿ ದೇಹದ ತೂಕವನ್ನು ಇಳಿಸಿಕೊಳ್ಳುವುದು ಸುಲಭ ಆಗುತ್ತದೆ. ನಾರು ಕರುಳಿನ ಚಲನವಲನ ಸಹಾ ನೆರವಾಗುತ್ತದೆ ಮಲಬದ್ಧತೆ ತಡೆಯುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಮುಂದಿನದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ವಿಟಮಿನ್ ಸಿ ಶರೀರವನ್ನು ಫ್ರೀ ರ್ಯಡಿಕಕ್ಸ್ ಯಿಂದ ರಕ್ಷಿಸುವ ಶಕ್ತಿ ಮೂಲಂಗಿ ಅಲ್ಲಿ ಇದೆ ಮತ್ತು ವಾತಾವರಣದಲ್ಲಿನ ವಿಷ ಪದಾರ್ಥಗಳಿಂದ ಜೀವ ಕೋಶಗಳಿಗೆ ಹಾನಿಯನ್ನು ತಗ್ಗಿಸುತ್ತದೆ.

ಚರ್ಮ ಮತ್ತು ರಕ್ತನಾಳಗಳ ಆರೋಗ್ಯ ಕಾಯ್ದು ಕೊಳ್ಳಲು ನೆರವಾಗುವ ಕೊಲಾಜನ್ ಉತ್ಪಾದನೆಯಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕ್ಯಾನ್ಸರ್ ತದೆ ಗಟ್ಟುತ್ತದೆ. ಮೂಲಂಗಿಯಲ್ಲಿ ಇರುವ ವಿಟಮಿನ್ಗಳು ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿದೆ ಮೂಲಂಗಿ ರಸದಲ್ಲಿ ಇರುವ ಐಸೊ ತಯೋನೈಡ್ ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎನ್ನುವುದನ್ನು ಅಧ್ಯಯನ ಇಂದು ಬೆಳಕಿಗೆ ತಂದಿದೆ ಇವು ಕ್ಯಾನ್ಸರ್ ಗೆ ಕಾರಣ ಆಗುವ ವಸ್ತುಗಳನ್ನು ಶರೀರದಿಂದ ಹೊರ ಹಾಕುತ್ತದೆ ಮತ್ತು ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಮೂಲಂಗಿ ಮಧುಮೇಹವನ್ನು ನಿಯಂತ್ರಿಸುತ್ತದೆ. ಮೂಲಂಗಿ ಕಡಿಮೆ ಗ್ಲೈಸೇಮಿಕ್ ಇಂಡೆಕ್ಸ್ ಅನ್ನು ಹೊಂದಿರುವುದರಿಂದ ಅದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ಆಗುವುದಿಲ್ಲ ಮುಳುಗಿ ರಸದ ಸೇವನೆಯು ಮಧುಮೇಹಿಗಳಲ್ಲಿ ರ ಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅದನ್ನು ನಿಯಂತ್ರಿಸಲು ನೆರವಾಗುತ್ತದೆ.

LEAVE A REPLY

Please enter your comment!
Please enter your name here