ಮನೆಯಲ್ಲಿಯೇ ಈ ಮದ್ದು ಮಾಡಿ ಶೀತ ಕೆಮ್ಮು ಕಫ ಕಟ್ಟಿದರೆ ಸೋಂಕು ನಿವಾರಣೆ ಮಾಡಿಕೊಳ್ಳಿರಿ

80

ಶೀತ ಕೆಮ್ಮು ಕಫ ಗಂಟಲು ನೋವು ಮತ್ತು ಸೋಂಕಿನಿಂದ ಮುಕ್ತಿ ಪಡೆಯಬೇಕೆಂದರೆ ಇಲ್ಲಿದೆ ಸುಲಭವಾದ ಮಾರ್ಗ. ನಮಸ್ತೆ ಗೆಳೆಯರೇ ಶೀತ ನೆಗಡಿ ಕೆಮ್ಮು ಕಫ ಗಂಟಲು ನೋವು ಇವುಗಳ ಪರಿಹಾರವಾಗಿ ಮನೆಯಲ್ಲಿ ಮಾಡಿಕೊಳ್ಳುವಂತಹ ಒಂದು ಗಾಢ ಅಥವ ಕಷಾಯದ ಮನೆಮದ್ದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ಪ್ರೇವೆನಶನ್ ಇಸ್ ಬೆಟರ್ ದೆನ್ ಕ್ಯೂರ್ ಅಂತರಲ್ಲವೆ ಹಾಗೆ ಯಾವುದೇ ಒಂದು ಸಮಸ್ಯೆ ನಮ್ಮ ಹತ್ತಿರ ಬರುವುದಕ್ಕಿಂತ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಅನ್ನುವುದು ಜಾಣತನವಾಗಿರುತ್ತದೆ. ಅದಕ್ಕಾಗಿ ದಿನಾಲೂ 1 ರಿಂದ 2 ಬಾರಿ ಈ ಕಷಾಯವನ್ನು ಸೇವಿಸಿ. ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಜೊತೆಗೆ ಶೀತ,ಕೆಮ್ಮು,ಕಫ ಗಂಟಲು ನೋವು ಎಲ್ಲವೂ ಮಾಯವಾಗುತ್ತದೆ. ಬನ್ನಿ ಸ್ನೇಹಿತರೇ ಈ ಕಷಾಯವನ್ನು ಹೇಗೆ ಮಾಡುವುದೆಂದು ತಿಳಿದುಕೊಳ್ಳೋಣ ಬನ್ನಿ. ಈ ಕಷಾಯವನ್ನು ಮಾಡುವುದಕ್ಕೆ ನಮಗೆ ಮುಖ್ಯವಾಗಿ ಬೇಕಾಗಿರುವುದು ತುಳಸಿ. ತುಳಸಿಯಲ್ಲಿ ವಿಟಮಿನ್ ಸಿ ಮತ್ತು ಜಿಂಕ್ ಹೇರಳವಾಗಿ ಇರುತ್ತದೆ. ಹೀಗಾಗಿ ಇದು ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಇದ್ರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಆಂಟಿ ವೈರಲ್ ಆಂಟಿ ಫಂಗಲ್ ಪ್ರಾಪರ್ಟಿ ಇರುವುದರಿಂದ ನಮಗೆ ಉಂಟಾಗಿರುವ ಇನ್ಫೆಕ್ಷನ್

ಅನ್ನು ದೂರು ಮಾಡುತ್ತದೆ. ಮತ್ತು ಇತರ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಈ ತುಳಸಿ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಪರಿಣಾಮ ಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತದೆ. ಆ ನಂತ್ರ ಮೂರು ಲವಂಗವನ್ನು ತೆಗೆದುಕೊಳ್ಳೋಣ. ಲವಂಗದಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುತ್ತದೆ. ಹಾಗಾಗಿ ಇದು ಇಮ್ಯುನಿಟಿ ಪವರ್ ಅನ್ನು ಹೆಚ್ಚಿಸುತ್ತದೆ. ನಂತ್ರ ಶುಂಠಿ ತೆಗೆದುಕೊಳ್ಳಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲಾಮೇಟರಿ ಪ್ರಾಪರ್ಟಿ ಇರುವುದರಿಂದ ನಮ್ಮ ಇಮ್ಯು ನೈಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ನಂತ್ರ 5-6 ಮೆಣಸಿನ ಕಾಳು ತೆಗೆದುಕೊಳ್ಳೋಣ. ಈ ಮೆಣಸಿನಕಾಳು ಹಾಕಿಕೊಳ್ಳುವುದರಿಂದ ಗಂಟಲಿನಲ್ಲಿ ಉಂಟಾಗುವ ಇನ್ಫೆಕ್ಷನ್ ಕಡಿಮೆಯಾಗುತ್ತದೆ. ಇನ್ನೂ ಚಕ್ಕೆ ಮತ್ತೆ ಎರಡು ಚಮಚದಷ್ಟು ಬೆಲ್ಲ ಇದಕ್ಕೆ ಬೇಕಾಗುತ್ತದೆ. ಚಕ್ಕೆಯಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ ಶೀತ ನೆಗಡಿ ನಿವಾರಣೆಯಾಗುತ್ತದೆ. ಮತ್ತೆ ಒಂದು ಲೋಟ ನೀರು ಬೇಕಾಗುತ್ತದೆ. ಈವಾಗ ಈ ಕಷಾಯವನ್ನು ಮಾಡಲು ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಹಾಕಿಕೊಳ್ಳಿ. ಕುದಿಸಿದ ನೀರಿಗೆ ಮೆಣಸಿನಕಾಳು ಮತ್ತು ಲವಂಗವನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಚಕ್ಕೆಯನ್ನು ಬೆರೆಸಿ. ಆಮೇಲೆ ಇದಕ್ಕೆ ಶುಂಠಿಯನ್ನು.

ಮತ್ತೆ ತುಳಸಿ ಎಲೆಗಳನ್ನು ಕೈಯಲ್ಲಿ ತುಂಡು ಮಾಡಿಕೊಂಡು ಹಾಕಿಕೊಳ್ಳಿ. ಮತ್ತೆ ಇದಕ್ಕೆ ಬೆಲ್ಲವನ್ನು ಹಾಕಿಕೊಳ್ಳಿ. ಬೆಲ್ಲವನ್ನು ಹಾಕುವುದರಿಂದ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ. ಕುಡಿಯುವುದಕ್ಕೆ ಚೆನ್ನಾಗಿ ಅನ್ನಿಸುತ್ತದೆ. ಜೊತೆಗೆ ಮಕ್ಕಳು ಇಷ್ಟ ಪಟ್ಟು ಕುಡಿಯುತ್ತಾರೆ. ಆನಂತರ ಇದಕ್ಕೆ ಅರಿಶಿಣ ಪುಡಿಯನ್ನೂ ಹಾಕಿಕೊಳ್ಳೋಣ. ಈ ಎಲ್ಲ ಸಾಮಗ್ರಿಗಳನ್ನು ಹಾಕಿ ಒಂದು ಪ್ಲೇಟ್ ಅನ್ನು ಮುಚ್ಚಿ 5 ನಿಮಿಷಗಳ ಕಾಲ ಕುದಿಯುವುದಕ್ಕೆ ಬಿಟ್ಟು ಬಿಡಿ. ಸ್ನೇಹಿತರೇ ನಿಮಗೆ ಗಂಟಲಿನ ಸಮಸ್ಯೆ ಇದ್ದರೆ ನೀವು ಇದರ ಹಬೆಯನ್ನು ತೆಗೆದುಕೊಳ್ಳಿ. ಈ ಸ್ಟೀಮ್ ಅಥವಾ ಹಬೆಯನ್ನು ತೆಗೆದು ಕೊಳ್ಳುವುದರಿಂದ ನಿಮ್ಮ ಗಂಟಲಿನ ಇನ್ಫೆಕ್ಷನ್ ಶೀಘ್ರವಾಗಿ ಪರಿಹಾರವಾಗುತ್ತದೆ. 5 ನಿಮಿಷ ಆದ ನಂತರ ಈ ಕಷಾಯವನ್ನು ಸೋಸಿಕೊಳ್ಳಿ. ಈ ಕಷಾಯವನ್ನು ದಿನಾಲೂ ಎರಡು ಬಾರಿ ಸೇವನೆ ಮಾಡಿ. ಇಲ್ಲವಾದರೆ ಕನಿಷ್ಟ ಒಂದು ಬಾರಿ ಸೇವಿಸಿ. ಇದರಿಂದ ಶೀತ ನೋವು ಕೆಮ್ಮು ಕಫ ಗಂಟಲು ನೋವು ಇನ್ಫೆಕ್ಷನ್ ಎಲ್ಲವೂ ಕಡಿಮೆಯಾಗುತ್ತದೆ. ಮತ್ತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಷಾಯವನ್ನು ಮಕ್ಕಳಿಂದ ಹಿಡಿದು ಮುದುಕರವರೆಗೂ ತೆಗೆದುಕೊಳ್ಳುವಂತಹ ಪರಿಣಾಮಕಾರಿ ಕಷಾಯ ಇದಾಗಿದೆ. ಆದ್ದರಿಂದ ಇದನ್ನು ಎಲ್ಲರೂ ಸೇವನೆ ಮಾಡಬಹುದು.

LEAVE A REPLY

Please enter your comment!
Please enter your name here