ಮನೆಯಲ್ಲಿ ಕಸದ ಪೊರಕೆಯನ್ನು ಈ ರೀತಿ ಮಾತ್ರ ಇಡಬೇಕು

52

ವಾಸ್ತು ಪ್ರಕಾರ ಪೊರಕೆಯನ್ನು ಯಾವ ಸ್ಥಳದಲ್ಲಿ ಇಡಬೇಕು ಅಂದರೆ ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ ನಿಮ್ಮದಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸುತ್ತೇವೆ. ಈಗಿನ ಯುವ ಜನರಿಗೆ ಮನೆಯ ಪರಿಶುದ್ಧತೆ ವಿಷಯದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಜ್ಞಾನ ಇಲ್ಲ ಅಂತಾನೆ ಹೇಳಬಹುದು ಈಗಿನ ಹುಡುಗಾಟಿಕೆ ಜನರಿಗೆ ಇದೆಲ್ಲ ಅರ್ಥ ಕೂಡ ಆಗುವುದಿಲ್ಲ ಮನೆಯನ್ನು ಶುಭ್ರ ಗೊಳಿಸುವುದು ಅಂದರೆ ಕೇವಲ ಮನೆಯಲ್ಲಿ ಇರುವ ಧೂಳು ಮತ್ತು ಹೊಲಸನ್ನು ತೆಗೆಯುವುದು ಮಾತ್ರವಲ್ಲ ಸಿರಿ ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಕಾಪಾಡಿಕೊಂಡು ಹೋಗುವುದು ಕೂಡ ಆಗಿದೆ. ಇನ್ನೂ ನಮ್ಮ ಸಂಪ್ರದಾಯದ ಪ್ರಕಾರ ಶ್ರೀ ಮಹಾಲಕ್ಷ್ಮಿಯು ಶುದ್ಧವಾಗಿ ಇರುವ ಪ್ರದೇಶದಲ್ಲಿ ವಾಸ ಆಗಿರುತ್ತಾಳೆ. ಎಲ್ಲಿ ಶುಚಿ ಮತ್ತು ಶುಭ್ರತೆ ಇರುವುದಿಲ್ಲ ಅಲ್ಲಿ ದರಿದ್ರ ದೇವತೆ ಪ್ರವೇಶ ಮಾಡುತ್ತಾಳೆ ಮತ್ತು ನೆಲಸುತ್ತಾಳೆ ಕೂಡ ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ ಪಾಲಿಸ ಬೇಕಾದ ಕೆಲವು ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ.

ಒಂದು ವೇಳೆ ಈ ನಿಯಮವನ್ನು ಪಾಲಿಸದೆ ಇದ್ದಲ್ಲಿ ನಾವು ಆರ್ಥಿಕವಾಗಿ ಕೆಲವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇನ್ನೂ ಮನೆಯಲ್ಲಿ ಇರುವ ಕಸದ ಪೂರೈಕೆಯನ್ನು ನಾವು ಮಹಾಕ್ಷ್ಮಿಯ ಪ್ರತ್ಯೇಕವಾಗಿ ಪಾಲಿಸುವುದು ಉಂಟು ಆದ್ದರಿಂದ ನಾವು ಕಸದ ಪೊರಕೆಯನ್ನು ಎಲ್ಲಿ ಬೇಕಾದರೂ ಅಲ್ಲಿ ಇಡಬಾರದು ಹಾಗಾದರೆ ಕಸದ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ. ಕಸದ ಪೊರಕೆಯನ್ನು ಆದಷ್ಟು ಪಶ್ಚಿಮದ ಕಡೆಗೆ ಇಡಲು ಪ್ರಯತ್ನ ಮಾಡಬೇಕು ಇನ್ನೂ ಮನೆಯಲ್ಲಿ ನೀವು ಕಸದ ಪೊರಕೆಯನ್ನು ಸರಿಯಾದ ರೀತಿಯಲ್ಲಿ ಇಡದೆ ಇದ್ದಲ್ಲಿ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದಲ್ಲದೇ ಮನೆಯಲ್ಲಿ ಕಸದ ಪೊರಕೆ ಸರಿಯಾದ ಸ್ಥಳದಲ್ಲಿ ಇಡದೇ ಇದ್ದರೆ ಅನಾರೋಗ್ಯ ಸಮಸ್ಯೆ ಆರ್ಥಿಕ ಸಮಸ್ಯೆ ಅಷ್ಟೆ ಅಲ್ಲದೆ ಅಶಾಂತಿಯ ಮನೆಯಲ್ಲಿ ನೆಲಸುತ್ತದೆ. ಇನ್ನೂ ಕಸದ ಪೊರಕೆಯನ್ನು ಆದಷ್ಟು ಮನೆಯ ಯಜಮಾನರಿಗೆ ಕಾಣಿಸದ ಹಾಗೆ ಇಡಬೇಕು ಇನ್ನೂ ರಾತ್ರಿ ಮಲಗುವಾಗ ಕಸದ ಪೊರಕೆಯನ್ನು ಪ್ರಧಾನ ಬಾಗಿಲಿನಲ್ಲಿ ಮುಂದೆ ಇಟ್ಟು ಮಲಗಬೇಕು. ಇದರಿಂದ ರಾತ್ರಿಯ ಸಮಯದಲ್ಲಿ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ ಇನ್ನೂ ಬೆಳಗ್ಗೆ ಇದ್ದ ತಕ್ಷಣ ಮೊದಲು ಮನೆಯನ್ನು ಶುಚಿ ಗೊಳಿಸಬೇಕು.

ಇನ್ನೂ ಶನಿವಾರ ಕಸದ ಪೊರಕೆಯನ್ನು ಕೊಂಡು ಕೊಳ್ಳಲು ತುಂಬಾ ಉತ್ತಮವಾದ ದಿನ ಇನ್ನೂ ಸಂಜೆಯ ಸಮಯದಲ್ಲಿ ಕಸದ ಪೊರಕೆಯಿಂದ ಮನೆಯನ್ನು ಶುಚಿ ಗೊಳಿಸಬಾರದು ಮತ್ತು ಅಪ್ಪಿ ತಪ್ಪಿ ಕೂಡ ಕಸದ ಪೊರಕೆಯ ಮೇಲೆ ಕಾಲನ್ನು ಇಡಬಾರದು ಇದರಿಂದ ದರಿದ್ರ ದೇವತೆ ಪ್ರವೇಶವನ್ನು ಮಾಡುತ್ತಾಳೆ ಹೀಗೆ ಕಸದ ಪೋರಕೆಯ ಮೇಲೆ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಬಂದು ನೆಲಸುತ್ತಾಳೆ. ಸ್ನೇಹಿತರೆ ನಿಮಗೆ ತಿಳಿಯಿತೇ ಮನೆಯಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಹೀಗೆ ಮಾಡುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ನಿಮ್ಮ ಆಪ್ತರಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ.

LEAVE A REPLY

Please enter your comment!
Please enter your name here