ಮನೆಯಲ್ಲೇ ತಯಾರು ಮಾಡಿದ ಇದನ್ನು ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ

78

ಈ ಎಣ್ಣೆಯನ್ನು ಬಳಸುವುದರಿಂದ ಕೂದಲು ಉದುರುವುದಿಲ್ಲ. ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಪುರುಷರಿಗೆ ಮತ್ತು ಮಹಿಳೆಯರಿಗೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಏಕೆಂದರೆ ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಒಂದು ದೊಡ್ಡ ಸಾಧನ ಎಂದರೆ ಅದು ನಮ್ಮ ಕೂದಲು ಆದರೆ ಇತ್ತೀಚೆಗೆ ಕೂದಲು ಉದುರುವುದು ಮತ್ತು ಚಿಕ್ಕ ವಯಸ್ಸಿನಲ್ಲಿ ಬೆಳ್ಳಗಾಗುವುದು ಒಂದು ದೊಡ್ಡ ತಲೆನೋವಾಗಿದೆ ಅಂತಾನೆ ಹೇಳಬಹುದು ಇದಕ್ಕೆ ಪರಿಹಾರ ಎಂದು ನಾವು ನೋಡಿದರೆ ಹಲವಾರು ಕೂದಲು ಉದುರದೆ ಇರುವ ಕೇಶ ತೈಲಗಳ ಜಾಹೀರಾತುಗಳು ಇವೆ ಆದರೆ ಅದರಿಂದ ನಮಗೆ ಅಷ್ಟೇನು ಲಾಭವಿಲ್ಲ ಜೊತೆಗೆ ಹಣವನ್ನು ಕಳೆದುಕೊಳ್ಳುತ್ತೇವೆ

ಅದರ ಬದಲಾಗಿ ಅಕಾಲದಲ್ಲಿ ಕೂದಲು ತಮ್ಮ ಕಾಂತಿಯನ್ನು ಕಳೆದುಕೊಳ್ಳದಂತೆ ಮತ್ತು ಸುಂದರವಾಗಿ ದಟ್ಟವಾಗಿ ಬೆಳೆಯಲು ಹಾಗೂ ಕೂದಲು ಉದುರದಂತೆ ನಾವು ಮನೆಯಲ್ಲೇ ಕೇಶ ತೈಲವನ್ನು ಮಾಡಬಹುದು ಅದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಸ್ನೇಹಿತರೆ ಈ ಎಣ್ಣೆ ತಯಾರಿಸುವುದು ತುಂಬಾ ಕಷ್ಟದ ಕೆಲಸವಂತು ಅಲ್ಲವೇ ಅಲ್ಲ ಅದಕ್ಕೆ ಬೇಕಾದ ವಸ್ತುಗಳು ಎಂದರೆ ಸ್ವಲ್ಪ ಶುಧ್ದವಾದ ಕೊಬ್ಬರಿ ಎಣ್ಣೆ ಈ ಅರ್ಧ ಲೀಟರ್ ಕೊಬ್ಬರಿ ಎಣ್ಣೆಗೆ ಕಾಲು ಲೀಟರ್ ಹರಳೆಣ್ಣೆ ಬೆರಸಿ ಇದರ ಜೊತೆಗೆ ಎರಡು ಹಿಡಿಯಷ್ಟು ಬೃಂಗರಾಜ ಎಲೆಯನ್ನು ಅಂದರೆ ಗರಗಡ ಸೊಪ್ಪು ಇದರಲ್ಲಿ ಅತ್ಯದ್ಭುತ ಔಷಧಿ ಗುಣಗಳಿವೆ. ಇದರ ಜೊತೆಗೆ ಸಣ್ಣ ಗಿಡ ಅಥವಾ ಅರಕೆ ಸೊಪ್ಪಿನ ಗಿಡ ಅದನ್ನು ಒಂದು ಹಿಡಿಯಷ್ಟು ಅದರ ಹೂವನ್ನು ಸೇರಿಸಿ ತೆಗೆದುಕೊಂಡು

ಅದಕ್ಕೆ 4 ರಿಂದ 5 ಬೆಟ್ಟದ ನೆಲ್ಲಿ ಕಾಯಿಯನ್ನು ತೆಗೆದುಕೊಂಡು ಇದೆಲ್ಲದರ ರಸ ತೆಗೆದುಕೊಂಡು ಇಟ್ಟುಕೊಳ್ಳಬೇಕು ಇದರ ಜೋತೆಗೆ ಮಂದಾರ ಹೂವು ಜೊತೆಗೆ ಮದರಂಗಿ ಸೊಪ್ಪು ಒಂದುಹಿಡಿ ತೆಗೆದುಕೊಂಡು ರಸವನ್ನು ತೆಗೆದುಕೊಳ್ಳಿ ಇವೆಲ್ಲವನ್ನು ರಸ ಮಾಡಿ ಆ ರಸವನ್ನು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗೆ ಬೆರಸಿ ಚೆನ್ನಾಗಿ ಕಾಯಿಸಿ ನೀರಿನಂಶ ಹೋಗಿ ಎಣ್ಣೆ ಉಳಿಯುವವರೆಗೂ ಕುದಿಸಿ ನಂತರ ತಣ್ಣಗಾಗಲು ಬಿಟ್ಟು ಅದನ್ನು ಶೋಧಿಸಿ ಇಟ್ಟುಕೊಳ್ಳಬೇಕು ಈ ಎಣ್ಣೆಯನ್ನು ನಿರಂತರವಾಗಿ ತಲೆ ಕೂದಲಿಗೆ ಹಚ್ಚಬೇಕು ಹೀಗೆ ಹಚ್ಚುವುದರಿಂದ ನಿದ್ರಾಹೀನತೆ ಸಮಸ್ಯೆ ಹಾಗೇನೆ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ ಅಷ್ಟೇ ಅಲ್ಲದೆ ಈ ಎಣ್ಣೆಯ ನಿರಂತರ ಬಳಕೆಯಿಂದ ಕೂದಲು ಉದುರುವುದು ನಿಂತು ದಟ್ಟವಾದ ಕೂದಲು ಬೆಳೆಯುವುದಕ್ಕೂ ಇದು ಸಹಕಾರಿಯಾಗಿದೆ

ಇನ್ನು ನಿಮ್ಮ ಕೂದಲು ಬೆಳ್ಳಗಾಗುತ್ತಿದ್ದರೆ ಅದನ್ನು ಕೂಡ ಈ ತೈಲ ತಡೆಗಟ್ಟುತ್ತದೆ ವೃದ್ದಾಪ್ಯದ ನೆರೆ ಅಲ್ಲದೆ ಬಾಲ ನೆರೆಯಿಂದ ನೀವು ಬಳಲುತ್ತಿದ್ದರೆ ಕೂದಲು ಕಪ್ಪಾಗುವ ಹಾಗೆ ಈ ಎಣ್ಣೆ ಮಾಡುತ್ತದೆ ಇನ್ನು ಇದೆಲ್ಲದಕ್ಕಿಂತ ಹೆಚ್ಚಾಗಿ ತಲೆಯಲ್ಲಿ ಹುಳುಕಡ್ಡಿಯಂತೆ ಆಗುತ್ತಿದ್ದರು ಕೂಡ ಇದು ಅದನ್ನು ತಡೆಗಟ್ಟಿ ಕೂದಲು ಬೆಳೆಯುವ ಹಾಗೆ ಮಾಡುತ್ತದೆ ಅಂಗಡಿಯಲ್ಲಿ ಹೆಚ್ಚಿನ ಹಣ ಕೊಟ್ಟು ಎಣ್ಣೆ ತಂದು ಹಚ್ಚಿ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ಹೀಗೆ ತೈಲವನ್ನು ತಯಾರಿಸಿಕೊಂಡು ಬಳಸಬಹೂದು ನಿಮ್ಮ ಕೂದಲಷ್ಟೇ ಅಲ್ಲದೆ ಮೆದುಳು ಕಣ್ಣು ಕೂಡ ಆರೋಗ್ಯವಾಗಿ ಇರುತ್ತವೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here