ಮಲಬದ್ಧತೆ ನಿವಾರಣೆ ಮತ್ತು ದೇಹದಲ್ಲಿ ಉಷ್ಣತೆ ಕಡಿಮೆ ಮಾಡಲು ಮನೆ ಮದ್ದು

77

ಮಲಬದ್ಧತೆ ನಿವಾರಣೆ ಮತ್ತು ದೇಹದಲ್ಲಿ ಉಷ್ಣತೆ ಪ್ರಮಾಣ ಕಡಿಮೆ ಮಾಡಲು ಬಳಸುವ ಮನೆಮದ್ದು. ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಜನರು ತಮ್ಮ ಆಹಾರದ ಶೈಲಿಯನ್ನು ಕೂಡ ಬದಲಾಯಿಸಿ ಕೊಂಡಿದ್ದಾರೆ. ರಸ್ತೆಯ ಬದಿಯಲ್ಲಿ ಸಿಗುವ ರಾಸಾಯನಿಕ ವಾಗೀ ತಯಾರು ಮಾಡಿರುವ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದು ಆರೋಗ್ಯದ ಮೇಲೆ ತೀವ್ರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಮತ್ತು ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ಹಿಂಥಹ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಮತ್ತು ಕಾರ್ಬೋಹೈಡ್ರೇಟ್ ಇರುವ ಪಾನೀಯವನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿಯನ್ನೂ ಪಡೆಯುವುದಕ್ಕೆ ನಾನು ಸುಲಭವಾದ ಮನೆಮದ್ದು ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ಇದು ಎಲ್ಲ ಕಾಯಿಲೆಗಳನ್ನು ದೂರ ಮಾಡಿ ಆರೋಗ್ಯವನ್ನು ಚೆನ್ನಾಗಿಡಲು ಸಹಾಯ ಮಾಡುವುದಲ್ಲದೆ ದುಡ್ಡು ಕೂಡ ವ್ಯರ್ಥವಾಗುವದನ್ನು ತಡೆಯುತ್ತದೆ. ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಹಲವಾರು ಮಾರ್ಗಗಳಿವೆ. ನಮ್ಮ ಅಡುಗೆ ಮನೆ ಮತ್ತು ಕೈತೋಟದಲ್ಲಿ ಸುಲಭವಾಗಿ ಸಿಗುವ ವಸ್ತುಗಳೇ ಸಾಕಾಗುತ್ತದೆ. ಅದರಲ್ಲಿ ಸೋರೆಕಾಯಿಯ ಬಗ್ಗೆ ತಿಳಿದುಕೊಳ್ಳೋಣ.

ಸೋರೆಕಾಯಿ ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಮತ್ತು ಅಗ್ಗವಾಗಿ ಸಿಗುವ ತರಕಾರಿ ಆಗಿದೆ. ಸೋರೆಕಾಯಿ ಹಣ್ಣು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ದೇಹಕ್ಕೆ ತುಂಬಾ ಆರೋಗ್ಯಕರ ಲಾಭಗಳು ಸಿಗುತ್ತವೆ. ಒಂದು ಕಪ್ ತಾಜಾ ಸೋರೆಕಾಯಿಯ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರನ್ನು ಸೇರಿಸಿ ರಸವನ್ನು ಸಿದ್ದಪಡಿಸಿ ಕೊಳ್ಳಬೇಕು. ಈ ರಸಕ್ಕೆ ಒಂದು ಚಮಚ ಉಪ್ಪನ್ನು ಬೆರೆಸಿ ಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಬೆಳಗಿನ ತಿಂಡಿಗೆ ಮುನ್ನ ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಪ್ರತಿದಿನ ಬೆಳಿಗ್ಗೆ ಹೀಗೆ ಮಾಡುವುದರಿಂದ ಬಾಯಿಗೆ ಹುಣ್ಣುಗಳು ಆದರೆ ತಕ್ಷಣೆವೇ ಕಣ್ಮರೆಯಾಗುತ್ತದೆ. ಮತ್ತು ದೇಹದಲ್ಲಿ ಉಷ್ಣ ಹೆಚ್ಚಾಗಿ ಕೆಲವರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂದರೆ ಅಲರ್ಜಿ ತುರಿಕೆ ಸಿಹಿಮೂತ್ರ ಮೂತ್ರದಲ್ಲಿ ಉರಿತ ಬಾಯಿ ಹುಣ್ಣು ಆಗುವುದು ಮತ್ತು ಕಣ್ಣು ಕೆಂಪಾಗುವುದು. ಈ ಎಲ್ಲ ಸಮಸ್ಯೆಗಳಿಗೆ ಸುಲಭವಾಗಿ ತಕ್ಷಣವೇ ಪರಿಹಾರ ಈ ಸೋರೆಕಾಯಿಯ ತರಕಾರಿಯಿಂದ ಸಿಗುತ್ತದೆ. ಈ ಸೋರೆ ಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುತ್ತದೆ. ಮತ್ತು ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಅಂಶ ಕಡಿಮೆ ಇರುತ್ತದೆ. ಇದು ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕಾಲು ಉರಿ ಕೈ ಊರಿ ಮತ್ತು ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾಗಿ ಗುಳ್ಳೆಗಳಿಗೆ ಲಭ್ಯವಿರುವ

ಸೋರೆಕಾಯಿಯ ಬಳಸುವುದರಿಂದ ಈ ಎಲ್ಲ ಸಮಸ್ಯೆಗಳಿಗೆ ವಿದಾಯ ಹೇಳಬಹುದು. ಮತ್ತು ಸೋರೆಕಾಯಿಯ ಜ್ಯೂಸ್ ಕುಡಿಯುವುದರಿಂದ ದೇಹದ ಉಷ್ಣತೆ ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳಬಹುದು. ದೇಹಕ್ಕೆ ಐರನ್ ಎಂಬ ಅಂಶ ತುಂಬಾ ಮುಖ್ಯವಾಗಿರುತ್ತದೆ. ಐರನ್ ಅಂಶ ದೇಹಕ್ಕೆ ಅಗತ್ಯವಾದ ಸಮಯಕ್ಕೆ ಸರಿಯಾಗಿ ದೊರಕದೆ ಇದ್ದರೆ ದೇಹದಲ್ಲಿ ಏರುಪೇರು ಉಂಟಾಗುತ್ತದೆ. ದೇಹದಲ್ಲಿ ಆರೋಗ್ಯವನ್ನು ವೃದ್ಧಿಸುವಲ್ಲಿ ಈ ಸೋರೆಕಾಯಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತ ಸಂಚಾರ ಸುಗಮವಾಗಿ ಆಗಲು ಸೋರೆಕಾಯಿ ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ಐರನ್ ಅಂಶವನ್ನು ಹೆಚ್ಚಿಸುತ್ತದೆ. ಬಹಳಷ್ಟು ಜನರಿಗೆ ರಸ್ತೆಯ ಬದಿಯಲ್ಲಿ ಸಿಗುವ ಆಹಾರವನ್ನು ಸೇವಿಸುವ ಅಭ್ಯಾಸ ಹೆಚ್ಚಾಗಿ ಇರುತ್ತದೆ. ಸ್ಟ್ರೀಟ್ ಫುಡ್ ತಿನ್ನುವುದರಿಂದ ಹೊಟ್ಟೆನೋವು ಮತ್ತು ದೇಹದ ತೂಕವನ್ನು ಹೆಚ್ಚಿಸುತ್ತದೆ. ಆದರೆ ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿಯನ್ನು ತಿನ್ನುವುದರಿಂದ ದೇಹದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇದರಲ್ಲಿ ಹೆಚ್ಚಿನ ಪ್ರಮಾಣ ನೀರಿನ ಅಂಶ ಶೇಖರಣೆಯಾಗಿರುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾಗಿ ತಲೆಯಲ್ಲಿ ಬೊಕ್ಕೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಸೋರೆಕಾಯಿಯ ಜ್ಯೂಸ್ ಬಳಸಬೇಕು. ದೇಹಕ್ಕೆ ಬೇಕಾಗುವ ಪೊಟ್ಯಾಷಿಯಂ, ಐರನ್, ಪ್ರೊಟೀನ್ ಮುಂತಾದವುಗಳನ್ನು ಈ ಸೋರೆಕಾಯಿ ದೊರಕಿಸಿ ಕೊಡುತ್ತದೆ.

LEAVE A REPLY

Please enter your comment!
Please enter your name here