ಮಾತ್ರೆ ಪ್ಯಾಕ್ ಮೇಲೆ ಕೆಂಪು ಗೆರೆ ಇದ್ರೆ ಅದು ಈ ರೀತಿಯ ಸೂಚನೆ ನೀಡುತ್ತೆ

95

ಮಾತ್ರೆ ಪ್ಯಾಕ್ ಮೇಲೆ ಇರುವ ಕೆಂಪು ಗೆರೆ ಇದರ ಸಂಕೇತವಾಗಿದೆ. ಸಾಮಾನ್ಯವಾಗಿ ನಾವು ಜ್ವರ ಅಥವಾ ಸಣ್ಣಗೆ ನೆಗಡಿ ಬಂದರೆ ಸಾಕು ಕೂಡಲೇ ವೈದ್ಯರ ಬಳಿ ಹೋಗುತ್ತೇವೆ ಮತ್ತು ಅವರು ಹೇಳಿದ ಸೂಚನೆಯಂತೆ ಔಷಧಿಗಳನ್ನು ಹತ್ತಿರದ ಔಷಧಿ ಅಂಗಡಿಗೆ ಹೋಗಿ ವೈದ್ಯರು ಕೊಟ್ಟಿರುವ ಚೀಟಿ ತೋರಿಸಿ ಔಷಧಿ ತೆಗೆದುಕೊಳ್ಳುತ್ತೇವೆ ಇದು ಸರ್ವೇ ಸಾಮಾನ್ಯವಾಗಿದೆ ಆದರೆ ಬಹುಶ ಎಲ್ಲರಿಗೂ ಗೊತ್ತಿರುವುದಿಲ್ಲ ದೇಶದಲ್ಲಿ ಅದೇಷ್ಟೋ ಅವಿದ್ಯಾವಂತರು ಮತ್ತು ತಿಳುವಳಿಕೆ ಇಲ್ಲದ ಜನರು ಜ್ವರ ಅಥವಾ ತಲೆನೋವು ನೆಗಡಿಗೆ ಯಾವುದೇ ವೈದ್ಯರನ್ನು ಭೇಟಿಯಾಗದೆ ಔಷಧಿ ಅಂಗಡಿಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದು ಎಷ್ಟೊಂದು ದೊಡ್ಡ ತಪ್ಪು ಅಂತ ಅವರಿಗೆ ಬಹುಶ ಗೊತ್ತಿಲ್ಲದೆ ಇರಬಹುದು ಹೌದು ಸ್ನೇಹಿತರೆ ಏಕೆಂದರೆ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಮಾತ್ರೆಗಳು ನಮಗೆ ಗೊತ್ತಿಲ್ಲದೆ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಅಥವಾ ಅಡ್ಡ ಪರಿಣಾಮ ಬೀರುತ್ತದೆ ಇನ್ನು ಅಸಲಿ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ನಾವು ಯಾವುದೇ ಮಾತ್ರೆಯ ಪ್ಯಾಕ್ ಮೇಲೆ ಕೆಂಪು ಗೆರೆ ಇರುವುದನ್ನು ನೋಡಿಯೇ ಇರುತ್ತೇವೆ

ಆದ್ದರಿಂದ ಈ ಕೇಂಪು ಗೆರೆ ಏಕೆ ಇರುತ್ತದೆ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಗಮನಿಸಬೇಕಾದ ಅಂಶವಾದರು ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ ವೈದ್ಯಕೀಯ ಲೋಕ ಮತ್ತು ಔಷಧಿ ತಯಾರಿಕಾ ಕಂಪನಿಗಳು ತಯಾರಿಸಿ ಮಾರಾಟ ಮಾಡುವ ಔಷಧಿ ಉತ್ಪನ್ನಗಳಲ್ಲಿ ತನ್ನದೇ ಅದ ಕೆಲವು ಷರತ್ತುಗಳನ್ನು ಒಳಗೊಂಡಿರುತ್ತದೆ ಈ ಕೆಂಪು ರೇಕೆಯ ಪ್ರಮುಖ ಸೂಚನೆ ಏನು ಎಂದರೆ ವೈದ್ಯರ ಸಲಹೆ ಇಲ್ಲದೆ ಔಷಧಿಯನ್ನು ತೆಗೆದುಕೊಳ್ಳಬಾರದು. ಎಂದು ಅರ್ಥ ಇದು ತುಂಬಾ ಜನರಿಗೆ ಸಾಮಾನ್ಯವಾಗಿ ಗೊತ್ತಿರುವುದಿಲ್ಲ ನಾವು ಅನಾರೋಗ್ಯದಿಂದ ಬಳಲುತ್ತಿದ್ದ ಅಥವಾ ನಮಗೆ ಯಾವುದೇ ಆರೋಗ್ಯದ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಅವರು ಹೇಳುವಂತಹ ಔಷಧಿಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ ಇದನ್ನು ಬಿಟ್ಟು ಮಾತ್ರೆಗಳನ್ನು ತೆಗೆದು ಕೊಳ್ಳುವದರಿಂದ ಅನೇಕ ರೋಗಿಗಳು ಅಥವಾ ಅವರ ಕುಟುಂಬಗಳು ದೂರದರ್ಶನ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಸಲಹೇಯನ್ನು ನೋಡದೆ ನೇರವಾಗಿ ಔಷಧಿ ಅಂಗಡಿಗಳಲ್ಲಿ ನಿಯಂತ್ರಿತ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ

ಇದು ಅವರ ಜೀವನದಲ್ಲಿ ಮುಂದೆ ಬರುವ ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು ಜನರ ಈ ಅಭ್ಯಾಸವನ್ನು ನೋಡಿ ಈ ಒಂದು ಸಲಹೆಯನ್ನು ಮಾಧ್ಯಮಗಳು ಕೂಡ ತುಂಬಾ ಹೇಳಿವೆ ವೈದ್ಯರ ಸಲಹೇ ಇದ್ದಾಗ ಮಾತ್ರ ನಾವು ಕೇಂಪು ಗೆರೆ ಇರುವ ಮಾತ್ರೆಗಳನ್ನು ಬಳಸಬಹುದು ಇಲ್ಲದಿದ್ದರೆ ಇದು ಬಹಳಷ್ಟು ಅಪಾಯಕಾರಿ ಅಂತ ಹೇಳಿವೆ ವೈದ್ಯರು ಸೂಚಿಸಿದರೆ ಮಾತ್ರ ನೀವು ಈ ರೀತಿಯ ಮಾತ್ರೆಗಳನ್ನು ನೀವು ಸೇವಿಸಬಹುದು ಇದನ್ನು ಬಿಟ್ಟು ಕೆಂಪು ಗೆರೆಯನ್ನು ಹೊಂದಿರುವ ವೈದ್ಯಕೀಯ ಮಳಿಗೆಗಳು ಅಥವಾ ಸಹ ವೈದ್ಯರ ಭೇಟಿ ಅಥವಾ ಅವರ ಅನುಮತಿ ಇಲ್ಲದೆ ಈ ಮಾತ್ರೆಗಳನ್ನು ಮಾರಾಟ ಮಾಡುವುದಕ್ಕೆ ಸಾಧ್ಯವೆ ಇಲ್ಲ ಆದ್ದರಿಂದ ನೀವು ಯಾವಾಗಾದರು ಔಷಧಿ ಅಂಗಡಿಗಳಿಗೆ ಹೋದಾಗ ಮಾತ್ರೆಗಳ ಪ್ಯಾಕ್ ಗಳ ಮೇಲೆ ಇರುವ ಕೆಂಪು ಗೆರೆಯನ್ನು ಗಮನಿಸಿ ಹಾಗಿದ್ದಾಗ ವೈದ್ಯರನ್ನು ಭೇಟಿ ಮಾಡಿ ನಂತರವೇ ಮಾತ್ರೆಗಳನ್ನು ಬಳಸಿ ಆದ್ದರಿಂದ ಸ್ನೇಹಿತರೆ ಇನ್ನು ಮುಂದೆ ನೀವು ಕೂಡ ಈ ಕೆಂಪು ಗೆರೆಯನ್ನು ಗಮನಿಸಿ ವೈದ್ಯರ ಸಲಹೆ ಪಡೆಯಿರಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here