ಮೆಂತೆಕಾಳು ಬೆಳ್ಳುಳ್ಳಿ ಬಳಸಿ ಹೃದಯ ಖಾಯಿಲೆ ದೂರ ಮಾಡಬಹುದು

119

ಮೆಂತೆಕಾಳು ಬೆಳ್ಳುಳ್ಳಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು. ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಈ ಹೃದಯ ಕಾಯಿಲೆ ಎನ್ನುವುದು ಬೆನ್ನು ಬಿದ್ದು ಕಾಡುವಂತಹ ಕಾಯಿಲೆಯಾಗಿದೆ ಇದಕ್ಕೆ ನಮ್ಮ ಇಂದಿನ ಒತ್ತಡದ ಜೀವನ ಶೈಲಿಯೇ ಪ್ರಮುಖ ಕಾರಣ ಈ ಹೃದಯ ಕಾಯಿಲೆಯಿಂದ ಹೊರಬರಲು ಜನರು ಏನೆಲ್ಲ ಕೆಲಸಗಳನ್ನು ಮಾಡುತ್ತಾರೆ ಎಷ್ಟೋ ಹಣವನ್ನು ವ್ಯಯಮಾಡುತ್ತಾರೆ ಆದರೂ ಅದಕ್ಕೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಆದರೆ ಈ ಹೃದಯ ಕಾಯಿಲೆಯನ್ನು ಮನೆಯಲ್ಲೇ ಸಿಗುವ ಕೆಲವೊಂದು ವಸ್ತುವಿನಿಂದ ಗುಣಪಡಿಸಬಹುದು. ಹಾಗೇನೇ ಬರದಂತೆ ತಡೆಯಬಹುದು ಅದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಅತಿಯಾದ ಕೊಬ್ಬಿನ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನವರು ಹೃದಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.

ಒತ್ತಡ ಚಿಂತೆ ಸುತ್ತಮುತ್ತಲಿನ ಪರಿಸರ ಹೀಗೆ ಹಲವಾರು ಕಾರಣಗಳಿಂದ ಹೃದಯ ಸಮಸ್ಯೆ ಎದುರಾಗುತ್ತದೆ ಆದರೆ ಇದರ ಪರಿಹಾರಕ್ಕೆ ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಅವು ಯಾವುವೆಂದರೆ ಮೆಂತೆಕಾಳು ಮತ್ತು ಮೆಂತೆ ಸೊಪ್ಪನ್ನು ಸೇವಿಸುವುದರಿಂದ ಇದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರ ಕ್ತದಲ್ಲಿನ ಲಿಪಿಡ್ಸ್ ಅಂಶ ಕಡಿಮೆಯಾಗಿ ಕೆಟ್ಟ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ ಹಾಗೆ ವಿಟಮಿನ್ ಈ ಹೆಚ್ಚಾಗಿರುವ ಹಸಿರುತರಕಾರಿಗಳನ್ನು ಸೇವಿಸಿದರೆ ಹೃದಯದ ಆರೋಗ್ಯ ಸ್ಥಿರವಾಗಿರುತ್ತದೆ ಸೇಬು ಸ್ಟ್ರಾಬೆರಿ ಮೊಸಂಬಿ ಪಪ್ಪಾಯ ಕ್ಯಾರೆಟ್ ಮೂಲಂಗಿ ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯ ಸಂಬಂದಿ ರೋಗದಿಂದ ದೂರವಿರಬಹುದು. ಜೊತೆಗೆ ಇಂತಹ ಹಸಿರು ತರಕಾರಿಗಳನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರಕುವುದರ ಜೊತೆಗೆ ದೇಹಕ್ಕೆ ಶಕ್ತಿಯು ಸಹ ಸಿಗುತ್ತದೆ ಹಾಗೇನೇ ಇದರಿಂದ ಶುಧ್ದ ರಕ್ತ ಸಂಗ್ರಹವಾಗಿ ರಕ್ತ ಸಂಚಾರವು ಸಹ ಸುಗಮವಾಗುತ್ತದೆ.

ಆದ್ದರಿಂದ ನಾವು ಸೇವಿಸುವ ಆಹಾರ ಪದ್ಧತಿಯಿಂದಲು ಸಹ ನಾವು ಯಾವುದೇ ವೈದ್ಯರ ಬಳಿ ಪದೇ ಪದೇ ಹೋಗಿ ಆ ದೇಹಕ್ಕೆ ಅಪಾಯಕಾರಿಯಾದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಜೊತೆಗೆ ಅನವಶ್ಯಕ ಹಣವನ್ನು ಹಾಳು ಮಾಡುವ ಬದಲು ಪ್ರತಿನಿತ್ಯ ನಾವು ಸೇವಿಸುವ ಆಹಾರ ಹಣ್ಣುಗಳಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಇದರ ಜೊತೆಗೆ ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಚಹಾ ಕಾಫಿ ಕುಡಿಯುವ ಬದಲು ಒಂದು ಲೋಟ ಬಿಸಿನೀರನ್ನು ಕುಡಿಯುವುದರಿಂದ ರಕ್ತ ಸಂಚಾರ ಸರಾಗವಾಗುವುದರ ಜೊತೆಗೆ ಮೆದುಳು ಸಹ ಚನ್ನಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಜೊತೆಗೆ ಯಾವುದೇ ವಿಧವಾದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

1 COMMENT

LEAVE A REPLY

Please enter your comment!
Please enter your name here