ಯಾವಾಗಲು ಚಪಾತಿ ಮತ್ತು ಉಪ್ಪಿಟ್ಟು ತಿನ್ನುವವರಿಗೆ ಕಾದಿದೆ

73

ಹೆಚ್ಚು ಚಪಾತಿ ಹಾಗೂ ಉಪ್ಪಿಟ್ಟು ಸೇವನೆಯಿಂದ ಏನು ಆಗುತ್ತದೆ ಗೊತ್ತೇ ಕೆಲವರು ಇರುತ್ತಾರೆ ಅವರು ಹೇಗೆಂದರೆ ನಿತ್ಯ ಚಪಾತಿ ಇಲ್ಲ ಉಪ್ಪಿಟ್ಟು ಸೇವನೆ ಮಾಡುತ್ತಾರೆ ಅದರಲ್ಲೂ ಸಣ್ಣ ಆಗಬೇಕು ಫಿಟ್ ನೆಸ್ ಆಗಿ ಇರಬೇಕು ಎಂದು ನಿತ್ಯ ಚಪಾತಿ ಸೇವನೆ ಮಾಡುತ್ತಾರೆ ಇನ್ನೂ ಕೆಲವರಿಗೆ ಉಪ್ಪಿಟ್ಟು ಎಂದರೆ ತುಂಬಾ ಇಷ್ಟ ಪಡುತ್ತಾರೆ ಈ ಉಪ್ಪಿಟ್ಟು ಅನ್ನು ನಾನಾ ವಿಧಾನವಾಗಿ ಮಾಡಬಹುದು ಹಾಗಾಗಿ ನಿತ್ಯ ಒಂದೊಂದು ರೀತಿಯ ಉಪ್ಪಿಟ್ಟು ಮಾಡಿಕೊಂಡು ಸೇವಿಸುತ್ತಾರೆ. ಆದರೆ ಹೀಗೆ ಹೆಚ್ಚು ಚಪಾತಿ ಉಪ್ಪಿಟ್ಟು ಸೇವನೆ ಮಾಡಿದರೆ ಏನೆಲ್ಲಾ ತೊಂದರೆ ಅನುಭವಿಸಬೇಕು ಗೊತ್ತೇ ಚಪಾತಿ ಮಾಡಲು ಗೋಧಿ ಅನ್ನು ಬಳಸುತ್ತೇವೆ ಅಲ್ಲವೇ ಆದರೆ ಈ ಗೋಧಿ ತುಂಬಾ ಬೇಗನೆ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಜೊತೆಗೆ ಗೋಧಿಯಲ್ಲಿ ಗ್ಲುಟೆನ್ ಎಂಬ ಪ್ರೋಟೀನ್ ಇರುತ್ತದೆ ಇದು ನಮ್ಮ ಸಣ್ಣ ಕರುಳು ಹಾಗು ದೊಡ್ಡ ಕರುಳಿಗೆ ಅಂಟಿಕೊಂ ಡು ಸೂಕ್ಷ್ಮ ಪೋಷಕಾಂಶಗಳಾದ ಜಿಂಕ್ ಸೆಲೆನಿಯಮ್ ಕಾಪರ್ ಅನ್ನು ಹೀರಿಕೊಳ್ಳುತ್ತದೆ.

ಹಾಗಾಗಿ ತುಂಬಾ ಬೇಗ ಶುಗರ್ ಕಾಯಿಲೆಗೆ ಒಳಗಾಗುತ್ತೇವೆ. ಆದರೆ ನಮಗೆ ಗೊತ್ತಿರುವ ಹಾಗೆ ಶುಗರ್ ಇದ್ದವರಿಗೆ ಹೆಚ್ಚು ರಾಗಿ ಬಳಕೆ ಮಾಡಲು ಹೇಳುತ್ತಾರೆ ಅದು ಏಕೆಂದರೆ ರಾಗಿ ತುಂಬಾ ಬೇಗ ಸಕ್ಕರೆ ಪ್ರಮಾಣವನ್ನು ಬಿಡುಗಡೆ ಮಾಡುವುದಿಲ್ಲ. ಅದಕ್ಕೆ ರಾಗಿ ಬಳಸುವುದು ಉತ್ತಮ. ರಾಗಿ ಮುದ್ದೆ. ರಾಗಿ ರೊಟ್ಟಿ. ರಾಗಿ ಗಂಜಿ ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಉಪ್ಪಿಟ್ಟು ಇದನ್ನು ಮಾಡಲು ರವೆಯನ್ನು ಬಳಸುತ್ತೇವೆ ಅಲ್ಲವೇ ಆದರೆ ರವೆ ಹೇಗೆ ಮಾಡುತ್ತಾರೆ ಗೊತ್ತೇ ಗೋಧಿಯಲ್ಲಿ ಇರುವ ಉಮಿ ಮತ್ತು ತೌಡು ಸೇರಿದಂತೆ ಎಲ್ಲಾ ನಾರಿನ ಅಂಶಗಳೂ ತೆಗೆಯುತ್ತಾರೆ ಇನ್ನೂ ಅದರಲ್ಲಿ ಬರುವ ತರಿ ಮತ್ತು ಪುಡಿಯನ್ನು ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ಕೂಡ ಬೆನ್ಸೋಯಿಕ್ ಪೆರೋಕ್ಸೈಡ್ ಬಳಸಿ ಬ್ಲೀಚ್ ಮಾಡಲಾಗುತ್ತದೆ. ಈ ತರಿಯನ್ನೆ ರವೆ ಎಂದು ಬಳಸುತ್ತಾರೆ.

ಇದನ್ನು ಬಳಸುವುದರಿಂದ ಕೂಡ ಶುಗರ್ ಕಾಯಿಲೆಗೆ ಒಳಗಾಗುತ್ತೇವೆ ಜೊತೆಗೆ ಆರೋಗ್ಯ ಕೆಡುತ್ತದೆ ಇದನ್ನು ಸೇವಿಸುವುದರಿಂದ ನಮ್ಮ ರಕ್ತದ ಚಲನೆಯಲ್ಲಿ ನೂಕು ನುಗ್ಗಲಿಲ್ಲದೆ ಗ್ಲುಕೋಸ್ ಪ್ರಮಾಣ ಹೆಚ್ಚಾಗುತ್ತದೆ ಇದರಿಂದ ಹಲವಾರು ರೋಗಗಳು ಉತ್ಪತ್ತಿ ಆಗುತ್ತವೆ. ಹೀಗೆ ಬಿಡುಗಡೆಯಾದ ಗ್ಲುಕೋಸ್ ಅನ್ನು ನಿಭಾಯಿಸಿಕೊಳ್ಳಲು ಯಕೃತ್ತು ಮತ್ತೆ ಬೇರೆ ಬೇರೆ ಅಂಗಗಳು ಕೆಲಸ ಮಾಡಿ ಗ್ಲೈಕೋಜನ್ ಕೊಬ್ಬು ಗ್ಲಿಸಿರೈಡ್ ಟ್ರೈ ಗ್ಲಿಸಿರೈಡ್ ಆಗಿ ಬದಲಾಗುತ್ತದೆ. ಹೀಗೆ ಮತ್ತೆ ಮತ್ತೆ ಗ್ಲೂಕೋಸ್ ಅನ್ನು ದೇಹಕ್ಕೆ ಸೇರಿಸುತ್ತಾ ಹೋದರೆ ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಉತ್ಪತ್ತಿಯಾಗುತ್ತದೆ ಹಾಗಾಗಿ ಇನ್ನು ಮುಂದೆ ಆದರೂ ಚಪಾತಿ ಹಾಗೂ ಉಪ್ಪಿಟ್ಟು ಅನ್ನು ಹೆಚ್ಚು ಸೇವಿಸುವುದನ್ನು ಬಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಈ ಒಂದು ಉಪಯುಕ್ತ ಲೇಖನ ಮರೆಯದೆ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here