Home ಮನೆ ಮದ್ದು ಯಾವುದೇ ಖರ್ಚು ಇಲ್ಲದೆ ನಿಮ್ಮ ದೇಹದ ಉಷ್ಣ ಕಡಿಮೆ ಮಾಡಿರಿ

ಯಾವುದೇ ಖರ್ಚು ಇಲ್ಲದೆ ನಿಮ್ಮ ದೇಹದ ಉಷ್ಣ ಕಡಿಮೆ ಮಾಡಿರಿ

74

ದೇಹದ ಉಷ್ಣತೆಯನ್ನು ಹೀಗೆ ಕಡಿಮೆ ಮಾಡಿಕೊಳ್ಳಿ. ಮನುಷ್ಯನ ದೇಹದ ಉಷ್ಣತೆ ತುಂಬಾ ಇರುತ್ತದೆ ಏಕೆಂದರೆ ಮನುಷ್ಯನ ದೇಹ ಉಷ್ಣತೆಯಿಂದಲೇ ಕೂಡಿದೆ ಅದರಲ್ಲೂ ಬೇಸಿಗೆಯ ಸಮಯದಲ್ಲೂ ಇನ್ನು ಹೆಚ್ಜಿನ ರೀತಿಯಲ್ಲಿ ಉಷ್ಣತೆಯನ್ನು ನಾವು ಅನುಭವಿಸಬೇಕಾಗುತ್ತದೆ ನಮ್ಮ ದೇಹದ ಉಷ್ಣತೆ ಹೆಚ್ಚಾದರೆ ಅದರಿಂದ ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಅದರಲ್ಲೂ ಇನ್ನು ಸುಡು ಬಿಸಿಲು ಹೊರಗಡೆ ಹೋಗಲು ಬಿಡದಂತಹ ಸುಡು ಬಿಸಿಲು ಸೂರ್ಯನ ತಾಪಕ್ಕೆ ನಾವು ಸುಟ್ಟು ಹೋಗುತ್ತೇವೆ ಎನ್ನುವಷ್ಟು ಬಿಸಿಲು ಇರುವ ಬೇಸಿಗೆ ಕಾಲ ಶುರುವಾದರೆ ತುಂಬಾ ಸಮಸ್ಯೆ ಕಾಡುತ್ತವೆ ದೇಹದ ಉಷ್ಣತೆ ಹೆಚ್ಚಾಗಲು ತುಂಬಾ ಕಾರಣಗಳಿವೆ ಅದರಲ್ಲಿ ಮುಖ್ಯವಾದವುಗಳು ಹೀಗಿವೆ ಹೆಚ್ಚಿನ ಮಸಾಲ ಪಧಾರ್ಥಗಳನ್ನು ಸೇವಿಸುವುದು ದೇಹಕ್ಕೆ ಬೇಕಾದಷ್ಟು ನೀರು ಕುಡಿಯದೆ ಇರುವುದು ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಇಂತಹ ಕಾರಣಗಳಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿತ ಹೆಚ್ಚಾಗುವುದೂ ನೋವು ಆಗುವುದು ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ನಾವು ಹಲವಾರು ವೈದ್ಯರನ್ನು ಭೇಟಿ ಮಾಡುತ್ತೇವೆ ಅದರಿಂದ ಅಷ್ಟೇನು ಪ್ರಯೋಜನ ಆಗುವುದಿಲ್ಲ ಆದ್ದರಿಂದ ಇದಕ್ಕೆ ನಮ್ಮ ಮನೆಯಲ್ಲಿಯೇ ಸಿಗುವ ಪಧಾರ್ಥಗಳನ್ನು ಉಪಯೋಗಿಸಿಕೊಂಡು ಹೇಗೆ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಎಂದು ಇವತ್ತಿನ ಈ ಒಂದು ಉಪಯುಕ್ತ ಆರೋಗ್ಯ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಜೀರಿಗೆ ಮತ್ತು ಬಿಳಿ ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಈ ಎರಡನ್ನು ಸಣ್ಣಗೆ ಪುಡಿ ಮಾಡಿಕೊಳ್ಳಬೇಕು ಇದನ್ನು ಡಬ್ಬದಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು ಮೊದಲಿಗೆ ಒಂದು ಲೋಟದಲ್ಲಿ ಒಂದು ಚಮಚ ಈ ಪುಡಿಯನ್ನು ಹಾಕಿ ಮಿಶ್ರಣ ಮಾಡಿಕೊಂಡು ಕುಡಿಯಬೇಕು ಹೀಗೆ ಪ್ರತಿದಿನ ಎರಡು ಬಾರಿ ಸೇವಿಸಬೇಕು ಹೀಗೆ ಸೇವಿಸುವುದರಿಂದ ಶೀಘ್ರವಾಗಿ ಈ ಸಮಸ್ಯೆಯಿಂದ ದೂರವಾಗಬಹುದು ಮಜ್ಜಿಗೆಯಲ್ಲಿ ನಿಂಬೆಹಣ್ಣಿನ ರಸವನ್ನು ಬೆರಸಿ ಕುಡಿಯುವುದರಿಂದ ಸಹ ಈ ಸಮಸ್ಯೆಯಿಂದ ದೂರವಾಗಬಹುದು ಚಿಕ್ಕ ಮಕ್ಕಳಿಗೆ ಅತಿ ಉಷ್ಣತೆ ಕಾರಣಗಳಿಂದ ಚರ್ಮದ ಮೇಲೆ ಶಕೆ

ಗುಳ್ಳೆಗಳು ಬಂದು ಹಿಂಸೆ ಕೊಡುತ್ತವೆ ಈ ಸಮಸ್ಯೆಯಿಂದ ದೂರವಾಗಬೇಕು ಎನ್ನುವವರು ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರಸಿ ಇಡೀ ರಾತ್ರಿ ನೆನೆಸಿಡಬೇಕು ಇದನ್ನು ಮರುದಿನ ಬೆಳಗಿನ ಜಾವ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆ ಆಗುವುದಲ್ಲದೆ ಸೆಕೆ ಗುಳ್ಳೆಗಳು ಸಹ ಕಡಿಮೆ ಆಗುತ್ತದೆ ಅದಲ್ಲದೆ ಇಲ್ಲಿ ತಿಳಿಸಿದ ಸಲಹೆಯ ಜೊತೆಗೆ ಎಳನೀರಿನ ಸೇವನೆ ನೀರನ್ನು ಹೆಚ್ಚಾಗಿ ಸೇವಿಸುವುದು ಹೆಚ್ಚಾಗಿ ಹಣ್ಣಿನ ರಸದ ಸೇವನೆ ಮಾಡಬೇಕು ಇನ್ನು ಉಷ್ಣತೆ ಹೆಚ್ಚಾಗಿದ್ದಾಗ ನಾವು ಸೇವಿಸುವ ಆಹಾರ ಪಧಾರ್ಥಗಳಲ್ಲಿ ಹುಳಿ ಬೆಳ್ಳುಳ್ಳಿ ಹೆಚ್ಚಿನ ಮಸಾಲೆ ಪಧಾರ್ಥಗಳೂ ಉಪ್ಪಿನ ಕಾಯಿಯನ್ನು ಕಡಿಮೆಯಾಗಿ ಸೇವಿಸುವುದು ಒಳ್ಳೆಯದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಕೂಡ ಶೇರ್ ಮಾಡಲು ಮರೆಯದಿರಿ.

NO COMMENTS

LEAVE A REPLY

Please enter your comment!
Please enter your name here