ಯೋಗಾಸನ ಮಾಡುವವರು ಈ ತಪ್ಪು ಮಾಡಬೇಡಿ

61

ಯೋಗ ಒಂದು ಧರ್ಮವಲ್ಲ. ಇದು ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಗುರಿಯನ್ನು ಹೊಂದಿರುವ ಜೀವನ ವಿಧಾನವಾಗಿದೆ. ಯೋಗ ಎಂಬುದು ಒಂದು ಧ್ಯಾನ ಇದ್ದ ಹಾಗೇ. ಯೋಗ ಅಥವಾ ಯೋಗಾಸನವನ್ನೂ ನಾವು ಪ್ರತಿನಿತ್ಯವೂ ಮಾಡುವುದರಿಂದ ನಮ್ಮ ಆರೋಗ್ಯವೂ ದೀರ್ಘಕಾಲ ಬಾಳ್ವಿಕೆಗೆ ಬರುತ್ತದೆ. ಯೋಗವನ್ನು ಬೆಳಗ್ಗಿನ ಸಮಯ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗಾದರೆ ಈ ಲೇಖನದಲ್ಲಿ ಯೋಗ ಮಾಡುವ ಮಧ್ಯೆದಲ್ಲಿ ನೀರನ್ನು ಏಕೆ ಕುಡಿಯಬಾರದು ಎಂದು ತಿಳಿದುಕೊಳ್ಳೋಣ. ಯೋಗವನ್ನು ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮತ್ತು ದೇಹದ ಸ್ನಾಯುಗಳು ಬಲಗೊಳ್ಳುತ್ತವೆ. ಜೊತೆಗೆ ಮನಸ್ಸು ಮತ್ತು ದೇಹವು ಶಾಂತ ವಾಗಿಡಲು ಸಹಾಯ ಮಾಡುತ್ತದೆ. ಮತ್ತು ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಲು ಈ ಯೋಗವು ಸಹಾಯ ಮಾಡುತ್ತದೆ. ಯೋಗವನ್ನು ಪ್ರತಿನಿತ್ಯವೂ ಮಾಡುವುದರಿಂದ ದೇಹವು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಮತ್ತು ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಆದರೆ ಈ ಲೇಖನದಲ್ಲಿ ಯೋಗವನ್ನು ಮಾಡುವಾಗ ನೀರನ್ನು ಏಕೆ ಕುಡಿಯಬಾರದು

ಎಂದು ನೋಡೋಣ. ಯೋಗವನ್ನು ಮಾಡುವಾಗ ನೀರನ್ನು ಕುಡಿಯಬಾರದು. ಏಕೆಂದರೆ ಹೊಟ್ಟೆಯಲ್ಲಿ ನೀರು ಸಂಗ್ರಹಣೆ ಆದರೆ ಯೋಗವನ್ನು ಮಾಡಲು ಕಷ್ಟವಾಗುತ್ತದೆ. ಮತ್ತು ಹೊಟ್ಟೆ ನೋವು ಬರುತ್ತದೆ. ಮತ್ತು ನೀರು ಕುಡಿದು ಯೋಗವನ್ನು ಮಾಡುವುದರಿಂದ ದೇಹಕ್ಕೆ ಯಾವುದೇ ಲಾಭಗಳು ಸಿಗುವುದಿಲ್ಲ. ಆದರೆ ಯೋಗವನ್ನು ಮಾಡುವಾಗ ಸುಸ್ತು ಮತ್ತು ಆಯಾಸವಾದಾಗ ಒಂದು ಗುಟುಕು ನೀರು ಕುಡಿಯಬಹುದು. ಆದರೆ ಯೋಗವನ್ನು ಮಾಡುವಾಗ ನೀರನ್ನು ಕುಡಿಯದೆ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಯೋಗ ಎಂಬುದು ದೇಹ ಮತ್ತು ಮನಸ್ಸನ್ನು ಒಂದು ಮಾಡುವ ಒಂದು ಕಲೆಯಾಗಿದೆ. ಯೋಗವನ್ನು ಮಾಡುವುದರಿಂದ ಮನಸ್ಸು ನಿಯಂತ್ರಣದಲ್ಲಿ ಇರುತ್ತದೆ. ಆದ್ದರಿಂದ ಯೋಗ ಮಾಡುವಾಗ ಮನಸ್ಸು ತುಂಬಾ ಮುಖ್ಯವಾಗಿರುತ್ತದೆ. ಯೋಗ ಮಾಡುವಾಗ ನೀರನ್ನು ಏಕೆ ಕುಡಿಯಬಾರದು ಎಂದರೆ ನೀರು ಕುಡಿಯಲು ಎದ್ದಾಗ ಮನಸ್ಸು ಬೇರೆ ಕಡೆ ವಾಲುತ್ತದೆ. ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ.

ನಂತರ ಯೋಗವನ್ನು ಮಾಡಲು ಕುಳಿತರೆ ಮನಸ್ಸಿನ ಏಕಾಗ್ರತೆ ತಪ್ಪುತ್ತದೆ. ಮತ್ತು ಯೋಗವನ್ನು ಮಾಡುವಾಗ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ನೈಸರ್ಗಕ ಕರೆಗೆ ಪದೇ ಪದೇ ಹೋಗುವ ಅವಶ್ಯಕತೆ ಉಂಟಾಗುತ್ತದೆ. ಹೀಗಾಗಿ ನೈಸರ್ಗಿಕ ಕರೆಗಳನ್ನು ತಡೆಗಟ್ಟಿ ಯೋಗವನ್ನು ಮಾಡಬಾರದು. ಏಕೆಂದರೆ ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿಸುತ್ತದೆ. ಕೆಲವೊಂದು ಯೋಗವನ್ನು ಮಾಡುವುದರಿಂದ ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾಗುತ್ತದೆ. ಆ ಸಮಯದಲ್ಲಿ ನೀರು ಕುಡಿಯುದರಿಂದ ಉಷ್ಣತೆ ಕಡಿಮೆ ಆಗುತ್ತದೆ. ಅಲ್ಲದೆ ಶೀತ ಉಂಟಾಗುವ ಸಾಧ್ಯತೆ ಇರುತ್ತದೆ. ಹೊಟ್ಟೆಯಲ್ಲಿ ಅಧಿಕ ನೀರು ಶೇಖರಣೆ ಆದರೆ ಯೋಗವನ್ನು ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಯೋಗವನ್ನು ಮಾಡುವ ಮುನ್ನ ಅರ್ಧ ಗಂಟೆ ನೀರನ್ನು ಕುಡಿಯಿರಿ. ನಂತರ ಯೋಗವನ್ನು ಮಾಡಿ. ಮತ್ತು ಯೋಗವೆಲ್ಲ ಮುಗಿದ ತಕ್ಷಣ ನೀರನ್ನು ಕುಡಿಯಬಾರದು. ಸ್ವಲ್ಪ ಸಮಯ ಬಿಟ್ಟು ಅಂದರೆ ಅರ್ಧ ಗಂಟೆ ನಂತರ ನೀರನ್ನು ಕುಡಿಯಬೇಕು. ಮತ್ತು ಯೋಗವನ್ನು ಮಾಡುವ ಮುನ್ನ ಡ್ರೈ ಫ್ರೂಟ್ಸ್ ತಿನ್ನಬೇಕು. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಯೋಗವನ್ನು ಮಾಡಬೇಕಾದ್ರೆ ಅರ್ಧ ಗಂಟೆ ಮುನ್ನವೇ ನೀರು ಕುಡಿದು ಮಾಡಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು.

LEAVE A REPLY

Please enter your comment!
Please enter your name here