ರಕ್ತನಾಳ ಶುದ್ಧೀಕರಣಕ್ಕೆ ಈ ಆಹಾರ ಸೇವನೆ ಮಾಡಿರಿ

77

ರಕ್ತನಾಳಗಳು ಎಂದರೆ ದೇಹದಲ್ಲಿ ರಕ್ತವನ್ನು ಪ್ರತಿಯೊಂದು ಅಂಗಗಳಿಗೆ ರಕ್ತವನ್ನು ಸರಬರಾಜು ಮಾಡುತ್ತದೆ. ಇದಕ್ಕೆ ರಕ್ತನಾಳಗಳು ಎಂದು ಕರೆಯುತ್ತಾರೆ. ರಕ್ತನಾಳಗಳಲ್ಲಿ ಕೆಟ್ಟಕೊಬ್ಬು ಸಂಗ್ರಹವಾದಾಗ ರಕ್ತನಾಳಗಳು ಸರಿಯಾಗಿ ಕೆಲಸವನ್ನು ಮಾಡುವುದಿಲ್ಲ. ಆ ರಕ್ತನಾಳಗಳಲ್ಲಿ ಇರುವ ಕೆಟ್ಟಕೊಬ್ಬನ್ನು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಒಳ್ಳೆಯ ಆಹಾರವನ್ನು ಸೇವಿಸುವುದು ಉತ್ತಮ. ಕೆಲವು ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತನಾಳಗಳು ಶುದ್ಧಿಯಾಗುತ್ತದೆ. ಇದರಿಂದ ಹೃದಯದ ಆರೋಗ್ಯವೂ ಚೆನ್ನಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ರಕ್ತನಾಳಗಳು ಚೆನ್ನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರೆ ಮನುಷ್ಯನ ಆರೋಗ್ಯ ನಿಯಂತ್ರಣದಲ್ಲಿ ಇರುತ್ತದೆ. ಮತ್ತು ಆತನು ಶಕ್ತಿವಂತನಾಗಿ ಆರೋಗ್ಯವಾಗಿ ಇರುವಂತೆ ಸಹಾಯ ಮಾಡುತ್ತದೆ. ಹಾಗಾದ್ರೆ ಈ ರಕ್ತನಾಳಗಳ ಆರೋಗ್ಯವಾಗಿ ಮಾಹಿತಿಯನ್ನು ಕೊನೆವರೆಗೂ ಓದಿರಿ. ಮೊದಲನೆಯದಾಗಿ ಹೆಚ್ಚು ಒಮೆಗಾ ತ್ರೀ ಪ್ಯಾಟಿ ಆಸಿಡ್ ಇರುವ ಆಹಾರಗಳನ್ನು ಡಯೆಟ್ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಒಮೆಗಾ ತ್ರೀ ಪ್ಯಾಟಿ ಆಸಿಡ್ ಆಹಾರ ಪದಾರ್ಥಗಳೆಂದರೆ, ಅಗಸೆ ಬೀಜ, ಡ್ರೈ ಫ್ರೂಟ್ಸ್, ಮೀನಿನಲ್ಲಿಯೂ ಹೆಚ್ಚಾಗಿ ಒಮೆಗಾ ತ್ರೀ ಪ್ಯಾಟಿ

ಆಸಿಡ್ ಹೆಚ್ಚಾಗಿ ಇರುತ್ತದೆ. ನಮ್ಮ ಆಹಾರದಲ್ಲಿ ಹೆಚ್ಚು ಒಮೆಗಾ ತ್ರೀ ಪ್ಯಾಟಿ ಆಸಿಡ್ ಇರುವ ಆಹಾರವನ್ನು ಪ್ರತಿನಿತ್ಯವೂ ಸೇವಿಸುತ್ತಿರಬೇಕು. ಇದರಿಂದ ದೇಹದಲ್ಲಿ ರಕ್ತನಾಳಗಳು ಶುದ್ಧಿಗೊಳ್ಳುವುದಲ್ಲದೆ ಚೆನ್ನಾಗಿ ಕಾರ್ಯವನ್ನು ನಿರ್ವಹಿಸುತ್ತವೆ. ಮತ್ತು ರಕ್ತನಾಳಗಳಲ್ಲಿ ಇರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಅದಷ್ಟೇ ಅಲ್ಲದೇ ದೊಡ್ಡ ಕಾಯಿಲೆಯನ್ನು ಕೂಡ ದೂರ ಮಾಡುತ್ತದೆ. ಒಬಿಸಿಟಿ ಹೆಚ್ಚಿನ ದೇಹದ ತೂಕ ರಕ್ತ ಒತ್ತಡ ಅಧಿಕ ರಕ್ತದೊತ್ತಡ ಮುಂತಾದವುಗಳು ಸಕ್ಕರೆ ಕಾಯಿಲೆ ಇರುವ ರೋಗಿಗೆ ಈ ಒಮೆಗಾ ತ್ರೀ ಪ್ಯಾಟಿ ಆಸಿಡ್ ತುಂಬಾ ಸಹಾಯ ಮಾಡುತ್ತದೆ. ಆದ್ದರಿಂದ ಹೆಚ್ಚು ಒಮೆಗಾ ತ್ರೀ ಪ್ಯಾಟಿ ಆಸಿಡ್ ಇರುವ ಆಹಾರಗಳನ್ನು ಸೇವಿಸತ್ತಿರಬೇಕು. ಏಕೆಂದರೆ ಕೇವಲ ರಕ್ತನಾಳಗಳ ಶುದ್ಧಿ ಆಗುವುದರ ಜೊತೆಗೆ ಮೆದುಳಿನ ಚಟುವಟಿಕೆಗಳು ಚೆನ್ನಾಗಿ ಕಾರ್ಯವನ್ನು ನಿರ್ವಹಿಸುತ್ತವೆ. ರಕ್ತನಾಳಗಳು ಶುದ್ದಿಯಾಗುವುದಕ್ಕೆ ಸಿಟ್ರಿಕ್ ಆಸಿಡ್ ಇರುವ ಆಹಾರ ದೇಹಕ್ಕೆ ತುಂಬಾ ಒಳ್ಳೆಯದು. ಸಿಟ್ರಿಕ್ ಆಹಾರಗಳೆಂದರೆ ನಿಂಬೆಹಣ್ಣು, ಕಿತ್ತಳೆಹಣ್ಣು ದ್ರಾಕ್ಷಿಹಣ್ಣು ಮತ್ತು ಅನಾನಸ್ ಹಣ್ಣು ಇವು ಸಿಟ್ರಿಕ್ ಆಸಿಡ್ ಇರುವ ಆಹಾರಗಳು. ಅಷ್ಟೇ ಅಲ್ಲದೇ ನೆಲ್ಲಿಕಾಯಿ ಹೆಚ್ಚು ಸಿಟ್ರಿಕ್ ಅಂಶವನ್ನು

ಹೊಂದಿರುತ್ತದೆ. ಇದು ಹೃದಯ ಆರೋಗ್ಯವನ್ನು ವೃದ್ಧಿಸುತ್ತದೆ. ಮತ್ತು ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅರಿಶಿಣವು ಕೂಡ ರಕ್ತನಾಳಗಳನ್ನು ಶುದ್ಧಿ ಮಾಡಲು ನೆರವಾಗುತ್ತದೆ. ಒಂದು ಚಿಟಿಕೆ ಅರಿಶಿನ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಇದರಿಂದ ರಕ್ತನಾಳಗಳು ಶುದ್ಧಿಯಾಗುತ್ತದೆ. ಮತ್ತು ಗ್ರೀನ್ ಟೀ ಅಥವಾ ಹರ್ಬಲ್ ಟೀಯನ್ನು ಪ್ರತಿನಿತ್ಯವೂ ಕುಡಿಯುವುದರಿಂದ ಕೂಡ ರಕ್ತನಾಳಗಳು ಶುದ್ಧಿಯಾಗುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಹೃದಯ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತದೆ. ಹಾಗೆಯೇ ರಕ್ತನಾಳಗಳನ್ನು ಶುದ್ಧಿ ಮಾಡಲು ಚೆಕ್ಕೆ ಮತ್ತು ದಾಲ್ಚಿನ್ನಿ ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲುಮೆಂಟರಿ ಗುಣ ಇರುತ್ತದೆ. ಇದರಿಂದ ಹೃದಯ ಸಮಸ್ಯೆ ದೂರವಾಗುತ್ತದೆ. ಮತ್ತು ರಕ್ತನಾಳಗಳನ್ನು ಶುದ್ಧಿ ಮಾಡಲು ದಾಳಿಂಬೆ ಹಣ್ಣು ಸಹಾಯ ಮಾಡುತ್ತದೆ. ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ರಕ್ತವನ್ನು ಶುದ್ಧೀಕರಣ ಮಾಡುದರ ಜೊತೆಗೆ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ ಈ ದಾಳಿಂಬೆ ಹಣ್ಣು. ಇದರಲ್ಲಿ ತುಂಬಾ ಖನಿಜಾಂಶ ಅಡಗಿರುತ್ತದೆ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲ ಆಹಾರಗಳು ರಕ್ತನಾಳನ್ನು ಶುದ್ಧಿ ಮಾಡಲು ನೆರವಾಗುತ್ತದೆ. ಆದರೆ ಸೇವಿಸುವ ಆಹಾರದ ಮೇಲೆ ಗಮವಿರಬೇಕು.

LEAVE A REPLY

Please enter your comment!
Please enter your name here