ರಾಗಿ ಮಾಲ್ಟ್ ಸೇವನೆ ಮಾಡಿ ಹನ್ನೆರಡು ಲಾಭ ಪಡೆಯಿರಿ

52

ಆಹಾರದಲ್ಲಿ ರಾಗಿ ಎನ್ನುವುದು ಒಂದು ಹಿರಿಧಾನ್ಯ ರಾಗಿ ತಿಂದವನಿಗೆ ರೋಗವಿಲ್ಲ ಎನ್ನುವ ಮಾತು ಹಿಂದಿನ ಕಾಲದಲ್ಲಿ ರಾಗಿಯನ್ನು ಪ್ರತಿಯೊಬ್ಬರು ಕೂಡ ಸೇವಿಸುತ್ತಿದ್ದರು ರಾಗಿಗೆ ಒಂದು ವಿಶೇಷ ಸ್ಥಾನವಿತ್ತು ಆದರೆ ಕಾಲಕ್ರಮೇಣ ರಾಗಿಯೂ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಏಕೆಂದರೆ ಇವತ್ತು ಜನರು ರಾಗಿಯ ಬಳಕೆಯನ್ನು ಕಡಿಮೆ ಮಾಡಿದ್ದಾರೆ ಬದಲಾಗಿ ಜಂಕ್ಸ್ ಫುಡ್ ಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ ಬಹಳಷ್ಟು ಜನರು ಏನೇನೋ ಬೇರೆ ಬೇರೆ ತರಹದ ಮಾಲ್ಟ್ ಗಳನ್ನು ಮಾಡಿಕೊಂಡು ಸೇವಿಸುತ್ತಾರೆ ಪಾಶ್ಚಿಮಾತ್ಯ ದೇಶಗಳಿಂದ ಬರುವಂತಹ ಮಾಲ್ಟ್ ಗಳನ್ನು ಸೇವಿಸುತ್ತಾರೆ ಅದರ ಮೇಲೆ ಸ್ವಷ್ಟವಾಗಿ ಬರೆದಿರುತ್ತಾರೆ ಅದೇನೆಂದರೆ ಪ್ರೊಟೀನ್ ಇಷ್ಟ ಎಮ್ಜಿ ಇದೆ ಹಾಗೇನೇ ವಿಟಮಿನ್ ಇಷ್ಟ ಎಮ್ಜಿ ಇದೆ ಕಾರ್ಬೋಹೈಡ್ರೇಟ್ ಇಷ್ಟ ಎಮ್ಜಿ ಇದೆ ಏನೇನೋ ಬರೆದಿರುತ್ತಾರೆ ಆದರೆ ಅದರಲ್ಲಿ ಅವರು ಹೇಳಿರುವ ಅಷ್ಟೆಲ್ಲ ಪೋಶಕಾಂಶ ಇದೆ ಎಂದು ಯಾರಿಗೆ ತಾನೇ ಗೊತ್ತು ನೀವೇ ಹೇಳಿ ಹಾಗಾದರೆ ಪಾಶ್ಚಿಮಾತ್ಯ ದೇಶದಿಂದ ಬಂದಂತಹ ಈ ಒಂದು ಉತ್ಪನ್ನವನ್ನು ಹೇಗೆ ನಂಬುವುದು ಆದರೆ ಇದನ್ನು ನಂಬಬೇಡಿ ನಂಬಲು ಯೋಗ್ಯವಲ್ಲ ಅಂತಾನೂ ಕೂಡ ಹೇಳಲು ಆಗುವುದಿಲ್ಲ ಅದನ್ನು ಹೇಗೆ ನಂಬುತ್ತೀರಿ

ಯಾವ ಆದಾರದ ಮೇಲೆ ನಂಬುತ್ತೀರಾ ಆದ್ದರಿಂದ ನಮ್ಮ ಕಣ್ಣು ಎದುರೇ ಇರುವಂತಹ ರಾಗಿ ಹಿಟ್ಟನ್ನು ತೆಗೆದುಕೊಂಡು ಬನ್ನಿ ಅದನ್ನು ನೀರಲ್ಲಿ ಹಾಕಿ ಕಲಸಿ ನಂತರ ನೀರು ಕುದಿಯಲು ಇಟ್ಟು ನೀರು ಕುದಿಯುತ್ತಿರುವಾಗ ಕಲಸಿದ ರಾಗಿಯ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿ ಅದಕ್ಕೆ ಬೇಕಾದಷ್ಟು ಬೆಲ್ಲವನ್ನು ಹಾಕಿ ಏಲಕ್ಕಿ ಹಾಕಿ ಲವಂಗ ಹಾಕಿ ಹಾಗೇನೆ ಅದಕ್ಕೆ ಇನ್ನು ಹೆಚ್ಚು ರುಚಿ ಬರಬೇಕು ಎಂದರೆ ತುಪ್ಪದಲ್ಲಿ ಹುರಿದಂತಹ ಗೋಡಂಬಿ ಬಾದಾಮಿಯನ್ನು ಹಾಕಿ ಇವೆಲ್ಲವನ್ನು ಹಾಕಿ ರಾಗಿ ಹಿಟ್ಟನ್ನು ಚೆನ್ನಾಗಿ ಕುದಿಸಿ ಹೀಗೆ ರಾಗಿ ಮಾಲ್ಟನ್ನು ಮಾಡಿಕೊಂಡು ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ. ಇದು ಶಿತಕಾರಕ ದೇಹಕ್ಕೆ ತಂಪನ್ನು ಕೊಡುತ್ತದೆ ಹಾಗೇನೇ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾನೇ ಒಳ್ಳೆಯದು ಹಾಗೇನೇ ದೇಹಕ್ಕೆ ಇದು ಬಲವನ್ನು ಕೊಡುತ್ತದೆ ರಾಗಿ ತೂಕವನ್ನು ಜಾಸ್ತಿ ಮಾಡುವುದಿಲ್ಲ ದೇಹದಲ್ಲಿ ಇರುವ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ ಹಾಗೇನೇ ಇದನ್ನು ಎಲ್ಲರೂ ಬಳಸಬಹುದು ಮಕ್ಕಳಿಗಂತೂ ಈ ರಾಗಿ ಮಾಲ್ಟ ತುಂಬಾ ಒಳ್ಳೆಯದು ಮಕ್ಕಳಿಗೂ ಸಹ ಬೆಳಿಗ್ಗೆ ಮತ್ತು ಸಂಜೆ ಇದನ್ನು ಕೊಡಬಹುದು ಜೊತೆಗೆ ಬಾಣಂತಿಯರಿಗೂ ಕೂಡ ಇದು ಒಂದು ಹೇಳಿ ಮಾಡಿಸಿದ ಮಾಲ್ಟ್ ಹಾಗೇನೇ ಗರ್ಭಿಣಿಯರು ಕೂಡ ಇದನ್ನು ಪ್ರತಿದಿನ ಬೆಳಿಗ್ಗೆ

ಕುಡಿಯಬಹುದು ಎಳೆ ಮಕ್ಕಳಿಗೆ ಆಹಾರ ತಿನ್ನಲು ಕೊಡುವುದಕ್ಕಿಂತ ಮೊದಲು ರಾಗಿ ಗಂಜಿಯನ್ನು ಕೊಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಏಕೆಂದರೆ ಮಕ್ಕಳಿಗೆ ಗಟ್ಟಿಯಾದ ಆಹಾರವನ್ನು ಕೊಟ್ಟಾಗ ಅದನ್ನು ಜೀರ್ಣ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ ಹಾಗಾಗಿ ಮಕ್ಕಳಿಗೆ ರಾಗಿ ಗಂಜಿ ಅಥವಾ ರಾಗಿ ಮಾಲ್ಟ ತುಂಬಾ ಒಳ್ಳೆಯದು ಇದು ಸುಲಭವಾಗಿ ಜೀರ್ಣವಾಗುತ್ತದೆ. ಈ ರಾಗಿ ಗಂಜಿಯನ್ನು ಅನೇಕ ಅನೇಕ ಕಾಯಿಲೆಗಳಿಗೆ ಪಿತ್ತ ಸಂಬಂಧಿ ಕಾಯಿಲೆಗಳಲ್ಲಿ ಉಪಯೋಗ ಮಾಡಬಹುದು ಮತ್ತು ಆಹಾರ ರೂಪದಲ್ಲೂ ಕೂಡ ಉಪಯೋಗ ಮಾಡಬಹುದು ಇದನ್ನು ಹಿಂದಿನ ಕಾಲದಲ್ಲಿ ಬಹಳಷ್ಟು ಜನರು ಇದನ್ನು ತುಂಬಾನೇ ಬಳಸುತ್ತಿದ್ದರು ಇತ್ತಿಚಿನ ದಿನಗಳಲ್ಲಿ ಕೆಲವೊಬ್ಬರು ಬಳಸುತ್ತಾರೆ ಆದರೆ ಹೆಚ್ಚಿನ ಜನರು ಇದನ್ನು ಬಳಸುವುದಿಲ್ಲ ನಮ್ಮ ಪುರಾತನ ಆಹಾರ ಪದ್ಧತಿ ಖಂಡಿತವಾಗಿಯೂ ತುಂಬಾ ಒಳ್ಳೆಯದು ಅದನ್ನು ನಾವು ಅನುಸರೀಸಿಕೊಂಡು ಹಾಗೇನೇ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಇದರಿಂದ ನಮ್ಮ ಆರೋಗ್ಯ ತುಂಬಾನೇ ಚೆನ್ನಾಗಿ ದಷ್ಟ ಪುಷ್ಟವಾಗಿ ಇರುತ್ತದೆ. ನೀವು ಕೂಡ ನಿಮ್ಮ ಮಕ್ಕಳಿಗೆ ಹಾಗೂ ದೊಡ್ಡವರಿಗೂ ಕೂಡ ಈ ರಾಗಿ ಮಾಲ್ಟನ್ನು ಮಾಡಿ ತಿನ್ನಲು ನೀಡಿ ಆರೋಗ್ಯವನ್ನು ಕಾಪಾಡಿ.

LEAVE A REPLY

Please enter your comment!
Please enter your name here