ರಾತ್ರಿ ಸಮಯದಲ್ಲಿ ಮನೆಯಲ್ಲಿ ಉಗುರು ಕಟ್ ಮಾಡಬಾರದು

33

ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಅದರ ಹಿಂದಿರುವ ರಹಸ್ಯ. ನಮ್ಮ ಮನೆಯಲ್ಲಿ ನಾವು ಕೆಲವೊಂದು ದಿನನಿತ್ಯದ ಕಾರ್ಯಕ್ರಮಗಳನ್ನು ಇಂತಹದ್ದೇ ಸಮಯದಲ್ಲಿ ಮಾಡಬೇಕು ಮತ್ತು ಆ ಸಮಯದಲ್ಲಿ ಮಾಡಬಾರದು ಎಂದು ಕೆಲವೊಂದು ಕಟ್ಟುಪಾಡುಗಳನ್ನು ಹಾಕಿದ್ದಾರೆ ಆದರೆ ಇಂದಿನ ದಿನಗಳಲ್ಲಿ ಯಾರು ಇದನ್ನು ನಂಬುವುದಿಲ್ಲ ಆದರೆ ಕೆಲವೊಂದು ಆಚಾರಗಳನ್ನು ಪಾಲಿಸುವುದರಿಂದ ಅದರ ಹಿಂದೆ ಕೆಲವೊಂದು ರಹಸ್ಯಗಳಿವೆ ಇವು ನಮ್ಮ ಆರೋಗ್ಯಕ್ಕೂ ಸಹ ಒಳ್ಳೆಯದು ಅವುಗಳಲ್ಲಿ ಮಂಗಳವಾರ ತಲೆಕೂದಲು ಕಟ್ ಮಾಡಿಸಬಾರದು ಮುಸ್ಸಂಜೆಹೊತ್ತು ನಿದ್ದೆ ಮಾಡಬಾರದು ಹಾಗೇನೇ ದಕ್ಷಿಣಕ್ಕೆ ತಲೆಹಾಕಿ ಮಲಗಬಾರದು ಅಂತ ಹೀಗೆ ಹೇಳುತ್ತಾ ಹೋದರೆ ಕೆಲವೊಂದು ಹಾಸ್ಯಾತ್ಮಕವಾಗಿ ಅನಿಸುತ್ತದೆ ಆದರೆ ವೈಜ್ಞಾನಿಕವಾಗಿ ಕೆಲವೊಂದು ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ತುಂಬಾ ಜನರಿಗೆ ಗೊತ್ತಿರುವುದಿಲ್ಲ.

ಹಾಗಾದರೆ ಈ ಒಂದು ಲೇಖನದಲ್ಲಿ ರಾತ್ರಿ ಸಮಯದಲ್ಲಿ ಉಗುರು ಏಕೆ ಕತ್ತರಿಸಬಾರದು ಎನ್ನುವುದನ್ನು ಈಗ ತಿಳಿಯೋಣ. ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎನ್ನುವುದು ಒಂದು ಮೂಢನಂಬಿಕೆ ಅನಿಸಬಹುದು ಆದರೆ ಕೆಲವೊಂದು ಕಾರಣಗಳಿಂದ ಇದು ಉತ್ತಮವಾದ ವಿಧಾನವು ಆಗಿದೆ ಕತ್ತರಿಸಿದ ಉಗುರನ್ನು ಕತ್ತಲಲ್ಲಿ ಸರಿಯಾಗಿ ಸ್ವಚ್ಛ ಮಾಡುವುದಕ್ಕೆ ಆಗುವುದಿಲ್ಲ ಎಷ್ಟೇ ಬೆಳಕಿದ್ದರು ಸಹ ಆ ಉಗುರು ಕತ್ತರಿಸಿದಾಗ ನಮ್ಮ ಬೆರಳಿಗೆ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಇಲ್ಲವಾದರೆ ಕತ್ತರಿಸಿದ ಉಗುರು ನೆಲದಲ್ಲಿದ್ದರೆ ನಮ್ಮ ಆಹಾರದಲ್ಲಿ ಬೆರೆತು ನಮ್ಮ ಜೀವಕ್ಕೆ ಅಪಾಯ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಹಿಂದಿರುವ 4 ಕಾರಣಗಳು ಏನೆಂದರೆ ಹಿಂದೆ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಇತ್ತು ರಾತ್ರಿ ಹೊತ್ತು ಉಗುರು ಕತ್ತರಿಸುವುದರಿಂದ ಸ್ವಚ್ಛ ಮಾಡಲು ಬೆಳಕು ಸರಿಯಾಗಿ ಇರುತ್ತಿರಲಿಲ್ಲ ಆರೋಗ್ಯಕ್ಕೆ ಹಾನಿಕರ ಆಗುತ್ತಿತ್ತು ಆಹಾರದೊಂದಿಗೆ ಸೇರಿಕೊಂಡರೆ ಇದು ನಮ್ಮ ದೇಹದಲ್ಲಿ ಅಲರ್ಜಿಯನ್ನು ಉಂಟು ಮಾಡುತ್ತದೆ

ಆದ್ದರಿಂದ ಹಳ್ಳಿಗಳಲ್ಲಿ ರಾತ್ರಿ ಹೊತ್ತು ಉಗುರನ್ನು ಕತ್ತರಿಸುತ್ತಿರಲಿಲ್ಲ. ಎರಡನೇ ಕಾರಣ ಆಗಿನ ಕಾಲದಲ್ಲಿ ಉಗುರು ಕತ್ತರಿಸುವುದಕ್ಕೆ ಒಳ್ಳೆಯ ಪರಿಕರಗಳು ಇದ್ದಿಲ್ಲ ಚಾಕುವನ್ನು ಬಳಸಿ ಆಗಿನ ಕಾಲದ ಜನರು ಉಗುರನ್ನು ಕತ್ತರಿಸುತ್ತಿದ್ದರು ರಾತ್ರಿ ಹೊತ್ತು ಚಾಕು ಬಳಸಿ ಉಗುರು ಕತ್ತರಿಸುವುದರಿಂದ ಗಾಯವಾಗುವ ಸಾಧ್ಯತೆ ಹೆಚ್ಚಿತ್ತು. ಇನ್ನು ಮೂರನೇಕಾರಣ ಹೇಳುವುದಾದರೆ ಕೆಲವೊಂದು ಧಾರ್ಮಿಕ ಅಂಶ ಕೂಡ ಇದರಲ್ಲಿ ಅಡಗಿರುತ್ತದೆ ಎಂದು ನಂಬಿದ್ದರು ಅದು ಎಷ್ಟರ ಮಟ್ಟಿಗೆ ಸತ್ಯ ಎಂದು ನಮಗೆ ಗೊತ್ತಿಲ್ಲ ಆದರೆ ನಾವು ಈಗಲೂ ಸಹ ಉಗುರುಗಳನ್ನು ಕತ್ತರಿಸುವಾಗ ನಾವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಉಗುರನ್ನು ಬಾಯಿಂದ ಕತ್ತರಿಸುವುದಾಗಲಿ ಬ್ಲೇಡ ಅಥವಾ ಕತ್ತರಿಯಿಂದ ಕತ್ತರಿಸುವುದಾಗಲಿ ಮಾಡಬಾರದು ಉಗುರು ಕತ್ತರಿಸುವ ಸಾಮಗ್ರಿ ಬಳಸಿ ಕತ್ತರಿಸಬೇಕಾಗುತ್ತದೆ

ನಮ್ಮ ಉಗುರಿನಲ್ಲಿ ತೇವ ಇರುವಾಗ ಕತ್ತರಿಸಬಾರದು ಹೀಗೆ ಉಗುರಿನಲ್ಲಿ ತೇವ ಇದ್ದರೆ ಕತ್ತರಿಸುವಾಗ ನೆಲ್ ಕಟ್ಟರ ಜಾರಿದಾಗ ಆ ಉಗುರಿಗೆ ಆಕಾರ ಕೊಡಲು ಸಾಧ್ಯವಾಗುವುದಿಲ್ಲ. ಉಗುರನ್ನು ಕತ್ತರಿಸುವಾಗ ತುಂಬಾ ಚಿಕ್ಕದಾಗಿ ಕತ್ತರಿಸುವ ಅಭ್ಯಾಸವಿದ್ದರೆ ಅದನ್ನು ಬಿಡುವುದು ತುಂಬಾ ಒಳ್ಳೆಯದು ಇರೀತಿ ಉಗುರನ್ನು ಕತ್ತರಿಸಿದ ಬೆರಳು ಆಕರ್ಷಿತವಾಗಿ ಕಾಣುವುದಿಲ್ಲ ಇದರಿಂದ ಉಗುರನ್ನು ಸ್ವಲ್ಪ ಉದ್ದ ಬಿಟ್ಟು ಕತ್ತರಿಸುವುದು ಒಳ್ಳೆಯದು ಇರೀತಿ ಕತ್ತರಿಸಿದಾಗ ಬೆರಳಿಗೆ ಗಾಯವಾಗುವುದಿಲ್ಲ ನೋಡೋದಕ್ಕೆ ತುಂಬಾ ಆಕರ್ಷಿತವಾಗಿ ಕಾಣುತ್ತದೆ ಉಗುರನ್ನು ಕತ್ತರಿಸಿದಾಗ ನೆಲ್ ಕಟ್ಟರ್ ಸೆಪರ್ ಬಳಸಿ ಉಗುರಿನ ಭಾಗವನ್ನು ಉಜ್ಜಬೇಕು ಹೀಗೆ ಉಜ್ಜುವಾಗ ಹೊಟ್ಟೆ ಆಕಾರದಲ್ಲಿ ಉಜ್ಜಿದರೆ ಉಗುರು ಆಕರ್ಷಿತವಾಗಿ ಮತ್ತು ನೋಡೋದಕ್ಕೆ ಸುಂದರವಾಗಿ ಕಾಣುತ್ತದೆ ಅಷ್ಟೇ ಅಲ್ಲದೆ ಉಗುರು ಕತ್ತರಿಸಿದಾಗ ಕತ್ತರಿಸಿದ ಉಗುರನ್ನು ಚರಂಡಿಯಲ್ಲಿ ಅಥವಾ ಮೋರಿಯಲ್ಲಿ ಹಾಕಬೇಕು ಅದನ್ನ ನೆಲದ ಮೇಲೆ ಬಿಡುವುದರಿಂದ ನಮ್ಮ ಆಹಾರದಲ್ಲಿ ಸೇರುವ ಸಾಧ್ಯತೆ ಹೆಚ್ಚಿರುತ್ತದೆ ಅಷ್ಟೇ ಅಲ್ಲದೆ ಮೂಕ ಪ್ರಾಣಿಗಳ ಆಹಾರದಲ್ಲಿ ಸೇರುತ್ತದೆ ಇದರಿಂದ ಅಡ್ಡ ಪರಿಣಾಮಗಳು ಹೆಚ್ಚಾಗುತ್ತವೆ ಆದ್ದರಿಂದ ಉಗುರನ್ನು ಕತ್ತರಿಸಿ ಒಂದೇಕಡೆ ಬಿಸಾಕಿ.

LEAVE A REPLY

Please enter your comment!
Please enter your name here